ಬಿಗ್‌ಬಾಸ್‌ ಖ್ಯಾತಿಯ ನಟಿ ಎದುರೇ ಖಾಸಗಿ ಅಂಗ ಹಿಡಿದು ನಿಂತ ಕಾಮುಕ; ಸೆಲೆಬ್ರಿಟಿಗಳಿಗೂ ಬೆಂಗಳೂರು ಸೇಫ್ ಅಲ್ವಾ? ಎಂದ ನೆಟ್ಟಿಗರು

ಸಿಲಿಕಾನ್‌ ಸಿಟಿ ಬೆಂಗಳೂರಿನಲ್ಲಿ ಮಹಿಳೆಯರ ಸುರಕ್ಷತೆಯ ಪ್ರಶ್ನೆ ಎದುರಾಗಿದೆ. ಸಾಮಾನ್ಯ ಮಹಿಳೆಯರಷ್ಟೇ ಅಲ್ಲ, ಸೆಲೆಬ್ರಿಟಿಗಳಿಗೂ ಸಾರ್ವಜನಿಕ ಸ್ಥಳಗಳಲ್ಲಿ ರಕ್ಷಣೆ ಇಲ್ಲವೇ ಎನ್ನುವಂತಹ ಆತಂಕಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ಬಿಗ್‌ಬಾಸ್ ಕನ್ನಡ ಮಾಜಿ ಸ್ಪರ್ಧಿ ಹಾಗೂ ನಟಿ ದಿವ್ಯಾ ಸುರೇಶ್ ಅವರು ತಮಗಾದ ಅತ್ಯಂತ ಕೆಟ್ಟ ಅನುಭವವನ್ನು ವಿಡಿಯೋ ಸಾಕ್ಷಿ ಸಮೇತ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.

ನಡೆದಿದ್ದೇನು? ಕಾರಿನೊಳಗೆ ಹೋದ್ರೂ ಬಿಡದ ನೀಚ

ಭಾನುವಾರ ತಡರಾತ್ರಿ ಸುಮಾರು 11:30ರ ವೇಳೆಗೆ ನಟಿ ದಿವ್ಯಾ ಸುರೇಶ್ ಅವರು ತಮ್ಮ ಸಂಬಂಧಿ ಜೊತೆ ರಸ್ತೆಯಲ್ಲಿ ನಡೆದುಕೊಂಡು ತಮ್ಮ ಕಾರಿನ ಬಳಿ ತೆರಳುತ್ತಿದ್ದರು. ಇಬ್ಬರು ಮಹಿಳೆಯರು ಒಂಟಿಯಾಗಿ ಹೋಗುತ್ತಿರುವುದನ್ನು ಗಮನಿಸಿದ ವಿಕೃತ ಯುವಕನೊಬ್ಬ, ಅವರನ್ನೇ ಹಿಂಬಾಲಿಸಲು ಆರಂಭಿಸಿದ್ದಾನೆ. ಅಷ್ಟೇ ಅಲ್ಲದೆ, ಅವರ ಎದುರಲ್ಲೇ ಅಸಭ್ಯವಾಗಿ ತನ್ನ ಖಾಸಗಿ ಅಂಗಗಳನ್ನು ಮುಟ್ಟಿಕೊಳ್ಳುತ್ತಾ ವಿಕೃತಿ ಪ್ರದರ್ಶಿಸಿದ್ದಾನೆ.

Divya Suresh

ಇದರಿಂದ ಆತಂಕಕ್ಕೆ ಒಳಗಾದ ನಟಿ ಮತ್ತು ಅವರ ಕಸಿನ್ ತಕ್ಷಣವೇ ಓಡಿ ಹೋಗಿ ಕಾರಿನೊಳಗೆ ಕುಳಿತು ಡೋರ್ ಲಾಕ್ ಮಾಡಿಕೊಂಡಿದ್ದಾರೆ. ಆದರೆ, ಕಾರಿನ ಗಾಜು ಹಾಕಿದ್ದರೂ ಸಹ ಆ ಕಾಮುಕ ಕಾರಿನ ಬಳಿಯೇ ನಿಂತು ತನ್ನ ನೀಚತನವನ್ನು ಮುಂದುವರಿಸಿದ್ದಾನೆ. ಈ ವೇಳೆ ಆ ರಸ್ತೆಯಲ್ಲಿ ಬಂದ ಬೈಕ್‌ ಸವಾರನೊಬ್ಬ ಆತನನ್ನು ತರಾಟೆಗೆ ತೆಗೆದುಕೊಂಡು ಬೈದರೂ, ಆತ ಮಾತ್ರ ತನ್ನ ವಿಕೃತ ಚಾಳಿಯನ್ನು ನಿಲ್ಲಿಸಿಲ್ಲ.‌

'ಬಿಗ್ ಬಾಸ್ ಕನ್ನಡ 13' ಆಡಿಷನ್: ನಿಮಗೂ ಆಸಕ್ತಿ ಇದ್ರೆ ಈ ಸಲ ಟ್ರೈ ಮಾಡಬಹುದು
'ಬಿಗ್ ಬಾಸ್ ಕನ್ನಡ 13' ಆಡಿಷನ್: ನಿಮಗೂ ಆಸಕ್ತಿ ಇದ್ರೆ ಈ ಸಲ ಟ್ರೈ ಮಾಡಬಹುದು

ವಿಡಿಯೋ ಹಿಡಿದು ಪೊಲೀಸರಿಗೆ ಟ್ಯಾಗ್ ಮಾಡಿದ ನಟಿ

ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ಇಡೀ ಘಟನೆಯ ವಿಡಿಯೋ ತುಣುಕನ್ನು ಹಂಚಿಕೊಂಡಿರುವ ದಿವ್ಯಾ ಸುರೇಶ್, "ಮಹಿಳೆಯರು ಸಾರ್ವಜನಿಕ ಸ್ಥಳಗಳಲ್ಲಿ ಇಂತಹ ಕೀಳು ಮಟ್ಟದ ಅನುಭವಗಳನ್ನು ಎದುರಿಸಬೇಕಾಗಿರುವುದು ನಿಜಕ್ಕೂ ದುಃಖಕರ ಸಂಗತಿ" ಎಂದು ಬೇಸರ ಹೊರಹಾಕಿದ್ದಾರೆ. ಆರೋಪಿಯ ಮುಖ ಸ್ಪಷ್ಟವಾಗಿ ಕಾಣುವ ವಿಡಿಯೋವನ್ನು ಪೋಸ್ಟ್ ಮಾಡಿರುವ ನಟಿ, ಬೆಂಗಳೂರು ಸಿಟಿ ಪೊಲೀಸ್ (Bengaluru City Police) ಅಧಿಕೃತ ಸಾಮಾಜಿಕ ಜಾಲತಾಣ ಖಾತೆಯನ್ನು ಟ್ಯಾಗ್ ಮಾಡಿದ್ದಾರೆ. ಮಹಿಳೆಯರಿಗೆ ರಕ್ಷಣೆ ಇಲ್ಲದಂತೆ ಮಾಡುತ್ತಿರುವ ಇಂತಹ ವಿಕೃತ ಮನಸ್ಸಿನ ಆರೋಪಿಯನ್ನು ತಕ್ಷಣವೇ ಬಂಧಿಸಿ, ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ದಿವ್ಯಾ ಆಗ್ರಹಿಸಿದ್ದಾರೆ.

ಬೆಂಗಳೂರು ನಟಿಯರಿಗೂ ಸೇಫ್ ಅಲ್ವಾ?

ನಟಿ ದಿವ್ಯಾ ಸುರೇಶ್ ಅವರ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದ್ದು, ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. "ಐಟಿ ಹಬ್, ಸಿಲಿಕಾನ್ ಸಿಟಿ ಎನಿಸಿಕೊಂಡ ಬೆಂಗಳೂರಿನಲ್ಲಿ ತಡರಾತ್ರಿ ಮಹಿಳೆಯರು ನೆಮ್ಮದಿಯಾಗಿ ಓಡಾಡಲು ಸಾಧ್ಯವಿಲ್ಲವೇ? ಸೆಲೆಬ್ರಿಟಿಗಳಿಗೇ ಈ ಪರಿಸ್ಥಿತಿಯಾದರೆ ಸಾಮಾನ್ಯ ಹೆಣ್ಣುಮಕ್ಕಳ ಗತಿಯೇನು?" ಎಂದು ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ. ಸದ್ಯ ನಟಿಯ ಬೆಂಬಲಕ್ಕೆ ನಿಂತಿರುವ ಅಭಿಮಾನಿಗಳು ಮತ್ತು ಸಾರ್ವಜನಿಕರು, ಪೊಲೀಸರು ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು ಕಾಮುಕನಿಗೆ ತಕ್ಕ ಪಾಠ ಕಲಿಸಬೇಕು ಎಂದು ಒತ್ತಾಯಿಸುತ್ತಿದ್ದಾರೆ.

ಈ ಕಹಿ ಘಟನೆಯ ಕುರಿತು ನಟಿ ದಿವ್ಯಾ ಸುರೇಶ್ ಅವರು ಸದ್ಯಕ್ಕೆ ಪೊಲೀಸ್ ಠಾಣೆಗೆ ತೆರಳಿ ಯಾವುದೇ ಅಧಿಕೃತ ಲಿಖಿತ ದೂರನ್ನು ದಾಖಲಿಸಿಲ್ಲ. ಆದಾಗ್ಯೂ, ಸಾರ್ವಜನಿಕ ಸ್ಥಳದಲ್ಲಿ ತಮಗೆ ಎದುರಾದ ಈ ಆಘಾತಕಾರಿ ಮತ್ತು ಮುಜುಗರದ ಅನುಭವವನ್ನು ಅವರು ಇನ್ಸ್ಟಾಗ್ರಾಮ್ ಸೇರಿದಂತೆ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ನಟಿಯ ಈ ಪೋಸ್ಟ್ ಸದ್ಯ ಇಂಟರ್ನೆಟ್‌ನಲ್ಲಿ ಭಾರಿ ಸಂಚಲನ ಸೃಷ್ಟಿಸಿದ್ದು, ಸಾರ್ವಜನಿಕರು ಹಾಗೂ ಅವರ ಅಭಿಮಾನಿ ಬಳಗದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ವಿಡಿಯೋ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತಿರುವ ನೆಟ್ಟಿಗರು, "ಮಹಿಳೆಯರ ಸುರಕ್ಷತೆಗೆ ಹೆಸರಾಗಿದ್ದ ಸಿಲಿಕಾನ್ ಸಿಟಿಯಲ್ಲಿ ಈಗ ಹೆಣ್ಣುಮಕ್ಕಳಿಗೆ ರಕ್ಷಣೆ ಎಲ್ಲಿದೆ?" ಎಂದು ನೇರವಾಗಿ ಕಾನೂನು ಸುವ್ಯವಸ್ಥೆಯನ್ನು ಪ್ರಶ್ನಿಸುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+