ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ವೈರಸ್ ಬಗ್ಗೆ ಜೋಕ್ ಮಾಡಿದವನಿಗೆ 5 ವರ್ಷ ಜೈಲು ಶಿಕ್ಷೆ

|
Google Oneindia Kannada News

Recommended Video

Corona Virus prank costed 5 years of jail | Corona Virus | Law | Jail | oneindia kannada

ಮಾಸ್ಕೋ, ಫೆಬ್ರವರಿ 12: ಮಾಸ್ಕೋದ ಮೆಟ್ರೋದಲ್ಲಿ ಕೊರೊನಾ ವೈರಸ್ ಬಗ್ಗೆ ಹಾಸ್ಯ ಮಾಡಿದವನು ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.

ಚೀನಾದಲ್ಲಿ ಮೃತ್ಯುಕೂಪ ನಿರ್ಮಿಸಿರುವ ಕೊರೊನಾ ವೈರಸ್ ಈಗಾಗಲೇ ಸಾವಿರಕ್ಕಿಂತ ಹೆಚ್ಚು ಮಂದಿಯನ್ನು ಬಲಿ ಪಡೆದುಕೊಂಡಿದೆ.

ಮಾರಕ ಕೊರೊನಾ ವೈರಸ್‌ಗೆ ಹೊಸ ಹೆಸರು: ಲಸಿಕೆ ಕಂಡುಹಿಡಿಯಲು ಇನ್ನೂ 18 ತಿಂಗಳು ಬೇಕುಮಾರಕ ಕೊರೊನಾ ವೈರಸ್‌ಗೆ ಹೊಸ ಹೆಸರು: ಲಸಿಕೆ ಕಂಡುಹಿಡಿಯಲು ಇನ್ನೂ 18 ತಿಂಗಳು ಬೇಕು

ವ್ಯಕ್ತಿಯೊಬ್ಬ ಕೊರೊನಾ ಹೆಸರಲ್ಲಿ ಜೋಕ್ಸ್​ ಮಾಡಲು ಹೋಗಿ ಸಾರ್ವಜನಿಕರಲ್ಲಿ ಭಯ ಹುಟ್ಟಿಸಿದ ಆರೋಪದ ಮೇಲೆ ಪೊಲೀಸರಿಂದ ಬಂಧನಕ್ಕೊಳಗಾಗಿದ್ದಾನೆ.

Mans Coronavirus Joke In Metro He Faces 5 Years In Jail

ಬಂಧಿತನನ್ನು ಕಜಕಿಸ್ತಾನ ಮೂಲದ ಕರೊಮಟುಲ್ಲೊ ಝಬೊರೊವ್​ ಎಂದು ಗುರುತಿಸಲಾಗಿದ್ದು, ಸದ್ಯ ಐದು ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಿದ್ದಾನೆ ಎಂದು ರಷ್ಯಾ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಫೆಬ್ರವರಿ 8 ರಂದು ರಷ್ಯಾ ಪೊಲೀಸರು ಝಬೊರೊವ್ ಎಂಬಾತನನ್ನು ಬಂಧಿಸಿದ್ದಾರೆ. ಸಾರ್ವಜನಿಕರಿಗೆ ಭಯ ಉಂಟುಮಾಡಿದ ಹಿನ್ನೆಲೆಯಲ್ಲಿ ಆತನ ಮೇಲೆ ರಷ್ಯಾ ಪೊಲೀಸರು ಗೂಂಡಾಗಿರಿ ಪ್ರಕರಣವನ್ನು ದಾಖಲಿಸಿದ್ದು, ಅದರನ್ವಯ ಝಬೊರೊವ್​ 5 ವರ್ಷ ರಷ್ಯಾದಲ್ಲಿ ಜೈಲುವಾಸ ಅನುಭವಿಸಬೇಕಿದೆ.

ವೈರಲ್​ ಆಗಿರುವ ವಿಡಿಯೋದಲ್ಲಿ ಮಾಸ್ಕ್​ ಧರಿಸಿರುವ ಝಬೊರೊವ್ ಮೆಟ್ರೋ ರೈಲೊಂದರಲ್ಲಿ ಪ್ರಯಾಣಿಕರ ಬಳಿ ಬರುತ್ತಿದ್ದಂತೆ ಕೆಳಗೆ ಬೀಳುತ್ತಾನೆ. ನಂತರ ಆತನ ಸ್ನೇಹಿತರು ಪ್ರಯಾಣಿಕರಿಗೆ ಅವನಿಗೆ ಕೊರೊನಾ ವೈರಸ್​ ಸೋಂಕು ಇದೆ ಎಂದು ಕೂಗಿ ಹೇಳುತ್ತಾರೆ.

ಇದರಿಂದ ಭಯಗೊಳ್ಳುವ ಪ್ರಯಾಣಿಕರು ಚೆಲ್ಲಾಪಿಲ್ಲಿಯಾಗಿ ಓಡುತ್ತಾರೆ.ಈ ವಿಡಿಯೋವನ್ನು ಫೆ.2ರಂದು ಝಬೊರೊವ್ ತನ್ನ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಶೇರ್ ಮಾಡಿದ್ದ.

ಇದೊಂದು ಜೋಕ್ಸ್​ ಅಥವಾ ಪ್ರ್ಯಾಂಕ್ ಎಂದು ಬರೆದುಕೊಂಡಿದ್ದ. ಸದ್ಯ ಅದನ್ನು ಈಗ ತೆಗೆದುಹಾಕಲಾಗಿದೆ. ಝಬೊರೊವ್ ಬಂಧನದ ಬಳಿಕ ಆತನ ಆಪ್ತರಿಬ್ಬರನ್ನು ರಷ್ಯಾ ಅಧಿಕಾರಿಗಳು ಪತ್ತೆಹಚ್ಚಿದ್ದು, ಅವರನ್ನು ರಷ್ಯಾ ತ್ಯಜಿಸುವಂತೆ ರಷ್ಯಾ ಸಚಿವಾಲಯ ಆದೇಶಿಸಿದೆ.

English summary
A footage showing a young man wearing a mask and collapsing on the Moscow Metro went viral on social media recently. In the video
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X