SIR: ಜೂನ್ 30ರಿಂದ ಮನೆ ಬಾಗಿಲಿಗೆ ಚುನಾವಣಾ ಅಧಿಕಾರಿಗಳು: ಮತದಾರರ ಪಟ್ಟಿಗೆ ಬಿಗ್ ಅಪ್‌ಡೇಟ್

ಬೆಂಗಳೂರು: ಆಡಳಿತಾರೂಢ ಕಾಂಗ್ರೆಸ್ ಪಕ್ಷದ ನಾಯಕರ ವಿರೋಧದನ ರಾಜ್ಯದಲ್ಲಿ ಮತದಾರರು ವಿಶೇಷ ಸಮಗ್ರ ಪರಿಷ್ಕರಣೆ (SIR) ನಡೆಯಲಿದೆ. ಅರ್ಹ ಮತದಾರರು ಚುನಾವಣಾ ಪ್ರಕ್ರಿಯೆಯಿಂದ ವಂಚಿತರಾಗಬಾರದು ಮತ್ತು ಯಾವುದೇ ಅನರ್ಹ ಹೆಸರುಗಳು ಮತದಾರರ ಪಟ್ಟಿಯಲ್ಲಿ ಉಳಿಯಬಾರದು ಎಂಬ ಉದ್ದೇಶದಿಂದ ಭಾರತೀಯ ಚುನಾವಣಾ ಆಯೋಗವು ಮತದಾರರ ಪಟ್ಟಿ ಸಮಗ್ರ ಪರಿಷ್ಕರಣೆ ನಡೆಸುತ್ತಿದೆ. ಈ ಪ್ರಕ್ರಿಯೆಯ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ.

ದೇಶದ ವಿವಿಧ ಹಂತಗಳಲ್ಲಿ ನಡೆಯುತ್ತಿರುವ ಈ ಬೃಹತ್ ಪ್ರಕ್ರಿಯೆಯಲ್ಲಿ ಕರ್ನಾಟಕವನ್ನು ಹಂತ-3 ಅಡಿಯಲ್ಲಿ ಸೇರಿಸಲಾಗಿದೆ. ನಿಯಮಗಡಿ ಮತದಾರರ ಪಟ್ಟಿಯನ್ನು ಅತ್ಯಂತ ಪಾರದರ್ಶಕವಾಗಿ ನವೀಕರಿಸಲು ಚುನಾವಣಾ ಆಯೋಗವು ಸಕಲ ಸಿದ್ಧತೆ ಮಾಡಿಕೊಂಡಿದೆ. ಈಗಾಗಲೇ ಮತದಾರರ ನೋಂದಣಾಧಿಕಾರಿಗಳಿಗೆ, ಸಹಾಯಕ ಮತದಾರರ ನೋಂದಣಾಧಿಕಾರಿಗಳಿಗೆ, ಬಿಎಲ್‌ಓ ಮೇಲುಸ್ತುವಾರಿ, ಇನ್ನಿತರ ಅಗತ್ಯ ಸಿಬ್ಬಂದಿಗೆ ತರಬೇತಿ ನೀಡಲಾಗಿದೆ ಎಂದು ಬೆಂಗಳೂರು ಅಪ ಜಿಲ್ಲಾ ಚುನಾವಣಾಧಿಕಾರಿಗಳು ಆದ ದಕ್ಷಿಣ ನಗರ ಪಾಲಿಕೆ ಆಯುಕ್ತ ರಮೇಶ್ ತಿಳಿಸಿದರು.

Special Voter Roll Revision

ಮನೆ-ಮನೆ ಭೇಟಿ ಮೂಲಕ ಮತದಾರರ ಸಮೀಕ್ಷೆ

ಮತದಾರರ ಪಟ್ಟಿಯ ಪರಿಷ್ಕರಣೆಗಾಗಿ ಬೂತ್ ಮಟ್ಟದ ಅಧಿಕಾರಿಗಳು (BLOs) ಪ್ರತಿಯೊಬ್ಬರ ಮನೆ-ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ. ಈ ವೇಳೆ ಅರ್ಹ ಮತದಾರರಿಗೆ ಮತದಾರರ ಪಟ್ಟಿಗೆ ಸೇರ್ಪಡೆಗೊಳಿಸಲು ಅರ್ಜಿ ವಿತರಿಸಿ ಭರ್ತಿ ಮಾಡಿದ ಅರ್ಜಿಗಳನ್ನು ಪಡೆಯುತ್ತಾರೆ. ಅರ್ಹ ಹೊಸ ಮತದಾರರನ್ನು ಪಟ್ಟಿಗೆ ಸೇರಿಸುವುದು, ದ್ವಿಪ್ರತಿ, ವರ್ಗಾವಣೆಗೊಂಡಿರುವ, ಮರಣ ಹೊಂದಿರುವ ಹಾಗೂ ಅನರ್ಹ ಮತದಾರರ ಹೆಸರುಗಳನ್ನು ಪಟ್ಟಿಯಿಂದ ತೆಗೆದು ಹಾಕುವುದು. ತಪ್ಪು ವಿವರಗಳನ್ನು ಸರಿಪಡಿಸಲು ನಿಗದಿತ ಅರ್ಜಿ ನಮೂನೆಗಳನ್ನು ವಿತರಿಸಿ, ಭರ್ತಿ ಮಾಡಿದ ಅರ್ಜಿಗಳನ್ನು ಸ್ಥಳದಲ್ಲೇ ಸಂಗ್ರಹಿಸಲು ನಿರ್ದೇಶನ ನೀಡಲಾಗಿದೆ.

 ಸಿಎಂ ಗದ್ದುಗೆ ಬೆನ್ನಲ್ಲೇ ಡಿಕೆಶಿಗೆ ಹೊಸ ತಲೆನೋವು: 'ಬೆಂಗಳೂರು ಅಭಿವೃದ್ಧಿ' ಖಾತೆ ಮೇಲೆ ಸ್ವಪಕ್ಷದವರದ್ದೇ ಕಣ್ಣು!
ಸಿಎಂ ಗದ್ದುಗೆ ಬೆನ್ನಲ್ಲೇ ಡಿಕೆಶಿಗೆ ಹೊಸ ತಲೆನೋವು: 'ಬೆಂಗಳೂರು ಅಭಿವೃದ್ಧಿ' ಖಾತೆ ಮೇಲೆ ಸ್ವಪಕ್ಷದವರದ್ದೇ ಕಣ್ಣು!

SIR ವೇಳಾಪಟ್ಟಿ ಹೀಗಿದೆ

* ಬಿ.ಎಲ್.ಓ ಗಳ ಮನೆ-ಮನೆಗೆ ಭೇಟಿ: ಜೂನ್ 30 ರಿಂದ ಜುಲೈ 29 ರವರೆಗೆ

* ಕರಡು ಮತದಾರರ ಪ್ರಕಟ ದಿನ : 2026 ಆಗಸ್ಟ್ 05

* ಹಕ್ಕು ಮತ್ತು ಆಕ್ಷೇಪಣೆ ಸಲ್ಲಿಕೆ ದಿನ : 2026 ಆಗಸ್ಟ್ 05ರಿಂದ ಸೆಪ್ಟೆಂಬರ್ 04

* ಆಕ್ಷೇಪಣೆ ಇತ್ಯರ್ಥದ ಕಡೆಯ ದಿನ: : 2026 ಅಕ್ಟೋಬರ್ 03

* ಅಂತಿಮ ಮತದಾರರ ಪಟ್ಟಿ ಬಿಡುಗಡೆ: 2026 ಅಕ್ಟೋಬರ್ 07

ಬೆಂಗಳೂರು ದಕ್ಷಿಣ ಅಪರ ಜಿಲ್ಲಾ ಚುನಾವಣಾಧಿಕಾರಿಗಳ ವ್ಯಾಪ್ತಿಯಲ್ಲಿ ವಿಧಾನಸಭಾ ಕ್ಷೇತ್ರವಾರು ಪರಿಷ್ಕರಣೆ ವಿವರ ಮುಂದಿದೆ.

ಮತದಾರರ ಪರಿಷ್ಕರಣೆ ವಿವರ

* ಗೋವಿಂದರಾಜನಗರ -ಶೇ. 64.52

* ವಿಜಯನಗರ -ಶೇ. 66.65

* ಬಸವನಗುಡಿ- ಶೇ. 67.03

* ಪದ್ಮನಾಭನಗರ- ಶೇ.68.24

* ಬಿಟಿಎಂ ಲೇಔಟ್- ಶೇ.72.72

* ಜಯನಗರ- ಶೇ.65.50

* ಬೊಮ್ಮನಹಳ್ಳಿ ಕ್ಷೇತ್ರ- ಶೇ 64.41ರಷ್ಟು ಪ್ರಗತಿ ಸಾಧಿಸಲಾಗಿದೆ.

ರಾಜಕೀಯ ಪಕ್ಷಗಳಿಗೆ ಪಾಲ್ಗೊಳ್ಳಲು ಅವಕಾಶ

ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ಪಾರದರ್ಶಕತೆ ಮತ್ತು ನಿಖರತೆಯನ್ನು ಕಾಯ್ದುಕೊಳ್ಳುವ ದೃಷ್ಟಿಯಿಂದ, ರಾಜಕೀಯ ಪಕ್ಷಗಳು ತಮ್ಮ ಬೂತ್ ಮಟ್ಟದ ಏಜೆಂಟರನ್ನು (BLAs) ನೇಮಕ ಮಾಡಬಹುದು. ಈ ಮೂಲಕ ಅಧಿಕಾರಿಗಳೊಂದಿಗೆ ಸಮೀಕ್ಷಾ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಲು ಅವಕಾಶ ಇದೆ.

ಬೆಂಗಳೂರು ದಕ್ಷಿಣ ಅಪರ ಜಿಲ್ಲಾ ಚುನಾವಣಾಧಿಕಾರಿಗಳ ವ್ಯಾಪ್ತಿಯಲ್ಲಿ ಒಟ್ಟು 21,43,006 ಮತದಾರರಿದ್ದಾರೆ. ಮತಗಟ್ಟೆಗಳು ಒಟ್ಟು 1,895 ಇರುತ್ತವೆ. ಮತಗಟ್ಟೆಗೆ ಒಬ್ಬರಂತೆ ಒಟ್ಟು 1,895 ಬಿ.ಎಲ್.ಓ (BLO) ಗಳು ಕರ್ತವ್ಯಕ್ಕೆ ನಿಯೋಜನೆ ಮಾಡಲಾಗಿದೆ.

Monsoon Rain: ಜೂನ್ 2 ಕಳೆದರೂ ಕೇರಳಕ್ಕೆ ಬಾರದ ಮುಂಗಾರು, ಕೃಷಿ -ಆರ್ಥಿಕತೆ ಮೇಲೆ ದುಷ್ಪರಿಣಾಮ?
Monsoon Rain: ಜೂನ್ 2 ಕಳೆದರೂ ಕೇರಳಕ್ಕೆ ಬಾರದ ಮುಂಗಾರು, ಕೃಷಿ -ಆರ್ಥಿಕತೆ ಮೇಲೆ ದುಷ್ಪರಿಣಾಮ?

ಮತದಾರರ ಒಟ್ಟು ಸಂಖ್ಯೆ

ವಯೋಮಿತಿಗಿಂತ ಮೇಲ್ಪಟ್ಟ 14,13,952 ಮತದಾರರು ಇದ್ದಾರೆ. 18 ವರ್ಷಕ್ಕಿಂತ ಕಡಿಮೆ ವಯಸ್ಸಿನ 7,29,054 ಮತದಾರರು ಇದ್ದಾರೆ. 18 ವರ್ಷ ಮೇಲ್ಪಟ್ಟ ಹೊಸದಾಗಿ ಸೇರ್ಪಡೆಗೆ ಅರ್ಹರಿರುವ ಒಟ್ಟು ಅಂದಾಜು ಮತದಾರರ 5,93,577ರಷ್ಟಿದ್ದಾರೆಂದು ಮ್ಯಾಪಿಂಗ್ ಮೂಲಕ ಗೊತ್ತಾಗಿದೆ. ಮ್ಯಾಪ್ ಮಾಡಲಾದ ಮತದಾರರ 14,33,935 ರಷ್ಟಿದ್ದಾರೆ. ಒಟ್ಟಾರೆ ಮ್ಯಾಪಿಂಗ್ ಪ್ರಗತಿ ಶೇ. 66.91ರಷ್ಟಾಗಿದೆ ಎಂದು ಅವರು ಜಿಲ್ಲಾ ಚುನಾವಣೆ ಆಯುಕ್ತರು ಮಾಹಿತಿ ಕೊಟ್ಟರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+