Chandrayaan-3: ಚಂದ್ರನ ಮೇಲೆ ಮತ್ತೊಮ್ಮೆ ಲ್ಯಾಂಡಿಂಗ್ ಮಾಡಿದ ಇಸ್ರೋ!
ಚಂದ್ರನ ಅಧ್ಯಯನ ನಡೆಸಲು 'ಚಂದ್ರಯಾನ-3' ಮೂಲಕ ಭಾರತ ಮಹತ್ವದ ನಿರ್ಧಾರ ಕೈಗೊಂಡಿತ್ತು. ಆಗಸ್ಟ್ 23ರಂದು ಅತ್ಯಂತ ಯಶಸ್ವಿಯಾಗಿ ಲ್ಯಾಂಡಿಂಗ್ ಕೂಡ ಮಾಡಿತ್ತು. ಇದೇ ಮೊದಲ ಬಾರಿ ಚಂದ್ರನ ದಕ್ಷಿಣ ಧ್ರುವದಲ್ಲಿ ಭಾರತ ಲ್ಯಾಂಡರ್ ಇಳಿಸಿತ್ತು. ಆದರೆ ಮತ್ತೊಮ್ಮೆ ಇಸ್ರೋ ಸಂಸ್ಥೆಯ ಲ್ಯಾಂಡರ್ ಚಂದ್ರನ ದಕ್ಷಿಣದ ಮೇಲೆ ಸಾಫ್ಟ್ ಲ್ಯಾಂಡಿಂಗ್ ಮಾಡಿದೆ. ಅರೆ ಅದು ಹೇಗೆ ಸಾಧ್ಯ? ಅಂದ್ರಾ. ಆ ಕುರಿತು ಸ್ಪೆಷಲ್ ಮಾಹಿತಿ ತಿಳಿಯೋಣ ಬನ್ನಿ.
ಹೌದು, ಚಂದ್ರನ ಮೇಲೆ ಭಾರತ ಹೊಸ ಇತಿಹಾಸ ಬರೆದಿದೆ. ಈಗಾಗಲೇ ಚಂದ್ರನ ಬಗ್ಗೆ ಅಧ್ಯಯನ ನಡೆಸಿ ರೋವರ್ ಮೂಲಕ ಚಂದ್ರನ ಮಣ್ಣು ಅಗೆದು ದಕ್ಷಿಣ ಧ್ರುವದಲ್ಲಿರುವ ವಸ್ತುಗಳನ್ನ ಪತ್ತೆ ಮಾಡಿದೆ. ಆದ್ರೆ ಚಂದ್ರಯಾನ-3ರ ರೋವರ್ ಪ್ರಜ್ಞಾನ್ ಚಂದ್ರನ ಮೇಲೆ ಒಂದು ದಿನದ ಅಂದರೆ ಭೂಮಿಯ ಲೆಕ್ಕದಲ್ಲಿ 14 ದಿನ ಕಾಲ ಕಾರ್ಯಾಚರಣೆ ನಡೆಸಿ ಈಗ ನಿದ್ದೆಗೆ ಜಾರಿದೆ. ಇದೇ ಹೊತ್ತಲ್ಲಿ ಇಸ್ರೋ ಸಂಸ್ಥೆ ಮತ್ತೊಮ್ಮೆ ಚಂದ್ರನ ಮೇಲೆ ಸಾಫ್ಟ್ ಲ್ಯಾಂಡಿಂಗ್ ಮಾಡಿರುವ ಬಗ್ಗೆ ಸಿಹಿಸುದ್ದಿ ನೀಡಿದೆ!

ಇತಿಹಾಸ ಸೃಷ್ಟಿಸಿದ ಇಸ್ರೋ ಸಂಸ್ಥೆ
ನಿಮಗೆಲ್ಲಾ ಗೊತ್ತಿರುವಂತೆ ಚಂದ್ರನ 1 ದಿನ ಭೂಮಿಗೆ 14 ದಿನಗಳ ಲೆಕ್ಕ. ಹೀಗೆ ಚಂದ್ರನ ದಕ್ಷಿಣ ಧ್ರುವದಲ್ಲಿ ಭಾರತದ ರೋವರ್ & ಲ್ಯಾಂಡರ್ ಒಟ್ಟಾಗಿ ಕೆಲಸ ಮಾಡುತ್ತಿದ್ದವು. ಆದರೆ ಚಂದ್ರನ ಮೇಲೆ ಕತ್ತಲು ಆವರಿಸಿದ ಕಾರಣ ಇದೀಗ ರೋವರ್ ನಿದ್ದೆಗೆ ಜಾರಿ ಮತ್ತು ಕಾರ್ಯಾಚರಣೆ ಪ್ರಕ್ರಿಯೆ ನಿಲ್ಲಿಸಲಾಗಿದೆ. ಉಪಕರಣಗಳು (ಪೇಲೋಡ್) ಸ್ಲೀಪ್ ಮೋಡ್‌ಗೆ ಜಾರಿವೆ. ಈ ಸಂದರ್ಭದಲ್ಲಿ ಚಂದ್ರನ ಮೇಲಿರುವ ವಿಕ್ರಂ ಲ್ಯಾಂಡರ್ ಮತ್ತೊಮ್ಮೆ ಸಾಫ್ಟ್ ಲ್ಯಾಂಡ್ ಮಾಡಿ ಇತಿಹಾಸ ಬರೆದಿದೆ. ಅದು ಹೇಗೆ ಸಾಧ್ಯ? ಮುಂದೆ ಓದಿ.
Chandrayaan-3 Mission:
— ISRO (@isro) September 4, 2023
🇮🇳Vikram soft-landed on 🌖, again!
Vikram Lander exceeded its mission objectives. It successfully underwent a hop experiment.
On command, it fired the engines, elevated itself by about 40 cm as expected and landed safely at a distance of 30 – 40 cm away.… pic.twitter.com/T63t3MVUvI
ಜಾಗ ಖಾಲಿ ಮಾಡಿದ ಲ್ಯಾಂಡರ್!
ಅಂದಹಾಗೆ ಸ್ಲೀಪ್ ಮೋಡ್ ಪ್ರಕ್ರಿಯೆ ನಂತರ ಇಸ್ರೋ ಮತ್ತೊಂದು ಮಹತ್ವದ ಪ್ರಯೋಗವನ್ನ ಯಶಸ್ವಿಯಾಗಿ ಚಂದ್ರನ ಅಂಗಳದಲ್ಲಿ ಪೂರೈಸಿದೆ. ಚಂದ್ರನ ಮೇಲೆ ಲ್ಯಾಂಡ್ ಆಗಿರುವ ಈ ವಿಕ್ರಂ ಲ್ಯಾಂಡರ್ ಅನ್ನ ಬೇರೆ ಕಡೆ ಸ್ಥಳಾಂತರ ಮಾಡಲಾಗಿದೆ. ಶಿವಶಕ್ತಿ ಪಾಯಿಂಟ್‌ನಲ್ಲಿ ಇದ್ದ ವಿಕ್ರಂ ಲ್ಯಾಂಡರ್ ಅನ್ನ ಸುಮಾರು 40 ಸೆಂ.ಮೀ ಎತ್ತರ ಹಾರಿಸಿ, ನಂತರ 30 ರಿಂದ 40 ಸೆಂ.ಮೀ ಪಕ್ಕಕ್ಕೆ ಲ್ಯಾಂಡ್ ಮಾಡಲಾಗಿದೆ. ಹೀಗೆ ಭವಿಷ್ಯದಲ್ಲಿ ಮನುಷ್ಯರನ್ನ ಚಂದ್ರನ ಮೇಲೆ ಇಳಿಸಿ, ವಾಪಸ್ ಕರೆತರಲು ಸಹಾಯ ಮಾಡಲಿದೆ. ಈ ಪ್ರಯೋಗದಲ್ಲೂ ಭಾರತ ಹಾಗೂ ಭಾರತೀಯ ವಿಜ್ಞಾನಿಗಳು ಗೆದ್ದು ಬೀಗಿದ್ದಾರೆ.

ಇಸ್ರೋ ಸಾಧನೆ, ಭಾರತಕ್ಕೆ ಹೆಮ್ಮೆ
ಲ್ಯಾಂಡರ್ ಇಳಿಸುವುದು ಮತ್ತು ಅದನ್ನ ಅಕ್ಕಪಕ್ಕ ಜರುಗಿಸುವುದು ಸುಲಭ ವಿಚಾರವಂತು ಅಲ್ಲ. ಅದರಲ್ಲೂ ಚಂದ್ರನ ದಕ್ಷಿಣ ಧ್ರುವದ ಮೇಲೆ ಇದುವರೆಗೂ ಯಾವುದೇ ದೇಶವೂ ಲ್ಯಾಂಡರ್ ಇಳಿಸಲು ಆಗಿರಲಿಲ್ಲ. ಆದರೆ ಭಾರತ ಆಗಸ್ಟ್ 23ರಂದು ಮೊದಲ ಬಾರಿಗೆ ಈ ಸಾಧನೆ ಮಾಡಿತ್ತು. ಇದೀಗ ಅದೇ ಲ್ಯಾಂಡರ್ ಮತ್ತೆ ಮೇಲೆ ಏರಿ, ಇನ್ನೊಮ್ಮೆ ಚಂದ್ರನ ಮೇಲೆ ಸಾಫ್ಟ್ ಲ್ಯಾಂಡ್ ಮಾಡಿದೆ. ಈ ಕುರಿತು ಟ್ವೀಟ್ ಮಾಡಿ ಇಸ್ರೋ ವಿಜ್ಞಾನಿಗಳು ಖುಷಿ ಹಂಚಿಕೊಂಡಿದ್ದಾರೆ. ಭವಿಷ್ಯದಲ್ಲಿ ಚಂದ್ರನ ಮೇಲೆ ಮಾನವನ ಕಳುಹಿಸಿ ವಾಪಸ್ ಕರೆತರುವ ಯೋಜನೆಗೆ ಪೂರಕವಾಗಿರುವ ಈ ಪ್ರಯತ್ನ ಸಕ್ಸಸ್ ಆಗಿದೆ ಎಂದು ತಿಳಿಸಿದ್ದಾರೆ.
ಇದೀಗ ಇಸ್ರೋ ಸಂಸ್ಥೆ ಕಾರ್ಯದಿಂದ ರೋವರ್‌ನ ಎಪಿಎಕ್ಸ್‌ಎಸ್ & ಲಿಬ್ಸ್ ಉಪಕರಣಗಳನ್ನ ಸ್ಥಗಿತಗೊಳಿಸಲಾಗಿದೆ. ಹೀಗಾಗಿ ಲ್ಯಾಂಡರ್ ಮೂಲಕ ಭೂಮಿಗೆ ಬರುತ್ತಿದ್ದ ಮಾಹಿತಿ ನಿಂತು ಹೋಗಿದೆ. ಸೆಪ್ಟೆಂಬರ್ 22ಕ್ಕೆ ಚಂದ್ರನಲ್ಲಿ ಸೂರ್ಯೋದಯ ಆಗುವುದರಿಂದ ಆಗ ಮತ್ತೊಮ್ಮೆ ಸೌರ ಫಲಕಗಳಿಗೆ ಬೆಳಕು ಸಿಗಲಿದೆ. ಆಗ ಮತ್ತೆ ಲ್ಯಾಂಡರ್ & ರೋವರ್ ನಿದ್ದೆಯಿಂದ ಎದ್ದು, ಭಾರತದ ವಿಜ್ಞಾನಿಗಳ ಕನಸು ನನಸು ಮಾಡಲಿವೆ. ಇನ್ನಷ್ಟು ಅಧ್ಯಯನವನ್ನು ರೋವರ್ ಮತ್ತು ಲ್ಯಾಂಡರ್‌ನಿಂದ ನಿರೀಕ್ಷೆ ಮಾಡಬಹುದು ಎನ್ನಲಾಗಿದೆ.












Click it and Unblock the Notifications