ಅವಳೊಂದಿಗೆ ರೊಮ್ಯಾಂಟಿಕ್ ದೃಶ್ಯಗಳಲ್ಲಿ ಕಾಣಿಸಿಕೊಳ್ಳೋದು ದುಃಸ್ವಪ್ನ: ವಿಜಯ್ ಸೇತುಪತಿ ಈ ಮಾತು ಹೇಳಿದ್ದು ಯಾವ ನಟಿ ಬಗ್ಗೆ?
ವಿಜಯ್ ಸೇತುಪತಿ ಅನ್ನೋ ನಟ ಕ್ಯಾಮರ ಎದುರು ನಿಂತರೆ ಪಾತ್ರವೇ ತಾನಾಗ್ತಾರೆ. ಅಂಥಾ ಕಲಾವಿದ ನಟಿಯೊಬ್ಬಳ ಜೊತೆ ರೊಮ್ಯಾಂಟಿಕ್ ಸೀನ್ಗಳಲ್ಲಿ ಕಾಣಿಸಿಕೊಳ್ಳುವುದು ದುಃಸ್ವಪ್ನ ಅಂದಿದ್ದಾರೆ. ಆ ನಟಿ ಅಂಥಾದ್ದೇನು ಮಾಡಿದ್ರು...?
ವಿಜಯ್ ಸೇತುಪತಿ ಎಂಬ ನಟ ಸೋ ಕಾಲ್ಡ್ ಬ್ಯೂಟಿ ಮಾನದಂಡಗಳನ್ನ ಮೀರಿದವರು. ವಿವಾದಗಳಿಂದ ಸದಾ ದೂರ. ತಾನಾಯ್ತು ತನ್ನ ಕೆಲಸ ಆಯ್ತು ಅಂತಿರುವ ವ್ಯಕ್ತಿ. ಉಳಿದ ನಟರಂತೆ ಅವರು ತೆಳ್ಳಗೆ ಬೆಳ್ಳಗೆ ಮಸಲ್ ಬಾಡಿ ಹೊಂದಿದವರಲ್ಲ. ಆಕ್ಟರ್ ಒಬ್ಬ ಹೀಗಿರಬೇಕು ಅನ್ನೋ ಥಿಯರಿಯಾಚೆ ಆಕ್ಟರ್ ಹೀಗೂ ಇರಬಹುದು, ಈ ಥರ ಇದ್ದವನು ಸಿನಿಮಾ ಮಾಡಿಯೂ ಜಯಿಸಬಹುದು, ಲಕ್ಷಾಂತರ ಜನರ ಮೆಚ್ಚುಗೆಗೆ ಪಾತ್ರನಾಗಬಹುದು ಅನ್ನೋದನ್ನು ತೋರಿಸಿದವರು. ಅಂಥವರು ಇದೀಗ ತಾನು ಆ ಒಬ್ಬ ನಟಿಯೊಂದಿಗೆ ರೊಮ್ಯಾಂಟಿಕ್ ಸೀನ್ಗಳಲ್ಲಿ ಕಾಣಿಸಿಕೊಳ್ಳುವುದು ದುಃಸ್ವಪ್ನ ಎಂದಿದ್ದಾರೆ.

ಯಾರು ಆ ನಟಿ?
ಆಕೆ ಬೇರೆ ಯಾರೂ ಅಲ್ಲ, ಖ್ಯಾತ ತೆಲುಗು ನಟಿ ಕೃತಿ ಶೆಟ್ಟಿ. ಈಕೆ ಕರಾವಳಿ ಮೂಲದ ಹುಡುಗಿ. ಉಪ್ಪೇನ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟವರು. ಮೊದಲ ಸಿನಿಮಾದಲ್ಲೇ ಸಕ್ಸಸ್ ಮಂತ್ರ ಪಠಿಸಿ ಗೋಲ್ಡನ್ ಲೆಗ್ ಗರ್ಲ್ ಅನ್ನೋ ಹೆಗ್ಗಳಿಕೆಗೆ ಪಾತ್ರರಾದವರು. ಶಾಮ್ ಸಿಂಗ ರಾಯ್, ಬಂಗಾರರಾಜು ಮೊದಲಾದ ಸಕ್ಸಸ್ಫುಲ್ ಸಿನಿಮಾಗಳಲ್ಲಿ ನಟಿಸಿದವರು. ಫಿಲಂ ಫೇರ್‌ನಂಥಾ ಪ್ರಶಸ್ತಿ ಬಂದಿವೆ. ಸದ್ಯಕ್ಕೆ ತಮಿಳು ಸಿನಿಮಾಗಳಲ್ಲಿ ಬ್ಯುಸಿ ಆಗಿರುವ ಈ ನಟಿ ಅಭಿನಯವನ್ನು ಸಾಕಷ್ಟು ಮಂದಿ ಹಾಡಿ ಹೊಗಳಿದ್ದಾರೆ.
ಆದರೂ ತನ್ನ ಸಿನಿಮಾಕ್ಕೆ ಈಕೆಯನ್ನು ನಾಯಕಿಯಾಗಿ ಹಾಕಿಕೊಂಡರೆ ಅದು ದುಃಸ್ವಪ್ನದ ಹಾಗಿರುತ್ತದೆ ಅಂತ ವಿಜಯ್ ಸೇತುಪತಿ ಹೇಳಿರುವುದು ಕೊಂಚ ವಿಚಿತ್ರ ಅನಿಸಬಹುದು. ಆದರೆ ಅವರು ಯಾಕೆ ಈ ಮಾತು ಹೇಳ್ತಿರೋದು ಅನ್ನೋದು ಗೊತ್ತಾದರೆ ವಿಜಯ ಸೇತುಪತಿ ಬಗ್ಗೆ ಇನ್ನಷ್ಟು ಗೌರವ ಬರಬಹುದು.
ವಿಜಯ್ ಸೇತುಪತಿ ಹಾಗನ್ನಲು ಕಾರಣ ಏನು?
ಇದಕ್ಕೆ ಕಾರಣ ಕೃತಿ ಶೆಟ್ಟಿ ವಯಸ್ಸು. ಜೊತೆಗೆ ವಿಜಯ ಸೇತುಪತಿ 'ಉಪ್ಪೆನ' ಸಿನಿಮಾದಲ್ಲಿ ಕೃತಿ ತಂದೆ ಪಾತ್ರ ಮಾಡಿದ್ದರು. ಅಲ್ಲೊಂದು ಘಟನೆ ಆಗಿತ್ತು. ಆ ಘಟನೆಯ ಕಾರಣ ವಿಜಯ ಸೇತುಪತಿ ಕೃತಿಯನ್ನು ಅಪ್ಪಿತಪ್ಪಿಯೂ ಬೇರೆ ಥರ ನೋಡಲು ಸಾಧ್ಯವಿಲ್ಲ ಅನಿಸಿತ್ತು.
ಆ ಘಟನೆ ಏನು?
ಅದೇನು ಅಂತ ವಿಜಯ ಸೇತುಪತಿ ಅವರೆ ವಿವರಿಸುತ್ತಾರೆ. 'ಉಪ್ಪೆನ ಸಿನಿಮಾದ ಕ್ಲೈಮ್ಯಾಕ್ಸ್ ಸೀನ್ ಇತ್ತು. ಅದರ ಶೂಟಿಂಗ್ನ ಕೊನೆ ದಿನ ಅದಾಗಿತ್ತು. ಅದೇ ದಿನ ಕೃತಿಗೆ ಹುಟ್ಟುಹಬ್ಬವಿತ್ತು. ಅದೇ ದಿನ ನನ್ನ ಕಾಲ್ಶೀಟ್ ಕೂಡ ಮುಕ್ತಾಯವಾಗುತ್ತಿತ್ತು. ಹಾಗಾಗಿ, ಅವತ್ತೇ ಎಲ್ಲವನ್ನೂ ಶೂಟಿಂಗ್ ಮಾಡಬೇಕಿತ್ತು. ಆಗ ಕೃತಿ ಅದ್ಯಾಕೋ ಸ್ವಲ್ಪ ನರ್ವಸ್ ಆಗಿದ್ದಂತೆ ಕಂಡರು. ಆಗ, ಆ ಹುಡುಗಿಗೆ, ನನ್ನನ್ನು ನೀನು ಅಪ್ಪ ಎಂದೇ ಭಾವಿಸು, ನನ್ನನ್ನು ತಂದೆ ಎಂದುಕೊಂಡೆ ನಟಿಸು, ಫ್ರೀಯಾಗಿ ಇರು ಎಂದು ಹೇಳಿದ್ದೆ. ನನಗೂ ಬಹುತೇಕ ಅವಳದ್ದೇ ವಯಸ್ಸಿನ ಮಗ ಇದ್ದಾನೆ" ಎಂದು ವಿಜಯ್ ಸೇತುಪತಿ ಹೇಳಿಕೊಂಡಿದ್ದರು.
ಅವಳೊಂದಿಗೆ ರೊಮ್ಯಾನ್ಸ್ ಮಾಡಲಾರೆ
'ನಾನು ಯಾವ ನಟಿಗೆ ತಂದೆಯಂತೆ ನನ್ನನ್ನು ಭಾವಿಸು ಎಂದು ಹೇಳಿದ್ದೇನೋ, ಕೆಲವು ವರ್ಷದ ಬಳಿಕ ಅದೇ ನಟಿಯನ್ನು ನನ್ನ ಸಿನಿಮಾಗೆ ನಾಯಕಿಯನ್ನಾಗಿ ಮಾಡಬೇಕು ಎಂಬುದು ಚೆನ್ನಾಗಿರುವುದಿಲ್ಲ ಅಲ್ವಾ? ನಾನೇ ಖುದ್ದಾಗಿ ಆಕೆಗೆ ನನ್ನನ್ನು ತಂದೆಯಂತೆ ನೋಡು ಎಂದು ಹೇಳಿದ್ದೆ. ಮತ್ತದೇ ನಟಿ ಜೊತೆ ರೊಮ್ಯಾನ್ಸ್ ಮಾಡುವುದಕ್ಕೆ ನನಗೆ ಸರಿ ಕಾಣಿಸಲಿಲ್ಲ" ಎಂದು ವಿಜಯ್ ಸೇತುಪತಿ ಹೇಳಿಕೊಂಡಿದ್ದರು.
ವರ್ಷಗಳ ಕೆಳಗೆ ನಡೆದ ಈ ಘಟನೆ ಇದೀಗ ಮತ್ತೆ ಮುನ್ನೆಲೆಗೆ ಬಂದಿದೆ. ಸದ್ಯ ಕೃತಿ ಶೆಟ್ಟಿ ವಯಸ್ಸು 22 ವರ್ಷ. ಹಾಗೇ ವಿಜಯ ಸೇತುಪತಿ 48ರ ಹರೆಯದಲ್ಲಿದ್ದಾರೆ. ಇವರಿಬ್ಬರ ನಡುವೆ 22 ವರ್ಷ ವಯಸ್ಸಿನ ಅಂತರವಿದೆ. ಆದರೆ ಸಿನಿಮಾರಂಗದಲ್ಲಿ ಇಂಥಾ ಸೆನ್ಸಿಬಲ್ ವ್ಯಕ್ತಿಗಳಿರುವುದು ಬಹಳ ಅಪರೂಪ ಎಂಬ ಮಾತು ಕೇಳಿಬರುತ್ತಿದೆ.
(ಬರಹ: ಭವಾನಿ ಭಟ್)














Click it and Unblock the Notifications