ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಂದ್ರನ ನೆಲದಲ್ಲಿ ಮಾನವನ ಸಂಚಾರಕ್ಕಾಗಿ ಹೊಸ ರೋವರ್ ಅಭಿವೃದ್ಧಿ

|
Google Oneindia Kannada News

ಐದು ದಶಕಗಳ ಬಳಿಕ ಚಂದ್ರನಲ್ಲಿ ಮನುಷ್ಯರು ಮತ್ತೊಮ್ಮೆ ಕಾಲಿಡಲಿದ್ದಾರೆ. 2025ಕ್ಕೆ ಚಂದ್ರ ಗ್ರಹಕ್ಕೆ ಮಾನವಸಹಿತ ನೌಕೆ ಕಳುಹಿಸಲು ನಾಸಾ ಅಣಿಯಾಗುತ್ತಿದೆ. ಅದಕ್ಕಾಗಿ ಲೂನಾರ್ ರೋವರ್ ವಾಹನ ಕೂಡ ತಯಾರಾಗುತ್ತಿದೆ.

ಅಮೆರಿಕದ ಲಾಕ್‌ಹೀಡ್ ಮಾರ್ಟಿನ್ ಮತ್ತು ಗುಡ್‌ಇಯರ್ ಸಂಸ್ಥೆಗಳು ಹೊಸ ರೋವರ್ ವಾಹನ ಅಭಿವೃದ್ಧಿಪಡಿಸುತ್ತಿವೆ. 2025ರೊಳಗೆ ಇದು ಸಿದ್ಧಗೊಳ್ಳುವ ನಿರೀಕ್ಷೆ ಇದೆ. ಲೂನಾರ್ ರೋವರ್ ಎಂಬುದು ಚಂದ್ರನ ನೆಲದ ಮೇಲೆ ಗಗನಯಾತ್ರಿಕರು ಸುತ್ತಾಡಲು ಬಳಸುವ ವಾಹನ. 1971ರ ನಾಸಾದ ಅಪೋಲೋ ಮಿಷನ್‌ನಲ್ಲಿ ಆಸ್ಟ್ರನಾಟ್‌ಗಳು ಮೊದಲು ರೋವರ್ ವಾಹನ ಬಳಸಿದ್ದರು.

ಚಂದ್ರನ ಮೇಲೆ ಮನುಷ್ಯನ ಮೊದಲ ಪಾದ ಸ್ಪರ್ಶ, ಐತಿಹಾಸಿಕ ಘಳಿಗೆಚಂದ್ರನ ಮೇಲೆ ಮನುಷ್ಯನ ಮೊದಲ ಪಾದ ಸ್ಪರ್ಶ, ಐತಿಹಾಸಿಕ ಘಳಿಗೆ

ಆಗ ಬಹಳ ಸೀಮಿತ ಕಾಲ ಮತ್ತು ದೂರಕ್ಕೆ ಮಾತ್ರ ಬಳಸಲಾಗುವಂತೆ ಲೂನಾರ್ ರೋವರ್ ವಾಹನವನ್ನು ನಿರ್ಮಿಸಲಾಗಿತ್ತು. ಈಗ ಹೆಚ್ಚು ದಿನಗಳ ಕಾಲ ಬಳಸಬಹುದಾದಂತೆ ರೋವರ್ ಅಭಿವೃದ್ಧಿ ಮಾಡಲಾಗುತ್ತಿದೆ.

ಲಾಕ್‌ಹೀಡ್ ಮಾರ್ಟಿನ್ ಎಂಬುದು ಕ್ಷಿಪಣಿ ಇತ್ಯಾದಿ ಮಿಲಿಟರಿ ಶಸ್ತ್ರಾಸ್ತ್ರಗಳನ್ನು ತಯಾರಿಸುತ್ತದೆ. ಇದರ ಮುಖ್ಯಕಚೇರಿ ಅಮೆರಿಕದ ವಾಷಿಂಗ್ಟನ್ ರಾಜ್ಯದಲ್ಲಿದೆ. ಅಮೆರಿಕಕ್ಕಷ್ಟೇ ಅಲ್ಲ ವಿಶ್ವದ ಬೇರೆ ಬೇರೆ ದೇಶಗಳಿಗೂ ಇದು ಕ್ಷಿಪಣಿ ಇತ್ಯಾದಿಯನ್ನು ತಯಾರಿಕೊಡುತ್ತದೆ.

ಇನ್ನು ಗುಡ್ ಇಯರ್ ಎಂಬುದು ಅಮೆರಿಕದ ಟಯರ್ ಕಂಪನಿಯಾಗಿದೆ. ಲೂನಾರ್ ರೋವರ್ ವಾಹನಕ್ಕೆ ಗಾಳಿರಹಿತ ಲೋಹದ ಟಯರ್‌ಗಳನ್ನು ತಯಾರಿಸುತ್ತಿದೆ.

ಏನಿದು ಅಪೊಲೊ 11 ಮೂನ್‌ ಲ್ಯಾಂಡಿಂಗ್, ಚಂದ್ರನ ಮೇಲೆ ಹೆಜ್ಜೆ ಯಾವಾಗ?ಏನಿದು ಅಪೊಲೊ 11 ಮೂನ್‌ ಲ್ಯಾಂಡಿಂಗ್, ಚಂದ್ರನ ಮೇಲೆ ಹೆಜ್ಜೆ ಯಾವಾಗ?

ಗ್ರಾಹಕ ಸ್ಥಾನದಲ್ಲಿ ನಾಸಾ

ಗ್ರಾಹಕ ಸ್ಥಾನದಲ್ಲಿ ನಾಸಾ

ನಾಸಾ ಎಂಬುದು ಅಮೆರಿಕ ಸರಕಾರದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ. ತಮ್ಮ ಎಲ್ಲಾ ಯೋಜನೆಗಳಿಗೂ ಬೇಕಾದ ವಸ್ತುಗಳನ್ನು ನಾಸಾವೇ ತಯಾರಿಸುತ್ತಿತ್ತು. ಅದರಿಂದ ನಾಸಾ ಮೇಲೆ ಅಪರಿಮಿತ ಒತ್ತಡ ಉಂಟಾಗುತ್ತಿತ್ತು. ಸಂಶೋಧನೆಗೆ ಹೆಚ್ಚು ಒತ್ತು ಕೊಡಲು ಆಗುತ್ತಿರಲಿಲ್ಲ. ಹೀಗಾಗಿ, ರಾಕೆಟ್ ಇತ್ಯಾದಿ ಬಾಹ್ಯಾಕಾಶ ಯೋಜನೆ ಸಂಬಂದಿತ ಹಲವು ಉತ್ಪನ್ನಗಳನ್ನು ತಯಾರಿಸಲು ಖಾಸಗಿ ಮಾರುಕಟ್ಟೆಗೆ ಅವಕಾಶ ಮಾಡಿಕೊಡಲಾಗಿದೆ. ರಾಕೆಟ್ ಇತ್ಯಾದಿಯನ್ನು ನಾಸಾ ಕೇವಲ ಎರವಲು ಪಡೆಯುತ್ತದೆ ಅಷ್ಟೇ.

ಇದರಿಂದ ಅಮೆರಿಕಕ್ಕೆ ಎರಡು ಲಾಭ. ಒಂದು ರಕ್ಷಣಾ ಕ್ಷೇತ್ರವನ್ನು ವಾಣಿಜ್ಯೀಕರಣಗೊಳಿಸಲು ಸಾಧ್ಯವಾಗುತ್ತದೆ. ಅ ಮೂಲಕ ಸಾಕಷ್ಟು ಆದಾಯ ಹರಿದುಬರುತ್ತದೆ. ಇನ್ನೊಂದು, ನಾಸಾ ಮೇಲಿನ ಹೊರೆ ಕಡಿಮೆಯಾಗಿ ಹೆಚ್ಚಿನ ಸಂಶೋಧನೆಗೆ ಸಮಯಾವಕಾಶ ಸಿಗುತ್ತದೆ.

ಮಸ್ಕ್ ಕೂಡ ಖಾಸಗಿ ಮಾರುಕಟ್ಟೆಯಲ್ಲಿ

ಮಸ್ಕ್ ಕೂಡ ಖಾಸಗಿ ಮಾರುಕಟ್ಟೆಯಲ್ಲಿ

ಅಮೆರಿಕದಲ್ಲಿ ಖಾಸಗಿ ಡಿಫೆನ್ಸ್ ಮತ್ತು ಬಾಹ್ಯಾಕಾಶ ಮಾರುಕಟ್ಟೆ ವಿಸ್ತೃತವಾಗಿದೆ. ಎಲಾನ್ ಮಸ್ಕ್ ಒಡೆತನದ ಸ್ಪೇಸ್ ಎಕ್ಸ್ ಸಂಸ್ಥೆ ಫಾಲ್ಕಾನ್ ಸರಣಿಯ ರಾಕೆಟ್‌ಗಳನ್ನು ತಯಾರಿಸುತ್ತದೆ. ನಾಸಾ ತನ್ನ ಬಾಹ್ಯಾಕಾಶ ಯೋಜನೆಗೆ ಇದೇ ರಾಕೆಟ್‌ಗಳನ್ನು ಬಳಸುತ್ತದೆ.

ಲಾಕ್‌ಹೀಡ್ ಮಾರ್ಟಿನ್ ಹೇಳಿಕೆ

ಲಾಕ್‌ಹೀಡ್ ಮಾರ್ಟಿನ್ ಹೇಳಿಕೆ

"ಚಂದ್ರನ ನೆಲದಲ್ಲಿ ಚಲಿಸಲು ಹೊಸ ತಲೆಮಾರಿನ ವಾಹನವನ್ನು ನಾಸಾಗಾಗಿ ತಯಾರಿಸುತ್ತಿದ್ದೇವೆ. ಇದು ವಿಜ್ಞಾನ ಮತ್ತು ಮಾನವನ ಅನ್ವೇಷಣೆ ಮಾಡುವ ಬೇರೆ ವಾಣಿಜ್ಯ ಕಂಪನಿಗಳು ಹಾಗೂ ಇತರ ಬಾಹ್ಯಾಕಾಶ ಸಂಸ್ಥೆಗಳಿಗೂ ಲಭ್ಯ ಇರಲಿದೆ" ಎಂದು ಲಾಕ್‌ಹೀಡ್ ಮಾರ್ಟಿನ್ ಸಂಸ್ಥೆಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಲಾಕ್‌ಹೀಡ್ ಮಾರ್ಟಿನ್ ಬಹಳ ಹಳೆಯ ಕಂಪನಿ. ಐವತ್ತಕ್ಕೂ ಹೆಚ್ಚು ವರ್ಷಗಳಿಂದ ನಾಸಾ ಜೊತೆ ಕೆಲಸ ಮಾಡಿದೆ.

ಚಂದ್ರನ ಅತಿರೇಕದ ವಾತಾವರಣ

ಚಂದ್ರನ ಅತಿರೇಕದ ವಾತಾವರಣ

ಚಂದ್ರನಲ್ಲಿ ಬಹಳ ಅತಿರೇಕದ ವಾತಾವರಣ ಇರುತ್ತದೆ. ಒಂದೇ ದಿನದಲ್ಲಿ ಉಷ್ಣಾಂಶದಲ್ಲಿ ವಿಪರೀತ ವೈರುದ್ಧ್ಯವಿರುತ್ತದೆ. ರಾತ್ರಿಯ ಹೊತ್ತು ಮೈನಸ್ 157 ಡಿಗ್ರಿ ಸೆಲ್ಷಿಸ್‌ನಷ್ಟು ಕೊರೆಯುವ ಚಳಿ ಇರುತ್ತದೆ. ಬೆಳಗಿನ ಹೊತ್ತು 121 ಡಿಗ್ರಿ ಸೆಲ್ಷಿಯಸ್ ಬಿಸಿ ಇರುತ್ತದೆ.

ಭೂಮಿಯಲ್ಲಿ ಅಂಟಾರ್ಟಿಕಾದಲ್ಲಿ ಮಾತ್ರ ನಾವು ಮೈನಸ್ 50 ಡಿಗ್ರಿಯವರೆಗೆ ಚಳಿ ಕಾಣಬಹುದು. ಹಿಮಾಲಯ ಇತ್ಯಾದಿ ಕಡೆ ಮೈನಸ್ 25 ಡಿಗ್ರಿಯವರೆಗೂ ಚಳಿ ಇರುತ್ತದೆ. ಅಂಥದ್ದರಲ್ಲಿ ಚಂದ್ರನಲ್ಲಿ ಮೈನಸ್ 157 ಡಿಗ್ರಿ ಎಂದರೆ ಮನುಷ್ಯ ಮರಗಟ್ಟಿ ಹೋಗುತ್ತಾನೆ. ಇನ್ನು, 121 ಡಿಗ್ರಿ ಸೆಲ್ಷಿಸ್ ಬಿಸಿಯನ್ನೂ ತಾಳುವುದು ಸಾಧ್ಯವೇ.

ಈ ಅತಿರೇಕದ ವಾತಾವರಣದಲ್ಲಿ ಸುದೀರ್ಘವಾಗಿ ಕಾರ್ಯನಿರ್ವಹಿಸಬಲ್ಲ ರೋವರ್ ವಾಹನವನ್ನು ಅಭಿವೃದ್ಧಿಪಡಿಸುವುದು ಈಗ ಸವಾಲಿನ ಕೆಲಸ. ಗುಡ್‌ಇಯರ್ ಸಂಸ್ಥೆ ಅದಕ್ಕಾಗಿ ವಿಶೇಷ ಟಯರ್ ಅನ್ನು ತಯಾರಿಸುತ್ತಿದೆ.

ನಾಸಾದ ಈ ಹೊಸ ಅಪೋಲೊ ಮಿಷನ್‌ನಲ್ಲಿ ಲಾಕ್‌ಹೀಡ್ ಮಾರ್ಟಿನ್ ಮತ್ತು ಗುಡ್‌ ಇಯರ್ ಜೊತೆಗೆ ಕೆನಡಾದ ಎಂಡಿಎ ಸಂಸ್ಥೆ ಕೂಡ ಕೈ ಜೋಡಿಸಿದೆ. ಇದು ಲೂನಾರ್ ರೋವರ್ ವಾಹನಗಳಿಗೆ ರೋಬೋಟಿಕ್ ಆರ್ಮ್ ಟೆಕ್ನಾಲಜಿಯ ನೆರವು ಒದಗಿಸುತ್ತಿದೆ.

(ಒನ್ಇಂಡಿಯಾ ಸುದ್ದಿ)

English summary
NASA is set to launch 2025 Moon mission. Lockheed Martin and Goodyear are developing new generation lunar rover vehicle to use on moon surface.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X