ರಿಂಗ್ ರೋಡ್ ಶುಭ ಕೇಸಿನಂತೆ ಹುಟ್ಟಿದಬ್ಬ ಆಚರಿಸಲು ಕರೆದು ಭಾವೀ ಪತಿ ರಿಯಲ್ ಎಸ್ಟೇಟ್ ಉದ್ಯಮಿ ಕೊ*ಲೆಗೈದ ಸುಂದರಿ

ಪುಣೆ: ಕರ್ನಾಟಕ ಬೆಂಗಳೂರಿನಲ್ಲಿ ನಡೆದಿದ್ದ 'ರಿಂಗ್ ರಸ್ತೆ ಹತ್ಯೆ' ಪ್ರಕರಣವನ್ನು ನೆನಪಿಸುವಂತಹ ಕೇಸ್ ಪುಣೆಯಲ್ಲಿ ನಡೆದಿದೆ. ಮಹಾರಾಷ್ಟ್ರದ ಪುಣೆ ಬಳಿಯ ಐತಿಹಾಸಿಕ ಲೋಹಗಢ್ ಕೋಟೆಯಲ್ಲಿ ಇತ್ತೀಚೆಗೆ ಯುವ ಉದ್ಯಮಿಯ ಸಾವಾಗಿತ್ತು. ಈ ಪ್ರಕರಣ ತನಿಖೆ ಆರಂಭಿಸಿದ ಪೊಲೀಸರಿಗೆ ಬೆಚ್ಚಿ ಬೀಳಿಸುವ ಸಂಗತಿ ಗೊತ್ತಾಗಿದೆ. ಮೃತ ಉದ್ಯಮಿಯ ಭಾವಿ ಪತ್ನಿಯೇ ತನ್ನ ಪ್ರಿಯಕರನೊಂದಿಗೆ ಸೇರಿಕೊಂಡು ಈ ಹತ್ಯೆಗೈದಿದ್ದಾಳೆ ಎಂಬುದು ಗೊತ್ತಾಗಿದೆ.

ಈ ಹತ್ಯೆಗೂ ಮುನ್ನದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಅವಳ ಮುಖದಲ್ಲಿ ಸಂಚಿನ ಸಣ್ಣದೊಂದು ಲಕ್ಷಣ ಕಾಣುತ್ತಿಲ್ಲವೆಂದು ನೆಟ್ಟಿಗರು ದೂಷಿಸಿದ್ದಾರೆ. ಇದೇ ರೀತಿಯ ಹತ್ಯೆಯೊಂದು ಬೆಂಗಳೂರಿನಲ್ಲಿ ನಡೆದಿದ್ದು, ಎರಡು ಪ್ರಕರಣಗಳು ಹೋಲಿಕೆಯಾಗುತ್ತವೆ.

Wedding Plans Turn Deadly

ಪುಣೆಯಲ್ಲಿ ಉದ್ಯಮಿ ಸಾವನ್ನು ಆಕಸ್ಮಿಕ ಎನ್ನುವಂತೆ ಭಾವಿ ಪತ್ನಿ ಬಿಂಬಿಸಿದ್ದಳು. ಪ್ರೇಯಸಿ ಮತ್ತು ಆಕೆಯ ಪ್ರಿಯಕರ ಸೇರಿ ನಡೆಸಿದ ಭೀಕರ ಕೊಲೆ ಎಂಬುದು ತನಿಖೆಯಿಂದ ಬಯಲಾಗಿದೆ. 26 ವರ್ಷದ ರಿಯಲ್ ಎಸ್ಟೇಟ್ ಉದ್ಯಮಿ ಕೇತನ್ ವಿಶಾಲ್ ಅಗರ್ವಾಲ್ ಅವರ ನಿಗೂಢ ಸಾವಿನ ಸತ್ಯ ಜಗತ್ತಿಗೆ ಗೊತ್ತಾಗಿದೆ. ಕೇತನ ಜೊತೆ ವಿವಾಹಕ್ಕೆ ನಿಶ್ಚಿಯಗೊಂಡಿದ್ದ ವಧು ಸಿಯಾ ಗೋಯಲ್ ಮತ್ತು ಆಕೆಯ ಪ್ರಿಯಕರ ಚೇತನ್ ಚೌಧರಿ ಇಬ್ಬರು ಪ್ಲ್ಯಾನ್ ಮಾಡಿ ಕಂದಕಕ್ಕೆ ನೂಕಿದ್ದು ತನಿಖೆಯಲ್ಲಿ ಸಾಬೀತಾಗಿದೆ.

Ramangara: ಅಕ್ರಮ ಸಂಬಂಧ ಶಂಕೆ: 42 ವರ್ಷದ ಪತ್ನಿಯ ಕಥೆ ಮುಗಿಸಿದ ಪತಿ
Ramangara: ಅಕ್ರಮ ಸಂಬಂಧ ಶಂಕೆ: 42 ವರ್ಷದ ಪತ್ನಿಯ ಕಥೆ ಮುಗಿಸಿದ ಪತಿ

ವಾರದ ಹಿಂದೆ ನಡೆದಿದ್ದ ಪ್ರಕರಣ

ಜೂನ್ 18 ರಂದು ಲೋಹಗಢ್ ಕೋಟೆಯ ಕಂದಕಕ್ಕೆ ಬಿದ್ದು ಕೇತನ್ ಮೃತಪಟ್ಟಿದ್ದ ಸುದ್ದಿ ಆಗಿತ್ತು. ತೀವ್ರ ಗಾಳಿಯ ನಡುವೆ ಫೋಟೋ ತೆಗೆದುಕೊಳ್ಳುವಾಗ ಕೇತನ್ ಆಯತಪ್ಪಿ ಕಣಿವೆಯೊಳಗೆ ಬಿದ್ದಿದ್ದಾರೆ ಎಂದು ಭಾವಿ ಪತ್ನಿ ಪೊಲೀಸರಿಗೆ ಮಾಹಿತಿ ನೀಡಿದ್ದಳು. ಆಗ ಪೊಲೀಸರು ಆಕಸ್ಮಿಕ ಸಾವು ಎಂದು ಪ್ರಕರಣ ದಾಖಲಿಸಿದ್ದರು. ಆದರೆ, ಮೃತರ ಕುಟುಂಬಸ್ಥರ ಸಂಶಯ ಹಾಗೂ ಪೊಲೀಸರ ತನಿಖೆಯಿಂದ ಉದ್ಯಮಿಯ ಕೊಲೆ ನಡೆದಿದ್ದು ಗೊತ್ತಾಗಿದೆ.

ಲವರ್ ಜತೆ ಸೇರಿ ಭಾವಿ ಪತ್ನಿ ಮಾಸ್ಟರ್ ಪ್ಲ್ಯಾನ್

ಪುಣೆ ಗ್ರಾಮಾಂತರ ಪೊಲೀಸ್ ಅಧಿಕಾರಿಗಳ ಪ್ರಕಾರ, ಸಿಯಾಗೆ ಕೇತನ್‌ನನ್ನು ಮದುವೆಯಾಗಲು ಇಷ್ಟವಿರಲಿಲ್ಲ. ಆಕೆ 22 ವರ್ಷದ ಚೇತನ್ ಚೌಧರಿ ಎಂಬಾತನನ್ನು ಪ್ರೀತಿಸುತ್ತಿದ್ದಳು. ಆಕೆಯ ಪ್ರೀತಿಗೆ ಈ ಮದುವೆ, ಕೇತನ್ ಅಡ್ಡಿಯಾಗುತ್ತಾರೆ ಎಂದು ಭಾವಿ ಪತ್ನಿ ಮತ್ತು ಚೇತನ್ ಸಂಚು ರೂಪಿಸಿದ್ದರು. ಸಿಯಾ ಯೋಜನೆ ರೂಪಿಸಿ ಕೇತನ್‌ನನ್ನು ಕೋಟೆಗೆ ಕರೆತಂದಿದ್ದಳು. ನಂತರ ಅಲ್ಲಿಗೆ ಬಂದಿದ್ದ ಚೇತನ್ ಮತ್ತು ಸಿಯಾ ಇಬ್ಬರೂ ಸೇರಿ ಕೇತನ್‌ನನ್ನು 400 ಅಡಿ ಆಳದ ಕಂದಕಕ್ಕೆ ತಳ್ಳಿ ಹತ್ಯೆ ಮಾಡಿದ್ದಾರೆ ಎಂದು ತಿಳಿಸಿದರು.

ಮಗನ ಮೃತದೇಹ ತಂದಾಗ ಭಾವಿ ಸೊಸೆಯ ಮುಖದಲ್ಲಿ ಯಾವುದೇ ದುಃಖ ಕಾಣಲಿಲ್ಲ ಎಂದು ದೂರಿದ್ದಾರೆ. ಈ ಹಿಂದೆ ಮಗ, ಸೊಸೆ ಸಿಯಾ ಇಂಡೋನೇಷ್ಯಾದ ಬಾಲಿ ಪ್ರವಾಸಕ್ಕೆ ಹೋಗಲು ಪ್ಲ್ಯಾನ್ ಮಾಡಿದ್ದರು. ಆಗ ಮುಂಬೈ ವಿಮಾನ ನಿಲ್ದಾಣದಲ್ಲಿ ಕೇತನ್ ಪಾಸ್‌ಪೋರ್ಟ್ ನಾಪತ್ತೆಯಾಗುವಂತೆ ಮಾಡಿ ಇಡೀ ಪ್ರವಾಸ ರದ್ದಾಗಲು ಸಿಯಾ ಕಾರಣವಾಗಿದ್ದಳು. ಇದಾದ ಬಳಿಕ ಜೂನ್ 14 ರಂದೇ ಆಕೆ ಕೇತನ್‌ನನ್ನು ಲೋಹಗಢ್ ಕೋಟೆಗೆ ಕರೆದೊಯ್ದು ತಳ್ಳಲು ಮೊದಲ ಯತ್ನ ನಡೆಸಿದ್ದಳು. ಅದು ಆಗಲಿಲ್ಲ, ಬಳಿಕ ಜೂನ್ 18ರಂದು ತೆರಳಿದ್ದರು.

ಭಾವಿ ಪತ್ನಿಯ ಬರ್ತಡೇ ಆಚರಣೆ ವಿಡಿಯೋ

ಭಾವಿ ಪತ್ನಿಯ ಮೊದಲ ಜನ್ಮದಿನಾಚರಣೆಗೆ ವಿಶೇಷ ಉಡುಗೊರೆ ನೀಡಿ, ವಿಶೇಷವಾಗಿ ಮತ್ತು ಅದ್ಧೂರಿಯಾಗಿ ಆಚರಿಸುವ ಕೇತನ್ ಮತ್ತು ಸಿಯಾರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 'ಅವಳ ಮುಖ ನೋಡಿದರೆ ಅವಳು ಅವನನ್ನು ಕೊಲ್ಲಲು ಯೋಜಿಸುತ್ತಿದ್ದಾಳೆ, ಪ್ರೀತಿಸುತ್ತಿಲ್ಲ ಎಂದು ದೇವರಿಗೂ ಹೇಳಲು ಸಾಧ್ಯವಿಲ್ಲ.ಅಷ್ಟ ಮಟ್ಟಿಗೆ ನಗುಮೊಗದಿಂದಲೇ ನಟಿಸಿದ್ದಾಳೆ. ನೀವು ಮಹಿಳೆಯರನ್ನು ಎಂದಿಗೂ ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ. ಮಹಿಳೆಯರು ಜಗತ್ತಿನ ಅತ್ಯಂತ ಅಪಾಯಕಾರಿ ಆಯುಧ' ಎಂದು ನಟ್ಟಿಗರೊಬ್ಬರು ವಿಡಿಯೋ ಹಂಚಿಕೊಂಡು ಶಿರ್ಷಿಕೆ ಬರೆದುಕೊಂಡು ಈ ಕೃತ್ಯವನ್ನು ಖಂಡಿಸಿದ್ದಾರೆ.

ಬೆಂಗಳೂರಿನ ಪ್ರಕರಣಕ್ಕೆ ಹೋಲಿಕೆ, ಆಗಿದ್ದೇನು?

'ಬೆಂಗಳೂರಿನ ರಿಂಗ್ ರಸ್ತೆ ಮರ್ಡರ್' ಎಂದರೆ ಅದು 2003ರಲ್ಲಿ ನಡೆದಿದ್ದ ಪ್ರಕರಣವನ್ನು ನೆನಪಿಸುತ್ತದೆ. ಅಂದು ಸಹ ಪ್ರಿಯಕರ ಅರುಣ ವರ್ಮಾ (19) ಜೊತೆ ಕೂಡಿಕೊಂಡು ಯುವತಿ ಶುಭಾ (20) ತಾನು ಮದುವೆ ಆಗಬೇಕಿದ್ದ 27 ವರ್ಷದ ಬಿ.ವಿ.ಗಿರೀಶ್‌ನ ಕಥೆ ಮುಗಿಸಿದ್ದಳು. ಬಳಿಕ ಅದು ಆಕಸ್ಮಿಕ ಸಾವು ಎಂದು ಕಥೆ ಕಟ್ಟಿದ್ದಳು. ಪೊಲೀಸ್ ತನಿಖೆಯಲ್ಲಿ ಮದುವೆಗೆ ಇಷ್ಟವಿಲ್ಲದೇ ಹೀಗೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಳು. ಶುಭಾ, ಪ್ರಿಯಕರ ಅರುಣ ಸೇರಿ ಒಟ್ಟು ನಾಲ್ಕು ಮಂದಿಗೆ ಜೀವಾವಧಿ ಶಿಕ್ಷಿ ವಿಧಿಸಲಾಗಿತ್ತು. ಇಂದಿನ ಪುಣೆ ಪ್ರಕರಣ ದಶಕಗಳ ಹಳೇಯ ಬೆಂಗಳೂರಿನ ಅಂಥದ್ದೆ ಪ್ರಕರಣ ನೆನಪಿಸುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+