ವೈಭವ್ ಸೂರ್ಯವಂಶಿಗೆ ರವೀಂದ್ರ ಜಡೇಜಾ ಬ್ಯಾಟಿಂಗ್ ಕ್ಲಾಸ್; Viral Video ಇಲ್ಲಿದೆ
ಐಪಿಎಲ್ 2026ರ ಕ್ರಿಕೆಟ್ ಹಬ್ಬಕ್ಕೆ ಕ್ಷಣಗಣನೆ ಆರಂಭವಾಗಿದೆ. ಮಾರ್ಚ್ 28ರಿಂದ ಟೂರ್ನಿ ಅಧಿಕೃತವಾಗಿ ಚಾಲನೆ ಪಡೆಯಲಿದ್ದು, ಎಲ್ಲಾ ತಂಡಗಳು ಸಮರಕ್ಕೆ ಸಜ್ಜಾಗಿವೆ. ಈ ನಡುವೆ ರಾಜಸ್ಥಾನ್ ರಾಯಲ್ಸ್ ತಂಡವು ಜೈಪುರದ ಸವಾಯ್ ಮಾನ್‌ಸಿಂಗ್ ಕ್ರೀಡಾಂಗಣದಲ್ಲಿ ತನ್ನ ತರಬೇತಿ ಶಿಬಿರವನ್ನು ಉತ್ಸಾಹದಿಂದ ಆರಂಭಿಸಿದೆ.
ಜಡೇಜಾ-ವೈಭವ್ ಸಂಭಾಷಣೆ ವೈರಲ್
ತಂಡದ ಅಭ್ಯಾಸದ ವೇಳೆ ರಾಜಸ್ಥಾನ್ ರಾಯಲ್ಸ್ ಹಂಚಿಕೊಂಡ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ಇದರಲ್ಲಿ ಅನುಭವಿ ಆಲ್ ರೌಂಡರ್ ರವೀಂದ್ರ ಜಡೇಜಾ ಮತ್ತು 14 ವರ್ಷದ ಪ್ರತಿಭಾನ್ವಿತ ಆಟಗಾರ ವೈಭವ್ ಸೂರ್ಯವಂಶಿ ನಡುವಿನ ಆತ್ಮೀಯ ಮಾತುಕತೆ ಅಭಿಮಾನಿಗಳ ಗಮನ ಸೆಳೆದಿದೆ

ವಿಡಿಯೋದಲ್ಲಿ ಜಡೇಜಾ ಅವರು ವೈಭವ್ ಬಳಿ, "ನೀವು ಡಿವೈ ಪಾಟೀಲ್ ಟಿ20 ಟೂರ್ನಿಯಲ್ಲಿ ಆಡುತ್ತಿದ್ದಿರಲ್ಲವೇ?" ಎಂದು ವಿಚಾರಿಸುತ್ತಾರೆ. ಅದಕ್ಕೆ ಉತ್ತರಿಸಿದ ವೈಭವ್, "ಹೌದು, ನಾನು ನಿನ್ನೆಯಷ್ಟೇ ಅಭ್ಯಾಸಕ್ಕೆ ಬಂದೆ. ನಾನು ಡಿವೈ ಪಾಟೀಲ್ ಬ್ಲೂ ತಂಡದ ಪರವಾಗಿ ಆಡಿದ್ದೆ, ನಮ್ಮ ತಂಡ ಸೆಮಿಫೈನಲ್‌ವರೆಗೆ ಬಂದಿತ್ತು" ಎಂದು ಮಾಹಿತಿ ಹಂಚಿಕೊಂಡಿದ್ದಾನೆ. ಆದರೆ ಸೆಮಿಫೈನಲ್‌ನಲ್ಲಿ ಮುಂಬೈ ಕಸ್ಟಮ್ಸ್ ವಿರುದ್ಧ ಸೋಲನುಭವಿಸಿ ಟೂರ್ನಿಯಿಂದ ಹೊರಬಿದ್ದಿದ್ದಾಗಿ ಬೇಸರದಿಂದಲೇ ವಿವರಿಸಿದ್ದಾನೆ. ಈ ಟೂರ್ನಿಯಲ್ಲಿ ಮುಂಬೈ ಕಸ್ಟಮ್ಸ್ ತಂಡವೇ ಚಾಂಪಿಯನ್ ಆಗಿ ಹೊರಹೊಮ್ಮಿದೆ.
ಹೊಸ ಹುರುಪಿನಲ್ಲಿ ರಾಯಲ್ಸ್ ಪಡೆ
ಸಂಜು ಸ್ಯಾಮ್ಸನ್ ನಾಯಕತ್ವದ ರಾಯಲ್ಸ್ ತಂಡದಲ್ಲಿ ಈ ಬಾರಿ ಅನುಭವಿ ಜಡೇಜಾ ಅವರ ಮಾರ್ಗದರ್ಶನ ವೈಭವ್ ಸೂರ್ಯವಂಶಿ ಅವರಂತಹ ಯುವ ಆಟಗಾರರಿಗೆ ದೊಡ್ಡ ಬಲ ನೀಡಲಿದೆ. ಜಡೇಜಾ ಮತ್ತು ಸ್ಯಾಮ್ ಕರನ್ ಅವರಂತಹ ಆಟಗಾರರ ಸೇರ್ಪಡೆಯಿಂದ ತಂಡದ ಮಧ್ಯಮ ಕ್ರಮಾಂಕ ಮತ್ತು ಬೌಲಿಂಗ್ ವಿಭಾಗ ಬಲಿಷ್ಠಗೊಂಡಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಒಟ್ಟಿನಲ್ಲಿ ಮಾರ್ಚ್ 28ರ ಮೊದಲ ಪಂದ್ಯಕ್ಕಾಗಿ ರಾಯಲ್ಸ್ ಅಭಿಮಾನಿಗಳು ತುದಿಗಾಲಿನಲ್ಲಿ ಕಾಯುತ್ತಿದ್ದಾರೆ.












Click it and Unblock the Notifications