Government Employees: 8ನೇ ವೇತನ ಆಯೋಗದಡಿ ನೌಕರರ ಮೂಲ ವೇತನ 46,000 ರೂ.ಗೆ ಹೆಚ್ಚಳ? ಸಂಭವ
ನವದೆಹಲಿ: ಕೇಂದ್ರ ಸರ್ಕಾರವು ಎಂಟನೇ ವೇತನ ಆಯೋಗವನ್ನು (8th Pay commission) ಅಧಿಕೃತಗೊಳಿಸಿದೆ. ನೌಕರರ ವೇತನ, ಭತ್ಯೆ ಹೆಚ್ಚಳ ಬೇಡಿಕೆ ಈಡೇರಿಕೆ ಸಂಬಂಧ ಈಗಾಗಲೇ ಸಮಾಲೋಚನೆಗಳನ್ನು ಭಾರತ ಸರ್ಕಾರ ಆರಂಭಿಸಿದೆ. ಶಿಫಾರಸುಗಳು ಒಪ್ಪಿದಲ್ಲಿ ಕೇಂದ್ರ ಸರ್ಕಾರಿ ನೌಕರರ ಭವಿಷ್ಯದ ಸಂಬಳ, ಪಿಂಚಣಿ ಮತ್ತು ಭತ್ಯೆಗಳು ಗಣನೀಯವಾಗಿ ಹೆಚ್ಚಾಗುವ ಸಾಧ್ಯತೆ ಇದೆ. ಹೀಗಾಗಿ ನೌಕರರ ಸಂಘಟನೆಗಳ ಒಕ್ಕೂಟವು ಇತ್ತೀಚೆಗೆ ದೆಹಲಿಯಲ್ಲಿ ಮಹತ್ವದ ಸಭೆ ನಡೆಸಿ ಬೇಡಿಕೆಗಳ ವರದಿ ರೂಪಿಸಿದ್ದವು.
ಹಣಕಾಸು ಸಚಿವಾಲಯವು ಆಯೋಗ ಜಾರಿಗೆ ಸಂಬಂಧಿಸಿದಂತೆ ನೌಕರರು, ಪಿಂಚಣಿದಾರರು ಮತ್ತವರ ಸಂಘಗಳು ಮತ್ತು ಇತರ ಪಾಲುದಾರರಿಂದ ಸಲಹೆಗಳನ್ನು ಆಹ್ವಾನಿಸಿತ್ತು. ಆನ್‌ಲೈನ್‌ನಲ್ಲಿ ಸಲಹೆಗಳ ಸಲ್ಲಿಕೆಗೆ 2026 ಏಪ್ರಿಲ್ 30ರವರೆಗೆ ಅವಕಾಶ ಇದೆ. ಇನ್ನೂ ಸರ್ಕಾರಕ್ಕೆ ಶಿಫಾರಸು ಸಲ್ಲಿಸಲು ಒಟ್ಟು 18 ತಿಂಗಳುಗಳ ಕಾಲಾವಕಾಶ ನೀಡಲಾಗಿದೆ. ನೌಕರರ ಸಂಘಟನೆಗಳು, ಪ್ರತಿನಿಧಿಗಳು ನೀಡುವ ಶಿಫಾರಸು ವರದಿ ಅಂಗೀಕರಿಸಿದರೆ
ಸುಮಾರು 50 ಲಕ್ಷ ಕೇಂದ್ರ ಸರ್ಕಾರಿ ನೌಕರರಿಗೆ ವೇತನ ಹೆಚ್ಚಳ ಹಾಗೂ ಸುಮಾರು 69 ಲಕ್ಷ ಪಿಂಚಣಿದಾರರಿಗೆ ಪಿಂಚಣಿ ಹೆಚ್ಚಳ ಸೌಲಭ್ಯ ಸಿಗುತ್ತದೆ.

ಮೊದಲ ವೇತನ ಆಯೋಗ ಜಾರಿಯಾದ 1946ರಿಂದಲೂ ಕಾಲ ಕಾಲಕ್ಕೆ ವೇತನ, ಭತ್ಯೆ ಹೆಚ್ಚಿಸುತ್ತಾ ಬರಲಾಗಿದೆ. ಇಂದಿನ ದುಬಾರಿ ಕಾಲದಲ್ಲಿ ಹೆಚ್ಚಿನ ಫಿಟ್‌ಮೆಂಟ್ ಅಂಶ ಪರಿಗಣಿಸಿ ಅದರ ಆಧಾರದಲ್ಲಿ ವೇತನ, ಭತ್ಯೆ ಹೆಚ್ಚಿಸಿದರೆ ಅನುಕೂಲ ಎಂದು ನೌಕರರು, ಪಿಂಚಣಿದಾರರು ಬೇಡಿಕೆ ಇಟ್ಟಿದ್ದಾರೆ. 2016 ರಲ್ಲಿ ಜಾರಿಯಾದ 7ನೇ ವೇತನ ಆಯೋಗದಡಿ ಕೇಂದ್ರ ಸರ್ಕಾರಿ ನೌಕರರ ಕನಿಷ್ಠ ಮೂಲ ವೇತನವನ್ನು ರೂ.18,000 ಕ್ಕೆ ಹೆಚ್ಚಿಸಲಾಯಿತು. ಗರಿಷ್ಠ ಮೂಲ ವೇತನವನ್ನು ತಿಂಗಳಿಗೆ ರೂ 2.5 ಲಕ್ಷಕ್ಕೆ ನಿಗದಿ ಮಾಡಲಾಯಿತು.
ಮೂಲ ವೇತನ 18,000 ರಿಂದ 46,000 ರೂ.ಗೆ ಹೆಚ್ಚಳ?
ಸದ್ಯ ಎಂಟನೇ ವೇತನ ಅಯೋಗಡಿ ನೌಕರರ ವೇತನ ಎಷ್ಟು ಹೆಚ್ಚಾಗಲಿದೆ ಎಂಬ ಕುತೂಹಲ ಇದೆ. ಹೆಚ್ಚಿನ ಫಿಟ್‌ಮೆಂಟ್ ಅಂಶ (3.0ರ-3.25) ಪರಿಗಣಿಸಬೇಕೆಂಬುದು ನೌಕರರ ಬೇಡಿಕೆಯಾಗಿದೆ. ಇದನ್ನು ಅಂಗೀಕರಿಸಿದಲ್ಲಿ ಕನಿಷ್ಠ ಮೂಲ ವೇತನವು ಪ್ರಸ್ತುತ 18,000 ರೂ.ನಿಂದ 46,000 ರೂಪಾಯಿಗೆ ಗಣನೀಯವಾಗಿ ಏರಿಕೆ ಆಗಲಿದೆ. ಸದ್ಯ ಹಲವು ಬೇಡಿಕೆಗಳ ನಡುವೆ ಕೇಂದ್ರವು ವೇತನ ಮಟ್ಟ, ಅನುಷ್ಠಾನ ಕುರಿತು ಅಂತಿಮ ನಿರ್ಧಾರ ಕೈಗೊಂಡಿಲ್ಲ.
ನೌರರ ಬೇಡಿಕೆಗಳು, ಶಿಫಾರಸುಗಳ ವರದಿಯನ್ನು ವೇತನ ಆಯೋಗ ಸಲ್ಲಿಸಿದ ನಂತರ ಮತ್ತು ಅದರ ಶಿಫಾರಸುಗಳನ್ನು ಅನುಮೋದಿಸಿದ ನಂತರವೇ ಹೊಸ ವೇತನ ರಚನೆಗೆ ಹಣಕಾಸಿನ ನಿಬಂಧನೆ ಹೊರಡಿಸಲಿದೆ. ಈ ಸಂಬಂಧ ಸಲಹೆ, ಶಿಫಾರಸು ಆಹ್ವಾನಿಸಲಾಗಿದೆ. ನೌಕರರ ಬೇಡಿಕೆಗಳನ್ನು ಒಪ್ಪುವ ಮತ್ತು ಈ ಬಾರಿ ಕೇಂದ್ರದಿಂದ ಉದ್ಯೊಗಿಗಳಿಗೆ ಭರ್ಜರಿ ಗುಡ್ ನ್ಯೂಸ್ ಸಿಗುವ ವಿಶ್ವಾಸವಿದೆ.
ಹಿಂದೆ ಹೆಚ್ಚಿಸಿದ್ದ ಮೂಲ ವೇತನ ವಿವರ
5ನೇ ವೇತನ ಆಯೋಗ (1996) ಜಾರಿ ಇದ್ದಾಗ ಸಂಕುಚಿತ ಅನುಪಾತ 1:10.2 ಅಡಿಯಲ್ಲಿ ನೌಕರರ ಕನಿಷ್ಠ ಮೂಲ ಸಂಬಳ 2,550 ರೂಪಾಯಿ ಮತ್ತು ಗರಿಷ್ಠ ಮೂಲ ವೇತನ 26,000 ರೂ.ಗೆ ಹೆಚ್ಚಿಸಲಾಯಿತು. 6ನೇ ವೇತನ ಆಯೋಗ (2006) ಅಡಿ ಸಂಕುಚಿತ ಅನುಪಾತ (1:11.4) ಆಧಾರದಲ್ಲಿ ಮೂಲ ವೇತನ ಕನಿಷ್ಠ 7,000 ರೂ. ಹಾಗೂ ಗರಿಷ್ಠ 80,000 ರೂಪಾಯಿಗೆ ಹೆಚ್ಚಿಸಲಾಗಿತ್ತು. ಕಳೆದ ಬಾರಿ ಏಳನೇ ವೇತನ ಆಯೋಗದಡಿ (1:13.9) ಕನಿಷ್ಠ ಮೂಲ ವೇತನ 18,000 ರೂ. ಮತ್ತು ಗರಿಷ್ಠ 2,50,000 ರೂ. ಹೆಚ್ಚಿಸಲಾಗಿತ್ತು.
-
Gold Rate April 9: ಚಿನ್ನ - ಬೆಳ್ಳಿ ಬೆಲೆಯಲ್ಲಿ ಭರ್ಜರಿ ಇಳಿಕೆ: ಬಂಗಾರ ಖರೀದಿದಾರರಿಗೆ ಸಂತೋಷದ ಸುದ್ದಿ -
ರಾಜ್ಯದ ಕಳೆದ 3 ವರ್ಷಗಳ ದ್ವಿತೀಯ PUC ಫಲಿತಾಂಶದ ಹೈಲೈಟ್ಸ್; ಮೇಲುಗೈ ಸಾಧಿಸಿದ ಜಿಲ್ಲೆಗಳು ಯಾವುವು? ಇಲ್ಲಿದೆ ಮಾಹಿತಿ -
Dhurandhar-2 OTT: ನೆಟ್ಫ್ಲಿಕ್ಸ್ ಅಲ್ಲ, ಈ ಒಟಿಟಿಯಲ್ಲಿ 'ಧರಂಧರ-2' ಅಬ್ಬರ, ಯಾವಾಗ? -
Karnataka Weather: ಕರ್ನಾಟಕದ 4 ಜಿಲ್ಲೆಗಳಲ್ಲಿ ಮಳೆ - ವಿವಿಧ ಭಾಗಗಳಲ್ಲಿ ಭಾರೀ ಬಿಸಿಲು, ಕರ್ನಾಟಕದ ಹವಾಮಾನ ವರದಿ -
Ragi Price Today: ಕರ್ನಾಟಕದ ಮಾರುಕಟ್ಟೆಗಳಲ್ಲಿ ಇಂದಿನ "ರಾಗಿ' ಬೆಲೆ ಎಷ್ಟಿದೆ? ಲೇಟೆಸ್ಟ್ ಅಪ್ಡೇಟ್ -
April 9 Horoscope: 12 ರಾಶಿಗಳಿಗೆ ಇಂದು ಸಂತೋಷ, ಸವಾಲು ಮತ್ತು ಅವಕಾಶಗಳ ಮಿಶ್ರ ಫಲ -
Viral: ಬೆಂಗಳೂರಿಗೆ ಕಾಲಿಟ್ಟಿತೇ ಡೇಂಜರಸ್ 'ಜಾಂಬಿ ಡ್ರಗ್'?: ಯುವಕನ ವಿಡಿಯೋ ನೋಡಿ ಬೆಚ್ಚಿಬಿದ್ದ ಸಿಲಿಕಾನ್ ಸಿಟಿ ಜನ -
April 10 Horoscope: 12 ರಾಶಿಗಳಿಗೆ ಇಂದು ಆರೋಗ್ಯ, ಹಣಕಾಸು ಮತ್ತು ಪ್ರೇಮದಲ್ಲಿ ಮಿಶ್ರ ಫಲ -
ಬೆಂಗಳೂರು ನಾಯಂಡಳ್ಳಿಯಲ್ಲಿ ಮನೆಯ ಮೊದಲ ಮಹಡಿಯಿಂದ ಬಿದ್ದ ಒಂದೂವರೆ ವರ್ಷದ ಕಂದಮ್ಮ -
SSLC Hindi: ಅಂಕ ಬದಲು ಗ್ರೇಡಿಂಗ್ ವಿರೋಧಿಸಿ ಅರ್ಜಿ ಸಲ್ಲಿಸಿದ ಅರ್ಜಿದಾರರಿಗೆ 1 ಲಕ್ಷ ರೂ. ದಂಡ: ಕರವೇ ಹೇಳಿದ್ದೇನು -
PUC Results: 2026ರ ದ್ವಿತೀಯ PUC ಪರೀಕ್ಷೆ ಫಲಿತಾಂಶ ಪ್ರಕಟ, ಇವರೇ ನೋಡಿ ಟಾಪರ್ -
Arecanut Price: ದಾವಣಗೆರೆ ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಧಾರಣೆ ಏರಿಕೆ: ಇಲ್ಲಿದೆ ಏಪ್ರಿಲ್ 9ರ ದರಪಟ್ಟಿ












Click it and Unblock the Notifications