Avocado Seeds Health Benefit: ತೂಕ ಇಳಿಸಿ ಶಕ್ತಿ ಹೆಚ್ಚಿಸುವ ಆವಕಾಡೊ ಬೀಜದ ಆರೋಗ್ಯಕರ ಪ್ರಯೋಜನ ತಿಳಿದೇ ತಿನ್ನಿ....
ರುಚಿಕರವಾದ ಹಣ್ಣುಗಳ ಪೈಕಿ ಅವಕಾಡೊ ಹಣ್ಣು ಕೂಡ ಒಂದು. ಆವಕಾಡೊ 20ಕ್ಕೂ ಹೆಚ್ಚು ಜೀವಸತ್ವಗಳು ಮತ್ತು ಖನಿಜಗಳನ್ನು ಹೊಂದಿರುತ್ತದೆ. ಇದು ಇತರ ಯಾವುದೇ ಹಣ್ಣುಗಳಿಗಿಂತ ಹೆಚ್ಚು ಪೋಷಕಾಂಶಗಳನ್ನು ಹೊಂದಿದೆ.
ಸಾಮಾನ್ಯವಾಗಿ ಆವಕಾಡೊ ಹಣ್ಣು ತಿನ್ನಲು ರುಚಿಯನ್ನು ಹೊಂದಿರುತ್ತದೆ. ಡಯಟ್ ಮಾಡುವವರು ತೂಕ ನಷ್ಟ ಮತ್ತು ಹೃದಯದ ಆರೋಗ್ಯಕ್ಕಾಗಿ ಇದನ್ನು ತೆಗೆದುಕೊಳ್ಳುತ್ತಾರೆ. ಆದರೆ ಪ್ರತಿಯೊಬ್ಬರೂ ತಿನ್ನಲೇಬೇಕಾದ ಹಣ್ಣುಗಳಲ್ಲಿ ಈ ಹಣ್ಣು ಪ್ರಮುಖವಾಗಿದೆ.

ಇದಲ್ಲದೆ ಇದರ ಬೀಜಗಳು ಆರೋಗ್ಯ ಪ್ರಯೋಜನಗಳನ್ನು ನೀಡುವ ಪ್ರಮುಖವಾಗಿವೆ ಎಂದು ತಜ್ಞರು ಹೇಳುತ್ತಾರೆ. ಇತ್ತೀಚಿನ ದಿನಗಳಲ್ಲಿ ಆವಕಾಡೊ ಬೀಜಗಳ ಆರೋಗ್ಯ ಪ್ರಯೋಜನಗಳನ್ನು ಪ್ರಚಾರ ಮಾಡುವ ಅನೇಕ ವೀಡಿಯೊಗಳು ಮತ್ತು ರೀಲ್‌ಗಳಿವೆ.
ಆದ್ದರಿಂದ ಆವಕಾಡೊ ಬೀಜಗಳನ್ನು ವ್ಯರ್ಥ ಮಾಡಬೇಡಿ. ಈ ಬೀಜಗಳನ್ನು ತಿನ್ನುವುದರಿಂದ ಯಾವುದೇ ಅಪಾಯಕಾರಿ ಪರಿಣಾಮ ಬೀರುವ ಸಾಧ್ಯತೆಯಿಲ್ಲ ಎಂದು ವೈದ್ಯಕೀಯ ತಜ್ಞರು ಹೇಳುತ್ತಾರೆ. ಹಣ್ಣಿನ ತಿರುಳಿಗಿಂತ ಅವು ಕಡಿಮೆ ಪೋಷಕಾಂಶಗಳನ್ನು ಹೊಂದಿರುತ್ತವೆ ಎಂದು ಅಧ್ಯಯನಗಳು ತೋರಿಸುತ್ತವೆ.
ಪೋಷಕಾಂಶಗಳ ಆಗರ
ಆವಕಾಡೊ ಬೀಜಗಳಲ್ಲಿ ಆಂಟಿಆಕ್ಸಿಡೆಂಟ್‌ಗಳು ಅಧಿಕವಾಗಿವೆ. ಅವು ಎರಡು ರೀತಿಯ ನಿರೋಧಕಗಳಲ್ಲಿ ಸಮೃದ್ಧವಾಗಿವೆ. ಫೀನಾಲಿಕ್ ಸಂಯುಕ್ತಗಳು ಮತ್ತು ಇನ್ನೊಂದು ಪ್ರೊಸೈನಿಡಿನ್ಗಳು. ಇವೆಲ್ಲವೂ ಒಟ್ಟಾಗಿ ಆವಕಾಡೊಗಳ ಒಟ್ಟು ನಿರೋಧಕ ಗುಣಲಕ್ಷಣಗಳಲ್ಲಿ 38% ವರೆಗೆ ಕೊಡುಗೆ ನೀಡುತ್ತವೆ. ಈ ನಿರೋಧಕಗಳು ದೀರ್ಘಕಾಲದ ಕಾಯಿಲೆಗಳಾದ ಕ್ಯಾನ್ಸರ್, ಹೃದ್ರೋಗ ವಿರುದ್ಧ ಹೊಋಆಡಿ ನಮ್ಮನ್ನು ರಕ್ಷಿಸುತ್ತದೆ. ಅಧ್ಯಯನಗಳ ಪ್ರಕಾರ, ಆವಕಾಡೊ ಬೀಜದ ಪುಡಿ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ.

ಮಧುಮೇಹ ಪ್ರಯೋಜನಕಾರಿ
ಆವಕಾಡೊ ಬೀಜ ಮಧುಮೇಹ ಔಷಧಿಗಳಷ್ಟೇ ಪರಿಣಾಮಕಾರಿ ಎಂದು ಕಂಡುಬಂದಿದೆ. ಇದರ ಬೀಜದ ಸಾರವು ರಕ್ತನಾಳಗಳನ್ನು ಸಡಿಲಗೊಳಿಸುತ್ತದೆ ಮತ್ತು ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ ಎಂದು ಅಧ್ಯಯನಗಳು ತೋರಿಸುತ್ತವೆ. ಈ ಬೀಜಗಳಲ್ಲಿನ ಫೈಬರ್ ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ ಎಂದು ಕೆಲವು ಅಧ್ಯಯನಗಳು ತೋರಿಸುತ್ತವೆ.
ಮಲಬದ್ಧತೆಗೆ ಚಿಕಿತ್ಸೆ
ಇದು ಮಲಬದ್ಧತೆಯನ್ನು ಕಡಿಮೆ ಮಾಡುವುದು ಮಾತ್ರವಲ್ಲದೆ ಕರುಳಿನ ಆರೋಗ್ಯವನ್ನು ಸುಧಾರಿಸುತ್ತದೆ ಎಂದು ಹೇಳಲಾಗುತ್ತದೆ. ಆದರೆ ನೆನಪಿನಲ್ಲಿಟ್ಟುಕೊಳ್ಳಬೇಕಾದ ಕೆಲವು ವಿಷಯಗಳನ್ನು ನೋಡೋಣ. ಆವಕಾಡೊ ಬೀಜಗಳು ಸಹ ನಿರ್ದಿಷ್ಟ ಪ್ರಮಾಣದ ವಿಷವನ್ನು ಹೊಂದಿರುತ್ತವೆ. ಇವುಗಳು ಶಿಲೀಂಧ್ರನಾಶಕ ಟಾಕ್ಸಿನ್ ಪರ್ಸಿನ್ ಅನ್ನು ಹೊಂದಿರುತ್ತವೆ. ಅತಿಯಾಗಿ ಸೇವಿಸುವುದರಿಂದ ವಾಂತಿ, ವಾಕರಿಕೆ ಮತ್ತು ಅತಿಸಾರದಂತಹ ಸಮಸ್ಯೆಗಳು ಉಂಟಾಗಬಹುದು.
ಕ್ಯಾಲಿಫೋರ್ನಿಯಾ ಆವಕಾಡೊ ಆಯೋಗದ ಮಾಹಿತಿಯ ಪ್ರಕಾರ ಇದರ ಬೀಜಗಳು ಆಂಟಿನ್ಯೂಟ್ರಿಯೆಂಟ್‌ಗಳನ್ನು ಸಹ ಹೊಂದಿರುತ್ತವೆ. ಇತ್ತೀಚೆಗೆ ಆವಕಾಡೊ ಬೀಜಗಳನ್ನು ಕತ್ತರಿಸಿ ಒಣಗಿಸಿ ತಿನ್ನಲು ಹೇಳುವ ಅನೇಕ ವೀಡಿಯೊಗಳು ಸಾಮಾನಿಕ ಜಾಲತಾಣದಲ್ಲಿ ಕಂಡು ಬರುತ್ತವೆ.
ಅವಕಾಡೊ ಬೀಜ ತಿನ್ನುವುದು ಹೇಗೆ?
ಈ ಬೀಜಗಳನ್ನು ತಿನ್ನಲು ಸುರಕ್ಷಿತ ಮಾರ್ಗವಿಲ್ಲ. ಆದಾಗ್ಯೂ, ನೀವು ಬೀಜಗಳನ್ನು ವ್ಯರ್ಥ ಮಾಡುವುದನ್ನು ತಪ್ಪಿಸಲು ಬಯಸಿದರೆ, ನೀವು ಅವುಗಳಿಂದ ಎಣ್ಣೆಯನ್ನು ಹೊರತೆಗೆಯಬಹುದು. ಅಥವಾ ಒಣಗಿಸಿ ಅಡುಗೆಗೆ ಬಳಸಬಹುದು. ಆವಕಾಡೊ ಬೀಜಗಳನ್ನು ತಿನ್ನುವುದರಿಂದ ಆಗುವ ಪ್ರಯೋಜನಗಳ ಕುರಿತು ಇನ್ನೂ ಸಂಶೋಧನೆ ಮಾಡಬೇಕಾಗಿದೆ. ಆವಕಾಡೊ ಹಣ್ಣನ್ನು ತಿನ್ನಿರಿ. ಇದು ಪೋಷಕಾಂಶಗಳಿಂದ ಸಮೃದ್ಧವಾಗಿದೆ. ಆವಕಾಡೊ ತಿರುಳು ಆರೋಗ್ಯಕಾರಿ ಕೊಬ್ಬುಗಳು, ಫೈಬರ್ ಮತ್ತು ವಿಟಮಿನ್ಗಳಿಂದ ತುಂಬಿರುತ್ತದೆ. ಅದರ ಬೀಜಗಳಿಂದ ಆವಕಾಡೊ ಮರವನ್ನು ಬೆಳೆಸುವುದು ಉತ್ತಮ.












Click it and Unblock the Notifications