Walking Mistakes: ವಾಕಿಂಗ್ ಮಾಡುವಾಗ ಹೇಗೆ ಮಾಡಬೇಕು? ಈ ತಪ್ಪುಗಳನ್ನು ಮಾಡಬೇಡಿ
ವಾಕಿಂಗ್ ಯಾವುದೇ ವಯೋಮಾನದ ವ್ಯಕ್ತಿ ಸುಲಭವಾಗಿ ಮಾಡಬಹುದಾದ ವ್ಯಾಯಾಮ. ಇದರಿಂದ ಆರೋಗ್ಯ ಸಮತೋಲನೋದಿಂದ ಇಟ್ಟುಕೊಳ್ಳಲು ಸಾಹಯಕ. ಒಂದು ಗಂಟೆ ವಾಕ್ ಮಾಡಿದರೆ ದಿನ ಪೂರ್ತಿ ಸಂಪೂರ್ಣ ಉಲ್ಲಾಸ ಭರಿತವಾಗಿರಲು ಸಹಾಯ. ಆದರೆ ವಾಕಿಂಗ್ ಮಾಡುವಗ ಈ ತಪ್ಪುಗಳನ್ನು ಮಾಡದಂತೆ ಜಾಗೃತೆ ವಹಿಸಬೇಕು.
ವಾಕಿಂಗ್ ಮಾಡಲು ಉತ್ತಮ ಪರಿಸರ ಇದ್ದರೆ ಸಾಕು. ಅದು ಗಾರ್ಡನ್ ಆಗಿರಲೇ ಬೇಕು ಎಂದು ಏನಿಲ್ಲ. ನಿಮ್ಮ ಮನೆಯ ಟೆರೇಸ್ ಮೇಲೂ ನೀವು ಬೆಳಗ್ಗೆ ಹಾಗೂ ಸಾಯಂಕಾಲ ವಾಕಿಂಗ್ ಮಾಡಬಹುದು. ವಾಕಿಂಗ್ ಮಾಡುವಾಗ ನಿಮ್ಮ ದೇಹದ ಪ್ರತಿಯೊಂದು ಭಾಗವೂ ಕೆಲಸ ಮಾಡುತ್ತದೆ. ಆದರೆ ಈ ಸಮಯದಲ್ಲಿ ನೀವು ಕೆಲವು ತಪ್ಪುಗಳನ್ನು ಮಾಡುವುದನ್ನು ತಪ್ಪಿಸಬೇಕು, ಈ ತಪ್ಪುಗಳು ನೀವು ಶ್ರಮ ಪಟ್ಟ ವಾಕಿಂಗ್ ಮಾಡಿರುವುದನ್ನು ಹಾಳು ಮಡುತ್ತದೆ.

ವಾಕಿಂಗ್ ಮಾಡುವಾಗ ಹೀಗೆ ಮಾಡಿ
ವಾಕ್ ಮಾಡುವಾಗ ಕೈಗಳನ್ನು ಚಾಚುತ್ತಾ ಸಹಜವಾಗಿ ನಡೆಯಬೇಕು. ಕೆಲವರು ಸ್ಥಿರವಾಗಿಟ್ಟುಕೊಂಡು ವಾಕ್ ಮಾಡುತ್ತಾರೆ. ಇದರಿಂದ ದೇಹಕ್ಕೆ ಆಗುವ ಸಂಪೂರ್ಣ ಪ್ರಯೋಜನವು ಸಿಗುವುದಿಲ್ಲ. ವಾಕಿಂಗ್ ಮಾಡುವಾಗ ಕಾಲುಗಳ ಜೊತೆ ಜೊತೆಗೆ ಕೈಗಳಿಗೂ ಕೆಲಸ ನೀಡಬೇಕು. ಕೈ ಗಳಲ್ಲೂ ಸ್ನಾಯುಗಳ ದೊಡ್ಡ ಗುಂಪು ಇರುತ್ತದೆ. ವಾಕ್ ಮಾಡುತ್ತಾ ಕೈಗಳನ್ನು ಚಾಚುತ್ತಾ ವಾಕ್ ಮಾಡಿದರೆ, ರಕ್ತ ಪರಿಚಲನೆ ಮತ್ತು ಹೃದಯ ಬಡಿತವನ್ನು ಸುಧಾರಿಸುತ್ತದೆ. ನೀವು ಇದನ್ನು ಮಾಡಿದಾಗ ಮಾತ್ರ ನೀವು ಏರೋಬಿಕ್ ವ್ಯಾಯಾಮದ ಪ್ರಯೋಜನಗಳನ್ನು ಪಡೆಯಬಹುದು.
ವಾಕಿಂಗ್ ವೇಗವನ್ನು ಸ್ಥಿರವಾಗಿಡಿ
ವಾಕಿಂಗ್ ಮಾಡುವಾಗ ನೀವು ನಿಮ್ಮ ದೇಹದ ಚಲನೆಯ ಬಗ್ಗೆಯೂ ಗಮನ ಕೊಡಬೇಕು. ವಾಕ್ ಮಾಡುವಾಗ ನಿಧಾನವಾಗಿ ಹಾಗೂ ವೇಗವಾಗಿ ನಡೆಯುವುದರಿಂದ ಪ್ರಯೋಜನಗಳು ಕಡಿಮೆ ಸಿಗುತ್ತವೆ. ನಿಮ್ಮ ದೇಹಕ್ಕೆ ಅನುಗುಣವಾಗಿ ನೀವು ವೇಗವನ್ನು ಸೆಟ್ ಮಾಡಿಕೊಂಡರೆ ಒಳಿತು. ಇದರಿಂದ ನೀವು ತುಂಬ ಹೊತ್ತು ವಾಕ್ ಮಾಡಬಹುದು.
ಈ ತಪನ್ನು ಮಾಡಲೇ ಬೇಡಿ
ವಾಕಿಂಗ್ ಮಾಡುವಾಗ ಮಿತವಾಗಿ ನೀರನ್ನು ಕುಡಿಯಬೇಕು. ಹೆಚ್ಚಾಗಿ ಕುಡಿದರೂ ಅದು ತೊಂದರೆಗೆ ಈಡು ಮಾಡುತ್ತದೆ. ನೀರು ಕುಡಿದ ಬಳಿಕ 15 ನಿಮಿಷದ ನಂತರ ವಾಕಿಂಗ್ ಮಾಡಿದರೆ ಬೆಸ್ಟ್. ನೀವು ನಡೆಯುವ ಮೊದಲು ಅಥವಾ ನಂತರ ತಣ್ಣೀರು ಕುಡಿಯುತ್ತಿದ್ದರೆ, ಅದು ಶಾಖ ಮತ್ತು ಶೀತವನ್ನು ಉಂಟುಮಾಡಬಹುದು. ನೀವು ಸಾಮಾನ್ಯ ನೀರನ್ನು ಕೆಲವು ಕೆಲವು ಗುಟುಕಗಳನ್ನು ಮಾತ್ರ ತೆಗೆದುಕೊಳ್ಳಬೇಕು. ಹೆಚ್ಚು ನೀರು ಕುಡಿದ ನಂತರ ಓಡುವುದು ಹೊಟ್ಟೆ ನೋವಿಗೆ ಕಾರಣವಾಗಬಹುದು. ಎಲ್ಲ ವ್ಯಾಯಮದಲ್ಲೂ ದೇಹಕ್ಕೆ ವಿಶ್ರಾಂತಿ ಅವಶ್ಯಕ. ಹಾಗೆ ವಾಕಿಂಗ್ ಬಳಿಕವೂ ವಿಶ್ರಾಂತಿ ಬೇಕು. ಇದರಿಂದ ದೇಹ ಚೇತರಿಸಿಕೊಳ್ಳಲು ಸಹಾಯಕ.

ವಾಕಿಂಗ್ ಮಾಡಲು ಹೋಗುವ ವ್ಯಕ್ತಿ ಚೆನ್ನಾಗಿ ವಿಶ್ರಾಂತಿ ಅಥವಾ ನಿದ್ರೆಯನ್ನು ಮಾಡಿರಬೇಕು. ಇಲ್ಲದಿದ್ದರೆ, ದೇಹದ ಮೇಲೆ ಒತ್ತಡವು ಹೆಚ್ಚಾಗಲು ಪ್ರಾರಂಭವಾಗುತ್ತದೆ ಮತ್ತು ಪ್ರಯೋಜನಗಳ ಬದಲಿಗೆ, ಅನಾನುಕೂಲಗಳು ಕಾಣಿಸಿಕೊಳ್ಳಲು ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ.
ವಾಕಿಂಗ್ ಮಾಡುವುದರಿಂದ ಸಾಕಷ್ಟು ಪ್ರಯೋಜನಗಳಿಗೆ. ಪ್ರತಿ ದಿನವೂ ನಿಯಮಿತವಾಗಿ ವಾಕ್ ಮಾಡಿದರೆ, ಹಲವು ಪ್ರಯೋಜನಗಳನ್ನು ಪಡೆದು ಕೊಳ್ಳಬಹುದು. ವಾಕ್ ಮಾಡುವುದರಿಂದ ಹಲವು ಆರೋಗ್ಯ ಸಮಸ್ಯೆಗಳನ್ನು ಹತೋಟಿಯಲ್ಲಿ ಇಟ್ಟುಕೊಳ್ಳಬಹುದು. BetterHealth ಪ್ರಕಾರ ನೀವು ದಿನಕ್ಕೆ ಕೇವಲ 30 ನಿಮಿಷ ನಡೆದರೆ, ಅದು ನಿಮ್ಮ ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತದೆ. ಇದು ಹೃದಯಾಘಾತ ಸೇರಿದಂತೆ ಹೃದ್ರೋಗದ ಅಪಾಯವನ್ನು ಕಡಿಮೆ ಮಾಡುತ್ತದೆ.












Click it and Unblock the Notifications