Watermelon Dosa: ಕಲ್ಲಂಗಡಿ ಸಿಪ್ಪೆ ಕಸವಲ್ಲ..ರಸ; ಚಟ್ ಪಟ್ ಅಂತ ಮಾಡಿ ಟೇಸ್ಟಿ ದೋಸೆ
ಕೆಲವೊಂದು ಹಣ್ಣುಗಳು ಬೇಸಿಗೆಯ ಸಮಯದಲ್ಲಿ ಮಾತ್ರ ಹೆಚ್ಚು ಲಭ್ಯವಿರುತ್ತದೆ. ಅದರಲ್ಲಿ ಪ್ರಮುಖವಾಗಿ ಕಲ್ಲಂಗಡಿ ಹಣ್ಣು. ಬೇಸಗೆ ಸಮಯದಲ್ಲಿ ಎಲ್ಲಿ ಹೋದರೂ, ಎಲ್ಲಿ ನೋಡಿದರೂ ಕಲ್ಲಂಗಡಿ ಹಣ್ಣು. ಬೇರೆ ದಿನಗಳಿಗೆ ಹೋಲಿಸಿದರೆ ಬೇಸಿಗೆಯಲ್ಲೇ ಕೊಂಚ ಅಗ್ಗದಲ್ಲೇ ಕಲ್ಲಂಗಡಿ ಹಣ್ಣು ಸಿಗುತ್ತದೆ. ದೇಹವನ್ನು ತಂಪಾಗಿರಿಸಲು ಕಲ್ಲಂಗಡಿ ಹಣ್ಣು ಸಹಾಯ ಮಾಡುತ್ತದೆ. ಜೊತೆಗೆ ಈ ಹಣ್ಣು ರುಚಿ ಕೂಡ ಹೌದು. ಹೀಗಾಗಿ ಹೆಚ್ಚೆಚ್ಚು ಸೇವಿಸಬಹುದು.
ಕಲ್ಲಂಗಡಿ ಹಣ್ಣಿನಲ್ಲಿ ಎಲ್ಲಾ ರೀತಿಯ ಪ್ರೋಟೀನ್, ವಿಟಮಿನ್‌ಗಳು ಮತ್ತು ನಾರಿನಾಶ ಇರುವುದರಿಂದ ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ. ಆಯಾಸ ಕಡಿಮೆ ಮಾಡುತ್ತದೆ. ಜೀರ್ಣಕ್ರಿಯೆಗೆ ಸಹಕಾರಿಯಾಗುತ್ತದೆ ಜೊತೆಗೆ ತೂಕ ಇಳಿಸಲು ಕೂಡ ಸಹಾಯಕಾರಿ. ಉಪಯೋಗ ಇರುವ ಕಲ್ಲಂಗಡಿ ಹಣ್ಣು ಹಾಗೂ ಹಣ್ಣಿನ ಜ್ಯೂಸ್ ಅನ್ನು ಹೆಚ್ಚಾಗಿ ಸೇವಿಸಲಾಗುತ್ತದೆ. ಆದರೆ ಕಲ್ಲಂಗಡಿ ಹಣ್ಣಿನ ಸಿಪ್ಪೆಯಿಂದ ಕೂಡ ಉಪಯೋಗವಿದೆ.

ಸಾಮಾನ್ಯವಾಗಿ ಕಲ್ಲಂಗಡಿ ಹಣ್ಣಿನ ಕೆಂಪು ಭಾಗ ಸಿಹಿಯಾಗಿದ್ದು, ಎಲ್ಲರೂ ಅದನ್ನು ಚಪ್ಪರಿಸಿ ತಿನ್ನುತ್ತಾರೆ. ಆದರೆ ಕೆಂಪು ಪದರ ಹಾಗೂ ಹಣ್ಣಿನ ಸಿಪ್ಪೆಯ ತೊಗಟೆ ಮಧ್ಯ ಮತ್ತೊಂದು ಬಳಿ ಭಾಗದ ಪದರವಿರುತ್ತದೆ. ಇದು ಅಷ್ಟೊಂದು ರುಚಿಯಾಗಿರದಿದ್ದರೂ, ಹೆಚ್ಚಿನ ನೀರಿನಾಂಶ ಇರುತ್ತದೆ. ಹೀಗಾಗಿ ಇದು ಆರೋಗ್ಯಕ್ಕೆ ಒಳ್ಳೆಯದು. ಆದ್ದರಿಂದ ಕಲ್ಲಂಗಡಿ ಹಣ್ಣಿನ ಬಿಳಿ ಸಿಪ್ಪೆಯನ್ನು ಬಳಸಿಕೊಂಡು ಮಾಡಬಹುದಾದ ರುಚಿಕರವಾದ ದೊಸೆಯನ್ನು ತಯಾರಿಸುವ ವಿಧಾನ ಇಲ್ಲಿದೆ.
ಕಲ್ಲಂಗಡಿ ತೊಗಟೆ ದೋಸೆಗೆ ಬೇಕಾಗುವ ಸಾಮಾಗ್ರಿಗಳು
ಅಕ್ಕಿ-1 ಕಪ್
ಕಲ್ಲಂಗಡಿ ಸಿಪ್ಪೆ-1 ಕಪ್
ಉದ್ದಿನ ಬೇಳೆ-2 ಚಮಚ
ಮೆಂತ್ಯ ಬೀಜಗಳು-1 ಚಮಚ
ಅವಲಕ್ಕಿ- 1/4 ಕಪ್
ಅಡುಗೆಗೆ ತುಪ್ಪ ಅಥವಾ ಎಣ್ಣೆ
ನಿಮ್ಮ ರುಚಿಗೆ ತಕ್ಕಷ್ಟು ಉಪ್ಪು
ಕಲ್ಲಂಗಡಿ ತೊಗಟೆ ದೋಸೆ ಮಾಡುವ ವಿಧಾನ
ಮೊದಲು ಅಕ್ಕಿಯನ್ನು ತೆಗೆದುಕೊಂಡು ಚೆನ್ನಾಗಿ ತೊಳೆದು 4-5 ಗಂಟೆಗಳ ಕಾಲ ನೆನೆಸಿಡಿ. ಮತ್ತೊಂದು ಪಾತ್ರೆಗೆ ಉದ್ದಿನಬೇಳೆ, ಅವಲಕ್ಕಿ, ಮೆಂತ್ಯ ಬೀಜಗಳನ್ನು ಹಾಕಿ 4-5 ಗಂಟೆಗಳ ಕಾಲ ನೆನೆಸಿಡಿ. ಬಳಿಕ ಕಲ್ಲಂಗಡಿ ಹಣ್ಣಿನ ಸಿಪ್ಪೆ ಅಥವಾ ಬಿಳಿ ಭಾಗವನ್ನು ಸಂಗ್ರಹಿಸಿಟ್ಟುಕೊಳ್ಳಿ. ನೆನೆದ ಬಳಿಕ ಮೊದಲು ಉದ್ದಿನಬೇಳೆ, ಅವಲಕ್ಕಿ, ಮೆಂತ್ಯ ಬೀಜಗಳ ಮಿಶ್ರಣವನ್ನು ರುಬ್ಬಿಕೊಳ್ಳಿ. ಅದಕ್ಕೆ ಕತ್ತರಿಸಿದ ಕಲ್ಲಂಗಡಿ ಹಣ್ಣಿನ ಸಿಪ್ಪೆಯನ್ನು ಸೇರಿಸಿ. ಸ್ವಲ್ಪ ನೀರನ್ನು ಸೇರಿಸಿ ಚೆನ್ನಾಗಿ ರುಬ್ಬಿಕೊಳ್ಳಿ.

ಬಳಿಕ ನೆನೆಸಿದ ಅಕ್ಕಿಯನ್ನು ಅಗತ್ಯ ನೀರು ಸೇರಿಸಿ ಚೆನ್ನಾಗಿ ರುಬ್ಬಿಕೊಳ್ಳಿ. ಈ ಮಿಶ್ರಣವನ್ನು ಸಹ ಮೊದಲ ಮಿಶ್ರಣದ ಅದೇ ಪಾತ್ರೆಗೆ ಸೇರಿಸಿ. ನಂತರ ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ ಮುಚ್ಚಳವನ್ನು ಮುಚ್ಚಿ ಬೆಚ್ಚಗಿನ ಸ್ಥಳದಲ್ಲಿ 8-10 ಗಂಟೆಗಳ ಕಾಲ ಇಡಿ. ಬಳಿಕ ಹಿಟ್ಟು ಹದವಾದ ನಂತರ ಮತ್ತೆ ಮಿಶ್ರಣ ಮಾಡಿ, ಎಣ್ಣೆ ಅಥವಾ ತುಪ್ಪ ಬಳಸಿ ದೋಸೆ ಮಾಡಿ, ನಿಮ್ಮಿಷ್ಟದ ಚಟ್ನಿ ಅಥವಾ ಪಲ್ಯದೊಂದಿಗೆ ಸವಿಯಿರಿ.
-
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
ಮೈಸೂರಲ್ಲಿ ವಂದೇ ಭಾರತ್ ರೈಲ್ವೆ ಹಬ್: 400 ಕೋಟಿ ರೂ ವೆಚ್ಚದಲ್ಲಿ ಹೈಟೆಕ್ ನಿರ್ವಹಣಾ ಕೇಂದ್ರ -
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ












Click it and Unblock the Notifications