• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

'ಓಜಸ್ ನಿಸರ್ಗ' ಎಂಬ ಅಪರೂಪದ ಮಳಿಗೆ

By * ಮತ್ತೂರು ರಘು
|

ಯಾರಿಗಾದರೂ ಯಾವುದಾದರು ಅಂಗಡಿ ಅಥವಾ ವ್ಯಾಪಾರವನ್ನು ಪ್ರಾರಂಭಿಸಬೇಕು ಎಂದೆನಿಸಿದರೆ ಎಲ್ಲ ರೀತಿಯಲ್ಲೂ ಯೋಚನೆ ಮಾಡಿ ಲಾಭ ಯಾವುದರಲ್ಲಿ ಹೆಚ್ಚು ಅಂತ ಲೆಕ್ಕ ಮಾಡಿಯೇ ಬಹಳಷ್ಟು ಜನರು ಮುಂದುವರೆಯುತ್ತಾರೆ. ಆದ್ದರಿಂದಲೇ ಎಲ್ಲಿ ನೋಡಿದರೂ ಹೋಟೆಲ್ಗಳು, ಆಭರಣ ಮಳಿಗೆಗಳು, ಬೃಹತ್ ವ್ಯಾಪಾರ ಮಳಿಗೆಗಳು (ಶಾಪಿಂಗ್ ಕಾಂಪ್ಲೆಕ್ಸ್) ತಲೆ ಎತ್ತಿ ನಿಂತಿವೆ. ಅಷ್ಟೇ ಅಲ್ಲದೆ ಜನರ ತಲೆ ಕೆಲಸ ಮಾಡದಿರುವಂತೆಯೂ ಮಾಡಿವೆ!

ಆದರೆ ಇಲ್ಲೊಂದು ವಿಶೇಷ ತಂಡವಿದೆ. ತಾವು ಸಮಾಜದ ಒಳಿತನ ಬಗೆಗೆ ಬರೀ ಮಾತಾಡುವವರಿಗಿಂತ ಭಿನ್ನವಾಗಿ ಚಿಂತಿಸಿ ಅದನ್ನು ಕಾರ್ಯರೂಪಕ್ಕೂ ತಂದಿದ್ದಾರೆ. ಸಮಾಜದ ಬಗೆಗಿರುವ ಕಾಳಜಿಯನ್ನು ಅಭಿವ್ಯಕ್ತಗೊಳಿಸಿದ್ದಾರೆ. ಈ ಎಲ್ಲ ಸದುದ್ದೇಶಗಳ ಫಲವೇ 'ಓಜಸ್ ನಿಸರ್ಗ' ಎಂಬ ಸಾವಯವ ಹಾಗು ನೈಸರ್ಗಿಕ ಉತ್ಪನ್ನಗಳ ಪುಟ್ಟ ಮಳಿಗೆ.

ಇದರ ವಿಶೇಷ ಎಂದರೆ ಯಾವುದೇ ಕೃತಕ ರಾಸಾಯನಿಕಗಳನ್ನು ಹಾಗು ಕ್ರಿಮಿನಾಶಕಗಳನ್ನು ಬಳಸದೆ ಬೆಳೆದಂತಹ ತರಕಾರಿಗಳು, ಧವಸ ಧಾನ್ಯಗಳು, ದೇಶೀಯ ವಸ್ತುಗಳು, ಸ್ಥಾನೀಯವಾಗಿ ತಯಾರಿಸಲ್ಪಟ್ಟ ವಸ್ತುಗಳಿಗೆ ಪುಟ್ಟ ಮಾರುಕಟ್ಟೆಯ ರೂಪವನ್ನು ಕೊಟ್ಟಿದ್ದಾರೆ. ಕೊಳ್ಳುವ ವಸ್ತುಗಳಿಗೆ ದೇಶೀಯತೆಯ ಹಾಗು ರಾಷ್ಟ್ರೀಯತೆಯ ಗಂಧವನ್ನು ಲೇಪಿಸಿದ್ದಾರೆ. ಮನೆಯಲ್ಲಿದ್ದುಕೊಂಡೇ ರಾಷ್ಟ್ರದ ಕೆಲಸ ಮಾಡಬೇಕೆನ್ನುವ ಹಂಬಲಿಗರಿಗೆ ಅವಕಾಶವನ್ನು ನೀಡಿದ್ದಾರೆ.

ಎಲ್ಲರಿಗಿಂತ ಭಿನ್ನವಾಗಿ ಆದರೆ ಆ ಭಿನ್ನತೆಯಲ್ಲೂ ಶ್ರೇಷ್ಠತೆಯನ್ನು ಹಾಗು ರಾಷ್ಟ್ರೀಯತೆಯನ್ನು ಅಳವಡಿಸಿಕೊಂಡಿರುವ 'ಓಜಸ್ ನಿಸರ್ಗ' ತಂಡಕ್ಕೆ ನಾವೆಲ್ಲರೂ ಅಭಿನಂದನೆಯನ್ನು ಸಲ್ಲಿಸಲೇಬೇಕು. ಅದಷ್ಟೇ ಅಲ್ಲ. ನಾವು ಸಹ 'ಓಜಸ್ ನಿಸರ್ಗ'ಕ್ಕೆ ಭೇಟಿ ನೀಡಿ ನಮ್ಮ ದೇಶೀಯ ವಸ್ತುಗಳನ್ನು ಕೊಂಡುಕೊಳ್ಳುವ ಮೂಲಕ ನಮ್ಮ ಹಸ್ತವನ್ನೂ 'ಓಜಸ್ ನಿಸರ್ಗ' ತಂಡದೊಂದಿಗೆ ಜೋಡಿಸಬೇಕು. ಅದರಲ್ಲೂ ಮುಖ್ಯವಾಗಿ ದಿನೋಪಯೋಗಿ ವಸ್ತುಗಳನ್ನು 'ಓಜಸ್ ನಿಸರ್ಗ'ದಲ್ಲೇ ಕೊಂಡುಕೊಳ್ಳುವ ಪರಿಪಾಠವನ್ನು ಬೆಳೆಸಿಕೊಳ್ಳಬೇಕು.

ಈ ಮೂಲಕ ಈ ಭೂಮಿ ಹಾಗು ಪ್ರಕೃತಿಯೊಡಗಿನ ನಮ್ಮ ಸಂಬಂಧವನ್ನ ಉತ್ತಮಗೊಳಿಸುವ ಹಾಗು ನಮ್ಮ ಕಾಳಜಿಯನ್ನ ಪ್ರತ್ಯಕ್ಷ ಆಚರಣೆಗೆ ತರುವ ಪ್ರಯತ್ನ ನಮ್ಮೆಲ್ಲರಿಂದ ಆಗಬೇಕು ಎಂಬುದೇ ಅಪೇಕ್ಷೆ. ಸಮಾಜದ ಬಗ್ಗೆ ಹಾಗು ದೇಶದ ಬಗ್ಗೆ ಬರೇ ಮಾತಾಡುವವರ ನಡುವೆ ಭಿನ್ನತೆಯನ್ನು ಮೆರೆಯೋಣ. [ಆರೋಗ್ಯಭಾಗ್ಯ]

ಹೆಚ್ಚಿನ ಮಾಹಿತಿಗಾಗಿ ಭೇಟಿ ನೀಡಿ http://www.ojasnisarga.com

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Ojas Nisarga is an organic and natural food store started in Basavanagudi, Bangalore. Eat food which is free from harmful chemicals of pesticdes and fertilizers and take care of your health.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more