ಇವರೇ ನಿಜವಾದ ಸಮಾಜ ಸೇವಕರು, ಬನ್ನಿ ಗೌರವಿಸೋಣ

ಅಂತಹ ಶ್ಲಾಘನೀಯ ಕಾರ್ಯವನ್ನು ಸಮಾಜ ಸೇವಾ ಸಮಿತಿ ಕಳೆದ ಎಂಟು ವರ್ಷಗಳಿಂದ ನಿರಂತರವಾಗಿ ಮಾಡಿಕೊಂಡು ಬರುತ್ತಿದೆ. 2002 ಆಗಸ್ಟ್ 1ರಂದು ಆರಂಭವಾದ ಸಮಿತಿಯು 2010 ಆಗಸ್ಟ್ 1ರಂದು ಸಮಾಜ ಸೇವಕರ ದಿನಾಚರಣೆಯ ದಿನಾಚರಣೆಯ 8ನೆಯ ವಾರ್ಷಿಕೋತ್ಸವವನ್ನು ಬೆಂಗಳೂರಿನ ನರಸಿಂಹರಾಜ ಕಾಲೋನಿಯ ಬಿಎಮ್ ಶ್ರೀ ಪ್ರತಿಷ್ಠಾನದಲ್ಲಿ ಆಚರಿಸಿಕೊಳ್ಳುತ್ತಿದೆ. ಅಂದು ಇಬ್ಬರು ಮಹನೀಯರನ್ನು ಸಮಿತಿ ಗುರುತಿಸಿ ಅವರನ್ನು ವಾಡಿಕೆಯಂತೆ ಗೌರವಿಸುತ್ತದೆ. ಇದುವರೆಗೂ ಸುಮಾರು 18 ವ್ಯಕ್ತಿಗಳನ್ನು ವಿವಿಧ ಕ್ಷೇತ್ರಗಳಿಂದ ಗುರುತಿಸಿ ಗೌರವಿಸಲಾಗಿದೆ.
ಈ ಬಾರಿ ಭರಮಣ್ಣ ಗುರಿಕಾರ ಮತ್ತು ಡಾ|| ಲಲಿತಮ್ಮನವರನ್ನು ಅವರ ಸಾಮಾಜಿಕ ಕಾಳಜಿಗಾಗಿ ಗೌರವಿಸಲಾಗುತ್ತಿದೆ. ಭರಮಣ್ಣನವರು ಯಾವುದೇ ಲಾಭಾಕಾಂಕ್ಷೆಯಿಲ್ಲದೆ ತಮ್ಮಲ್ಲಿರುವ ಗೋವುಗಳನ್ನು ಅವಶ್ಯಕತೆಯಿರುವವರಿಗಾಗಿ ಮುಡಿಪಾಗಿಟ್ಟಿದ್ದಾರೆ. ಸ್ವಾರ್ಥ ತುಂಬಿದ ಈ ಸಮಾಜದಲ್ಲಿ ಇಂತಹ ನಿರ್ವಾರ್ಥ ಜೀವಿಗಳೂ ಇರುತ್ತವಾ ಎಂದು ಆಶ್ಚರ್ಯಪಡುವಂತೆ ತಮ್ಮನ್ನು ತಾವು ಸಮಾಜ ಸೇವೆಗೆ ಸಮರ್ಪಿಸಿಕೊಂಡಿದ್ದಾರೆ ಭರಮಣ್ಣ. ಮತ್ತೊಬ್ಬರು, ವೈದ್ಯೆಯಾಗಿಯೂ ಉಸಿರುಗಟ್ಟಿಸುವ ಜನನಿಬಿಡ ಬೆಂಗಳೂರಿನ ಪ್ರದೇಶದಲ್ಲಿ ಸರಾಗವಾಗಿ ಉಸಿರಾಡುವಂತಹ ಎಕೋ ಪಾರ್ಕನ್ನು ನಿರ್ಮಿಸಿ ಸಾರ್ವಜನಿಕರ ಶ್ಲಾಘನೆಗೆ ಪಾತ್ರರಾಗಿದ್ದಾರೆ.
ಇಂಥವರ ಜೀವನದಿಂದ ಸ್ಫೂರ್ತಿ ಪಡೆದು ಇವರಲ್ಲಿರುವ ಕೆಲ ಉತ್ತಮ ಗುಣಗಳನ್ನಾದರೂ ಎರವಲು ಪಡೆದರೆ ಅದೇ ಅವರಿಗೆ ನಾವು ಸಲ್ಲಿಸುವ ಗೌರವ. ಬನ್ನಿ ಈ ಇಬ್ಬರು ಸಾಧಕರನ್ನು ಗೌರವಿಸೋಣ.
ಸ್ಥಳ: ಬಿ.ಎಂ.ಶ್ರೀ ಪ್ರತಿಷ್ಠಾನ. 3ನೇ ಮುಖ್ಯ ರಸ್ತೆ, ಓ.ಖ.ಕಾಲೋನಿ, ಬೆಂಗಳೂರು
ದಿನಾಂಕ : ಆಗಸ್ಟ್ 1, ಭಾನುವಾರ ಬೆಳಿಗ್ಗೆ 10.30ಕ್ಕೆ
ಹೆಚ್ಚಿನ ಮಾಹಿತಿಗಾಗಿ: 9448171069, 9886683008
ಈ ಮಹನೀಯರ ಸಾಧನೆಗಳ ಕುರಿತಾದ ಮಾಹಿತಿ ಇಲ್ಲಿದೆ












Click it and Unblock the Notifications