ಅಷ್ಟಕ್ಕೂ ಕೊರೊನಾ ವೈರಸ್ ನಿಂದ ಭಾರತೀಯರಿಗೆ ಲಾಭ ಏನು?
ಬೆಂಗಳೂರು, ಮಾರ್ಚ್ 21; ಕೊರೊನಾ ವೈರಸ್ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ, ಮನೆ ಮನೆಯಲ್ಲಿ , ಎಲ್ಲಿ ನೋಡಿದರೂ ಚರ್ಚೆ ಚರ್ಚೆ.
ಇದರ ನಡುವೆ ಭಾರತೀಯರು ಕೊರೊನಾ ಬಗ್ಗೆ ಗೇಲಿ ಮಾಡುವುದು, ತಮಾಷೆ ಮಾಡುವುದು ಜೋಕ್ ಬಿಡುವುದು ಎಲ್ಲವೂ ನಡೆದಿದೆ.
ಕೊರೊನಾ ಬಂದು ಎಲ್ಲರಿಗೂ ಭಯ ಭೀತರನ್ನಾಗಿ ಮಾಡಿರಬಹುದು. ಆದರೆ, ಕೊರೊನಾ ಬಂದು ಏನು ಲಾಭ ಆಯಿತು ಎನ್ನುವುದನ್ನು ನಮ್ಮ ಜನ ಬಯಲಿಗೆಳದಿದ್ದಾರೆ...

1) ಪಾಸಾಗದ ಶಾಲಾ ಮಕ್ಕಳನ್ನು ಪಾಸು ಮಾಡಿತು
2)ಟ್ರಾಪಿಕ್ ಸಮಸ್ಯೆ ಬಗೆಹರಿಸಿತು
3)ಜನರಿಗೆ ಶುಚಿತ್ವ ಕಲಿಸಿತು
4)ಸರ್ಕಾರ ಕೆಲಸಮಾಡುವಂತೆ ಮಾಡಿತು
5)ಹಾಯ್ ಅನ್ನುತ್ತಿದ್ದ ಜನ ಈಗ ಚೆನ್ನಾಗಿದ್ದೀರ, ನಿಮ್ಮ ಮನೆಯವರು ಚೆನ್ನಾಗಿದ್ದಾರ, ನಿಮ್ಮ ತಂದೆ ತಾಯಿ ಚೆನ್ನಾಗಿದ್ದಾರ, ನಿಮ್ಮ ತಾತ ಅಜ್ಜಿ ಚೆನ್ನಾಗಿದ್ದಾರ ಅಂತಿದ್ದಾರೆ!
6)ಎಲ್ಲಾ ಜಾತಿ ಧರ್ಮ ಮರೆಸಿ ಇಡೀ ಪ್ರಪಂಚವೆ ಒಟ್ಟುಗೂಡುವಂತೆ ಮಾಡಿತು
7) ಗಂಡ ಹೆಂಡತಿ ಮಕ್ಕಳು ಕುಟುಂಬದವರೊಂದಿಗೆ ಮನೆಯಲ್ಲೆಕೂತು ಕೆಲಸ ಮಾಡುವಂತೆ ಮಾಡಿತು
8 ) ಪ್ರಾಣಿ ಹತ್ಯೆ ಕಡಿಮೆ ಮಾಡಿತು
9) ಭಾರತ ತ್ಯಜಿಸಿದ್ದವರೆಲ್ಲ ಇಂದು ಮರಳುವಂತೆ ಮಾಡಿತು












Click it and Unblock the Notifications