Skin Care: ಚರ್ಮದ ಕಾಂತಿಯುತವಾಗಿರಲು ಏನೇನು ಮಾಡಬೇಕು?
ನಮ್ಮ ಚರ್ಮವನ್ನು ಕಾಂತಿಯುತವಾಗಿ ಇರಬೇಕಾದರೆ ಕೇವಲ ಕ್ರೀಮ್ ಇನ್ನಿತರ ಕಾಂತಿವರ್ಧಕವನ್ನು ಬಳಸುವುದು ಮಾತ್ರವಲ್ಲದೆ ಸೇವಿಸುವ ಆಹಾರವೂ ಬಹುಮುಖ್ಯವಾಗಿರುತ್ತದೆ. ಹೀಗಾಗಿ ಬೇಸಿಗೆಯ ದಿನಗಳಲ್ಲಿ ಚರ್ಮವನ್ನು ಕಾಂತಿಯುತವಾಗಿಟ್ಟುಕೊಳ್ಳಬೇಕಾದರೆ ನಮ್ಮ ಆಹಾರ ಕ್ರಮಗಳಲ್ಲಿಯೂ ಒಂದಷ್ಟು ಬದಲಾವಣೆಗಳನ್ನು ಮಾಡಿಕೊಳ್ಳಬೇಕು.
ಈ ಬಾರಿಯ ಬೇಸಿಗೆಯ ಬಿಸಿಲು ತಲೆಯನ್ನೇ ಸುಡುವಂತಿದೆ. ಹೀಗಿರುವಾಗ ಚರ್ಮದ ಮೇಲೆ ಪರಿಣಾಮ ಬೀರದೆ ಇರುತ್ತಾ? ಹೀಗಾಗಿ ಚರ್ಮದ ಕಾಂತಿಯನ್ನು ಕಾಪಾಡಿಕೊಳ್ಳುವುದೇ ಹೆಣ್ಣುಮಕ್ಕಳಿಗೆ ಸವಾಲ್ ಆಗಿದೆ. ಕೋಮಲ ತ್ವಚೆ ಬಿಸಿಲಿಗೆ ಕಾಂತಿಹೀನವಾಗುತ್ತಿದೆ. ಎಷ್ಟೇ ಮುತುಚರ್ಜಿ ವಹಿಸಿದರೂ ಒಂದಲ್ಲ ಒಂದು ಕಾರಣಕ್ಕೆ ಚರ್ಮದ ಮೇಲೆ ಪರಿಣಾಮಗಳು ಆಗುತ್ತಲೇ ಇರುತ್ತವೆ.

ಬೇಸಿಗೆಯಲ್ಲಿ ಕೆಲವರು ಎಸಿ ರೂಂನಲ್ಲೋ, ಫ್ಯಾನ್ ಕೆಳಗೆ ಹೆಚ್ಚು ಹೊತ್ತು ಕುಳಿತು ಕೆಲಸ ಮಾಡುವವರು ಬಿಸಿಲಿಗೆ ಹೋದರೆ ಅದರ ಪರಿಣಾಮ ತಕ್ಷಣ ಗೊತ್ತಾಗಿ ಬಿಡುತ್ತದೆ. ಎರಡನ್ನು ಅಭ್ಯಾಸ ಮಾಡಿಕೊಳ್ಳುವುದರಿಂದ ಚರ್ಮದ ರಕ್ಷಣೆ ಸಾಧ್ಯವಾಗುತ್ತದೆ. ಇನ್ನು ನಾವು ಸೇವಿಸುವ ಆಹಾರ ಕೂಡ ನಮ್ಮ ಸುಂದರ ತ್ವಚೆಯನ್ನು ಕಾಪಾಡುತ್ತದೆ ಎಂದರೆ ಅಚ್ಚರಿಯಾಗಬಹುದು. ಆದರೆ ದೇಹಕ್ಕೆ ಆಹಾರ ಸಿಕ್ಕಿದರೆ ತಾನೆ ಎಲ್ಲ ಅಂಗಗಳು ಕಾರ್ಯ ನಿರ್ವಹಿಸಲು ಸಾಧ್ಯ ಅದರಂತೆ ತ್ವಚೆಯೂ ಕೂಡ. ನಮ್ಮ ದೇಹದಿಂದ ಹಲವು ಸತ್ವಗಳನ್ನು ನಿರೀಕ್ಷಿಸುತ್ತದೆ. ಅದು ಸಿಗದಿದ್ದಾಗ ಪರಿಣಾಮ ಚರ್ಮದ ಮೇಲೆ ಬೀರುತ್ತದೆ.
ಬೇಸಿಗೆಯಲ್ಲಿ ಹೇರಳವಾಗಿ ನೀರು ಸೇವಿಸಿ
ನಾವು ಸೇವಿಸುವ ಆಹಾರದಲ್ಲಿರುವ ಜೀವ ಸತ್ವಗಳು ದೇಹದಲ್ಲಿ ಸೇರ್ಪಡೆಯಾಗುತ್ತದೆ. ಅಷ್ಟೇ ಅಲ್ಲದೇ ದೇಹದ ಆರೋಗ್ಯವನ್ನು ವೃದ್ಧಿಸುತ್ತಾ ಸೋಂಕು ತರುವ ಬ್ಯಾಕ್ಟೀರಿಯಾಗಳೊಂದಿಗೆ ಹೋರಾಡುತ್ತದೆ. ಜೀವಸತ್ವಗಳು ಕಾಳುಗಳು, ಬಾಳೆ ಹಣ್ಣು, ಬೆಳ್ಳುಳ್ಳಿ, ಈರುಳ್ಳಿ, ಇವೆಲ್ಲದರಲ್ಲಿ ಹೆಚ್ಚಾಗಿರುತ್ತದೆ.

ಇನ್ನು ತ್ವಚೆ ಕಾಂತಿ ಕಳೆದುಕೊಳ್ಳಲು ಕಾರಣಗಳು ಅನೇಕವಿದ್ದು, ಈ ಸಂದರ್ಭ ಪೌಷ್ಠಿಕಾಂಶಗಳುಳ್ಳ ಹಾಲು ಮೊಸರು, ತುಪ್ಪ, ಮೊಟ್ಟೆ ಮೊದಲಾದ ಪದಾರ್ಥಗಳನ್ನು ಸೇವಿಸಬೇಕು. ನೀರನ್ನು ಹೇರಳವಾಗಿ ಸೇವಿಸಿದರೆ ಇದು ಚರ್ಮದ ರಕ್ಷಣೆಯನ್ನು ಮಾಡುವುದಲ್ಲದೇ ಅದರ ಹೊಳಪನ್ನು ಹೆಚ್ಚಿಸುತ್ತದೆ.
ಯಾವ ಯಾವ ಆಹಾರ ಸೇವಿಸಬೇಕು?
ಬಣ್ಣವು ಚರ್ಮದ ಆರೋಗ್ಯದ ಮೇಲೆ ತೀವ್ರವಾದ ಪರಿಣಾಮ ಉಂಟು ಮಾಡುತ್ತದೆ. ತ್ವಚೆಯನ್ನು ಕಾಂತಿಯುಕ್ತಗೊಳಿಸುತ್ತದೆ, ಇದು ವಾರ್ಧಕ್ಯದ ಸಮಸ್ಯೆಯನ್ನು ದೂರ ಮಾಡುತ್ತದೆ . ಬ್ಲಾಕ್ ಬೆರ್ರಿ, ಬ್ಲೂ ಬೆರ್ರಿ, ಹುಳಿಯಿಲ್ಲದ ದಾಕ್ಷಿ ಹಣ್ಣುಗಳು, ಸ್ಟ್ರಾ ಬೆರ್ರಿ, ಟೊಮೇಟೊ ದಲ್ಲಿರುವ ಲೈಕೊಪಿನ್, ದಾಳಿಂಬೆಯಲ್ಲಿರುವ ಪಾಲಿಫೆನಾಲ್ಸ್ ಇವೆಲ್ಲವೂ ಚರ್ಮದ ಆರೋಗ್ಯವನ್ನು ಕಾಪಾಡುವಲ್ಲಿ ಸಹಾಯಕಾರಿಯಾಗಿವೆ.

ಮೊಟ್ಟೆ, ಸ್ಪಿನಾಚ್, ಮೊಟ್ಟೆ ಬಿಳಿ ಭಾಗ, ಕಡಿಮೆ ಕೊಬ್ಬಿನಂಶ ಹೊಂದಿರುವ ಡೈರಿ ಉತ್ಪನ್ನಗಳು, ಬ್ರೊಕೋಲಿ, ಕ್ಯಾರೆಟ್ ನಲ್ಲಿರುವ ಕೆರೊಟೆನಾಯಿಡ್ಸ್ ಚರ್ಮದ ಬಿಗಿತಕ್ಕೆ ಕಾರಣವಾಗುವಂತಹ ಅಂಶಗಳನ್ನು ಹೊಂದಿವೆ. ನೆಲ್ಲಿಕಾಯಿ, ಸೀಬೆ ಕಾಯಿ, ಸಿಟ್ರಿಕ್ ಆಸಿಡ್ ಇರುವಂತಹ ಹಣ್ಣುಗಳು, ವಿಟಮಿನ್ ಈ ಭರಿತ ತರಕಾರಿಗಳು, ಎಣ್ಣೆಗಳು, ಬೀಜಗಳು ಅದರಲ್ಲಿ ಬಾದಾಮಿ, ಸೂರ್ಯಕಾಂತಿ ಎಣ್ಣೆ, ಆಲಿವ್, ಇವೆಲ್ಲವೂ ಸುಕ್ಕನ್ನು ನಿವಾರಿಸುವ ಅಂಶಗಳನ್ನು ಹೊಂದಿದೆ.
ಸಮಯಕ್ಕೆ ಸರಿಯಾಗಿ ನಿದ್ದೆ ಮಾಡಿ
ಒಮೇಗಾ ಫ್ಯಾಟಿಯಾಸಿಡ್ ಚರ್ಮದ ರಕ್ಷಣೆಯನ್ನು ಮಾಡುವುದಲ್ಲದೇ ಯೌವನ ಭರಿತವಾಗಿ ಕಾಣುವಂತೆ ಮಾಡುತ್ತದೆ. ತಣ್ಣನೆಯ ನೀರು, ಮಾಂಸಭರಿತ ಸಾಲೋಮನ್ ಮೀನು, ಆಲಿವ್, ಅವಕಡ, ಗಾಢ ಹಸಿರು ಬಣ್ಣದ ಎಲೆಗಳಿರುವ ತರಕಾರಿಗಳನ್ನು ನಮ್ಮ ನಿತ್ಯದ ಆಹಾರಗಳಲ್ಲಿ ಬಳಕೆ ಮಾಡಿಕೊಳ್ಳಬೇಕು. ಬಿ.ಕಾಂಪ್ಲೆಕ್ಸ್ ಅಂಶ ಹೊಂದಿರುವ ಆಹಾರದ ಕಡೆಗೂ ಆದ್ಯತೆ ನೀಡಬೇಕು ಗ್ರೀನ್ ಟೀ ಸೇವನೆ ಉತ್ತಮ.
ಇದೆಲ್ಲದರ ಜೊತೆಗೆ ಸಮಯಕ್ಕೆ ಸರಿಯಾಗಿ ನಿದ್ದೆ, ಊಟ ಮುಂಜಾನೆ ಒಂದಷ್ಟು ಹೊತ್ತು ವ್ಯಾಯಾಮ ಕೂಡ ಚರ್ಮದ ದೇಹದ ಆರೋಗ್ಯವನ್ನು ವೃದ್ಧಿಸುತ್ತದೆ. ದೇಹ ಆರೋಗ್ಯವಾಗಿದ್ದರೆ ಚರ್ಮಆರೋಗ್ಯದಿಂದ ಕೂಡಿ ಕಾಂತಿಯುತವಾಗಿರಲು ಸಾಧ್ಯವಾಗುತ್ತದೆ.












Click it and Unblock the Notifications