Hotel Style Tea: ಒಂದೊಳ್ಳೆ ಹೋಟೆಲ್ ಶೈಲಿಯ ಚಹಾ ಮಾಡುವುದು ಹೇಗೆ?
ಫುಲ್ ಟೆನ್ಷನ್ ಆಗಿದೆ ಒಂದೊಳ್ಳೆ ಟೀ ಕುಡಿಯಬೇಕು, ಫುಲ್ ಖುಷಿ ಆಗಿದೆ ಟೀ ಕುಡಿಯಬೇಕು, ಯಾಕೋ ಬೇಜಾರುತ್ತಿದೆ ಟೀ ಕುಡಿಯಬೇಕು, ತಲೆ ನೋವು ಒಂದೊಳ್ಳೆ ಟೀ ಕುಡಿಯಬೇಕು.. ಹೀಗೆ ಟೀ ಅಥವಾ ಚಹಾ ಕುಡಿಯಬೇಕು ಎನ್ನುವವರಿಗೆ ಕಾರಣ ಹಲವು. ಕೆಲವರಿಗೆ ಟೀ ಕುಡಿಯುವುದು ಚಟ ಕೂಡ ಆಗಿರುತ್ತದೆ. ಕೆಲವರು ದಿನಕ್ಕೆ ಮೂರು ಚಹಾ ಕುಡಿದರೆ, ಇನ್ನೂ ಕೆಲವರು ಲೆಕ್ಕವಿಲ್ಲದಷ್ಟು ಕುಡಿಯುತ್ತಾರೆ.
ಅತೀಯಾದ ಚಹ ಸೇವನೆ ಒಳ್ಳೆಯದಲ್ಲಾ.. ಆದರೆ ಹಿತಮಿತವಾದ ಚಹಾ ಕುಡಿಯುವ ಅಭ್ಯಾಸ ಒಳ್ಳೆಯದು. ನೂರಾರು ಟೆನ್ಷನ್‌ಗಳಿಗೆ ಈ ಚಹಾ ಔಷಧಿಯಂತಾಗುತ್ತದೆ. ಹೀಗಾಗಿ ಚಹಾ ಸೇವಿಸುವವರ ಸಂಖ್ಯೆ ಬಹಳಷ್ಟು. ಚಹಾವು ಕ್ಯಾಟೆಚಿನ್‌ಗಳು ಮತ್ತು ಫ್ಲೇವನಾಯ್ಡ್‌ಗಳಂತಹ ಉತ್ಕರ್ಷಣ ನಿರೋಧಕಗಳ ನಿಧಿಯಾಗಿದೆ. ಈ ಸಂಯುಕ್ತಗಳು ಒತ್ತಡವನ್ನು ಎದುರಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತವೆ.

ಚಹಾ ಸೇವನೆ ಕ್ಯಾನ್ಸರ್, ಹೃದ್ರೋಗ ಮತ್ತು ಮಧುಮೇಹದಂತಹ ದೀರ್ಘಕಾಲದ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ. ಚಹಾದಲ್ಲಿ ಅನೇಕ ರೀತಿಯ ವಿಧಾನಗಳಿರುತ್ತದೆ, ಶುಂಠಿ ಚಹಾ, ಬ್ಲಾಕ್ ಟೀ ಹೀಗೆ. ಆದರೆ ಹೋಟೆಲ್‌ನಲ್ಲಿ ಮಾಡುವ ಅತಿ ರುಚಿಕರವಾದ ಸಿಂಪಲ್ ಟೀ ಮಾಡುವುದು ಹೇಗೆ ಎನ್ನುವ ಸುಲಭ ವಿಧಾನ ಇಲ್ಲಿದೆ. ಈ ಟ್ರಿಕ್ಸ್‌ಗಳನ್ನು ಫಾಲೋ ಮಾಡಿ ಒಂದೊಳ್ಳೆ ಚಹಾ ಮಾಡಿ ಕುಡಿಯಿರಿ.
ಬೇಕಾಗುವ ಪದಾರ್ಥಗಳು
ಹಾಲು-1 ಕಪ್
ನೀರು-1 ಕಪ್
Marie ಬಿಸ್ಕತ್ತುಗಳು-2
ಟೀ ಪುಡಿ-2 ಚಮಚ
ಸಕ್ಕರೆ-2-3 ಚಮಚ (ನಿಮ್ಮ ರುಚಿಗೆ ತಕ್ಕಷ್ಟು)

ಮಾಡುವ ವಿಧಾನ
ಮೊದಲು ಒಂದು ಪಾತ್ರೆಯಲ್ಲಿ ಹಾಲು ತೆಗೆದುಕೊಳ್ಳಿ, ಸ್ವಲ್ಪ ನೀರು ಸೇರಿಸಿ. ಸಕ್ಕರೆ ಸೇರಿಸಿ. ಟೀ ಪುಡಿ ಸೇರಿಸಿ ಈ ಮಿಶ್ರವನ್ನು ಕುದಿಯಲು ಇಡಿ. ತೆಗೆದುಕೊಂಡ ಎರಡು ಬಿಸ್ಕತ್ತುಗಳನ್ನು ಪುಡಿ ಮಾಡಿಕೊಳ್ಳಿ. ಕುದಿಯುವ ಚಹಾಕ್ಕೆ 1-2 ಚಮಚ ಬಿಸ್ಕತ್ತು ಪುಡಿಯನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ ಕುದಿಯಲು ಬಿಡಿ. ಚೆನ್ನಾಗಿ ಕುದಿಸಿ. ಟೀ ಚೆನ್ನಾಗಿ ಕುದಿ ಬಂದ ನಂತರ ಸ್ಟೌವ್ ಮೇಲಿಂದ ಕೆಳಗಿಳಿಸಿ ಸೋಯಿಸಿಕೊಳ್ಳಿ. ಬಳಿಕ ಬೇರೆ ಲೋಟಕ್ಕೆ ಟೀ ವರ್ಗಾಯಿಸಿದರೆ ರುಚಿ..ರುಚಿ..ಬಿಸಿ..ಬಿಸಿ.. ಹೋಟೆಲ್ ಸ್ಟೈಲ್ ಚಹಾ ಕುಡಿಯಲು ಸಿದ್ಧವಾಗಿರುತ್ತದೆ.












Click it and Unblock the Notifications