ಈ ರಾಶಿಯವರ ಬೆನ್ನಿಗಿರುವುದು ಅದೃಷ್ಟ : ಕೈ ಹಾಕಿದ ಕೆಲಸಗಳಲ್ಲಿ ಯಶಸ್ಸು!ಹೇಗಿದೆ ನೋಡಿ ನಿಮ್ಮ ನಿತ್ಯ ಭವಿಷ್ಯ

Horoscope June 30: ಮಂಗಳವಾರ ದ್ವಾದಶ ರಾಶಿಗಳ ಗೋಚಾರ ಫಲ ಹೇಗಿದೆ ಎನ್ನುವ ಮಾಹಿತಿ ಇಲ್ಲಿದೆ. ಇದು ವೈದಿಕ ಜ್ಯೋತಿಷ್ಯ ಕ್ರಮದಲ್ಲಿ ಲೆಕ್ಕ ಹಾಕಿ ಬರೆದ ದಿನ ಭವಿಷ್ಯ ಇದಾಗಿದೆ. ಮಂಗಳವಾರ ರಾಹುಕಾಲವು ಮಧ್ಯಾಹ್ನ 3:00 ರಿಂದ ಸಂಜೆ 4:30 ರವರೆಗೆ ಇರುತ್ತದೆ. 12 ರಾಶಿಗಳಿಗೆ ಇಂದಿನ ಸಂಪೂರ್ಣ ಭವಿಷ್ಯ, ಫಲಾಫಲ ಮಾಹಿತಿ ಹೇಗಿದೆ ಎಂಬ ಪೂರ್ಣ ವಿವರ ತಿಳಿಯಿರಿ.

ಮೇಷ (Aries):

ಇಂದು ನಿಮಗೆ ಸಕಾರಾತ್ಮಕ ದಿನ. ಇಡೀ ದಿನ ಸಕಾರಾತ್ಮಕವಾಗಿಯೇ ಇರಲಿದೆ. ಕಾರ್ಯಕ್ಷೇತ್ರದಲ್ಲಿ ನಿಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗಲಿದೆ. ವ್ಯಾಪಾರಿಗಳಿಗೆ ಉತ್ತಮ ಲಾಭದ ಸಾಧ್ಯತೆ ಇದೆ. ಕುಟುಂಬದೊಂದಿಗೆ ಸಂತೋಷದ ಸಮಯ ಕಳೆಯುವಿರಿ, ಆದರೆ ಮಕ್ಕಳ ಆರೋಗ್ಯದ ಕಡೆ ಗಮನ ಹರಿಸಿ.

Horoscope June 30

ವೃಷಭ ರಾಶಿ (Taurus):

ಇಂದು ನಿಮಗೆ ಲಾಭದಾಯಕ ದಿನ. ಉದ್ಯೋಗಿಗಳಿಗೆ ಸಹೋದ್ಯೋಗಿಗಳ ಬೆಂಬಲ ಸಿಗಲಿದೆ. ಆರ್ಥಿಕವಾಗಿ ಲಾಭವಾಗಲಿದೆ. ಹೊಸಬರ ಭೇಟಿಯಿಂದ ಮನಸ್ಸಿನ ಸಂತೋಷ ಹೆಚ್ಚುವುದು. ಹಳೆಯ ಸ್ನೇಹಿತರೊಂದಿಗೆ ಸುತ್ತಾಟ ಮನಸ್ಸಿಗೆ ಉಲ್ಲಾಸ ನೀಡಲಿದೆ. ದಾಂಪತ್ಯದಲ್ಲಿ ಸಾಮರಸ್ಯ ಇರಲಿದೆ.

ಮಿಥುನ ರಾಶಿ (Gemini):

ಇಂದು ಸಂತೋಷದಾಯಕ ದಿನ. ಉದ್ಯೋಗದಲ್ಲಿ ಹೊಸ ಯೋಜನೆಗಳು ಕೈಗೂಡಲಿವೆ. ಆದಾಯದ ಹೊಸ ಮೂಲಗಳು ಸೃಷ್ಟಿಯಾಗಲಿವೆ. ವಿದ್ಯಾರ್ಥಿಗಳಿಗೆ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ದೊರೆಯಲಿದೆ. ವ್ಯಾಪಾರಿಗಳಿಗೆ ಸ್ನೇಹಿತರ ಬೆಂಬಲದಿಂದ ಆರ್ಥಿಕ ಲಾಭವಾಗಲಿದೆ.

ಕಟಕ ರಾಶಿ (Cancer):

ಇಂದು ಆಧ್ಯಾತ್ಮಕತೆಯತ್ತ ವಾಲುವಿರಿ. ಸಾಮಾಜಿಕ ಅಥವಾ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವಿರಿ. ವೃತ್ತಿ ಜೀವನದಲ್ಲಿ ಸರಿಯಾದ ಯೋಜನೆ ರೂಪಿಸಿದರೆ ಯಶಸ್ಸು ಖಂಡಿತ. ನೀವು ಮಾಡುವ ಪ್ರಯತ್ನಗಳಿಗೆ ಕುಟುಂಬ ಮತ್ತು ಸಂಗಾತಿಯ ಸಂಪೂರ್ಣ ಬೆಂಬಲ ಸಿಗಲಿದೆ.

ಸಿಂಹ ರಾಶಿ (Leo):

ಇಂದು ಹೊಸ ಅವಕಾಶಗಳು ನಿಮ್ಮನ್ನು ಹುಡುಕಿಕೊಂಡು ಬರುವುದು. ಕೆಲಸದಲ್ಲಿ ಜವಾಬ್ದಾರಿಗಳು ಹೆಚ್ಚಾದರೂ ಉತ್ತಮವಾಗಿ ನಿಭಾಯಿಸುವಿರಿ. ಆತ್ಮವಿಶ್ವಾಸ ಹೆಚ್ಚಾಗುವುದು. ಹೊಸ ಪ್ರಾಜೆಕ್ಟ್‌ಗಳಲ್ಲಿ ಯಶಸ್ಸು ಸಿಗುವುದು. ಭವಿಷ್ಯದಲ್ಲಿ ಆರ್ಥಿಕ ಲಾಭವಾಗಲಿದೆ. ಮಾಧ್ಯಮ ಮತ್ತು ಬರವಣಿಗೆ ಕ್ಷೇತ್ರದಲ್ಲಿರುವವರಿಗೆ ಸುವರ್ಣಾವಕಾಶಗಳು ಒದಗಿ ಬರುವುದು.

ಕನ್ಯಾ ರಾಶಿ (Virgo):

ಇಂದು ಆತ್ಮವಿಶ್ವಾಸದಿಂದ ಕೂಡಿದ ದಿನ. ಎಲ್ಲಾ ಕ್ಷೇತ್ರದಲ್ಲಿಯೂ ಯಶಸಾಉ ನಿಮ್ಮದಾಗುವುದು. ಪರಿಶ್ರಮಕ್ಕೆ ತಕ್ಕ ಫಲ ಸಿಗುವುದು. ಉದ್ಯೋಗದಲ್ಲಿ ಬಡ್ತಿ ಮತ್ತು ಹೊಸ ಅವಕಾಶಗಳು ಲಭ್ಯವಾಗುವುದು. ಸಾಮಾಜಿಕ ಸಂಬಂಧಗಳು ಬಲಗೊಳ್ಳಲಿವೆ. ವೈವಾಹಿಕ ಜೀವನ ಸುಖಮಯವಾಗಿರಲಿದೆ. ಆರೋಗ್ಯ ಉತ್ತಮವಾಗಿರಲಿದೆ.

ತುಲಾ (Libra):

ಇಂದು ಲಾಭದಾಯಕ ದಿನವಾಗಿರಲಿದೆ. ಉದ್ಯೋಗ ಬದಲಾವಣೆಗೆ ಪ್ರಯತ್ನಿಸುತ್ತಿರುವವರಿಗೆ ಯಶಸ್ಸು ಸಿಗಬಹುದು. ನಿಮ್ಮ ಮನಸ್ಸಿನ ಆಸೆಯಂತೆ ಹೊಸ ಕೆಲಸ ಸಿಗುವುದು. ಜೀವನ ಸಂಗಾತಿಯ ಸಹಾಯದಿಂದ ಧನ ಲಾಭವಾಗುವ ಸಾಧ್ಯತೆ ಇದೆ. ವಿಜ್ಞಾನ ಮತ್ತು ಮಾಧ್ಯಮ ಕ್ಷೇತ್ರದಲ್ಲಿರುವವರಿಗೆ ದಿನ ವಿಶೇಷವಾಗಿದೆ.

ವೃಶ್ಚಿಕ ರಾಶಿ (Scorpio):

ಇಂದು ಸುಖ ಮತ್ತು ಸಮೃದ್ಧಿಯಿಂದ ಕೂಡಿರುವ ದಿನ. ಹೊಸ ಆಸ್ತಿ ಅಥವಾ ಮನೆ ಖರೀದಿಸುವ ಬಗ್ಗೆ ಯೋಚಿಸಬಹುದು. ನಿಮ್ಮ ಕಾರ್ಯದಕ್ಷತೆ ಮತ್ತು ಉತ್ಸಾಹ ಇತರರಿಗೆ ಪ್ರೇರಣೆಯಾಗಲಿದೆ. ವ್ಯಾಪಾರ ವ್ಯವಹಾರಗಳಲ್ಲಿ ಲಾಭವಾಗುವುದು.

ಧನು ರಾಶಿ (Sagittarius):

ಇಡೀ ದಿನ ಉತ್ಸಾಹದಿಂದ ಕೂಡಿರುವುದು. ಶುಭ ಕಾರ್ಯಗಳಿಗಾಗಿ ಪ್ರಯಾಣ ಮಾಡುವ ಸಾಧ್ಯತೆ ಇದೆ. ಉದ್ಯೋಗದಲ್ಲಿ ಬಡ್ತಿ ಮತ್ತು ವ್ಯಾಪಾರದಲ್ಲಿ ಲಾಭ ಗಳಿಸುವ ಸೂಚನೆಗಳಿವೆ. ಕಚೇರಿಯಲ್ಲಿ ಪರಿಸ್ಥಿತಿ ನಿಮ್ಮ ಪರವಾಗಿ ಇರುವುದು. ವಿದೇಶದಲ್ಲಿ ಉನ್ನತ ಶಿಕ್ಷಣ ಪಡೆಯಲು ಬಯಸುವವರಿಗೆ ಇಂದು ಅನುಕೂಲಕರ ದಿನ.

ಮಕರ ರಾಶಿ (Capricorn):

ಇಂದು ಸಕಾರಾತ್ಮಕ ಬದಲಾವಣೆಗಳ ದಿನ. ಆರೋಗ್ಯದ ಬಗ್ಗೆ ಹೆಚ್ಚು ಜಾಗರೂಕರಾಗಿರುವ ಅಗತ್ಯವಿದೆ. ಅಪೂರ್ಣ ಕೆಲಸಗಳು ಪೂರ್ಣಗೊಳ್ಳಲಿವೆ. ಸಂಗಾತಿಯೊಂದಿಗೆ ಧಾರ್ಮಿಕ ಯಾತ್ರೆಯ ಯೋಜನೆ ರೂಪಿಸುವಿರಿ. ಮಹಿಳೆಯರಿಗೆ ಇಂದು ಅತ್ಯಂತ ಶುಭ ದಿನ. ಇಡೀ ದಿನ ಸಂತೋಷದಿಂದ ಕಳೆಯುವಿರಿ.

ಕುಂಭ ರಾಶಿ (Aquarius):

ಇಂದು ನಿಮ್ಮ ಶ್ರಮಕ್ಕೆ ತಕ್ಕ ಫಲ ಸಿಗಲಿದೆ. ಉದ್ಯೋಗದಲ್ಲಿ ಹೆಚ್ಚಿನ ಜವಾಬ್ದಾರಿಗಳು ಹೆಗಲೇರುವುದು. ಆದಾಯ ಹೆಚ್ಚಾಗುವುದು. ಬಾಕಿ ಉಳಿದಿರುವ ಹಣ ಕೈಸೇರಲಿದೆ. ಕುಟುಂಬದಲ್ಲಿ ಶುಭ ಕಾರ್ಯಗಳು ನೆರವೇರಲಿದೆ. ಅತಿಥಿಗಳ ಆಗಮನದಿಂದ ಸಂತೋಷ ಮನೆಮಾಡಲಿದೆ.

ಮೀನ ರಾಶಿ (Pisces):

ಇಂದು ತಾಳ್ಮೆಯಿಂದ ಇರಬೇಕಾದ ದಿನ. ಕಠಿಣ ಪರಿಶ್ರಮದಿಂದ ಯಶಸ್ಸು ಗಳಿಸುವಿರಿ. ಕಲೆ ಮತ್ತು ಸಂಗೀತ ಕ್ಷೇತ್ರದಲ್ಲಿರುವವರಿಗೆ ಉತ್ತಮ ಅವಕಾಶಗಳು ಸಿಗಲಿವೆ. ದಾಂಪತ್ಯ ಜೀವನ ಸುಖಮಯವಾಗಿರಲಿದೆ.

(ಬರಹ: ರಂಜಿತಾ ಆರ್.ಕೆ.)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+