• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಅತ್ತೆ ಹೇಳಿದ ಸಂಸಾರ ಸೂತ್ರಗಳನ್ನು ಸೊಸೆ ಪಾಲಿಸಿದ್ದು ಹೀಗೆ...!

|

ವಾರವಿಡೀ ರಾಜಕೀಯ, ಅಪರಾಧ, ಪ್ರತಿಭಟನೆ, ಸಂಘರ್ಷ ಮುಂತಾದ ಸುದ್ದಿಗಳನ್ನು ಕೇಳಿ ಬೇಸತ್ತಿರುವ ಮನಸಿಗೆ ಒಂದಷ್ಟು ಉಲ್ಲಾಸ ಮೂಡಿಸಲು ಒಂದಷ್ಟು ನಗೆಹನಿಗಳು ಇಲ್ಲಿವೆ.

ನನಗಿಲ್ಲಿಯೇ ಸ್ವರ್ಗ

ಅಳಿಯ, ಆತನ ಹೆಂಡತಿ ಮತ್ತು ಅತ್ತೆ ಮಹಾನ್ ಗುರುಗಳ ಪ್ರವಚನ ಕೇಳಲಿಕ್ಕೆ ಹೋದರು.

ಗುರು: ಸ್ವರ್ಗಕ್ಕೆ ಹೋಗೋ ಇಚ್ಛೆ ಇರೋರು ಕೈಯೆತ್ತಿ,

ಅತ್ತೆ ಮತ್ತು ಹೆಂಡತಿ ಕೈ ಎತ್ತಿದ್ರು, ಆದ್ರೆ ಅಳಿಯ ಕೈ ಎತ್ತಲಿಲ್ಲ.

ಗುರು: ನೀನು ಸ್ವರ್ಗಕ್ಕೆ ಹೋಗುವುದಿಲ್ಲವೇ?

ಅಳಿಯ: ಇವರಿಬ್ಬರು ಹೋದ್ರೆ ನನಗಿಲ್ಲೇ ಸ್ವರ್ಗ

ಗುರು: ಶಿಷ್ಯರೇ ಈ ಜ್ಞಾನಿಯನ್ನು ನಮ್ಮ ಆಶ್ರಮಕ್ಕೆ ಸೇರಿಸ್ಕೊಳ್ಳಿ!

ನಿನ್ನಂಥವಳು ಸಿಕ್ಕಿದ್ದು ಏಕೆ?

ಆಗಷ್ಟೇ ಲೌಕಿಕ ಜ್ಞಾನ ಬೆಳೆಸಿಕೊಳ್ಳುತ್ತಿದ್ದ ಮಗನನ್ನು ಹೆಂಡತಿ ಹಿಗ್ಗಾ ಮುಗ್ಗಾ ಚಚ್ಚುತ್ತಿದ್ದಳು. ತಾನೇನು ತಪ್ಪು ಮಾಡಿದೆ ಎಂದು ಅರ್ಥವಾಗದೆ ಕಂಗಾಲಾಗಿದ್ದ ಮಗ ಅಮ್ಮನ ಹೊಡೆತ ತಿಂದು ಉರುಳಾಡಿ ಅಳುತ್ತಿದ್ದ. ಮಾರುಕಟ್ಟೆಯಿಂದ ತರಕಾರಿ ಸಾಮಾನು ಹೊತ್ತುಕೊಂಡು ಬಂದ ಗಂಡನೂ ಗಾಬರಿಯಾಯಿತು.

'ಏನಾಯ್ತು? ಯಾಕೆ ಹೀಗೆ ಬಾರಿಸ್ತಿದ್ದೀಯಾ?' ಎಂದು ಹೆಂಡತಿಯ ಕೈಯಲ್ಲಿದ್ದ ಮಾರುದ್ದದ ಕೋಲು ನೋಡಿ ತಾನೂ ನಡುಗುತ್ತಾ ಕೇಳಿದ.

ಜೋಕ್ ಜೋಕಾಲಿ: ಎಲ್ಲಾ ಸರಿಯಿದ್ರೂ ಫೈನ್ ಕಟ್ಟಿಸಿಕೊಂಡ ಪೊಲೀಸಪ್ಪ!

''ಚೆನ್ನಾಗಿ ಓದಿದರೆ ಒಳ್ಳೆ ಹೆಂಡತಿ ಸಿಗುತ್ತಾಳೆ ಅಂತ ಹೇಳಿದೆ. ಅದಕ್ಕೆ ಇವನು 'ಅಪ್ಪ ಅಷ್ಟೊಂದು ಓದಿದ್ರೂ ನಿನ್ನಂತಹವಳು ಯಾಕೆ ಸಿಕ್ಕಿದ್ದು' ಎಂದು ಕೇಳ್ತಾನೆ, ಅವಿವೇಕಿ'' ಎನ್ನುತ್ತಾ ಮತ್ತೆ ಬ್ಯಾಟಿಂಗ್ ಮುಂದುವರಿಸಿದಳು.

ಹುಡುಗಿ ಸಿಕ್ಕವರ ಕಥೆ

ಹುಡುಗಿ ಸಿಕ್ಕವರ ಕಥೆ

ಭಾರತದಲ್ಲಿ 1,000 ಹುಡುಗರಿಗೆ 943 ಹುಡುಗಿಯರಿದ್ದಾರೆ. ಅಂದರೆ 57 ಹುಡುಗರಿಗೆ ಹುಡುಗಿಯರೇ ಸಿಗುವುದಿಲ್ಲ. ಈ 57 ಮಂದಿ ಮುಂದೆ ಅಬ್ದುಲ್ ಕಲಾಂ, ವಾಜಪೇಯಿ, ರತನ್ ಟಾಟಾ, ಯೋಗಿ, ಮೋದಿಗಳ ರೀತಿ ಆಗುತ್ತಾರೆ.

ಉಳಿದ 943 ಮಂದಿ ಮನೆಯಲ್ಲಿ ಕುಕ್ಕರ್ ಮೂರು ಸೀಟಿ ಹೊಡೆದಾಗ ಗ್ಯಾಸ್ ಆಫ್ ಮಾಡುತ್ತಾರೆ.

ಶಿವ, ಶಿವಾ... ಹೊಳೆಗೆ ಹಾರ್ತೇನೆ ಎಂದ ಗಂಡನಿಗೆ ಹೆಂಡ್ತಿ ಹಿಂಗಾ ಹೇಳೋದು!

ಗ್ರಹಣಗಳಲ್ಲಿ ಎಷ್ಟು ವಿಧ?

ಗ್ರಹಣಗಳಲ್ಲಿ ಎಷ್ಟು ವಿಧ?

ಸಂದರ್ಶನಕಾರ: ಗ್ರಹಣಗಳಲ್ಲಿ ಎಷ್ಟು ವಿಧ? ಮತ್ತು ಅವು ಯಾವುವು...? ಹಾಗೂ ಅವುಗಳ ವ್ಯತ್ಯಾಸ ತಿಳಿಸಿ.

ಗುಂಡ : ಗ್ರಹಣಗಳಲ್ಲಿ ಮೂರು ವಿಧ, ಅವು ಸೂರ್ಯ ಗ್ರಹಣ, ಚಂದ್ರ ಗ್ರಹಣ ಮತ್ತು ಪಾಣಿ ಗ್ರಹಣ (ವಿವಾಹ ). ಸೂರ್ಯ ಗ್ರಹಣ ಮತ್ತು ಚಂದ್ರಗ್ರಹಣಕ್ಕೆ ಕೆಲವು ಗಂಟೆಗಳ ನಂತರ ಮೋಕ್ಷವುಂಟು ಆದರೆ ಈ ಪಾಣಿಗ್ರಹಣಕ್ಕೆ ಮೋಕ್ಷವಿಲ್ಲ ಜೀವನ ಪರ್ಯಂತ ಅನುಭವಿಸಲೇ ಬೇಕು.

ಜುಬ್ಬಾ ಹಾಕಿಕೊಳ್ಳೋದು ಹೇಗೆ?

ಜುಬ್ಬಾ ಹಾಕಿಕೊಳ್ಳೋದು ಹೇಗೆ?

ರೋಗಿ: ತುಸು ಬಾಗಿ ನಿಂತು ಎರಡೂ ಕೈ ಮುಂದೆ ಚಾಚಿ ನಿಧಾನವಾಗಿ ಕೈ ಮೇಲೆತ್ತಿ ಸ್ವಲ್ಪ ಕತ್ತು ಬಗ್ಗಿಸಿ ನಂತರ ನಿಧಾನವಾಗಿ ಕೈ ಇಳಿಸಿ ಮುಖ ಮೇಲೆತ್ತಿ ನೇರ ನಿಂತಾಗ ಬೆನ್ನಿನಲ್ಲಿ ಛಳಕ್ ಅಂದಹಾಗೆ ಆಗುತ್ತದೆ... ಸ್ವಲ್ಪ ನೋಡಿ ಡಾಕ್ಟರ್....

ಡಾಕ್ಟರ್: ನೀವು ಅದೇಕೆ ಹಾಗೆ ವಿಚಿತ್ರ ಭಂಗಿ ಮಾಡುತ್ತೀರಿ...?

ರೋಗಿ: ಮತ್ತೆ ಜುಬ್ಬಾ ಹೇಗೆ ಹಾಕಿಕೊಳ್ಳೋದು.... ಡಾಕ್ಟರ್?

ವಾಟ್ಸಾಪ್ ಜೋಕ್: ನಮ್ಮ ಕಾಲದಲ್ಲಿ ಮೊಬೈಲ್ ಇರಲಿಲ್ಲ, ಆದರೆ...

ಸಂಸಾರ ಮಾಡುವ ಸೂತ್ರ

ಸಂಸಾರ ಮಾಡುವ ಸೂತ್ರ

ಸೊಸೆ ಕಳುಹಿಸಿದ ಈ ವಾಟ್ಸಾಪ್ ಮೆಸೇಜ್‌ನಿಂದಾಗಿ ಪಾಪ ಅತ್ತೆ ಆಸ್ಪತ್ರೆ ಪಾಲಾದಳು!!

ಮಾತೋಶ್ರೀ ಸಮಾನರಾದ ಪ್ರೀತಿಯ ಅತ್ತೆಯವರ ಪಾದಕಮಲಗಳಿಗೆ ಆಪಾದಮಸ್ತಕ ನಮಸ್ಕಾರಗಳು.

ನಾವು ಕ್ಷೇಮವಾಗಿದ್ದೇವೆ, ನೀವೂ ಕ್ಷೇಮ ಎಂದು ತಿಳಿಯುತ್ತಾ ಬರೆಯುತ್ತಿರುವ ಪತ್ರ....

ನಾವು ಸಂಸಾರ ಮಾಡಲು ಬರುತ್ತಿದ್ದಾಗ ನನಗೆ ಹೇಳಿದ ಎಲ್ಲವನ್ನೂ ಚಾಚೂತಪ್ಪದೆ ಪಾಲಿಸುತ್ತಿದ್ದೇನೆ.

ಹೊಸ ಸಂಸಾರ ಹಾಲು ಉಕ್ಕಿದಂತೆ ಉಕ್ಕಿ ಹರಿಯಬೇಕು ಎಂದಿದ್ದೀರಿ. ಹಾಗಾಗಿಯೇ ದಿನಕ್ಕೆ ಎರಡು ಲೀಟರ್ ಹಾಲು ಉಕ್ಕಿಸುತ್ತಿದ್ದೇನೆ. ಉಕ್ಕಿ ಹರಿದ ಮೇಲೆ ಉಳಿದ ಹಾಲಿನಲ್ಲಿ ಟೀ ಮಾಡಿಕೊಂಡು ಕುಡಿಯುತ್ತಿದ್ದೇವೆ! ಆದರೆ ಎರಡು ತಿಂಗಳಿಗೇ ಸ್ಟವ್ ಕಮರಿ ಕಂಪು ವಾಸನೆ ಹೊಡೆಯುತ್ತಿರುವ ಕಾರಣ ಹೊಸ ಸ್ಟವ್ ಖರೀದಿಸಿದ್ದೇವೆ!!

ಸ್ವಲ್ಪ ಅದು ಇದೂ ಕೆಲಸ ಕಲಿತುಕೋ ಎಂಬ ನಿಮ್ಮ ಮಾತಿನ ಮೇಲಿನ ಗೌರವದಿಂದ ನಿತ್ಯ 5 ಗಂಟೆಗಳು, ಎ ಆರ್ ರೆಹಮಾನ್ ಹಾಡುಗಳನ್ನು ಕೇಳುತ್ತಾ ಪ್ರಾಕ್ಟೀಸ್ ಮಾಡುತ್ತಿದ್ದೇನೆ. ಹಾಡು ಕಲಿಯುವುದು ಪೂರ್ಣವಾದ ಕೂಡಲೇ ಕೆಲಸ ಮಾಡುವುದನ್ನು ಪ್ರಾರಂಭಿಸುತ್ತೇನೆ!

ನಿಮ್ಮ ಮಗನ ಆರೋಗ್ಯದ ಬಗ್ಗೆ ಎಚ್ಚರ ವಹಿಸಲು ಹೇಳಿದಿರಿ ಅಲ್ಲವೇ, ಹಾಗಾಗಿ ಅವರ ಆರೋಗ್ಯದ ದೃಷ್ಟಿಯಿಂದ ನಿತ್ಯ ಒಂದು ಸಲ ಮಾತ್ರ ಊಟ ಇಡುತ್ತಿದ್ದೇನೆ!

ಗಂಡನಿಗೆ ಕಷ್ಟ ಕೊಡಬಾರದು ಎಂಬ ನಿಮ್ಮ ಮಾತು ನೆನಪಾಗಿ ಬೆಳಗ್ಗೆ ಮಾತ್ರ ಅಡುಗೆ ಮಾಡಿಸುತ್ತಿದ್ದೇನೆ!!

ಅಕ್ಕಪಕ್ಕದವರ ಬಳಿ ಎಚ್ಚರ ಎಂದು ಹೇಳಿದಿರಿ ಅಲ್ಲವೇ ಅತ್ತೆ, ಹಾಗಾಗಿ ನಿನ್ನೆ ಎದುರು ಮನೆಯಾಕೆ ಮಾತನಾಡಲು ಬಂದಾಗ ಮುಖಕ್ಕೆ ಹೊಡೆದಂತೆ ಬಾಗಿಲು ಹಾಕಿದೆ. ಆಕೆ ಮುಖ ನೀವು ಮಾಡಿದ ಚಪಾತಿಯಂತೆ ಸುಟ್ಟು ಕರಕಲಾಗಿದೆ!

ಉಳಿತಾಯ ಮಾಡು ಎಂಬ ನಿಮ್ಮ ಮಾತಿನಿಂದ ವಾರಕ್ಕೆ ಒಂದು ಡ್ರೆಸ್ ಮಾತ್ರ ಹಾಕಿಕೊಳ್ಳುತ್ತಿದ್ದೇನೆ! ಅದೇ ರೀತಿ ಎರಡು ಸಿನಿಮಾಗಳನ್ನು ಮಾತ್ರ ನೋಡುತ್ತಿದ್ದೇವೆ! ಈ ತಿಂಗಳಲ್ಲಿ ಉಳಿತಾಯ ಮಾಡಿದ ಹಣದಿಂದ ನಿಮ್ಮ ಮಗನಿಗೆ ಹೊಸ ಕರ್ಚೀಫ್ ಕೊಡಿಸಿದ್ದೇನೆ!

ಪತಿಯೇ ಪ್ರತ್ಯಕ್ಷ ದೇವರು ಎಂದು ಹೇಳಿದಿರಲ್ಲವೇ, ಹಾಗಾಗಿ ನಿನ್ನೆ ವೈಕುಂಠ ಏಕಾದಶಿ ಎಂದು ಪೂಜೆ ಮಾಡಿ ನಿಮ್ಮ ಮಗನ ಮುಖಕ್ಕೆ ಮಂಗಳಾರತಿ ಎತ್ತಿ, ಅವರ ಕಾಲುಗಳ ಮೇಲೆ ತೆಂಗಿನಕಾಯಿ ಹೊಡೆದೆ! ಪಾಪ ಕಾಲಿನ ಬೆರಳು ಜಜ್ಜಿಹೋಗಿ ರಕ್ತ ಬಂತು, ಕಟ್ಟನ್ನೂ ಕಟ್ಟಿದ್ದೇನೆ. ಶೀಘ್ರದಲ್ಲೇ ಗುಣಮುಖನಾಗುತ್ತಾನೆ ಬಿಡಿ..

ನೀವು ಇನ್ನೂ ನನಗೆ ಏನಾದರೂ ಸಲಹೆಗಳನ್ನು ನೀಡಬೇಕೆಂದರೆ ವಿವರವಾಗಿ ಪತ್ರ ಬರೆಯಿರಿ...

ಇಂತಿ

ನಿಮ್ಮ ಪ್ರೀತಿಯ

ಕುಮಾರನ ಪಾದದಾಸಿ

ನಿಮ್ಮ ಸೊಸೆ!!!

English summary
Jokes: A daughter in law wrote a letter to her mother in law as she is following the instructions by her on how to live a good family life.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X