Abhijit Deepke: ಜೈಪುರದಲ್ಲಿ ಪ್ರತಿಭಟನೆ ವೇಳೆ CJP ಸಂಸ್ಥಾಪಕ ಅಭಿಜೀತ್ ದೀಪ್ಕೆ ಮೇಲೆ ಹಲ್ಲೆ: ವಿಡಿಯೋ
ನವದೆಹಲಿ: ಸೋಷಿಯಲ್ ಮೀಡಿಯಾ ಇತ್ತೀಚೆಗೆ ಭಾರೀ ಸದ್ದು ಮಾಡಿದ್ದ ನೂತನ 'ಕಾಕ್ರೋಚ್ ಜನತಾ ಪಾರ್ಟಿ (CJP)' ಸಂಸ್ಥಾಪಕ ಅಭಜಿತ್ ದೀಪ್ಕೆ ಅವರ ಮೇಲೆ ಹಲ್ಲೆ ನಡೆದಿದೆ. ರಾಜಸ್ಥಾನದ ಜೈಪುರದಲ್ಲಿ ಸಾರ್ವಜನಿಕ ಸಂವಾದ ನಡೆಸುವಾಗ ಸೋಮವಾರ (ಜೂನ್ 15) ವೇಳೆ ಅವರನ್ನು ಥಳಿಸಿದ ಘಟನೆ ನಡೆದಿದೆ.
ಶೈಕ್ಷಣಿಕ ಅಕ್ರಮ, ಪ್ರಶ್ನೆ ಪತ್ರಿಕೆ ಸೋರಿಕೆ ಸಂಬಂಧ ಕೇಂದ್ರದ ವಿರುದ್ಧ ಧ್ವನಿ ಎತ್ತಿರುವ ಸಿಜೆಪಿ ಸಂಸ್ಥಾಪಕ ಅಭಿಜೀತ್ ದೀಪ್ಕೆ ಅವರು ರಾಜಸ್ಥಾನದ ಜೈಪುರದಲ್ಲಿ ಸಿಜೆಪಿ ವತಿಯಿಂದ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಒತ್ತಾಯಿಸಿ ಧಿಕ್ಕಾರ ಕೂಗುತ್ತಿದ್ದರು. ಈ ವೇಳೆ ಸಾರ್ವಜನಿಕ ಸಂವಾದ ನಡೆಸುತ್ತಿದ್ದ ಅಭಿಜೀತ್ ದೀಪ್ಕೆ ಅವರನ್ನು ಹೆಗಲ ಮೇಲೆ ಹೊತ್ತು ಜನರ ಗುಂಪಿನ ನಡುವೆ ಕರೆದೊಯ್ಯಲಾಗುತ್ತಿತ್ತು. ದೀಪ್ಕೆ ಸಹ ಸಾರ್ವಜನಿಕರತ್ತ ಕೈ ಬೀಸುತ್ತಿದ್ದರು. ಈ ವೇಳೆ ಗುಂಪಿನಲ್ಲಿದ್ದ ಕೆಲವರು ಅಭಿಜಿತ್ ದೀಪ್ಕೆ ಅವರ ಮೇಲೆ ಹಲ್ಲೆ ನಡೆಸಿದ್ದಾರೆ. ಮುಖ, ಮೈ, ತಲೆಗೆ ಹೊಡೆಯುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಗುಂಪಿನೊಂದಿಗೆ ಸಾಗುತ್ತ ಜನರತ್ತ ಕೈ ಮಾಡುತ್ತಿದ್ದಾಗ ದಿಢೀರನೇ ಗುಂಪಿನಲ್ಲಿದ್ದ ಕೆಲವರು ಈ ಕೃತ್ಯ ಎಸಗಿದ್ದಾರೆ. ಕೈ ಹಿಡಿದು ಎಳೆದಾಡಿದ್ದಾರೆ. ಈ ವೇಳೆ ಜೈಪುರದಲ್ಲಿ ಕೆಲ ಕಾಲ ಸಂದಿಗ್ಧ ಸ್ಥಿತಿ ನಿರ್ಮಾಣವಾಯಿತು.
ಬೆಂಗಳೂರಿನ ಪ್ರತಿಭಟನೆ ಬೆನ್ನಲ್ಲೆ ಹಲ್ಲೆ
ರಾಷ್ಟ್ರೀಯ ಸಾಮಾನ್ಯ ಪ್ರವೇಶ ಪರೀಕ್ಷೆ (NEET UG 2026) ಪ್ರಶ್ನೆ ಪತ್ರಿಕೆ ಸೋರಿಕೆ, ಹಗರಣ, ಶೈಕ್ಷಣಿಕ ಅಕ್ರಮಗಳ ವಿರುದ್ಧ ನವದೆಹಲಿ, ಪುಣೆ, ಹೈದಾರಾಬಾದ್‌ನಲ್ಲಿ ಪ್ರತಿಭಟನೆ ಮಾಡಿದ್ದ ಸಿಜೆಪಿ ನೆನ್ನೆಯಷ್ಟೇ ಬೆಂಗಳೂರಿನಲ್ಲಿ ಮಳೆಯಲ್ಲೂ ಪ್ರತಿಭಟನೆ ನಡೆಸಿತ್ತು. ಪಕ್ಷ ಘೋಷಣೆ ಆದಾಗಿನಿಂದ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸಂಚಲನ ಸೃಷ್ಟಿಸಿತ್ತು. ಅಪಾರ ಯುವ ಸಮೂಹ ಸಹ ಸಿಜೆಪಿಯನ್ನು ಬೆಂಬಲಿಸುತ್ತಿದ್ದಾರೆ.
ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲೂ ಸಹಿತ ಧರಣಿ ಮಾಡಿ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದ್ದರು. ಮಳೆಯಲ್ಲೇ ಅಪಾರ ಜನ ಸೇರಿದ್ದರು. ಮಾರನೇ ದಿನ ಜೈಪುರದಲ್ಲಿ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಅಭಿಜಿತ್ ದೀಪ್ಕೆ ಅವರಿಗೆ ಭಾರೀ ಹಿನ್ನಡೆ ಆಗಿದೆ. ಸಾರ್ವಜನಿಕವಾಗಿ ಮುಖಭಂಗ ಎದುರಿಸಿದ್ದಾರೆ. ನೂರಾರು ಜನ ಸೇರಿದ್ದ ವೇಳೆ ಹಲ್ಲೆ ನಡೆದಿದ್ದು, ಪ್ರಕರಣ ದಾಖಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
In Jaipur, Rajasthan, Cockroach Janta Party (CJP) founder Abhijeet Dipke was confronted by locals and faced strong public backlash during a public interaction.#Jaipur #Rajasthan #AbhijeetDipke #CJP pic.twitter.com/cYespDgB4c
— The Data Dwellers (@Thedatadwellers) June 15, 2026












Click it and Unblock the Notifications