• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಕ್ಕು ನಲಿಯಿರಿ: ಮೊದಲೇ ಕುಡಿದು ಬಚಾವಾದೆ, ಇಲ್ಲದಿದ್ದರೆ...!

|
Google Oneindia Kannada News

ದೇವರು ದೊಡ್ಡವನು

ನಾಳೆ ಹೇಗಿದ್ದರೂ ರಜೆ.. ಸರಿ ಅಂತ ಒಂದು ಫುಲ್ ಬಾಟಲ್ ತಗೊಂಡು ಸ್ಕೂಟಿಯಲ್ಲಿ ಮನೆಗೆ ಹೊರಟೆ. ಸ್ವಲ್ಪ ದೂರ ಹೋಗುವಷ್ಟಲ್ಲಿ ಒಂದು ಆಲೋಚನೆ ಬಂತು, ಅಕಸ್ಮಾತ್ ಈ ಸ್ಕೂಟಿ ಏನಾದರೂ ಜಾರಿ ಕೆಳಗೆ ಬಿದ್ದರೆ, ಬಾಟಲ್ ಒಡೆದು ಹೋದರೆ ಮನೆಗೆ ಹೋಗಿ ಏನು ಕುಡಿಯುವುದು?

ಯೋಜನೆ ಮಾಡಿ ಸ್ಕೂಟಿ ಸೈಡ್ ಗೆ ನಿಲ್ಲಿಸಿ ಬಾಟ್ಲಿ ಖಾಲಿ ಮಾಡಿದೆ. ನೀವು ನಂಬಲ್ಲ ನನ್ನ ಯೋಚನೆ ಸರಿಯಾಗಿತ್ತು, ಮನೆಗೆ ಹೋಗುವಷ್ಟರಲ್ಲಿ ಸ್ಕೂಟಿ ನಾಲ್ಕು ಸಲ ಬಿದ್ದು ಹೊರಳಾಡಿತ್ತು. ಯಪ್ಪಾ ಮೊದಲೇ ಕುಡಿದು ಮುಗಿಸಿದ್ದಕ್ಕೆ ಬಚಾವಾದೆ. ದೇವರು ದೊಡ್ಡವನು!

***

ಮಗ ಗಲಾಟೆ ಮಾಡ್ತಾನೆ

ಶಿಕ್ಷಕಿ: ನಿಮ್ಮ ಮಗ ಶಾಲೆಯಲ್ಲಿ ತುಂಬಾ ಗಲಾಟೆ ಮಾಡ್ತಾನೆ. ನಾಳೆ ಶಾಲೆಗೆ ಬನ್ನಿ

ತಂದೆ: ಅವನು ಮನೆಯಲ್ಲಿಯೂ ತುಂಬಾ ಗಲಾಟೆ ಮಾಡ್ತಾನೆ ಮೇಡಂ.. ಹಾಗಂತ ನಾನೇದ್ರೂ ನಿಮ್ಮನ್ನ ಮನೆಗೆ ಬನ್ನಿ ಅಂತಾ ಯಾವತ್ತಾದ್ರೂ ಕರೆದಿದ್ದೇನಾ?.. ಹೇಳಿ!!

ಟೀಚರ್: ಆರೋಗ್ಯ ಸರಿಯಿಲ್ಲ ಎಂದು ಹತ್ತು ದಿನ ರಜೆ ಹಾಕಿದ್ಯಲ್ಲ, ಬರುವಾಗ ಡಾಕ್ಟರ್ ಸರ್ಟಿಫಿಕೇಟ್ ತಾ ಅಂದಿದ್ದೆ, ತಂದ್ಯಾ...?

ಟೀಚರ್: ಆರೋಗ್ಯ ಸರಿಯಿಲ್ಲ ಎಂದು ಹತ್ತು ದಿನ ರಜೆ ಹಾಕಿದ್ಯಲ್ಲ, ಬರುವಾಗ ಡಾಕ್ಟರ್ ಸರ್ಟಿಫಿಕೇಟ್ ತಾ ಅಂದಿದ್ದೆ, ತಂದ್ಯಾ...?

ವಿದ್ಯಾರ್ಥಿ: ನಾನು ಎಷ್ಟೇ ಕೇಳಿದರೂ ಅವರು ಕೊಡ್ಲಿಲ್ಲ. ಅದು ಅವ್ರು ಕಷ್ಟಪಟ್ಟು ಓದಿ ತೆಗೆದುಕೊಂಡಿರುವುದಂತೆ, ಕೊಡೊಲ್ಲ ಹೋಗೋ ಅಂದ್ರು ಟೀಚರ್!

ಇದೇ ಖುಷಿಗೆ ಪಾಯಸ ಮಾಡುತ್ತೇನೆ

ಇದೇ ಖುಷಿಗೆ ಪಾಯಸ ಮಾಡುತ್ತೇನೆ

ಮೂರ್ ದಿನ ಆಗಿತ್ತು. ಹೆಂಡತಿ ಗಂಡನ ಜೊತೆ ಠೂ ಬಿಟ್ಟು... ಎಷ್ಟೂಂತ ಬಾಯಿ ಮುಚ್ಕೊಂಡಿರಕ್ಕಾಗುತ್ತೆ ಹೆಂಡತಿ. ಬಾಯಿ ನೋಯಕ್ಕೆ ಶುರುವಾಯ್ತು. ಕಡೆಗೆ ಹೆಂಡತಿ ಅಂದ್ಲು:

"ಏನೋ ಗಂಡ ಹೆಂಡತಿ ಅಂದ್ರೆ ಒಂದ್ ಮಾತು ಬರುತ್ತೆ ಹೋಗುತ್ತೆ. ಅದಕ್ಕೇ ಇಷ್ಟ್ ದಿನ ಬಾಯ್ಮುಚ್ಕೊಂಡಿರ್ಬೇಕಾ? ಇವಾಗ ನಾನು ಹತ್ತರವರೆಗೂ ಎಣಿಸ್ತೀನಿ. ಮಾತಾಡಿಲ್ಲಾಂದ್ರೆ ನಮ್ಮಮ್ಮನ ಮನೆಗೆ ಹೋಗ್ತೀನಿ ಅಷ್ಟೇ"

ಹತ್ ನಿಮಿಷ ಆದ್ರೂ ಗಂಡ ಕಿಮಕ್ಕನ್ಲಿಲ್ಲ.

ಹೆಂಡತಿ ಎಣಿಸೋಕೆ ಶುರು ಹಚ್ಕೊಂಡ್ಲು.

ಒನ್...

ಟೂ...

ಥ್ರೀ...

ಉಹೂಂ. ಗಂಡ ಗಪ್ ಚುಪ್

ಹೆಂಡತಿ ಹತ್ತು ನಿಮಿಷ ಬಿಟ್ಟು...

ಫೋರ್..

ಫೈವ್...

ಗಂಡ... ಉಹೂಂ. ಬಾಯಿ ಬಿಡಲಿಲ್ಲ.

ಸಿಕ್ಸ್...

ಸೆವೆನ್..

(ಗಂಡ ಒಳಗೊಳಗೇ ಹಿಗ್ಗಿ ಹೀರೇಕಾಯಿ ಆಗಿದ್ದರೂ ತೋರಿಸಿಕೊಳ್ಳಲಿಲ್ಲ).

ಕ್ಲೈಮ್ಯಾಕ್ಸು....

ಏಯ್ಟ್

ಅಂದ್ಲು ಹೆಂಡತಿ.

ಉಹೂಂ.. ಗಂಡ ಚುಪ್ ಚಾಪ್.

ನೈನ್.. (ಗಂಡಂಗೆ ಎದ್ದು ಕುಣಿಯೋಷ್ಟು ಖುಷಿ).

ಹೆಂಡತಿ ಏನ್ಮಾಡಿದ್ಲು ಅಂದ್ರೆ... ಬಾಯಿ ಬಿಡಲಿಲ್ಲ. ಹೆಂಡತಿ ಈಗ ಫುಲ್ ಸೈಲೆಂಟು. ಗಂಡಂಗೆ ಟೆನ್ಷನ್ನಾಗೋಯ್ತು. ಹತ್ತು ನಿಮಿಷ ಕಾದು ತಡೆಯೋಕಾಗ್ದೆ,

" ಲೇಯ್.. ಯಾಕೆ ನಿಲ್ಲಿಸ್ದೆ?? ಎಣಿಸೂ.. ಟೆನ್ ಅಂತ್ಹೇಳು" ಅಂದ.

ಹೆಂಡತಿ ಅಂದ್ಲು.

"ಅಬ್ಬಾ!! ದೇವ್ರು ದೊಡ್ಡೋನು ಕಂಡ್ರೀ.... ಬಾಯಿ ಬಿಟ್ರಿ. ಇಲ್ದಿದ್ದರೆ ನಮ್ಮಮ್ಮನ ಮನೆಗೆ ಹೋಗ್ತಿದ್ದೆ. ಪಾಪ ನಿಮಗೆಷ್ಟು ತೊಂದರೆ ಆಗ್ತಿತ್ತು!!! ತಾಳಿ ಇದೇ ಖುಷೀಲಿ ಪಾಯಸ ಮಾಡ್ತೀನಿ'' ಅಂತ ಕಿಚನ್ನಿಗೆ ಹೋದ್ಲು...

ಗಂಡ ಈ ಘಟನೆಯನ್ನು ತನ್ನ ಆತ್ಮಚರಿತ್ರೆಯಲ್ಲಿ "ತಾಳ್ಮೆ ಕಳೆದುಕೊಳ್ಳುವುದರಿಂದ ಆಗುವ ಅನಾಹುತಗಳು" ಅಧ್ಯಾಯದಲ್ಲಿ ಸೇರಿಸಲಿದ್ದಾನಂತೆ.

ಸಂತೂರ್ ಸೋಪ್ ಪುರುಷರೂ ಹಾಕ್ತಾರೆ!

ಸಂತೂರ್ ಸೋಪ್ ಪುರುಷರೂ ಹಾಕ್ತಾರೆ!

ಅದು ಕಾಲೇಜಿನ ಮೊದಲ ದಿನ.. ಯುವತಿ, ಯುವಕರಿಂದ ಕಾಲೇಜ್ ಕ್ಯಾಂಪಸ್ ತುಂಬಿ ತುಳುಕಾಡುತ್ತಿತ್ತು. ಸುತ್ತಮುತ್ತಲಿನ ವಾತಾವರಣ ಉಲ್ಲಾಸ, ಉತ್ಸಾಹದಿಂದ ಕಿಲಕಿಲ ನಗುತ್ತಿತ್ತು...

ಆಫೀಸ್ ರೂಮ್ ಕಡೆ ಹೋಗ್ತಾ ಇದ್ದೆ. ಚಂದದ ಹುಡುಗಿಯೊಬ್ಬಳು ನನ್ನ ಬಳಿ ಬಂದು, "ಹಾಯ್..! ನಾನು ಹಂಸಿಕಾ.. ಫಸ್ಟ್ ಇಯರ್, ಮತ್ತೆ ನೀವು???!!"

ಒಂದು ಕ್ಷಣ ಏನೆನ್ನಬೇಕೋ ತಿಳಿಯಲಿಲ್ಲ. ಸ್ವಲ್ಪ ಸುಧಾರಿಸಿಕೊಂಡ ಮೇಲೆ, "ನಾನು ನನ್ನ ಮಗಳ ಫೀಸ್ ಕಟ್ಟಲು ಬಂದಿದೀನಮ್ಮಾ..!!'' ಎಂದೆ.

ಸಂತೂರ್ ಸೋಪಿನಿಂದ ಅಮ್ಮ ಮಾತ್ರ ಅಲ್ಲ, ಉಳಿ ಸಾಬೂನಿಂದ ಆಗಾಗ ಅಪ್ಪ ಕೂಡಾ ಸ್ನಾನ ಮಾಡ್ತಾರೆ!

ಪುರುಷ ಎಂದರೆ ಸಹನ ಶಕ್ತಿ

ಪುರುಷ ಎಂದರೆ ಸಹನ ಶಕ್ತಿ

ಸ್ತ್ರೀ ಎಂದರೆ ಶಕ್ತಿ, ಪುರುಷ ಎಂದರೆ ಸಹನ ಶಕ್ತಿ

ಉದಾಹರಣೆ: ಬಸ್ಸಿನಲ್ಲಿ ಪ್ರಯಾಣಿಸುವಾಗ ಪಕ್ಕದಲ್ಲಿ ಕುಳಿತ ಹುಡುಗಿಯ ಭುಜಕ್ಕೆ ಒರಗಿ ನಿದ್ರಿಸಲು ಶುರು ಮಾಡಿದರೆ ಅವಳು ಎದ್ದು ಕೆನ್ನೆಗೆ ಒಂದು ಏಟು ಕೊಡುತ್ತಾಳೆ. ಇದೇ ಶಕ್ತಿ.

ಆದರೆ,

ಒಂದು ಹುಡುಗಿ ಒಬ್ಬ ಹುಡುಗನ ಭುಜಕ್ಕೆ ಒರಗಿ ನಿದ್ರಿಸಲು ಶುರು ಮಾಡಿದರೆ ಆ ಹುಡುಗ ಮಂಡ್ಯದಲ್ಲಿ ಇಳಿಯುವವನಿದ್ದರೆ, ಮೈಸೂರಿನ ವರೆಗೆ ಅವಳ ನಿದ್ರೆಗೆ ತೊಂದರೆ ಆಗಬಾರದೆಂದು ಹಾಗೆಯೇ ಪ್ರಯಾಣಿಸುತ್ತಾನೆ..! ಇದೇ ಸಹನಶಕ್ತಿ

ಮೇಡಂಗೆ ಕುಲ್ಫಿ ಬೇಕಂತೆ

ಮೇಡಂಗೆ ಕುಲ್ಫಿ ಬೇಕಂತೆ

ಮಗ: ಅಪ್ಪಾ, ನಮ್ಮ ಮೇಡಂಗೆ ನಾಳೆ ಕುಲ್ಫಿ ಬೇಕಂತೆ...

ಅಪ್ಪ: ಕುಲ್ಫೀನಾ? ಯಾಕೆ ಬೇಕಂತೋ? ಆಶ್ಚರ್ಯ ಆಗ್ತಿದೆಯಲ್ಲ? ನಾಳೆ ಯಾಕೆ, ಈಗಲೇ ಕೊಡಿಸೋಣ ಬಾ..


ಮಗನ ಜತೆಗೆ ಅಪ್ಪ ಶಾಲೆಗೆ ಹೋದರು..

ಅಪ್ಪ: ಏನ್ರೀ ಮೇಡಂ ಕುಲ್ಫಿ ತಿನ್ಬೇಕು ಅನಿಸಿದೆಯಾ? ನನ್ನ ಮಗ ಹೇಳಿದ...

ಮೇಡಂ: ಕರ್ಮ ರೀ! ನಿಮ್ಮ ಮಗನಿಗೆ 'S' ಅಕ್ಷರ ಹೇಳೋಕೇ ಬರೊಲ್ಲ. ಅದು ಕುಲ್ಫೀ ಅಲ್ಲ, ಸ್ಕೂಲ್ ಫೀ...!

English summary
Jokes for the day: Some Whatsapp and Social media's popular jokes in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X