Get Updates
Get notified of breaking news, exclusive insights, and must-see stories!

Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ?

Petrol Price: ಅಮೆರಿಕ, ಇಸ್ರೇಲ್ ಹಾಗೂ ಇರಾನ್ ನಡುವಿನ ಯುದ್ಧವು ಒಂದು ವಾರದ ನಂತರವೂ ಮುಂದುವರಿದಿದ್ದು, ಯುದ್ಧದ ಬಿಸಿ ಇದೀಗ ಭಾರತ ಸೇರಿದಂತೆ ವಿವಿಧ ರಾಷ್ಟ್ರಗಳ ಮೇಲಾಗುವುದಕ್ಕೆ ಪ್ರಾರಂಭವಾಗಿದೆ. ಯುದ್ಧವು ತೀವ್ರ ಸ್ವರೂಪವನ್ನು ಪಡೆದುಕೊಳ್ಳುತ್ತಿರುವಂತೆಯೇ ಕಚ್ಚಾ ತೈಲದ ದರವು ಭಾರೀ ಹೆಚ್ಚಳವಾಗುತ್ತಿದೆ. ಇದರಿಂದ ಭಾರತದಲ್ಲೂ ಪೆಟ್ರೋಲ್ - ಡೀಸೆಲ್ ದರವು ಶೀಘ್ರ ಹೆಚ್ಚಳವಾಗಲಿದೆ. ಪೆಟ್ರೋಲ್ ಬೆಲೆಯು ಲೀಟರ್‌ಗೆ ಕನಿಷ್ಠ 200 ರೂಪಾಯಿ ಆಗಲಿದೆ ಎಂದು ಅಂದಾಜಿಸಲಾಗಿದ್ದು. ಭಾರತಕ್ಕೆ ಇದರಿಂದ ಭಾರೀ ಸಂಕಷ್ಟ ಎದುರಾಗುವ ಸಾಧ್ಯತೆ ಇದೆ.

ಇಸ್ರೇಲ್ ಮತ್ತು ಅಮೆರಿಕ ಸೇರಿ ಇರಾನ್ ಮೇಲೆ ನಡೆಸುತ್ತಿರುವ ದಾಳಿಯು ವಿಶ್ವ ಆರ್ಥಿಕ ವ್ಯವಸ್ಥೆಗೆ ಪೆಟ್ಟು ನೀಡುತ್ತಿದೆ. ಅಮೆರಿಕಕ್ಕೆ ಪ್ರತೀಕಾರದ ಭಾಗವಾಗಿ ಹಾರ್ಮುಜ್ ಜಲಸಂಧಿಯನ್ನು ಇರಾನ್ ಮುಚ್ಚಿದೆ. ಇರಾನ್‌ನ ಕ್ರಮವು ಏಷ್ಯಾದ ದೇಶಗಳಿಗೆ ತಟ್ಟಿದೆ. ಭಾರತ ಸೇರಿದಂತೆ ವಿವಿಧ ದೇಶಗಳು ತೈಲ ಮತ್ತು ಗ್ಯಾಸ್ ಸಿಲಿಂಡರ್ ವಿಷಯದಲ್ಲಿ ಮತ್ತಷ್ಟು ಬಿಕ್ಕಟ್ಟನ್ನು ಎದುರಿಸಬಹುದು ಎಂದು ಹೇಳಲಾಗಿದೆ.

Petrol Price

ಸೌದಿ ಅರೇಬಿಯಾ ತನ್ನ ಮುಖ್ಯ ಸಂಸ್ಕರಣಾಗಾರವನ್ನು ಮುಚ್ಚಿದೆ, ಕತಾರ್ ಎಲ್‌ಎನ್‌ಜಿ ರಫ್ತುಗಳನ್ನು ನಿಲ್ಲಿಸಿದೆ ಮತ್ತು ಕುವೈತ್ ಕೆಲವು ತೈಲ ಕ್ಷೇತ್ರಗಳಿಂದ ಕಚ್ಚಾ ತೈಲ ಉತ್ಪಾದನೆಯನ್ನು ನಿಲ್ಲಿಸಿರುವುದಾಗಿ ಘೋಷಿಸಿದೆ. ಕತಾರ್‌ನ ಇಂಧನ ಸಚಿವ ಸಾದ್ ಅಲ್ ಕಾಬಿ ಅವರು, ಕಚ್ಚಾ ತೈಲದ ಬೆಲೆ ಶೀಘ್ರದಲ್ಲೇ ಬ್ಯಾರೆಲ್‌ಗೆ $ 150 ತಲುಪಲಿದೆ ಎಂದು ಅವರು ಹೇಳಿದ್ದಾರೆ.

ಕಚ್ಚಾ ತೈಲದ ಬೆಲೆ ಬ್ಯಾರೆಲ್‌ಗೆ $ 70 ಆಗಿದ್ದರೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೆ ಸುಮಾರು 100 ರೂ. ಕಚ್ಚಾ ತೈಲದ ಬೆಲೆ ಈಗ $ 150 ತಲುಪಿದಾಗ, ಭಾರತದಲ್ಲಿ ಪೆಟ್ರೋಲ್ ಬೆಲೆ ಎರಡುಪಟ್ಟು ಆಗುವುದರಲ್ಲಿ ಸಂಶಯವಿಲ್ಲ ಎಂದು ಹೇಳಲಾಗುತ್ತಿದೆ. ಪ್ರಸ್ತುತ ಬ್ರೆಂಟ್ ಕಚ್ಚಾ ತೈಲದ ಬೆಲೆ ಬ್ಯಾರೆಲ್‌ಗೆ $ 92 ಆಗಿದೆ. ಹಲವು ವರ್ಷಗಳ ನಂತರ ಕಚ್ಚಾ ತೈಲದ ಬೆಲೆಯು ಈ ಮಟ್ಟಕ್ಕೆ ತಲುಪಿದೆ. ಯುಎಇಯ ಮುರ್ಬನ್ ಕಚ್ಚಾ ತೈಲದ ಬೆಲೆ $103 ಕ್ಕೆ ಏರಿದೆ.

ಭಾರತವು ಮುಖ್ಯವಾಗಿ ಕತಾರ್‌ನಿಂದ ನೈಸರ್ಗಿಕ ಅನಿಲವನ್ನು ಆಮದು ಮಾಡಿಕೊಳ್ಳುತ್ತದೆ. ಇರಾನ್ ಹಾರ್ಮುಜ್ ಜಲಸಂಧಿಯನ್ನು ಮುಚ್ಚಿದ ನಂತರ ಕತಾರ್ ತಾತ್ಕಾಲಿಕವಾಗಿ ರಫ್ತುಗಳನ್ನು ನಿಲ್ಲಿಸಿದೆ. ಶೀಘ್ರದಲ್ಲೇ, ಭಾರತದಲ್ಲಿ ಅಡುಗೆ ಗ್ಯಾಸ್ ಸಿಲಿಂಡರ್‌ನ ಬೆಲೆಯು ಇನ್ನಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ.

Petrol Price ಕಚ್ಚಾ ತೈಲದ ಬೆಲೆ ಹೆಚ್ಚಳ

2022ರ ನಂತರ ಮೊದಲ ಬಾರಿಗೆ ಕಚ್ಚಾ ತೈಲ 100 ಡಾಲರ್ ಗಡಿ ದಾಟಿದೆ. ರಫ್ತುಗಳು ವಿಳಂಬ ಅಥವಾ ತಾತ್ಕಾಲಿಕ ಸ್ಥಗಿತವೂ ಸಹ ಸಂಕಷ್ಟವನ್ನು ತಂದೊಡ್ಡಿದೆ. ಪೆಟ್ರೋಲಿಯಂ ರಫ್ತು ಮಾಡುವ ದೇಶಗಳ ಸಂಘಟನೆ - OPEC ಯು ಉತ್ಪಾದನೆಯನ್ನು ಕಡಿತಗೊಳಿಸಿದೆ. ಇರಾನ್, ಯುಎಸ್ ಹಾಗೂ ಇಸ್ರೇಲ್ ನಡುವಿನ ಸಂಘರ್ಷವು ಮಧ್ಯಪ್ರಾಚ್ಯದಲ್ಲಿ ಇಂಧನ ಸರಬರಾಜಿಗೆ ಪೆಟ್ಟು ಕೊಟ್ಟಿದೆ.

ಬ್ರೆಂಟ್ ಕಚ್ಚಾ ತೈಲದ ಬೆಲೆ ಬ್ಯಾರೆಲ್‌ಗೆ $108.77 ಕ್ಕೆ ಏರಿಕೆ ಕಂಡಿದೆ. ಇದು 2020 ರಲ್ಲಿ ಕೋವಿಡ್ ಪ್ರಾರಂಭವಾದ ನಂತರದ ಒಂದೇ ದಿನದಲ್ಲಿ ಏರಿಕೆಯಾಗಿರುವ ದೊಡ್ಡ ಮೊತ್ತವಾಗಿದೆ. ಈ ಏರಿಕೆಯು ಶೇ.28% ರಷ್ಟು ತೀವ್ರ ಏರಿಕೆಯನ್ನು ಸೂಚಿಸುತ್ತದೆ. ಸಂಘರ್ಷವು ಮುಂದುವರಿದರೆ ಕಚ್ಚಾ ತೈಲ ಬೆಲೆಗಳು ಬ್ಯಾರೆಲ್‌ಗೆ $120 ಮೀರಬಹುದು ಎಂದು ವಿಶ್ಲೇಷಕರು ಎಚ್ಚರಿಸಿದ್ದಾರೆ. ಇದು ಜಾಗತಿಕ ಆರ್ಥಿಕ ಹಿಂಜರಿತದ ಅಪಾಯವನ್ನು ಹೆಚ್ಚಿಸುತ್ತಿದೆ.

Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ

ಭಾರತದ ಆರ್ಥಿಕತೆಯ ಮೇಲೆ ಪರಿಣಾಮವೇನು

ತೈಲ ಬೆಲೆಗಳ ಏರಿಕೆಯು ಭಾರತಕ್ಕೆ ಗಮನಾರ್ಹ ಸವಾಲನ್ನು ಒಡ್ಡಬಹುದು. ಭಾರತವು ತನ್ನ ಕಚ್ಚಾ ತೈಲದ ಅವಶ್ಯಕತೆಗಳಲ್ಲಿ ಸುಮಾರು 85% ಅನ್ನು ಆಮದು ಮಾಡಿಕೊಳ್ಳುತ್ತದೆ. ನಿರಂತರ ಹೆಚ್ಚಿನ ಬೆಲೆಗಳು ಸಾಮಾನ್ಯವಾಗಿ ದೇಶದ ಆಮದು ಮೊತ್ತವನ್ನು ಹೆಚ್ಚಿಸುತ್ತವೆ. ಚಾಲ್ತಿ ಖಾತೆ ಕೊರತೆಯನ್ನು (CAD) ಹೆಚ್ಚಿಸುತ್ತವೆ ಮತ್ತು ರೂಪಾಯಿಯ ಮೇಲೆ ಒತ್ತಡ ಸೃಷ್ಟಿಯಾಗುತ್ತದೆ. ಹೆಚ್ಚುತ್ತಿರುವ ಕಚ್ಚಾ ವೆಚ್ಚಗಳು ಇಂಧನ, ಸಾರಿಗೆ ಮತ್ತು ಉತ್ಪಾದನಾ ವೆಚ್ಚಗಳನ್ನು ಹೆಚ್ಚಿಸುತ್ತವೆ, ವ್ಯಾಪಕ ಹಣದುಬ್ಬರಕ್ಕೂ ಕಾರಣವಾಗಬಹುದು ಎನ್ನುವ ಆತಂಕ ಇದೀಗ ಮನೆ ಮಾಡಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+