• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಲಾನ್ ಮಸ್ಕ್ ಏನೆಲ್ಲಾ ಖರೀದಿ ಮಾಡಬೇಕು?, ನೆಟ್ಟಿಗರು ಹೇಳ್ತಾರೆ ನೋಡಿ!

|
Google Oneindia Kannada News

ಟೆಸ್ಲಾ ಮತ್ತು ಸ್ಪೇಸ್‌ಎಕ್ಸ್ ಸಿಇಒ ಎಲಾನ್ ಮಸ್ಕ್ ಇತ್ತೀಚೆಗೆ ವಿಶ್ವದ ಅತಿದೊಡ್ಡ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಲ್ಲಿ ಒಂದಾದ ಟ್ವಿಟ್ಟರ್ ಅನ್ನು ಸ್ವಾಧೀನಪಡಿಸಿಕೊಂಡರು. ಇದಾದ ಬಳಿಕ ತನ್ನ ಮಾಲೀಕತ್ವವನ್ನು ವಿಸ್ತರಿಸುವ ಬಗ್ಗೆ ಎಲಾನ್ ಮಸ್ಕ್ ಮಾಡಿದ ಪೋಸ್ಟ್‌ಗಳು ನೆಟ್ಟಿಗರನ್ನು ಸೆಳೆದಿದೆ. ನೆಟ್ಟಿಗರು ಎಲಾನ್ ಮಸ್ಕ್ ಏನೆಲ್ಲಾ ಖರೀದಿ ಮಾಡಬೇಕು ಎಂಬ ಲೀಸ್ಟ್ ಅನ್ನು ನೀಡಿದ್ದಾರೆ. ಹಲವಾರು ಮಂದಿ ಸಲಹೆಗಳನ್ನು ನೀಡುತ್ತಿದ್ದಾರೆ.

Breaking news: ಟೆಸ್ಲಾ ಷೇರು 4 ಬಿಲಿಯನ್ USD ಮೌಲ್ಯಕ್ಕೆ ಮಾರಾಟ ಮಾಡಿದ ಮಸ್ಕ್Breaking news: ಟೆಸ್ಲಾ ಷೇರು 4 ಬಿಲಿಯನ್ USD ಮೌಲ್ಯಕ್ಕೆ ಮಾರಾಟ ಮಾಡಿದ ಮಸ್ಕ್

ಮೈಕ್ರೋಬ್ಲಾಗಿಂಗ್ ಸೈಟ್ ಅನ್ನು ಖರೀದಿಸಿದ ನಂತರ, ಎಲಾನ್ ಮಸ್ಕ್ ಕೋಕಾ-ಕೋಲಾವನ್ನು ಖರೀದಿಸಲು ಯೋಜಿಸುತ್ತಿದ್ದಾರೆ. "ಕೊಕೇನ್ ಅನ್ನು ಮತ್ತೆ ಹಾಕುತ್ತಾರೆ" ಎಂದು ತಮಾಷೆಯಾಗಿ ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಬಗ್ಗೆ ಟ್ವಿಟ್ಟರ್‌ನಲ್ಲಿ ಬರೆದುಕೊಂಡಿದ್ದಾರೆ. "ಮುಂದೆ ನಾನು ಕೊಕೇನ್ ಅನ್ನು ಮತ್ತೆ ಹಾಕಲು ಕೋಕಾ-ಕೋಲಾವನ್ನು ಖರೀದಿಸುತ್ತಿದ್ದೇನೆ," ಎಂದು ಹೇಳಿದ್ದಾರೆ.

ಇದು ಟ್ವಿಟ್ಟರ್‌ನಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ಇದಾದ ಬಳಿಕ ನೆಟ್ಟಿಗರು ಎಲಾನ್ ಮಸ್ಕ್ ಮುಂದೆ ಖರೀದಿಸಬಹುದಾದ ಕಂಪನಿಗಳ ವಿವಿಧ ಸಲಹೆಗಳನ್ನು ನೀಡಿದರು. ಟ್ವೀಟ್‌ನಲ್ಲಿ ಕೆಲವು ತಮಾಷೆಯ ಮೀಮ್ಸ್‌ಗಳು ಹರಿದಾಡಿದೆ. ಇನ್ನು ನೆಟ್ಟಿಗರು ಎಲಾನ್ ಮಸ್ಕ್ ಬಳಿ ಬೆಂಗಳೂರನ್ನೇ ಖರೀದಿ ಮಾಡಿ, ಆ ಮೂಲಕ ಬೆಂಗಳೂರನ್ನು ಸರಿಯಾದ ಹಾದಿಗೆ ತನ್ನಿ ಎಂದು ಹೇಳಿಕೊಂಡಿದ್ದಾರೆ.

ಎಲಾನ್ ಮಸ್ಕ್‌ಗೆ ಏನೆಲ್ಲಾ ಖರೀದಿ ಮಾಡಲು ಸಲಹೆ ನೀಡಿದ್ದಾರೆ?

ದೇಸಿ ಟ್ವಿಟ್ಟರಿಗರು ಎಲಾನ್ ಮಸ್ಕ್ ಐಆರ್‌ಸಿಟಿಸಿಯನ್ನು ಖರೀದಿಸಬೇಕು ಮತ್ತು ಅದರ ಸೇವೆಯನ್ನು ಸುಧಾರಿಸಬೇಕು. ಹಾಗೆಯೇ ರಾಷ್ಟ್ರೀಯ ಬ್ಯಾಂಕ್ ಎಸ್‌ಬಿಐ ಅನ್ನು ಖರೀದಿಸಬೇಕು ಎಂದು ಸಲಹೆ ನೀಡಿದರು. ಒಬ್ಬ ಟ್ವಿಟ್ಟರ್ ಬಳಕೆದಾರರು, ನೀವು ಇಷ್ಟು ಖರ್ಚು ಮಾಡುವಾಗ ಐಪಿಎಲ್ ಟ್ರೋಫಿಯನ್ನು ಕೂಡಾ ಒಂದು ಖರೀದಿ ಮಾಡಿ ಆರ್‌ಸಿಬಿಗೆ ನೀಡಿ ಎಂದು ತಮಾಷೆ ಮಾಡಿದ್ದಾರೆ.

Elon Musk jokes about buying Coca Cola, Take a Look At Hilarious Suggestions of Netizens

ಕೋಲಾ ಜೊತೆ ನಿಷೇಧಿತ ಮಾದಕವಸ್ತು: ಮಸ್ಕ್ ಟ್ವೀಟ್ ರಹಸ್ಯ ಏನು? ಕೋಲಾ ಜೊತೆ ನಿಷೇಧಿತ ಮಾದಕವಸ್ತು: ಮಸ್ಕ್ ಟ್ವೀಟ್ ರಹಸ್ಯ ಏನು?

ಇನ್ನು ಕೆಲವರು ಲೇಸ್ ಅನ್ನು ಖರೀದಿ ಮಾಡಿ, ಅದರಲ್ಲಿ ಸ್ವಲ್ಪ ಜಾಸ್ತಿ ಚಿಪ್ಸ್ ಅನ್ನು ಹಾಕುವಂತೆ ಮಾಡಿ ಎಂದು ವ್ಯಂಗ್ಯವಾಡಿದ್ದಾರೆ. ಇನ್ನು ಈ ನಡುವೆ ಕೋಕಾ ಕೋಲಾವನ್ನು ಖರೀದಿ ಮಾಡಿದ ಬಳಿಕ 40 ರೂಪಾಯಿಗೆ ಮಾರಾಟ ಮಾಡಿ ಎಂದು ಮನವಿ ಮಾಡಿದ್ದಾರೆ. ಇನ್ನೋರ್ವ ನೆಟ್ಟಿಗರು ಎನ್‌ಡಿಟಿವಿ ಹಾಗೂ ರಿಪಬ್ಲಿಕ್ ಟಿವಿ ಖರೀದಿ ಮಾಡಿ ಅದನ್ನು ವಿಲೀನ ಮಾಡಿ ಎಂದು ವ್ಯಂಗ್ಯವಾಡಿದ್ದಾರೆ. ಇನ್ಸ್ ಸ್ಟಾಗ್ರಾಂ ಅನ್ನು ಖರೀದಿ ಮಾಡಿ, ಆಪ್‌ ಅನ್ನೇ ಡಿಲೀಟ್ ಮಾಡಿ ಬಿಡಿ ಎಂಬ ಭಯಂಕರ ಟ್ವೀಟ್ ಮಾಡಿದ್ದಾರೆ.

English summary
Elon Musk jokes about buying Coca Cola, Take a Look At Hilarious Suggestions of Netizens.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X