Gold Price March 11: ಚಿನ್ನದ ಬೆಲೆಯಲ್ಲಿ ಹೊಸ ದಾಖಲೆ: ಬೆಳ್ಳಿ ಪ್ರಿಯರಿಗೆ ಅಚ್ಚರಿ, ಎಷ್ಟಿದೆ ಇಂದಿನ ಚಿನ್ನ - ಬೆಳ್ಳಿ ಬೆಲೆ
Gold Price March 11: ಅಮೆರಿಕ, ಇಸ್ರೇಲ್ ಹಾಗೂ ಇರಾನ್ ದೇಶಗಳ ನಡುವೆ ಯುದ್ಧ ಮುಂದುವರಿಯುತ್ತಿದ್ದು, ಇದರಿಂದ ಭಾರತವೂ ಸೇರಿದಂತೆ ವಿವಿಧ ರಾಷ್ಟ್ರಗಳಿಗೆ ಸಂಕಷ್ಟ ಎದುರಾಗಿದೆ. ದಿನದಿಂದ ದಿನಕ್ಕೆ ಯುದ್ಧದ ತೀವ್ರತೆ ಹೆಚ್ಚಾಗುತ್ತಿದ್ದು ಇದರಿಂದ ಚಿನ್ನ - ಬೆಳ್ಳಿ ಬೆಲೆಯು ದುಬಾರಿಯಾಗುತ್ತಿದೆ. ಇದರೊಂದಿಗೆ ಈಗಾಗಲೇ ಗ್ಯಾಸ್ ಸಿಲಿಂಡರ್ ಬೆಲೆ ಹೆಚ್ಚಾಗಿದ್ದು, ಪೆಟ್ರೋಲ್ - ಡೀಸೆಲ್ ಬೆಲೆ ಸಹ ಹೆಚ್ಚಾಗುವ ಆತಂಕ ಶುರುವಾಗಿದೆ. ಚಿನ್ನದ ಬೆಲೆಯು ನಿರಂತರವಾಗಿ ಹೆಚ್ಚಳವಾಗುತ್ತಿದೆ. ಮಾರ್ಚ್ 11ರಂದು ಸಹ ಚಿನ್ನದ ಬೆಲೆಯು ಭಾರೀ ಹೆಚ್ಚಳವಾಗಿದೆ. ಮಾರ್ಚ್ 11ರ ಚಿನ್ನ ಮತ್ತು ಬೆಳ್ಳಿಯ ನಿಖರ ಬೆಲೆ ಹಾಗೂ ಬೆಲೆ ಏರಿಕೆಗೆ ಕಾರಣ ವಿವರ ಇಲ್ಲಿದೆ.
ಇಸ್ರೇಲ್ ಹಾಗೂ ಇರಾನ್‌ನ ನಡುವೆ ಈ ಬಾರಿ ತೀವ್ರ ಸ್ವರೂಪದ ಯುದ್ಧ ಪ್ರಾರಂಭವಾಗಿದೆ. ಈ ಯುದ್ಧದಲ್ಲಿ ಅಮೆರಿಕ ನೇರವಾಗಿ ಭಾಗಿಯಾಗಿರುವುದರಿಂದಾಗಿ ಯುದ್ಧ ಸ್ವರೂಪ ತೀವ್ರಗೊಂಡಿದೆ. ಅಲ್ಲದೆ ಈ ಯುದ್ಧವು ನಾಲ್ಕು ವಾರಗಳ ಅವಧಿಗೆ ಮುಂದುವರಿಯುವ ಸಾಧ್ಯತೆ ಇದೆ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿರುವುದು ಸಹ ಚಿನ್ನದ ಬೆಲೆ ಹೆಚ್ಚಳಕ್ಕೆ ಕಾರಣವಾಗಿದೆ. ವಿವಿಧ ಕ್ಯಾರೆಟ್ ಚಿನ್ನದ ಬೆಲೆಯು ಮಾರ್ಚ್ 11ರಂದು ಭಾರೀ ಹೆಚ್ಚಳವಾಗಲಿದೆ.

18 ಕ್ಯಾರೆಟ್ ಚಿನ್ನದ ಬೆಲೆ: 18 ಕ್ಯಾರೆಟ್ ಚಿನ್ನದ ಬೆಲೆಯು 1 ಗ್ರಾಂಗೆ 12,248 ರೂಪಾಯಿ ಆಗಿದೆ. 10 ಗ್ರಾಂಗೆ 1,22,480 ರೂ. ಆಗಿದೆ. 18 ಕ್ಯಾರೆಟ್‌ನ 1 ಗ್ರಾಂ ಚಿನ್ನದ ಬೆಲೆಯು ಮಂಗಳವಾರಕ್ಕೆ ಹೋಲಿಕೆ ಮಾಡಿದರೆ, 69 ರೂಪಾಯಿ ಹಾಗೂ 10 ಗ್ರಾಂನ ಮೇಲೆ 690 ರೂಪಾಯಿ ಹೆಚ್ಚಳವಾಗಿದೆ.
22 ಕ್ಯಾರೆಟ್ ಚಿನ್ನದ ಬೆಲೆ: ಇನ್ನು 22 ಕ್ಯಾರೆಟ್ ಚಿನ್ನದ ಬೆಲೆಯಲ್ಲೂ ಭರ್ಜರಿ ಹೆಚ್ಚಳವಾಗಿದೆ. 22 ಕ್ಯಾರೆಟ್‌ನ 1 ಗ್ರಾಂ ಚಿನ್ನದ ಬೆಲೆಯು 14,970 ರೂಪಾಯಿ ಆಗಿದೆ. 10 ಗ್ರಾಂನ ಚಿನ್ನದ ಬೆಲೆಯು 1,49,700 ರೂ. ಆಗಿದೆ. ನೆನ್ನೆಗೆ ಹೋಲಿಕೆ ಮಾಡಿದರೆ 22 ಕ್ಯಾರೆಟ್ ಚಿನ್ನದ ಬೆಲೆಯು 1 ಗ್ರಾಂನ ಮೇಲೆ 85 ರೂಪಾಯಿ ಹಾಗೂ 10 ಗ್ರಾಂನ ಮೇಲೆ 850 ರೂಪಾಯಿ ಬೆಲೆ ಹೆಚ್ಚಳವಾಗಿದೆ.
24 ಕ್ಯಾರೆಟ್ ಚಿನ್ನದ ಬೆಲೆ: 24 ಕ್ಯಾರೆಟ್ ಚಿನ್ನದ ಬೆಲೆಯಲ್ಲೂ ಹೆಚ್ಚಳವಾಗಿದೆ. ಮಾರ್ಚ್ 11ರಂದು 24 ಕ್ಯಾರೆಟ್‌ನ 1 ಗ್ರಾಂ ಚಿನ್ನದ ಬೆಲೆಯು 16,331 ರೂಪಾಯಿ ಆಗಿದೆ. 10 ಗ್ರಾಂನ ಚಿನ್ನದ ಬೆಲೆಯು 1,63,310 ರೂ. ಆಗಿದೆ. ಮಂಗಳವಾರಕ್ಕೆ ಹೋಲಿಕೆ ಮಾಡಿದರೆ 1 ಗ್ರಾಂನ ಚಿನ್ನದ ಬೆಲೆಯು 93 ರೂಪಾಯಿ ಹಾಗೂ 10 ಗ್ರಾಂ ಚಿನ್ನದ ಬೆಲೆಯು 930 ರೂಪಾಯಿ ಹೆಚ್ಚಳವಾಗಿದೆ.
ಬೆಳ್ಳಿ ಬೆಲೆ ಎಷ್ಟಿದೆ ?
ಇನ್ನು ಚಿನ್ನದ ಬೆಲೆ ಹೆಚ್ಚಳವಾದರೂ ಬೆಳ್ಳಿಯ ಬೆಲೆಯಲ್ಲಿ ದೊಡ್ಡ ವ್ಯತ್ಯಾಸ ಕಂಡು ಬಂದಿಲ್ಲ. ಬೆಳ್ಳಿ ಬೆಲೆಯು ಬುಧವಾರ ಯಥಾಸ್ಥಿತಿ ಮುಂದುವರಿದಿದೆ. ಬೆಳ್ಳಿ ಬೆಲೆಯು 1 ಗ್ರಾಂಗೆ 290 ರೂಪಾಯಿ ಆಗಿದೆ. ಒಂದು ಕೆ.ಜಿ ಬೆಳ್ಳಿ ಬೆಲೆಯು 2,90,000 ರೂ. ಆಗಿದೆ.












Click it and Unblock the Notifications