ಬೆಂಗಳೂರು: ಆರ್‌ವಿಸಿಇಯಲ್ಲಿ ಮ್ಯಾನೇಜ್‌ಮೆಂಟ್ ಕೋಟಾದ ಕಂಪ್ಯೂಟರ್ ಸೈನ್ಸ್ ಸೀಟಿಗೆ 64 ಲಕ್ಷ ರೂ!
ಬೆಂಗಳೂರು, ಏಪ್ರಿಲ್. 09: ತಾಂತ್ರಿಕ ಶಿಕ್ಷಣ ಬಡ ಮತ್ತು ಮಧ್ಯಮ ವರ್ಗದವರಿಗೆ ಕೈಗೆಟುಕದ ಕುಸುಮ ಎಂಬತೆಯೇ ಇದೆ. ತಮ್ಮ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ತಮ್ಮ ಇದೇ ಬದುಕಿನ ಅರ್ಧಕ್ಕಿಂತ ಹೆಚ್ಚಿನ ಹಣವನ್ನು ತಂದೆ ತಾಯಿ ವಿನಿಯೋಗಿಸುತ್ತಿದ್ದಾರೆ. ಇದನ್ನೇ ಬಂಡವಾಳ ಮಾಡಿಕೊಂಡ ಶಿಕ್ಷಣ ಸಂಸ್ಥೆಗಳು ಉತ್ತಮ ಶಿಕ್ಷಣದ ಹೆಸರಿನಲ್ಲಿ ಮತ್ತಷ್ಟು , ಮಗದಷ್ಟು ಕಸಿಯುತ್ತಲೇ ಇವೆ.
ಇಂತಹದ್ದೇ ಮತ್ತೊಂದು ವರದಿ ಈಗ ಶಿಕ್ಷಣದ ಕನಸು ಕಾಣುತ್ತಿದ್ದ ಬಡ ಮಕ್ಕಳು ಮತ್ತು ಗ್ರಾಮೀಣ ಪ್ರದೇಶದವರ ಕನಸನ್ನು ಮುದುಡಿಹೋಗುವಂತೆ ಮಾಡುವಂತಿದೆ. ಹೌದು, ಸಿಲಿಕಾನ್ ಸಿಟಿಯ ಕಾಲೇಜೊಂದು ಕಂಪ್ಯೂಟರ್ ಸೈನ್ಸ್ (ಸಿಎಸ್) ಎಂಜಿನಿಯರಿಂಗ್‌ನಲ್ಲಿ ಮ್ಯಾನೇಜ್‌ಮೆಂಟ್ ಕೋಟಾ ಸೀಟುಗಳಿಗೆ 64 ಲಕ್ಷ ರೂಪಾಯಿ ಶುಲ್ಕ ವಿಧಿಸುತ್ತಿದೆ ಎಂದು ವರದಿಯಾಗಿದೆ.

ಆರ್‌ವಿ ಕಾಲೇಜ್ ಆಫ್ ಇಂಜಿನಿಯರಿಂಗ್ (ಆರ್‌ವಿಸಿಇ) ತನ್ನ ಎನ್‌ಆರ್‌ಐ ಮತ್ತು ಮ್ಯಾನೇಜ್‌ಮೆಂಟ್ ಕೋಟಾ ಸಿಎಸ್ ಸೀಟುಗಳನ್ನು ರೂ 64 ಲಕ್ಷಕ್ಕೆ ನೀಡುತ್ತಿದೆ. ಈ ಮೂಲಕ ಕಳೆದ ವರ್ಷ ವಿಧಿಸಲಾದ ಭಾರಿ ಮೊತ್ತವು ಒಂದೇ ಘಟನೆಯಲ್ಲ ಎಂದು ಮತ್ತೇ ದೃಢೀಕರಿಸಿದೆ. ಸೀಟ್ ಶುಲ್ಕವನ್ನು ಡಿಮ್ಯಾಂಡ್ ಡ್ರಾಫ್ಟ್‌ಗಳ ಮೂಲಕ ಪಾವತಿಸಬೇಕಾಗುತ್ತದೆ. ಜೊತೆಗೆ ವಿಭಾಗಕ್ಕೆ ಪ್ರವೇಶ ನೀಡಲು ಮೊದಲು ಬಂದವರಿಗೆ ಮೊದಲ ಆದ್ಯತೆ ಆಧಾರದ ಮೇಲೆ ಇರುತ್ತದೆ.
ಮಾಹಿತಿ ವಿಜ್ಞಾನ, ಕೃತಕ ಬುದ್ಧಿಮತ್ತೆ ಮತ್ತು ಮಷೀನ್ ಕಲಿಕೆ, ಸೈಬರ್ ಸೆಕ್ಯೂರಿಟಿಗೆ ಕಳೆದ ವರ್ಷ ಇದ್ದ 46 ಲಕ್ಷದಿಂದ 50 ಲಕ್ಷಕ್ಕೆ ಏರಿಕೆಯಾಗಿದೆ. ಕಂಪ್ಯೂಟರ್ ಸೈನ್ಸ್ ಓದುವುದರಿಂದ ತಮ್ಮ ಮಕ್ಕಳ ಭವಿಷ್ಯ ಸುರಕ್ಷಿತವಾಗಿರುತ್ತದೆ ಎಂದು ಬಹುತೇಕ ಪೋಷಕರು ಭಾವಿಸುತ್ತಾರೆ. ಅಕಾಡೆಮಿ ಸಂಸ್ಥಾಪಕ ಪಿಇಎಸ್ ವಿಶ್ವವಿದ್ಯಾನಿಲಯದಲ್ಲಿ, ಮ್ಯಾನೇಜ್‌ಮೆಂಟ್ ಕೋಟಾದ ಅಡಿಯಲ್ಲಿ ಕಂಪ್ಯೂಟರ್ ಸೈನ್ಸ್ ವಾರ್ಷಿಕ ಶುಲ್ಕವು 1 ಲಕ್ಷ ರೂ.ಗಳಷ್ಟು ಏರಿಕೆಯಾಗಿದ್ದು, 11 ಲಕ್ಷಕ್ಕೆ ತಲುಪಿದೆ. ಒಟ್ಟು ಕೋರ್ಸ್‌ನ ಶುಲ್ಕ ಈಗ 44 ಲಕ್ಷ ರೂಪಾಯಿಗೆ ಏರಿಕೆಯಾಗಿದೆ.
ಮ್ಯಾನೇಜ್‌ಮೆಂಟ್ ಕೋಟಾದಡಿಯಲ್ಲಿ ಎಲೆಕ್ಟ್ರಾನಿಕ್ಸ್‌ಗೆ ವಾರ್ಷಿಕ ಶುಲ್ಕ 6 ರಿಂದ 7 ಲಕ್ಷ ರೂಪಾಯಿ ಎಂದು ವಿಶ್ವವಿದ್ಯಾಲಯದ ಅಧಿಕಾರಿಗಳು ತಿಳಿಸಿದ್ದಾರೆ. ಬಿಎಂಎಸ್ ಕಾಲೇಜ್ ಆಫ್ ಇಂಜಿನಿಯರಿಂಗ್‌ನ ವೆಬ್‌ಸೈಟ್ ಕಂಪ್ಯೂಟರ್ ಸೈನ್ಸ್ ಮತ್ತು ಎಂಜಿನಿಯರಿಂಗ್‌ಗಾಗಿ ಮ್ಯಾನೆಂಜ್‌ಮೆಂಟ್ ಕೋಟಾದ ಅಡಿಯಲ್ಲಿ ವಾರ್ಷಿಕ ಶುಲ್ಕ 10 ಲಕ್ಷ ರೂಪಾಯಿ ಎಂದು ಉಲ್ಲೇಖಿಸಲಾಗುತ್ತದೆ.

ಮಾಹಿತಿ ವಿಜ್ಞಾನ ಮತ್ತು ಎಂಜಿನಿಯರಿಂಗ್, ಕೃತಕ ಬುದ್ಧಿಮತ್ತೆ ಮತ್ತು ಮಷೀನ್ ಕಲಿಕೆ, ಕಂಪ್ಯೂಟರ್ ಸೈನ್ಸ್ ಮತ್ತು ಎಂಜಿನಿಯರಿಂಗ್ (ಡೇಟಾ ಸೈನ್ಸ್), ಕಂಪ್ಯೂಟರ್ ವಿಜ್ಞಾನ ಮತ್ತು ಎಂಜಿನಿಯರಿಂಗ್ (ಬ್ಲಾಕ್‌ಚೈನ್ ತಂತ್ರಜ್ಞಾನ ಸೇರಿದಂತೆ ಇಂಟರ್ನೆಟ್ ಆಫ್ ಥಿಂಗ್ಸ್ ಮತ್ತು ಸೈಬರ್ ಸೆಕ್ಯೂರಿಟಿ) ವರ್ಷಕ್ಕೆ 7.5 ಲಕ್ಷ ರೂಪಾಯಿ. ಅರ್ಹತಾ ಮಾನದಂಡವು ಭೌತಶಾಸ್ತ್ರ, ಗಣಿತ, ರಸಾಯನಶಾಸ್ತ್ರ/ಕಂಪ್ಯೂಟರ್ ವಿಜ್ಞಾನ/ಎಲೆಕ್ಟ್ರಾನಿಕ್ಸ್‌ನಲ್ಲಿ ಪಿಯು/12 ನೇ ತರಗತಿಯಲ್ಲಿ ಸರಾಸರಿ 60% ಮತ್ತು ಅದಕ್ಕಿಂತ ಹೆಚ್ಚಿನದಾಗಿದೆ.
ಇತರ ಹಲವು ಕಾಲೇಜುಗಳಲ್ಲಿ, ಅದೇ ವಿಷಯಗಳಿಗೆ ವಾರ್ಷಿಕ ಶುಲ್ಕವು 2 ಲಕ್ಷದಿಂದ 4 ಲಕ್ಷದವರೆಗೆ ಇರುತ್ತದೆ. ಬಂಜಾರ ಅಕಾಡೆಮಿಯ ಸಂಸ್ಥಾಪಕ-ನಿರ್ದೇಶಕ ಅಲಿ ಖ್ವಾಜಾ ಅವರನ್ನು ಉಲ್ಲೇಖಿಸಿರುವ ಟೈಮ್ಸ್ ಆಫ್ ಇಂಡಿಯಾ, "ಇದು ಒಂದು ರೀತಿಯಾಗಿ ಹಿಂಡಿನ ಮನಸ್ಥಿತಿಯಾಗಿದೆ. ಜನರು ಕಂಪ್ಯೂಟರ್ ವಿಜ್ಞಾನದಲ್ಲಿ ಪದವಿ ಪಡೆಯುವ ಗೀಳನ್ನು ಹೊಂದಿದ್ದಾರೆ. ಫೋಷಕರು ಕಂಪ್ಯೂಟರ್ ಸೈನ್ಸ್ ಸೀಟ್‌ನಿಂದ ಮಗುವಿನ ಭವಿಷ್ಯ ಸುರಕ್ಷಿತವಾಗಿದೆ ಎಂದು ಭಾವಿಸುತ್ತಾರೆ. ಹೀಗಾಗಿ ಅಂತಹ ದೊಡ್ಡ ಮೊತ್ತವನ್ನು ಪಾವತಿಸಲು ಸಿದ್ಧರಿದ್ದಾರೆ. ರಿಯಲ್ ಎಸ್ಟೇಟ್ ಕೂಡ ಹೆಚ್ಚಾಗುತ್ತಿರುವ ಕಾರಣ ಈಗ ಗ್ರಾಮೀಣ ಪ್ರದೇಶಗಳಲ್ಲಿಯೂ ಇಂತಹ ಸೀಟುಗಳನ್ನು ಖರೀದಿ ಶಕ್ತಿ ಇದೆ" ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.












Click it and Unblock the Notifications