ಭಾರತದ ಅತ್ಯಂತ ವಿಶ್ವಾಸಾರ್ಹ ಬ್ರಾಂಡ್ ಆಗಿ ಹೊರಹೊಮ್ಮಿದ 'ಡೆಲ್‌' : ಚೀನಾದ ಈ ಕಂಪನಿಗೆ ಎರಡನೇ ಸ್ಥಾನ!

ನವದೆಹಲಿ, ಡಿಸೆಂಬರ್ 03: ಅಮೆರಿಕಾದ ಖ್ಯಾತ ಕಂಪ್ಯೂಟರ್ ಬ್ರ್ಯಾಂಡ್ ಆದ 'ಡೆಲ್‌' ಕಂಪನಿಯು ಸತತ ಎರಡನೇ ವರ್ಷ ದೇಶದ ಅತ್ಯಂತ ವಿಶ್ವಾಸಾರ್ಹ ಬ್ರಾಂಡ್ ಆಗಿ ಗುರುತಿಸಿದೆ. ಗ್ರಾಹಕರ ಸಮೀಕ್ಷೆಯ ಆಧಾರದ ಮೇಲೆ ಡೆಲ್ ಕಂಪನಿಯು ಮೊದಲ ಸ್ಥಾನವನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದು, ಚೀನಾದ ಮೊಬೈಲ್ ಕಂಪನಿ ಎಂಐ ಮೊಬೈಲ್ಸ್‌ ಎರಡನೇ ಸ್ಥಾನವನ್ನು ಪಡೆದುಕೊಂಡಿದೆ.

ಟಿಆರ್‌ಎ ರಿಸರ್ಚ್‌ ಬ್ರಾಂಡ್ ಟ್ರಸ್ಟ್ ವರದಿಯ ಹತ್ತನೇ ಆವೃತ್ತಿಯ ಪ್ರಕಾರ, ಸ್ಯಾಮ್‌ಸಂಗ್ ಮೊಬೈಲ್ಸ್ ಮೂರನೇ ಸ್ಥಾನದಲ್ಲಿದೆ, ಐಫೋನ್ ಮತ್ತು ಎಲ್‌ಜಿ ಟೆಲಿವಿಷನ್ ಕ್ರಮವಾಗಿ ನಾಲ್ಕನೇ ಮತ್ತು ಐದನೇ ಸ್ಥಾನವನ್ನು ಪಡೆದುಕೊಂಡಿವೆ.

ದೇಶದ 16 ಪ್ರಮುಖ ನಗರಗಳಲ್ಲಿ 1,711 ಗ್ರಾಹಕರ ಮೇಲೆ ನಡೆಸಿದ ಪ್ರಾಥಮಿಕ ಸಂಶೋಧನೆಯ ಮೇಲೆ ಈ ಸಮೀಕ್ಷೆ ಆಧಾರಿತವಾಗಿದೆ. ಈ ಸಮೀಕ್ಷೆಯು ಗ್ರಾಹಕರಲ್ಲಿ 323 ವಿಭಾಗಗಳಿಂದ 8,000 ಕ್ಕೂ ಹೆಚ್ಚು ಬ್ರಾಂಡ್‌ಗಳನ್ನು ಮುಂದಿಟ್ಟು ನೆಚ್ಚಿನ ಬ್ರಾಂಡ್ ಯಾವುದು ಎಂದು ತಿಳಿದುಕೊಳ್ಳಲಾಗಿದೆ.

Dell Become Most Trusted Brand In India For 2nd Year

ಚೀನಾದ ಮೊಬೈಲ್ ಬ್ರಾಂಡ್ ಒಪ್ಪೊ ಆರನೇ ಸ್ಥಾನದಲ್ಲಿದೆ ಮತ್ತು ಸೋನಿ ಎಂಟರ್‌ಟೈನ್‌ಮೆಂಟ್ ಟೆಲಿವಿಷನ್ ಏಳನೇ ಸ್ಥಾನದಲ್ಲಿದೆ. ಆಟೋ ವಲಯದಿಂದ, ಮಾರುತಿ ಅಗ್ರಸ್ಥಾನದಲ್ಲಿದ್ದು, ಎಂಟನೇ ಸ್ಥಾನ ಪಡೆದುಕೊಂಡಿದೆ. ಸ್ಯಾಮ್‌ಸಂಗ್ ಟೆಲಿವಿಷನ್ ಮತ್ತು ವಿವೊ ಮೊಬೈಲ್ಸ್‌ ನಂತರದ ಸ್ಥಾನ ಪಡೆದುಕೊಂಡಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+