
ಚುಟುಕು ಹಾಸ್ಯ: ಚಿಂಟು, ಪಪ್ಪು, ಗುಂಡ ಉತ್ತರಕ್ಕೆ ಬೆಪ್ಪಾದ ಟೀಚರ್!
ನಿಮ್ಮ ಮಗ ಶಾಲೆಯಲ್ಲಿ ತುಂಬಾ ಗಲಾಟೆ ಮಾಡ್ತಾನೆ
ನಾಳೆ ಶಾಲೆಗೆ ಬನ್ನಿ
ವಿದ್ಯಾರ್ಥಿಯ ಅಪ್ಪ : ಅವನು ಮನೆಯಲ್ಲಿಯೂ ತುಂಬಾ ಗಲಾಟೆ ಮಾಡ್ತಾನೆ ಮೇಡಂ.. ಹಾಗಂತ ನಾನೇದ್ರೂ ನಿಮ್ಮನ್ನ ಮನೆಗೆ ಬನ್ನಿ ಅಂತಾ ಯಾವತ್ತಾದ್ರೂ ಕರೆದಿದ್ದೇನಾ?.. ಹೇಳಿ!!
😀😂
++++
ಟೀಚರ್ : ' You spilled Coffee over the table. '
Translate this sentence in your mother tongue.
ಚಿಂಟು : Mother tongue means the language my mom use, right mam?
ಟೀಚರ್ : Right.
ಚಿಂಟು : ನಿನ್ ಕೈ ಮುರ್ದ್ ಹೋಗಿದ್ಯೇನೋ ನಾಲಾಯಕ್? ಯಾವತ್ತಾದ್ರೂ ಒಂದ್ ಕೆಲ್ಸ ನೆಟ್ಟಗ್ ಮಾಡಿದ್ದೀಯಾ? ಎಲ್ಲಾ ನಿಮ್ಮಪ್ಪನ್ ಮೇಲೇ ಹೋಗಿದ್ದಿಯಾ. ಒಂದಾದ್ರೂ ನನ್ ಬುದ್ದಿ ಕಲ್ತಿಲ್ಲ. ಈಗ ಯಾವನ್ ಬಂದು ಇದನ್ನ ಕ್ಲೀನ್ ಮಾಡ್ತಾನೆ? ನಿಮ್ಮಪ್ಪ ಯಾವಾಗ ಬರ್ತಾರೋ ಬರ್ಲಿ. ಅವ್ರ್ ಕೈಲೇ ವಾಶ್ ಮಾಡ್ಸ್‌ಕೋತೀನಿ...
ಟೀಚರ್ : 😳😳😳😳
++++
ಟೀಚರ್ : ನಾವು ಬದುಕ ಬೇಕಾದರೆ ಆಮ್ಲಜನಕ ತುಂಬಾ ಮುಖ್ಯ . ಇದನ್ನು 4 ಶತಮಾನಗಳ ಮುಂಚೆ ಕಂಡುಹಿಡಿಯಲಾಯಿತು .
ಪಪ್ಪು : ಸದ್ಯ , ನಾನು ಆ ಕಾಲದಲ್ಲಿ ಹುಟ್ಟಲಿಲ್ಲ . ಇಲ್ಲಾಂದರೆ ಸತ್ತು ಹೋಗ್ತಾ ಇದ್ದೆ .
😂😂😂😂😂
***
ಟೀಚರ್ : ಎಲೆಕ್ಟ್ರಿಸಿಟಿ ಇಲ್ಲದೆ ಹೋಗಿದ್ರೆ , ಏನಾಗುತ್ತಿತ್ತು ?
ಪಪ್ಪು : ರಾತ್ರಿಯಲ್ಲಿ ಕ್ಯಾಂಡಲ್ ಹಿಡ್ಕೊಂಡು ಟಿವಿ ನೋಡಬೇಕಾಗಿತ್ತು😂😂😂😂
***
ಟೀಚರ್ : ನಿಮ್ಮ ತಂದೆಯ ಹೆಸರೇನು ಮಗು ?
ಸ್ಟೂಡೆಂಟ್ : ಡ್ಯಾಡಿ
***
ಟೀಚರ್ : 1 ಬಾಳೆ ಹಣ್ಣನ್ನು 5 ಮಂದಿ ಹೇಗೆ ತಿಂತಾರೆ ?
ಸ್ಟೂಡೆಂಟ್ : ಬಾಯಿಂದ
+++
ಟೀಚರ : ಸಾಯುವಾಗ ಬಾಯಲ್ಲಿ ಏನು ಹಾಕಬೇಕು.
ಗು0ಡ : Birla Cement ಮೇಡಮ್.
ಟೀಚರ : ಯಾಕೆ.
ಗು0ಡ : ಇದರಲ್ಲೀ ಜೀವ ಇದೆ.