Brinjal chutney Recipe: 4 ಬದನೆಕಾಯಿ ಬೇಯಿಸಿ ಈ ರೀತಿ ಚಟ್ನಿ ಮಾಡಿ.. ಬಾಯಿಚಪ್ಪರಿಸಿ ತಿನ್ನಿ..
ಅಕ್ಕಿ ಉದ್ದಿನ ಬೇಳೆ ನೆನೆ ಹಾಕಿ ಹಿಟ್ಟು ಗುಬ್ಬಿಕೊಂಡರೆ ಅದನ್ನು ದೋಸೆ, ಇಡ್ಲಿ, ಪಡ್ಡು ಸೇರಿದಂತೆ ಇದರಲ್ಲೇ ನಾನಾ ತಿಂಡಿಗಳನ್ನು ಮಾಡಿಕೊಳ್ಳಬಹುದು. ಆದರೆ ಇದರೊಂದಿಗೆ ಚಟ್ನಿ ಮಾಡಿಕೊಳ್ಳುವುದೇ ಯೋಚನೆ. ನಿತ್ಯ ಯಾವ ಚಟ್ನಿ ತಯಾರಿಸಬೇಕು ಅನ್ನೋ ಗೊಂದಲ ಇರುತ್ತದೆ. ಹೀಗಾಗಿ ನಾವು ನಿತ್ಯ ಬಗೆ ಬಗೆಯ ಚಟ್ನಿಗಳನ್ನು ತಯಾರಿಸುವ ವಿಧಾನವನ್ನು ತಿಳಿಸಿದ್ದೇವೆ. ಇಂದೂ ಕೂಡ ಬೇಸಿದ ಬದನೆಕಾಯಿ ಚಟ್ನಿ ತಯಾರಿಸುವ ವಿಧಾನವನ್ನು ತಿಳಿಯೋಣ.
ಬೆಳಿಗ್ಗೆ ಇಡ್ಲಿ ಮತ್ತು ದೋಸೆಗೆ ಒಂದೇ ಚಟ್ನಿ ಮಾಡಲು ಬೇಸರ ಆಗಿದ್ದರೆ ಸ್ವಲ್ಪ ವಿಭಿನ್ನವಾದ ರುಚಿಯೊಂದಿಗೆ ಚಟ್ನಿಯನ್ನು ಮಾಡಿ. ಅದನ್ನು ಪ್ರತಿಯೊಬ್ಬರೂ ಇಷ್ಟಪಟ್ಟು ತಿಂತಾರೆ. ದೋಸೆ ಇಡ್ಲಿ ಮಾತ್ರವಲ್ಲ, ಪೂರಿ, ಚಪಾತಿ, ಪರೋಟ, ಅನ್ನದೊಂದಿಗೂ ಇದನ್ನು ನೀವು ತಿನ್ನಬಹುದು. ಮನೆಯಲ್ಲಿ ಬಿಳಿ ಬದನೆಕಾಯಿ ಇದಿಯಾ? ಇದ್ದರೆ ಅದನ್ನು ಹೀಗೆ ಮಾಡಿ. ಈ ಚಟ್ನಿ ಮಾಡಿದರೆ ಬದನೆಕಾಯಿ ಇಷ್ಟವಿಲ್ಲದವರಿಗೂ ಇಷ್ಟವಾಗುತ್ತದೆ.

ಹಾಗಾದರೆ ತಡ ಮಾಡುವುದು ಬೇಡ ಬೇಯಿಸಿದ ಬದನೆಕಾಯಿ ಚಟ್ನಿ ಮಾಡುವುದು ಹೇಗೆ ಎಂದು ತಿಳಿಯೋಣ. ನೀವು ಕೂಡ ಮನೆಯಲ್ಲಿ ಒಮ್ಮೆ ಇದನ್ನು ಟ್ರೈ ಮಾಡಿ. ನಿಮ್ಮ ಅನುಭವವನ್ನು ನಮ್ಮೊಂದಿಗೆ ಕಾಮೆಂಟ್ ಮಾಡುವ ಮೂಲಕ ಹಂಚಿಕೊಳ್ಳಿ.
ಅಗತ್ಯವಿರುವ ವಸ್ತುಗಳು:
* ಎಣ್ಣೆ - 3 tbsp
* ಗುಂಡು ಮೆಣಸಿನಕಾಯಿ - ಎರಡು
* ಉದ್ದಿನ ಬೇಳೆ - 2 ಟೇಬಲ್ ಸ್ಪೂನ್
* ಈರುಳ್ಳಿ - 3 (ಕತ್ತರಿಸಿದ)
*ಬದನೆಕಾಯಿ - 4 (ಸಣ್ಣದಾಗಿ ಹೆಚ್ಚಿದ)
* ಹುಣಸೆಹಣ್ಣು - ಸಣ್ಣ ತುಂಡು
* ಟೊಮೆಟೊ - 1 (ಸಣ್ಣದಾಗಿ ಹೆಚ್ಚಿದ)
* ತೆಂಗಿನಕಾಯಿ - 3 ಚಮಚ (ತುರಿದ)
ಒಗ್ಗರಣೆಗೆ..
* ಎಣ್ಣೆ - 1 ಚಮಚ
* ಸಾಸಿವೆ - 1 ಚಮಚ
* ಉದ್ದಿನ ಬೇಳೆ - 1 ಚಮಚ
* ಕರಿಬೇವು - ಸ್ವಲ್ಪ
* ಒಣ ಮೆಣಸಿನಕಾಯಿ -3

ಪಾಕವಿಧಾನ:
* ಮೊದಲು ಬಾಣಲೆಯನ್ನು ಒಲೆಯಲ್ಲಿ ಇಟ್ಟು ಅದರಲ್ಲಿ 1 ಚಮಚ ಎಣ್ಣೆ ಹಾಕಿ ಬಿಸಿಯಾದಾಗ ಗುಂಡು ಮೆಣಸಿನಕಾಯಿ ಹಾಕಿ ಬಣ್ಣ ಬದಲಾಗುವವರೆಗೆ ಹುರಿದು ಪ್ರತ್ಯೇಕವಾಗಿ ತೆಗೆದುಕೊಳ್ಳಿ.
* ನಂತರ ಉದ್ದಿನಬೇಳೆ ಹಾಕಿ ಹೊಂಬಣ್ಣ ಬರುವವರೆಗೆ ಹುರಿದು ಪ್ರತ್ಯೇಕವಾಗಿ ಇಟ್ಟುಕೊಳ್ಳಿ. ಈಗ ಬಾಣಲೆಗೆ ಇನ್ನೂ 1 ಚಮಚ ಎಣ್ಣೆಯನ್ನು ಸೇರಿಸಿ ಮತ್ತು ಅದು ಬಿಸಿಯಾದಾಗ, ಈರುಳ್ಳಿ ಸೇರಿಸಿ ಹುರಿಯಿರಿ.
* ನಂತರ ಅದಕ್ಕೆ ಬದನೆಕಾಯಿಯನ್ನು ಹಾಕಿ ಮಧ್ಯಮ ಉರಿಯಲ್ಲಿ ಇಟ್ಟು ಬದನೆಯನ್ನು ಮೃದುವಾಗಿ ಬೇಯಿಸಿ.
* ಬದನೆಕಾಯಿ ಬೆಂದ ನಂತರ ಟೊಮೇಟೊ ಮತ್ತು ಹುಣಸೆಹಣ್ಣು ಹಾಕಿ ಮೃದುವಾಗುವವರೆಗೆ ಹುರಿದು, ತೆಂಗಿನ ತುರಿ ಹಾಕಿ ಒಮ್ಮೆ ಬೆರೆಸಿ ತಣ್ಣಗಾಗಿಸಿ.
* ನಂತರ ಮಿಕ್ಸರ್ ಜಾರ್ ಗೆ ಹುರಿದ ಗುಂಡು ಮೆಣಸಿನಕಾಯಿ ಮತ್ತು ಉದ್ದಿನಬೇಳೆ ಹಾಕಿ ಚೆನ್ನಾಗಿ ರುಬ್ಬಿಕೊಂಡು ಅದನ್ನು ಒಂದು ಪಾತ್ರೆಗೆ ತೆಗೆದುಕೊಳ್ಳಿ.
* ನಂತರ ಹುರಿದ ಈರುಳ್ಳಿ ಮತ್ತು ಬದನೆಕಾಯಿ ಮಿಶ್ರಣವನ್ನು ಹಾಕಿ ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಸ್ವಲ್ಪ ನೀರು ಹಾಕಿ ರುಬ್ಬಿಕೊಂಡು ಒಂದು ಪಾತ್ರೆಗೆ ತೆಗೆದುಕೊಳ್ಳಿ.
* ನಂತರ ಅಗತ್ಯವಿರುವಷ್ಟು ನೀರನ್ನು ಹಾಕಿ, ಚೆನ್ನಾಘಿ ಮಿಕ್ಸ್ ಮಾಡಿಕೊಳ್ಳಿ. ಹೆಚ್ಚು ನೀರು ಸೇರಿಸಬೇಡಿ. ಈ ಚಟ್ನಿ ಸ್ವಲ್ಪ ದಪ್ಪವಾಗಿದ್ದರೆ ಉತ್ತಮ.
* ಕೊನೆಗೆ ಬಾಣಲೆಯನ್ನು ಒಲೆಯ ಮೇಲೆ ಇಟ್ಟು ಒಗ್ಗರಣೆಗೆ ಬೇಕಾದಷ್ಟು ಎಣ್ಣೆ ಹಾಕಿ ಅದು ಬಿಸಿಯಾದಾಗ ಸಾಸಿವೆ, ಉದ್ದಿನಬೇಳೆ, ಕರಿಬೇವು, ಒಣ ಮೆಣಸಿನಕಾಯಿ ಹಾಕಿ ಚಟ್ನಿಯೊಂದಿಗೆ ಕಲಸಿದರೆ ರುಚಿಯಾದ ಬದನೆಕಾಯಿ ಚಟ್ನಿ ರೆಡಿ.












Click it and Unblock the Notifications