Rashmika Mandanna: ಅವನನ್ನ ಮದುವೆಯಾಗಿದ್ದೇ ನನ್ನ ಬದುಕಿನ ಅತ್ಯಂತ ಸುಂದರ ಕ್ಷಣ: ಸೀಕ್ರೆಟ್‌ ಬಿಚ್ಚಿಟ್ಟ ರಶ್ಮಿಕಾ

ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಹಾಗೂ ಟಾಲಿವುಡ್ ರೌಡಿ ಸ್ಟಾರ್ ವಿಜಯ್ ದೇವರಕೊಂಡ ಅವರ ಅದ್ಧೂರಿ ವಿವಾಹ ಇತ್ತೀಚೆಗಷ್ಟೇ ರಾಜಸ್ಥಾನದ ಉದಯಪುರದಲ್ಲಿ ನೆರವೇರಿತ್ತು. ಮದುವೆಯ ನಂತರ ತಮ್ಮ ವೈವಾಹಿಕ ಜೀವನ ಹಾಗೂ ವೃತ್ತಿಜೀವನದ ಹೊಸ ಇನ್ನಿಂಗ್ಸ್ ಎಂಜಾಯ್ ಮಾಡುತ್ತಿರುವ ನಟಿ ರಶ್ಮಿಕಾ ಮಂದಣ್ಣ, ಇದೀಗ ತಮ್ಮ ಬದುಕಿನ ಅತ್ಯಂತ ಸಂತೋಷದ ವಿಚಾರಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ಇನ್‌ಸ್ಟಾಗ್ರಾಂನಲ್ಲಿ ಅಭಿಮಾನಿಗಳೊಂದಿಗೆ ನಡೆಸಿದ ವಿಶೇಷ ಪ್ರಶ್ನೋತ್ತರ (Q&A) ಸಂವಾದದಲ್ಲಿ ರಶ್ಮಿಕಾ ತಮ್ಮ ವೈಯಕ್ತಿಕ ಜೀವನ, ಬ್ಯೂಟಿ ಸೀಕ್ರೆಟ್ ಮತ್ತು ಮುಂಬರುವ ಸಿನಿಮಾಗಳ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ.

"ನನ್ನ ಬೆಸ್ಟ್ ಫ್ರೆಂಡ್‌ನ ಕೈಹಿಡಿದಿದ್ದೇ ಸುಂದರ"

ಸಂವಾದದ ವೇಳೆ ಅಭಿಮಾನಿಯೊಬ್ಬರು, "ನಿಮ್ಮ ಜೀವನದಲ್ಲಿ ನೀವು ಮಾಡಿದ ಅತ್ಯಂತ ಸಂತೋಷದ ಕೆಲಸ ಯಾವುದು?" ಎಂದು ಪ್ರಶ್ನಿಸಿದ್ದರು. ಇದಕ್ಕೆ ಉತ್ತರಿಸಿದ ನಟಿ ರಶ್ಮಿಕಾ, "ನನ್ನ ಆಪ್ತ ಗೆಳೆಯನನ್ನು (ಬೆಸ್ಟ್ ಫ್ರೆಂಡ್ ವಿಜಯ್ ದೇವರಕೊಂಡ) ಮದುವೆಯಾಗಿದ್ದು" ಎಂದು ಹೇಳುವ ಮೂಲಕ ತಮ್ಮ ಪ್ರೀತಿಯನ್ನು ಬಿಚ್ಚಿಟ್ಟಿದ್ದಾರೆ. ಮತ್ತೊಬ್ಬ ಅಭಿಮಾನಿ "ನಿಮ್ಮ ಸದ್ಯದ ಬದುಕನ್ನು ಒಂದೇ ಪದದಲ್ಲಿ ಹೇಗೆ ವರ್ಣಿಸುತ್ತೀರಿ?" ಎಂದು ಕೇಳಿದ್ದಕ್ಕೆ, "ನನ್ನ ಕನಸು ನನಸಾಗಿದೆ" ಎಂದು ವರ್ಣಿಸಿದ್ದಾರೆ.

Rashmika Mandanna

ರಶ್ಮಿಕಾ ಮಂದಣ್ಣ ಬಿಚ್ಚಿಟ್ಟ 'ಬ್ಯೂಟಿ ಸೀಕ್ರೆಟ್' ಏನು?

ತಮ್ಮ ಗ್ಲೋಯಿಂಗ್ ಸ್ಕಿನ್ ಹಾಗೂ ಸದಾ ನಗುಮುಖದ ರಹಸ್ಯವನ್ನು ರಿವೀಲ್ ಮಾಡಿದ ರಶ್ಮಿಕಾ, "ನಿಮ್ಮಲ್ಲಿರುವ ಮಗುವನ್ನು ಜೋಪಾನ ಮಾಡುವಂತಹ ವ್ಯಕ್ತಿಯೊಂದಿಗೆ ಸದಾ ಕಾಲ ಕಳೆಯಿರಿ. ನಿಮ್ಮ ಸಂಗಾತಿ ಎದುರು ನೀವು ಮಗುವಿನಂತೆ ಇರಲು ಸಾಧ್ಯವಾದರೆ ಬದುಕು ಸದಾ ಖುಷಿಯಾಗಿರುತ್ತದೆ. ಅದೇ ಸಮಯದಲ್ಲಿ ಅವರಲ್ಲಿರುವ ಮುಗ್ಧ ಮಗುವನ್ನೂ ನೀವು ಅಷ್ಟೇ ಪ್ರೀತಿಯಿಂದ ಜೋಪಾನ ಮಾಡಬೇಕು. ಸದಾ ಸಂತೋಷವಾಗಿರುವುದೇ ನಿಜವಾದ ಸೌಂದರ್ಯದ ರಹಸ್ಯ" ಎಂದು ದಂಪತಿಗೆ ಸಲಹೆ ನೀಡಿದ್ದಾರೆ.

ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಕಳೆದ ವರ್ಷದ ಅಕ್ಟೋಬರ್‌ನಲ್ಲಿ ಗುಟ್ಟಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ತದನಂತರ ಫೆಬ್ರವರಿಯಲ್ಲಿ ತಮ್ಮ ಮದುವೆ ವಿಚಾರವನ್ನು ಅಧಿಕೃತಗೊಳಿಸಿ, ಫೆಬ್ರವರಿ 26ರಂದು ಉದಯಪುರದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಮಾರ್ಚ್‌ನಲ್ಲಿ ಚಿತ್ರರಂಗದ ಗಣ್ಯರಿಗಾಗಿ ಅದ್ಧೂರಿ ರಿಸೆಪ್ಷನ್ ಹಮ್ಮಿಕೊಂಡಿದ್ದ ಈ ಜೋಡಿ, ಹೈದರಾಬಾದ್‌ನಲ್ಲಿ ಅಭಿಮಾನಿಗಳಿಗಾಗಿಯೇ ವಿಶೇಷ ಭೇಟಿ ಕಾರ್ಯಕ್ರಮವನ್ನೂ ಆಯೋಜಿಸಿತ್ತು.

ದಿಶಾ ಪಟಾನಿ ಜೊತೆಗಿನ ಒಡನಾಟವೇ ಡಿವೋರ್ಸ್‌ಗೆ ಕಾರಣವಾಯ್ತಾ? 'ಸಲಿಂಗಿ' ವದಂತಿ ಬಗ್ಗೆ ನಟಿ ಮೌನಿ ರಾಯ್ ಹೇಳಿದ್ದಿಷ್ಟು
ದಿಶಾ ಪಟಾನಿ ಜೊತೆಗಿನ ಒಡನಾಟವೇ ಡಿವೋರ್ಸ್‌ಗೆ ಕಾರಣವಾಯ್ತಾ? 'ಸಲಿಂಗಿ' ವದಂತಿ ಬಗ್ಗೆ ನಟಿ ಮೌನಿ ರಾಯ್ ಹೇಳಿದ್ದಿಷ್ಟು

'ಕಾಕ್‌ಟೇಲ್ 2' ಚಿತ್ರದಲ್ಲಿ ರಶ್ಮಿಕಾ ಧಮಾಕಾ

ಸಿನಿಮಾ ವಿಚಾರಕ್ಕೆ ಬರುವುದಾದರೆ, ರಶ್ಮಿಕಾ ಮಂದಣ್ಣ ಸದ್ಯ ತಮ್ಮ ಬಹುನಿರೀಕ್ಷಿತ ರೋಮ್ಯಾಂಟಿಕ್ ಡ್ರಾಮಾ ಸಿನಿಮಾ 'ಕಾಕ್‌ಟೇಲ್ 2' ಬಿಡುಗಡೆಯ ತಯಾರಿಯಲ್ಲಿದ್ದಾರೆ. 2012ರಲ್ಲಿ ಸೂಪರ್ ಹಿಟ್ ಆಗಿದ್ದ ಹನಿ ಅಡಾಜಾನಿಯಾ ನಿರ್ದೇಶನದ 'ಕಾಕ್‌ಟೇಲ್' ಚಿತ್ರದ ಸೀಕ್ವೆಲ್ ಇದಾಗಿದ್ದು, ಜೂನ್ 19ರಂದು ಚಿತ್ರಮಂದಿರಗಳಲ್ಲಿ ಗ್ರಾಂಡ್ ಆಗಿ ರಿಲೀಸ್ ಆಗುತ್ತಿದೆ. ಈ ಸಿನಿಮಾದಲ್ಲಿ ರಶ್ಮಿಕಾ ಜೊತೆಗೆ ಬಾಲಿವುಡ್ ಸ್ಟಾರ್ ಶಾಹಿದ್ ಕಪೂರ್ ಹಾಗೂ ಕೃತಿ ಸನನ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ಕೃತಿ ಸನನ್‌ ಜೊತೆಗಿನ 'ಗರ್ಲ್ ಗ್ಯಾಂಗ್' ಕೆಮಿಸ್ಟ್ರಿ

ಇತ್ತೀಚಿನ ಸಂದರ್ಶನದಲ್ಲಿ ಸಹನಟಿ ಕೃತಿ ಸನನ್ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ರಶ್ಮಿಕಾ, "ಕೃತಿ ಜೊತೆ ಕೆಲಸ ಮಾಡಿದ್ದು ಅದ್ಭುತ ಅನುಭವ. ಕೆಲವೊಮ್ಮೆ ನಮಗೆ ನೆಮ್ಮದಿ ಸಿಗಲು ಹೆಣ್ಣುಮಕ್ಕಳ ಸಕಾರಾತ್ಮಕ ಶಕ್ತಿಯ ಅಗತ್ಯವಿರುತ್ತದೆ. ನಮ್ಮಿಬ್ಬರ ಆಲೋಚನೆಗಳು ತಕ್ಷಣವೇ ಮ್ಯಾಚ್ ಆದವು. ನಾನು ಸದಾ ಕೃತಿಯ ಯಶಸ್ಸನ್ನು ಬಯಸುತ್ತೇನೆ. ನಮ್ಮಿಬ್ಬರ ಕಾಂಬಿನೇಷನ್‌ನಲ್ಲಿ ಮುಂದೆಯೂ ಹಲವು ಸಿನಿಮಾಗಳು ಬರಲಿ ಎಂದು ಆಶಿಸುತ್ತೇನೆ" ಎಂದಿದ್ದಾರೆ.

ಇಟಲಿಯ ಸಿಸಿಲಿ ದ್ವೀಪಕ್ಕೆ ಮತ್ತೊಮ್ಮೆ ಪ್ರವಾಸ ಹೋಗಿ ಅಲ್ಲಿನ ಪಿಜ್ಜಾ, ಪಾಸ್ತಾ ಹಾಗೂ ಗೆಲಾಟೋ ಐಸ್‌ಕ್ರೀಮ್‌ಗಳನ್ನು ಸವಿಯುವ ಕೃತಿ ಸನನ್ ಅವರ ಪ್ಲಾನ್‌ಗೆ ರಶ್ಮಿಕಾ ಕೂಡ ಗ್ರೀನ್ ಸಿಗ್ನಲ್ ನೀಡಿದ್ದಾರೆ. 'ಕಾಕ್‌ಟೇಲ್ 2' ಚಿತ್ರದ ಮೂಲಕ ರಶ್ಮಿಕಾ ಮೊದಲ ಬಾರಿಗೆ ಶಾಹಿದ್ ಕಪೂರ್ ಜೊತೆ ತೆರೆ ಹಂಚಿಕೊಳ್ಳುತ್ತಿದ್ದಾರೆ. ಇದರ ಜೊತೆಗೆ ರವೀಂದ್ರ ಪುಲ್ಲೆ ನಿರ್ದೇಶನದ 'ಮೈಸಾ' (Mysaa) ಚಿತ್ರದಲ್ಲೂ ರಶ್ಮಿಕಾ ನಟಿಸುತ್ತಿದ್ದು, ಇದು ಅವರ ವೃತ್ತಿಜೀವನದ ಮೊದಲ ಸೋಲೋ ಲೀಡ್ (ನಾಯಕ ಪ್ರಧಾನ) ಸಿನಿಮಾವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+