ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಿಸ್ವಾರ್ಥಿ ಗೋಪಾಲಕ ಭರಮಣ್ಣ ಗುರಿಕಾರ

By Prasad
|
Google Oneindia Kannada News

Let's salute the tru social servants
ಮೂಲತಃ ಮಹಾರಾಷ್ಟ್ರದಿಂದ ವಲಸೆ ಬಂದ ಇವರ ಪೂರ್ವಿಕರು ಉತ್ತರ ಕರ್ನಾಟಕದಲ್ಲಿ ನೆಲೆಸಿದ್ದರು. ಭರಮಣ್ಣನವರ ತಾತನ ತಲೆಮಾರಿನಿಂದ ಹಸುಗಳನ್ನು ಸಾಕುತ್ತಾ ಅವುಗಳೊಂದಿಗೆ ಊರಿಂದೂರಿಗೆ ಅಡ್ಡಾಡುತ್ತಾ ವ್ಯವಸಾಯದಲ್ಲಿ ಇತರೆ ರೈತರಿಗೆ ನೆರವಾಗುವ ಇವರ ಕುಲ ಕಸುಬು ಇದೇ ಆಗಿದೆ. ಇವರು ಕುರುಬರಲ್ಲಿ ಒಂದು ಪಂಗಡವಾದ ಹಾಲು ಮತಕ್ಕೆ ಸೇರಿದವರು. ಭರಮಣ್ಣನವರ ಹುಟ್ಟೂರು ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲ್ಲೂಕಿನ ಕೆರೆಹಳ್ಳಿ. ತಂದೆ ಈರಪ್ಪ, ತಾಯಿ ಶಾಂತಮ್ಮ. ಸುಮಾರು 11 ವರ್ಷಗಳಿಂದ ಹಸುಗಳನ್ನು ಕಾಯುತ್ತ ಊರಿಂದೂರಿಗೆ ಅವುಗಳನ್ನು ಮೇಯಿಸಿಕೊಂಡು ಹೋಗುತ್ತಿರುವ ಇವರ ಬಳಿ 440 ಹಸುಗಳಿವೆ. ಒಂದು ವರ್ಷದ ಈಚಿನಿಂದ 140 ಕುರಿಗಳನ್ನೂ ಸಹ ತಮ್ಮ ಗುಂಪಿಗೆ ಸೆರಿಸಿಕೊಂಡಿದ್ದಾರೆ. ಇವರ ಕಸುಬಿನಿಂದ ಸಮಾಜಕ್ಕೆ ಹೇಗೆ ಉಪಯೋಗವಾಗುತ್ತದೆ ಎಂಬುದಕ್ಕೆ ಸಣ್ಣದೊಂದು ನಿದರ್ಶನ ಇಲ್ಲಿದೆ.

ಇವರು ಅಣ್ಣ ಮತ್ತು ಇಬ್ಬರು ತಮ್ಮಂದಿರೊಂದಿಗೆ ಹಸುಗಳನ್ನು ಒಂದು ಊರಿನಿಂದ ಇನ್ನೊಂದು ಊರಿಗೆ ಅವಶ್ಯವಿದ್ದವರ ಹೊಲಕ್ಕೆ ಕರೆದುಕೊಂಡು ಹೋಗಿ ಅದೇ ಊರಿನಲ್ಲಿ ಬೀಡು ಬಿಡುತ್ತಾರೆ. ಅಲ್ಲಿನ ರೈತರು ತಮ್ಮ ಹೊಲದಲ್ಲಿ ಈ ಹಸುಗಳನ್ನು ಬಳಸಿಕೊಂಡು ಉಳುಮೆ ಮಾಡುತ್ತಾರೆ. ಹಸುಗಳ ಸಗಣಿ ಇಲ್ಲಿ ಗೊಬ್ಬರವಾಗಿ ಉಪಯೋಗಿಸಲ್ಪಡುತ್ತದೆ. ಇದರಿಂದ ರೈತರು ಹೆಚ್ಚಿಗೆ ಹಣ ಕೊಟ್ಟು ರಾಸಯನಿಕ ಗೊಬ್ಬರ ಖರೀದಿಸುವುದು ತಪ್ಪುತ್ತದೆ. ಭೂಮಿಯ ಫಲವತ್ತತೆಯೂ ಹೆಚ್ಚುತ್ತದೆ. ಭರಮಣ್ಣನವರ ಈ ಕೆಲಸಕ್ಕೆ ಆ ಕುಟುಂಬದವರು ತಕ್ಕಮಟ್ಟಿಗಿನ ಹಣ ನೀಡುತ್ತಾರೆ. ಇದರಿಂದ ಅವರ ದೈನಂದಿನ ಜಿವನ ಸಾಗುತ್ತದೆ.

ಆದರೆ ಅವರ ಶ್ರಮ ಮತ್ತು ಸಮಯಕ್ಕೆ ತಕ್ಕ ಪ್ರತಿಫಲ ದೊರೆಯುತ್ತಿಲ್ಲ. ಊರಿನಲ್ಲಿ ನೆಲೆಸಿರುವ ಅವರ ಸಂಸಾರಗಳು ಬಡತನದಲ್ಲೇ ಉಳಿದಿವೆ. ಹಸುಗಳ ಆರೋಗ್ಯ ಕಾಪಾಡಲೂ ಸಹ ಅವರ ಈ ಸಂಪಾದನೆಯೆ ಮೂಲ. 440 ಹಸುಗಳಲ್ಲಿ ಯಾವುದೇ ಒಂದು ಹಸುವಿಗೆ ಆರೊಗ್ಯ ತಪ್ಪಿದರೂ ಅವರು ನಿರ್ಲಕ್ಷಿಸುವಂತಿಲ್ಲ. ವೈದ್ಯರು ಸರಕಾರದ ವತಿಯಿಂದ ಬಂದರೂ ಸಹ ಅವರಿಗೆ ಪ್ರತಿ ಹಸುವಿನ ಲಸಿಕೆಗಾಗಿ ಕನಿಷ್ಠ ಮೊತ್ತ ಕೊಡಲೇಬೇಕಾಗುತ್ತದೆ.

ಭರಮಣ್ಣನವರ ಕುಟುಂಬ ಹಾಲನ್ನು ಮಾರುವುದಿಲ್ಲ. ಬದಲಾಗಿ ಅದನ್ನು ಯಾರ ಹೊಲದಲ್ಲಿ ಬೀಡು ಬಿಟ್ಟಿರುತ್ತಾರೋ ಅಲ್ಲಿನ ಜನಗಳಿಗೆ ಉಚಿತವಾಗಿ ನೀಡುತ್ತಾರೆ. ಇದುವರೆಗೂ ಇವರು ಗದಗ ಜಿಲ್ಲೆಯ ರೋಣ ತಲ್ಲುಕಿನ ಹಳ್ಳಿಗಳಲ್ಲಿ, ಬಳ್ಳಾರಿ ಜಿಲ್ಲೆಯ ಹಳ್ಳಿಗಳಲ್ಲಿ, ಕೊಪ್ಪಳ ಆಲಮಟ್ಟಿದ ಹತ್ತ ಜಲಾಶಯದ ಹತ್ತಿರದ ಹಳ್ಳಿಗಳಲ್ಲಿ ತಮ್ಮ ಕೈಂಕರ್ಯ ಸಲ್ಲಿಸಿದ್ದಾರೆ. ಕರ್ನಾಟಕದಲ್ಲಿ 400ಕ್ಕೂ ಅಧಿಕ ಹಸುಗಳನ್ನು ಸಾಕಿಕೊಂಡು ಈ ರೀತಿಯ ವಿಶಿಷ್ಟ ಸೇವೆಯನ್ನು ಸಲ್ಲಿಸುತ್ತಿರುವ ಏಕೈಕ ಕುಟುಂಬ ಭರಮಣ್ಣ ಗುರಿಕಾರರದು.

ಭರಮಣ್ಣ ಗುರಿಕಾರನವರನ್ನು ಆಗಸ್ಟ್ 1ರಂದು ಸಮಾಜ ಸೇವಾ ದಿನಾಚರಣೆಯ ದಿನ ಸಮಾಜ ಸೇವಕರ ಸಮಿತಿ ಬೆಂಗಳೂರಿನಲ್ಲಿ ಸನ್ಮಾನಿಸುತ್ತಿದೆ. ನೀವೂ ಬನ್ನಿರಿ, ಸಾಧಕರನ್ನು ಗೌರವಿಸಿರಿ.

ಇವರೇ ನಿಜವಾದ ಸಮಾಜ ಸೇವಕರು, ಬನ್ನಿ ಗೌರವಿಸೋಣ
ಹಸಿರು ಬೆಳೆದು ಉಸಿರು ನೀಡಿರುವ ಡಾ. ಲಲಿತಮ್ಮ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X