Amritdhare Serial: ಶಕುಂತಲಾಗೆ ಒಳ್ಳೇ ಬುದ್ಧಿ ಬಂದ್ರೂ, ಕೆಟ್ಟ ಮಗ ದಾರಿಗೆ ಬಂದಿಲ್ಲ, ಅಂತೂ ಇದೊಂದು ಒಳ್ಳೇ ಕೆಲಸವೆಂದ ವೀಕ್ಷಕರು
Amritdhare Serial: ಅಮೃತಧಾರೆ ಸೀರಿಯಲ್‌ನಲ್ಲಿ ಕೇಡಿ ಜೈದೇವ್ ಅಟ್ಟಹಾಸ ಮುಂದುವರಿದಿದೆ. ಆದರೆ, ಒಂದು ಕಾಲದಲ್ಲಿ ವಿನಲ್‌ಗಳಾಗಿದ್ದ ಶಕುನಿ ಮಾವ ಹಾಗೂ ಶಕುಂತಲಾ ಬದಲಾಗಿದ್ದು, ಹೊಸ ಟ್ವಿಸ್ಟ್‌ಗೆ ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ಬಂದಿದೆ. ಮಿಂಚು - ಆಕಾಶ್ ಇಬ್ಬರ ಹುಟ್ಟುಹಬ್ಬವನ್ನು ಗೌತಮ್ ದಿವಾನ್ ಹಾಗೂ ಭೂಮಿಕಾ ಸೇರಿದಂತೆ ಮನೆಯವರೆಲ್ಲರೂ ಮೊದಲ ಬಾರಿ ಸಂಭ್ರಮದಿಂದ ಆಚರಿಸುತ್ತಿದ್ದಾರೆ. ಹಲವು ವರ್ಷಗಳಿಂದ ಗೌತಮ್ ಹಾಗೂ ಭೂಮಿಕಾ ಅವರ ಮೊದಲ ಮಗಳು ಸಿಕ್ಕಿರಲಿಲ್ಲ. ಕೊನೆಗೂ ಅಖಿಲಾಂಡೇಶ್ವರಿ ಮಧ್ಯಪ್ರವೇಶ ಹಾಗೂ ಸಹಕಾರದಿಂದ ಮಿಂಚು ಸಿಗುವಂತೆ ಆಗಿತ್ತು. ಮಿಂಚು ಇನ್ನೇನು ಸಿಗಬೇಕು ಎನ್ನುವಾಗಲೇ ಕೇಡಿ ಕಿಡ್ನ್ಯಾಪ್ ಮಾಡಿದ್ದ. ಇದೀಗ ಇಬ್ಬರು ಮಕ್ಕಳ ಜನ್ಮದಿನಾಚರಣೆಯನ್ನು ಸಂಭ್ರಮದಿಂದ ಆಚರಿಸುವಾಗಲೇ ಕೇಡಿ ಕೇಕ್‌ನಲ್ಲಿ ಬಾಂಬ್ ಇರಿಸಿದ್ದಾನೆ. ಆದರೆ, ಶಕುಂತಲಾಳೇ ಮಗನನ್ನು ಪೊಲೀಸರಿಗೆ ಹಿಡಿದುಕೊಡುವಲ್ಲಿ ಯಶಸ್ವಿಯಾಗಿದ್ದಾಳೆ. ಕೇಡಿ ಇನ್ನೂ ಗೌತಮ್ ಫ್ಯಾಮಿಲಿಗೆ ತೊಂದರೆ ಕೊಡುತ್ತಿರುವುದನ್ನು ನೋಡಿ ಪ್ರೇಕ್ಷಕರು ಬೇಸರ ವ್ಯಕ್ತಪಡಿಸಿದ್ದರೂ ಸಹ ಶಕುಂತಲಾ ಸಂಪೂರ್ಣವಾಗಿ ಬದಲಾಗಿರುವಂತೆ ತೋರಿಸಿರುವುದು ಖುಷಿ ನೀಡಿದೆ.

ಮಿಂಚು - ಆಕಾಶ್ ಬರ್ತಡೇ ಸಂಭ್ರಮ: ಜೋಕರ್ ಎಂಟ್ರಿ ಕೊಟ್ಟ ವಿಲನ್
ಮಿಂಚು ಮತ್ತು ಆಕಾಶ್ ಇಬ್ಬರ ಬರ್ತಡೇಯನ್ನು ಮೊದಲ ಬಾರಿ ಮನೆಯವರೆಲ್ಲರೂ ಸೇರಿ ಸಂಭ್ರಮದಿಂದ ಆಚರಿಸುತ್ತಿದ್ದಾರೆ. ಈ ಸಂಭ್ರಮವನ್ನು ಕೆಡಿಸುವುದಕ್ಕೆ ಕೇಡಿ ಜೈದೇವ್ ಜೋಕರ್ ಕಾಸ್ಟ್ಯೂಮ್‌ನಲ್ಲಿ ಎಂಟ್ರಿ ಕೊಟ್ಟಿದ್ದಾನೆ. ಆದರೆ ಇದೆಲ್ಲ ಇವೆಂಟ್ ಮ್ಯಾನೇಜ್ಮೆಂಟ್ ಅವರ ಪ್ಲ್ಯಾನ್ ಇರಬೇಕು ಎಂದು ಮನೆಯವರು ಅಂದುಕೊಂಡಿದ್ದಾರೆ. ಇವೆಂಟ್ ಮ್ಯಾನೇಜರ್ ದೊಡ್ಡ ಸರ್ಫ್ರೈಸ್ ಇದೆ ಅಂತ ಹೇಳಿದ್ದರು, ಆ ಸರ್ಫ್ರೈಸ್ ಇದೇ ಇರಬೇಕು ಎಂದು ಮನೆಯವರು ಅಂದುಕೊಂಡಿದ್ದಾರೆ. ಜೋಕರ್ ರೂಪದಲ್ಲಿ ಬಂದ ಜೈದೇವ್ ಮಕ್ಕಳಿಗೆ ರಿಮೋಟ್ ಕಾರ್ ಗಿಫ್ಟ್ ಆಗಿ ಕೊಟ್ಟಿದ್ದಾನೆ. ಆದರೆ, ಇದಾದ ಮೇಲೆಯೇ ಟ್ವಿಸ್ಟ್ ಶುರುವಾಗಿದೆ. ಕೇಕ್‌ನಲ್ಲಿ ಬಾಂಬ್ ಇರಿಸಿರುವುದು ಗೊತ್ತಾಗಿದೆ.
ಕೇಕ್‌ನಲ್ಲಿ ಬಾಂಬ್ - ಪತ್ತೆ ಮಾಡಿದ ಗೌತಮ್ ದಿವಾನ್
ಇನ್ನು ಸಂಭ್ರಮಾಚರಣೆಯ ನಡುವೆ ಮನೆಯಲ್ಲಿ ಬಾಂಬ್ ಇರಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಇನ್ನೇನು ಕೇಕ್ ಕಟ್ ಮಾಡಬೇಕು ಎನ್ನುವಾಗಲೇ ಗೌತಮ್ ಎಚ್ಚರಕೆಯಿಂದ ಕೇಕ್ ಕಟ್ ಮಾಡುವುದನ್ನು ತಪ್ಪಿಸಿದ್ದಾನೆ. ಮತ್ತೊಂದು ಕಡೆ ಶಕುನಿ ಮಾವ ಈ ಕೆಲಸವನ್ನೆಲ್ಲ ಮಾಡಿದ್ದು ಕೇಡಿ ಜೈದೇವ್ ಅಂತ ಶಕುಂತಲಾಳ ಬಳಿ ಹೇಳಿಕೊಂಡಿದ್ದಾನೆ. ಮುಂದುವರಿದು ಕೂಡಲೇ ಶಕುಂತಲಾ - ಜೈದೇವ್ ಮನೆಗೆ ಹೋಗಿದ್ದು, ಅವರ ಜನ್ಮದಿನ ಅಂತಲೂ ನೋಡದೆ ಅವರು ಕಟ್ ಮಾಡಬೇಕಾಗಿದ್ದ ಕೇಕ್‌ನಲ್ಲಿ ಬಾಂಬ್ ಇಟ್ಟಿದ್ದೀಯಲ್ಲ, ಎಷ್ಟು ಧೈರ್ಯ ನಿನಗೆ ಅಂತ ಕಪಾಳಮೋಕ್ಷ ಮಾಡುವುದಕ್ಕೆ ಮುಂದಾಗಿದ್ದಾಳೆ. ಆದರೆ ಶಕುಂತಲಾಳನ್ನು ಜೈ ತಡೆದಿದ್ದಾನೆ. ನೀನು ಈ ರೀತಿ ಮಾಡುತ್ತೀಯ ಅಂತ ಗೊತ್ತು. ಅದೇ ಕಾರಣಕ್ಕೆ ನಾನು ಪೊಲೀಸ್ ಅವರನ್ನು ಸಹ ಕರೆದುಕೊಂಡು ಬಂದಿದ್ದೇನೆ ಎಂದು ಶಕುಂತಲಾ ಹೇಳಿದ್ದಾಳೆ. ಪೊಲೀಸರ ಮುಂದೆ ಇವನೇ ನಮ್ಮ ಮನೆಗೆ ಬಂದು ಬಾಂಬ್ ಇರಿಸಿದ್ದು, ನಾನೇ ಅದಕ್ಕೆ ನಾನೇ ಸಾಕ್ಷಿ ಅರೆಸ್ಟ್ ಮಾಡಿ ಅಂತ ಹೇಳಿದ್ದಾಳೆ. ಪೊಲೀಸರು ಜೈದೇವ್ ಬಂಧಿಸಿದ್ದಾರೆ. ಈ ಎಪಿಸೋಡ್ ನೋಡಿ ವೀಕ್ಷಕರು, ಶಕುಂತಲಾಗೆ ಒಳ್ಳೇ ಬಂದ್ರೂ, ಕೆಟ್ಟ ಮಗ ದಾರಿಗೆ ಬಂದಿಲ್ಲ, ಅಂತೂ ಇದೊಂದು ಒಳ್ಳೇ ಕೆಲಸ ಅಂತ ಹೇಳಿದ್ದಾರೆ.














Click it and Unblock the Notifications