Get Updates
Get notified of breaking news, exclusive insights, and must-see stories!

Chandrayaan 3: ಚಂದ್ರನ ಅಂಗಳದಲ್ಲಿ ವಿಕ್ರಮ್‌ ಲ್ಯಾಂಡರ್ ಚಿತ್ರ ಕ್ಲಿಕ್ಕಿಸಿದ ಪ್ರಗ್ಯಾನ್ ರೋವರ್!

ಚಂದ್ರಯಾನ-3 ರೋವರ್ ಪ್ರಗ್ಯಾನ್ ಇಂದು ಲ್ಯಾಂಡರ್ ವಿಕ್ರಂನ ಚಿತ್ರವನ್ನು ಹಂಚಿಕೊಂಡಿದ್ದು, ಇದು ತನ್ನ ನ್ಯಾವಿಗೇಷನ್ ಕ್ಯಾಮೆರಾವನ್ನು ಬಳಸಿ ಕ್ಲಿಕ್ ಮಾಡಿದ ಮೊದಲ ಚಿತ್ರವಾಗಿದೆ. ಚಂದ್ರನ ಮೇಲೆ ಇಳಿದ ನಂತರ ರೋವರ್ ಕ್ಲಿಕ್ ಮಾಡಿದ ಮೊದಲ ಚಿತ್ರ ಇದಾಗಿದೆ. ಇದುವರೆಗೂ ಎಲ್ಲಾ ಫೋಟೋಗಳು ಮತ್ತು ವಿಡಿಯೋಗಳನ್ನು ವಿಕ್ರಂ ಲ್ಯಾಂಡರ್ ಸೆರೆಹಿಡಿದಿತ್ತು.

ಟ್ವಿಟರ್‌ನಲ್ಲಿ ಫೋಟೋವನ್ನು ಹಂಚಿಕೊಂಡಿರುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಇದನ್ನು "ಮಿಷನ್‌ನ ಚಿತ್ರ" ಎಂದು ಕರೆದಿದೆ. ರೋವರ್‌ನಲ್ಲಿರುವ ನವಕ್ಯಾಮ್‌ಗಳನ್ನು ಬೆಂಗಳೂರಿನಲ್ಲಿರುವ ಲ್ಯಾಬೊರೇಟರಿ ಫಾರ್ ಎಲೆಕ್ಟ್ರೋ-ಆಪ್ಟಿಕ್ಸ್ ಸಿಸ್ಟಮ್ಸ್ (LEOS) ಅಭಿವೃದ್ಧಿಪಡಿಸಿದೆ.

chandrayaan-3

ಚಂದ್ರಯಾನ 3 ವಿಚಾರದಲ್ಲಿ ಇಸ್ರೋ ಭಾರಿ ಯಶಸ್ಸು ಸಾಧಿಸಿದೆ. ಚಂದ್ರಯಾನ 2 ವಿಫಲವಾದ ಬಳಿಕ ಈ ಬಾರಿ ಇಸ್ರೋ ಹೆಚ್ಚಿನ ತಯಾರಿ ಮಾಡಿಕೊಂಡು ಯಶಸ್ವಿಯಾಗಿ ಚಂದ್ರನ ದಕ್ಷಿಣ ಧೃವದಲ್ಲಿ ನೌಕೆಯನ್ನು ಇಳಿಸಿದೆ. ಭಾರತ ಈ ಸಾಧನೆ ಮಾಡಿದ ನಾಲ್ಕನೇ ರಾಷ್ಟ್ರ ಎನಿಸಿಕೊಂಡಿದೆ. ಚಂದ್ರನ ದಕ್ಷಿಣ ಧ್ರುವದಲ್ಲಿ ನೌಕೆಯನ್ನು ಇಳಿಸಿದ ಮೊದಲ ರಾಷ್ಟ್ರವಾಗಿದೆ. ರಷ್ಯಾ ಕೂಡ ಇದೇ ಸಂದರ್ಭದಲ್ಲಿ ನೌಕೆಯನ್ನು ಇಳಿಸಲು ಪ್ರಯತ್ನಿಸಿದರೂ ಲ್ಯಾಂಡರ್ ಅಪಘಾತಕ್ಕೀಡಾಗಿತ್ತು.

ಹಲವು ಖನಿಜಗಳು ಪತ್ತೆ

ಚಂದ್ರನ ದಕ್ಷಿಣ ಧ್ರುವದ ಬಳಿ ರೋವರ್ ಸಲ್ಫರ್ ಅನ್ನು ಕಂಡುಹಿಡಿದ ಒಂದು ದಿನದ ನಂತರ ಹೊಸ ಫೋಟೋ ಹಂಚಿಕೊಂಡಿದೆ. ಅಲ್ಯೂಮಿನಿಯಂ, ಕ್ಯಾಲ್ಸಿಯಂ, ಕಬ್ಬಿಣ, ಕ್ರೋಮಿಯಂ, ಟೈಟಾನಿಯಂ, ಮ್ಯಾಂಗನೀಸ್, ಸಿಲಿಕಾನ್ ಮತ್ತು ಆಮ್ಲಜನಕವನ್ನೂ ರೋಬೋಟ್ ಪತ್ತೆ ಮಾಡಿದೆ ಎಂದು ಇಸ್ರೋ ಮಂಗಳವಾರ ಪ್ರಕಟಿಸಿದೆ.

"ಚಂದ್ರಯಾನ-3 ರೋವರ್‌ನಲ್ಲಿರುವ ಲೇಸರ್-ಇಂಡ್ಯೂಸ್ಡ್ ಬ್ರೇಕ್‌ಡೌನ್ ಸ್ಪೆಕ್ಟ್ರೋಸ್ಕೋಪಿ (LIBS) ಉಪಕರಣವು ದಕ್ಷಿಣ ಧ್ರುವದ ಬಳಿ ಚಂದ್ರನ ಮೇಲ್ಮೈಯ ಧಾತುರೂಪದ ಸಂಯೋಜನೆಯ ಮೇಲೆ ಮೊಟ್ಟಮೊದಲ ಇನ್-ಸಿಟು ಮಾಪನಗಳನ್ನು ಮಾಡಿದೆ. ಈ ಇನ್-ಸಿಟು ಮಾಪನಗಳು ಸಲ್ಫರ್ ಇರುವಿಕೆಯನ್ನು ಖಚಿತಪಡಿಸುತ್ತವೆ." ಎಂದು ಬಾಹ್ಯಾಕಾಶ ಸಂಸ್ಥೆ ಹೇಳಿಕೆಯಲ್ಲಿ ತಿಳಿಸಿದೆ. ಚಂದ್ರಯಾನ 3 ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತಕ್ಕೆ ಹೊಸ ಗೌರವ ತಂದುಕೊಟ್ಟಿದೆ, ಚಂದ್ರನಲ್ಲಿ ಮಾನವ ವಸಾಹತು ಸ್ಥಾಪನೆಗೆ ಹಲವು ಮುಖ್ಯ ಮಾಹಿತಿಗಳು ಈ ಯಾನದಲ್ಲಿ ತಿಳಿದುಬಂದಿವೆ.

ಚಂದ್ರಯಾನ 3 ಯಶಸ್ಸಿನಲ್ಲಿರುವ ಇಸ್ರೋ ಈಗ ಸೂರ್ಯನ ಅಧ್ಯಯನಕ್ಕೆ ಮುಂದಾಗಿದ್ದು, ಸೆಪ್ಟೆಂಬರ್ 2ರಂದು ಆದಿತ್ಯ ಎಲ್1 ನೌಕೆಯನ್ನು ಉಡಾವಣೆ ಮಾಡಲಿದೆ. ಆದಿತ್ಯ ಎಲ್ 1 ನೌಕೆಯು ಸೂರ್ಯನ ಬಗ್ಗೆ ಹೆಚ್ಚಿನ ಅಧ್ಯಯನ ಮಾಡಲಿದ್ದು, ಹಲವು ಆಸಕ್ತಿಕರ ಸಂಗತಿಗಳು ಹೊರಬೀಳುವ ಸಾಧ್ಯತೆ ಇದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+