ಈ ಕ್ಷಣದ ಹಾಸ್ಯ: ಹುಡುಗ-ಹುಡುಗಿ, ಗಂಡ- ಹೆಂಡತಿ ಜೋಕ್ಸ್
ಈ ಕ್ಷಣದ ಹಾಸ್ಯ: ಹುಡುಗ-ಹುಡುಗಿ, ಗಂಡ- ಹೆಂಡತಿ ಜೋಕ್ಸ್
ಹೋಟೆಲ್‌ನಲ್ಲಿ ಕುಳಿತ ಯುವ ಪ್ರೇಮಿಗಳ ನಡುವಿನ ಸಂಭಾಷಣೆ ಹೀಗಿತ್ತು:
ಹುಡುಗಿ: ಏನಾದ್ರೂ ಹೇಳು.
ಹುಡುಗ: ಐ ಲವ್ ಯೂ!
ಹುಡುಗಿ: ನಾನು ನಿನ್ನ ಲವ್ ಮಾಡಲ್ಲ
ಹುಡುಗ: ಯಾಕೆ, ಇನ್ನೊಮ್ಮೆ ಯೋಚಿಸು
ಹುಡುಗಿ: ಯೋಚಿಸೋಕೆ ಏನಿಲ್ಲ, ಸಾಧ್ಯವಿಲ್ಲ.
ಹುಡುಗ: ವೇಟರ್, 2 ಸೆಪರೇಟ್ ಬಿಲ್ ಕೊಡಿ, ಇವರು ಯಾರು ಗೊತ್ತಿಲ್ಲ.
ಹುಡುಗಿ: ಹೇ.. ನೀನೇ ಗೆದ್ದೆ, ಐ ಲವ್ ಯೂ 2.. ಸೆಪರೇಟ್ ಎಲ್ಲ ಬೇಡ.

ಗುಂಡ ಆಫೀಸಿನಿಂದ ಮನೆಗೆ ಬರುವಾಗ ಹೊಸ ಕನ್ನಡಕ ತಗೊಂಡು ಬಂದ. ಆದರೆ, ಜೇಬಲ್ಲಿ ಇಡ್ಕೊಂಡಿದ್ದ.
ಆದರೆ, ಮನೆಯಲ್ಲಿ ಹೆಂಡತಿ ಕಂಡ ಕೂಡಲೇ ಜೇಬಿನಿಂದ ಕನ್ನಡಕ ತೆಗಿದ್ದಿದ್ದ. ಇದನ್ನು ಗಮನಿಸಿದ ಹೆಂಡತಿ ಕೇಳಿದಳು
ಹೆಂಡತಿ: ಅದೇನ್ರಿ, ಯಾವಾಗ ನಾನು ನಿಮ್ಮೆರುರಿಗೆ ಬರ್ತಿನೋ ಆಗೆಲ್ಲ, ಕನ್ನಡಕ ಹಾಕ್ಕೊತ್ತಿರಾ?
ಗುಂಡ: ಡಾಕ್ಟ್ರು ಹೇಳಿದ್ದಾರೆ, ಯಾವಾಗ ತಲೆನೋವು ಕಾಣಿಸಿಕೊಳ್ಳುತ್ತೋ, ಆಗೆಲ್ಲ ಕನ್ನಡಕ ಹಾಕಿಕೊಳ್ಳಿ ಅಂತಾ!
***
ಗುಂಡನ ಮನೆಗೆ ಅವನ ಹೆಂಡತಿ ಕಡೆಯ ಸಂಬಂಧಿಕರು ಬಂದರು. ಮನೆಗೆ ಬಂದ ಅತಿಥಿಗಳಿಗೆ ಉಪಚಾರ ಮಾಡಲು ಹೆಂಡತಿ ಮುಂದಾದರೆ, ಅವರನ್ನು ಹೇಗೆ ಸಾಗಿ ಹಾಕುವುದು ಎಂದು ಗುಂಡ ಯೋಚಿಸುತ್ತಿದ್ದ. ಆಗ..
ಹೆಂಡತಿ: ರೀ.. ಅತಿಥಿಗಳಿಗೆ ಹೊರಗಿನಿಂದ ಏನಾದರೂ ತೆಗೆದುಕೊಂಡು ಬನ್ನಿ
ಗುಂಡ ಹೊರಗೆ ಧಾವಿಸಿ, ಒಂದು ಟ್ಯಾಕ್ಸಿ ತಂದು ಮನೆ ಮುಂದೆ ನಿಲ್ಲಿಸಿ.. ಸರಿ ಕಳಿಸು ಎಲ್ಲರೂ ಬೇಗ ಅನ್ನೋದೇ!
***
ಲವ್ ಫೆಲ್ಯೂರ್ ಎಂದರೇನು? ಕುಡುಕ ಗುಂಡನಿಗೆ ಅರ್ಧರಾತ್ರಿ ಜ್ಞಾನೋದಯವಾದಾಗ ಹೊಳೆದ ಸಾಲುಗಳಿವು...
ಲವ್ ಫೆಲ್ಯೂರ್ ಅಂದರೆ,
ಅವಳದೇ ನೆನಪಲ್ಲಿ ನಡುರಾತ್ರಿ 3 ಗಂಟೆಗೆ ಎದ್ದು
ಸಿಗರೇಟ್ ಸುಡುವುದಾ?
ಅವಳು ಸಿಗುವುದಿಲ್ಲ ಎಂದು ಗೊತ್ತಿದ್ದರೂ
ಸಿಗುವಳೆಂಬ ಆಸೆಯಲ್ಲಿ ಬದುಕುವುದಾ?
ನಾನೇನು ಮೋಸ ಮಾಡಿದೆ ದೇವ್ರೇ
ನನಗೆ ಯಾಕೆ ಹೀಗೆ ಮಾಡಿದೆ ವಿನಾಕಾರಣ ಎಂದು ಕೊರಗುವುದಾ
ಪದೇ ಪದೇ ಮುಂಗಾರು ಮಳೆ ಥರಾ ಸಿನ್ಮಾ ನೋಡೋದಾ
ಉತ್ತರ ದೊರಕದ ಈ ಪ್ರಶ್ನೆಗೆ ಪದೇ ಪದೇ ನನ್ನಲಿಯೇ ಪ್ರಶ್ನಿಸೋದಾ...












Click it and Unblock the Notifications