ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನ.1ರಿಂದ ಹಳ್ಳಿಗಳನ್ನು ಸ್ವಚ್ಛವಾಗಿಡಲು ಬರುತ್ತದೆ ಮಹಿಳೆಯರ ತಂಡ

By ಶಿವಮೊಗ್ಗ ಪ್ರತಿನಿಧಿ
|
Google Oneindia Kannada News

ಶಿವಮೊಗ್ಗ, ಅಕ್ಟೋಬರ್ 26: ಇನ್ಮುಂದೆ ಹಳ್ಳಿಗಳಲ್ಲಿ ಮಹಿಳೆಯರು ವಾಹನ ಚಲಾಯಿಸಿಕೊಂಡು ಬಂದು ಮನೆ ಮನೆಯಿಂದ ಕಸ ಪಡೆಯುತ್ತಾರೆ. ವಾಹನ ಚಾಲನೆ ಅಷ್ಟೇ ಅಲ್ಲ. ಕಸ ಸಂಗ್ರಹಣೆ, ವಿಂಗಡಣೆಯ ಜವಾಬ್ದಾರಿ ಕೂಡ ಮಹಿಳೆಯರದ್ದೇ. ಮಹಿಳಾ ಸಬಲೀಕರಣ ಆಶಯವನ್ನು ಜಾರಿಗೆ ತರುವಲ್ಲಿ ರಾಜ್ಯದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆ ಬೃಹತ್ ಹೆಜ್ಜೆ ಇಟ್ಟಿದೆ.

ರಾಜ್ಯದ ಪ್ರತಿಯೊಂದು ಗ್ರಾ.ಪಂ. ಮಟ್ಟದಲ್ಲಿ ಕಸ ಸಂಗ್ರಹಣೆ, ವಿಂಗಡಣೆಗೆ ವ್ಯವಸ್ಥೆ ಮಾಡಲಾಗಿದ್ದು, ಮೊದಲ ಹಂತದಲ್ಲಿ ಆಯ್ದ ಗ್ರಾ.ಪಂ.ಗಳಲ್ಲಿ ಕಸ ಸಂಗ್ರಹಣೆಗೆ ಚಾಲನೆ ನೀಡಲಾಗಿದೆ. ದಕ್ಷಿಣ ಕನ್ನಡ, ಉಡುಪಿ ಭಾಗದ ಕೆಲ ಗ್ರಾ.ಪಂ.ಗಳು ಈಗಾಗಲೇ ಕಸ ಸಂಗ್ರಹಣೆಯಲ್ಲಿ ಸ್ವಾವಲಂಬನೆ ಸಾಧಿಸಿದ್ದು, ಅದನ್ನೇ ಮಾದರಿಯಾಗಿಟ್ಟುಕೊಂಡು ಯೋಜನೆ ರೂಪಿಸಲಾಗಿದೆ.

ನೇಮಕ, ತರಬೇತಿ, ವೇತನ

ನೇಮಕ, ತರಬೇತಿ, ವೇತನ

ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್ ವತಿಯಿಂದ ಗ್ರಾ.ಪಂ. ಮಟ್ಟದಲ್ಲಿ ಸ್ವಚ್ಛ ಸಂಕೀರ್ಣ ಘಟಕದ ನಿರ್ವಹಣೆ ವಹಿಸಿಕೊಂಡಿದ್ದು, ಹೊರಗುತ್ತಿಗೆ ಆಧಾರದ ಮೇಲೆ ಅದಕ್ಕೆ ಸಿಬ್ಬಂದಿ ನೇಮಕ, ತರಬೇತಿ, ವೇತನ ನೀಡುತ್ತದೆ. ಆಯಾ ಗ್ರಾ.ಪಂ.ಗಳ ಆರ್ಥಿಕ ಶಕ್ತಿ ಆಧಾರದ ಮೇಲೆ ಆಕರ್ಷಕ ವೇತನ ಕೂಡ ನಿಗದಿಯಾಗಿದೆ.

ಕೌಶಲ್ಯ ಕರ್ನಾಟಕದ ವತಿಯಿಂದ ಆಯಾ ಗ್ರಾ.ಪಂ. ವ್ಯಾಪ್ತಿಯ ಮಹಿಳೆಯರನ್ನು ಆಯ್ಕೆ ಮಾಡಿ, ಅವರಿಗೆ ಮಾನ್ಯತೆ ಪಡೆದ ಚಾಲನಾ ತರಬೇತಿ ಸಂಸ್ಥೆ ವತಿಯಿಂದ ತರಬೇತಿ, ಡಿಎಲ್ ಸಹ ಕೊಡಿಸಲಾಗಿದೆ. ಸ್ವಚ್ಛ ಭಾರತ, 15ನೇ ಹಣಕಾಸು ನಿಧಿ, ಜಿ.ಪಂ. ಅನುದಾನ ಬಳಸಿಕೊಂಡು ವಾಹನ ವ್ಯವಸ್ಥೆ, ಡಂಪಿಂಗ್ ಯಾರ್ಡ್ ಆಯ್ಕೆ, ಮನೆ ಮನೆಗೆ ಕಿಟ್ ವ್ಯವಸ್ಥೆ ಮಾಡಲಾಗಿದೆ. ತರಬೇತಿ ಪಡೆದ ಮಹಿಳೆಯರು ಗ್ರಾ.ಪಂ. ವ್ಯಾಪ್ತಿಯ ಎಲ್ಲ ಗ್ರಾಮಗಳಿಂದಲೂ ಕಸ ಸಂಗ್ರಹಿಸಿ ವಿಲೇವಾರಿ ಮಾಡಬೇಕು. ಕಸದಿಂದ ಬಂದ ಆದಾಯವನ್ನು ಸಿಬ್ಬಂದಿ, ವಾಹನ ವೆಚ್ಚಕ್ಕೆ ಬಳಸಿಕೊಳ್ಳಲು ಅವಕಾಶ ನೀಡಲಾಗಿದೆ.

 ಕಸ ವಿಲೇವಾರಿಗೆ ಪ್ಲಾನ್

ಕಸ ವಿಲೇವಾರಿಗೆ ಪ್ಲಾನ್

ಸ್ಥಳಾವಕಾಶ ಇರುವ ಕಡೆ ಆಯಾ ಗ್ರಾ.ಪಂ.ಗಳಲ್ಲೇ ಕಸ ವಿಲೇವಾರಿ ತಾಣಗಳನ್ನು ಗುರುತಿಸಲಾಗಿದೆ. ಇಲ್ಲದ ಕಡೆ ಎರಡ್ಮೂರು ಗ್ರಾ.ಪಂ ಸೇರಿ ಕ್ಲಸ್ಟರ್ ಮಾಡಲಾಗಿದೆ. ಸೇಲ್ ಆಗದ ಕೆಲವು ಗುಜರಿ ಸಾಮಾನುಗಳನ್ನು ಎಂಆರ್‌ಎಫ್ (ಮೆಟಿರೀಯಲ್ ರಿಕವರಿ ಫೆಸಿಲಿಟಿ)ಯಲ್ಲಿ ಸಂಗ್ರಹಿಸಿ ಬೇಡಿಕೆ ಬಂದಾಗ ಮಾರುವ ಬಗ್ಗೆಯೂ ಸಿದ್ಧತೆ ಮಾಡಿಕೊಳ್ಳಲಾಗಿದೆ.

 ಮಹಿಳೆಯರಿಗೆ ಉತ್ತಮ ವೇತನ

ಮಹಿಳೆಯರಿಗೆ ಉತ್ತಮ ವೇತನ

ವಾರದಲ್ಲಿ ಎರಡು ದಿನ ಒಂದು ಗ್ರಾಮದಲ್ಲಿ ಕಸ ಸಂಗ್ರಹಣೆ ಮಾಡಬೇಕು. ದೊಡ್ಡ ಗ್ರಾಮಗಳಾಗಿದ್ದರೆ ದಿನಕ್ಕೊಮ್ಮೆ ಮಾಡಲಾಗುವುದು. ಕಸ ಸಂಗ್ರಹಣೆ ಹಾಗೂ ವಿಂಗಡಣೆ, ಚಾಲಕರಿಗೆ ಆಯಾ ಗ್ರಾಮ ಪಂಚಾಯತ್‌ಗಳೇ ವೇತನ ನಿಗದಿ ಮಾಡಬಹುದು. ಖರ್ಚು ವೆಚ್ಚ, ಆದಾಯದ ಆಧಾರದ ಮೇಲೆ ವೇತನ ನಿಗದಿಗೆ ಅವಕಾಶ ನೀಡಲಾಗಿದೆ. ಚಾಲಕರಿಗೆ ಕನಿಷ್ಠ 15 ಸಾವಿರ ರೂ. ಸಂಬಳ ಇದೆ.

ಖರ್ಚು ವೆಚ್ಚ ನಿರ್ವಹಣೆಗೆ ಆಯಾ ಗ್ರಾಮಗಳಿಂದಲೇ ಆದಾಯ ಸಂಗ್ರಹಕ್ಕೆ ಯೋಜನೆ ರೂಪಿಸಲಾಗಿದೆ. ತಿಂಗಳಿಗೆ ಪ್ರತಿ ಮನೆಯಿಂದ 20ರಿಂದ 30 ರೂ., ಅಂಗಡಿಗಳಾದರೆ 100 ರೂ., ಬಾರ್, ಹೋಟೆಲ್‌ಗಳಾದರೆ 500 ರೂ.ವರೆಗೂ ವೆಚ್ಚ ಸಂಗ್ರಹ ಮಾಡಬಹುದು. ಗ್ರಾಮಗಳ ಸ್ಥಿತಿಗತಿಗೆ ತಕ್ಕಂತೆ ಕೂಡ ಶುಲ್ಕ ಸಂಗ್ರಹಕ್ಕೆ ಅವಕಾಶ ನೀಡಲಾಗಿದೆ.

 ‘ಮನೆ ಅಷ್ಟೆ ಅಲ್ಲ, ಗ್ರಾಮವನ್ನೂ ಸ್ವಚ್ಛವಾಗಿಡ್ತಾರೆ’

‘ಮನೆ ಅಷ್ಟೆ ಅಲ್ಲ, ಗ್ರಾಮವನ್ನೂ ಸ್ವಚ್ಛವಾಗಿಡ್ತಾರೆ’

ಘನ ತ್ಯಾಜ್ಯ ವಿಲೇವಾರಿ ನಿರ್ವಹಣೆ ದೃಷ್ಟಿಯಿಂದ ರಾಜ್ಯದಲ್ಲಿ ಕಸ ಸಂಗ್ರಹಣೆಗೆ ವಾಹನ ಖರೀದಿಸಲಾಗಿದೆ. ಅದಕ್ಕೆ ಮಹಿಳಾ ಡ್ರೈವರ್‌ಗಳೇ ಬೇಕೆಂದು ಅಪೇಕ್ಷೆ ವ್ಯಕ್ತಪಡಿಸುತ್ತಿದ್ದೆವು. ಅದರಂತೆ ಅವಕಾಶ ಮಾಡಿಕೊಡಲಾಗಿದೆ. ಮನೆ ಸ್ವಚ್ಛವಾಗಿ ಇಟ್ಟುಕೊಳ್ಳುವ ಕೆಲಸ ಮಹಿಳೆಯರಿಗೆ ಗೊತ್ತು. ಅದೇ ರೀತಿ ಗ್ರಾಮವನ್ನೂ ಸ್ವಚ್ಛವಾಗಿಟ್ಟುಕೊಳ್ಳುವ ನಿಟ್ಟಿನಲ್ಲಿ ಅವರಿಗೆ ತರಬೇತಿ ನೀಡಿ ಅವರಿಗೆ ಮೊದಲ ಆದ್ಯತೆ ನೀಡಿದ್ದೇವೆ ಅನ್ನುತ್ತಾರೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಸಚಿವ ಕೆ.ಎಸ್. ಈಶ್ವರಪ್ಪ.

ರಾಜ್ಯದಲ್ಲಿ 6 ಸಾವಿರಕ್ಕೂ ಹೆಚ್ಚು ಗ್ರಾಮ ಪಂಚಾಯತ್‌ಗಳಿದ್ದು ಪ್ರತಿ ಗ್ರಾಮ ಪಂಚಾಯಿತಿ ಮಟ್ಟದಲ್ಲೂ ಮಹಿಳೆಯರಿಗೆ ಆದ್ಯತೆ ನೀಡಲಾಗಿದೆ. ಮೊದಲ ಹಂತದಲ್ಲಿ ಶಿವಮೊಗ್ಗದ 30, ಹಾವೇರಿ, ಚಿತ್ರದುರ್ಗದ 30, ರಾಯಚೂರಿನ 31 ಮಂದಿಗೆ ಚಾಲನಾ ತರಬೇತಿ ನೀಡಲಾಗಿದೆ. ಇವರು ನವೆಂಬರ್ 1ರಿಂದ ಅಧಿಕೃತವಾಗಿ ಕಾರ್ಯಾರಂಭ ಮಾಡಲಿದ್ದಾರೆ.

Recommended Video

Chahal ಅವರು ನಿನ್ನೆ ಪಂದ್ಯದಲ್ಲಿ ಇರಬೇಕಿತ್ತು ಎಂದ ಅಭಿಮಾನಿಗಳು | Oneindia Kannada

English summary
Waste disposal management will begin in villages by women from November 1 in Karnataka's few districts.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X