Aditya-L1: ಕ್ಲಿಕ್.. ಕ್ಲಿಕ್.. ಭೂಮಿ ಜೊತೆ ಇಸ್ರೋ ಸೆಲ್ಫಿ ಹೇಗಿದೆ?
ಭಾರತೀಯರ ಕೀರ್ತಿ ಪತಾಕೆ ಭೂಮಿ ಮೇಲೆ ಮಾತ್ರವಲ್ಲ, ಈಗ ಪೂರ್ತಿ ಸೌರಮಂಡಲದ ಉದಗಲಕ್ಕೂ ಚಾಚಿದೆ. ಭಾರತದ ತಾಕತ್, ಭಾರತೀಯರ ಶಕ್ತಿಗೆ ಜಗತ್ತು ತಣ್ಣಗೆ ಕೂತಿದೆ. ಹೀಗೆ ಭಾರತದ ಹೆಸರನ್ನು ಬಾಹ್ಯಾಕಾಶ ಲೋಕದಲ್ಲಿ ಮಿನುಗುವಂತೆ ಮಾಡಿದ್ದು ಇಸ್ರೋ ಸಂಸ್ಥೆ ಮತ್ತು ಇಸ್ರೋ ವಿಜ್ಞಾನಿಗಳು. ಇಸ್ರೋ ಮತ್ತೊಂದು ಸಾಧನೆ ಮಾಡಿದ್ದು, ಭೂಮಿ ಹಾಗೂ ಚಂದ್ರನ ಜೊತೆಗೆ ಸಖತ್ ಸೆಲ್ಫಿ ಕ್ಲಿಕ್ ಮಾಡಿದೆ ಇಸ್ರೋ ನೌಕೆ.
ಚಂದ್ರಯಾನ-3 ಯಶಸ್ಸಿನ ನಂತರ ಭಾರತ ಸೂರ್ಯನ ಅಧ್ಯಯನಕ್ಕೆ ನೌಕೆ ಉಡಾಯಿಸಿ, ಅದ್ರಲ್ಲೂ ಸಕ್ಸಸ್ ಕಂಡಿದೆ. ಹೀಗಿದ್ದಾಗ ಸೂರ್ಯನ ಅಧ್ಯಯನ ನಡೆಸುತ್ತಿರುವ 'ಇಸ್ರೋ' ಸಂಸ್ಥೆಗೆ ಸಿಹಿಸುದ್ದಿ ಸಿಕ್ಕಿದೆ. ಇಸ್ರೋ ಉಡಾಯಿಸಿದ್ದ 'ಆದಿತ್ಯ ಎಲ್ 1' ಸೂರ್ಯನ ಕಡೆಗೆ ಪಯಣ ಬೆಳೆಸಿದೆ. ಇದೇ ಸಂದರ್ಭದಲ್ಲಿ ಭೂಮಿ ಜೊತೆಗೆ ಸಖತ್ ಸೆಲ್ಫಿ ಕ್ಲಿಕ್ ಮಾಡಿದ್ದು, ಭೂಮಿಗೆ ಕಳುಹಿಸಿಕೊಟ್ಟಿದೆ. ಸೆಪ್ಟೆಂಬರ್ 07 ಅಂದರೆ ಇಂದು ಭೂಮಿ ಮತ್ತು ಚಂದ್ರನ ಜತೆ ಸೆಲ್ಫಿ ಫೋಟೋ ಕ್ಲಿಕ್ಕಿಸಿ ಭೂಮಿಗೆ ಕಳುಹಿಸಿದೆ.

ಸಂತಸ ಹಂಚಿಕೊಂಡ ಇಸ್ರೋ ವಿಜ್ಞಾನಿಗಳು
ಭಾರತ ಸೂರ್ಯನ ಸಂಪೂರ್ಣ ಅಧ್ಯಯನ ನಡೆಸಲು ಮುಂದಾಗಿದ್ದು, ಇದೀಗ ಪ್ರತಿ ಕ್ಷಣ ತನ್ನ ಗುರಿಯಲ್ಲಿ ಯಶಸ್ಸು ಸಾಧಿಸುತ್ತಿದೆ. ಪರಿಸ್ಥಿತಿ ಹೀಗಿದ್ದಾಗಲೇ ಭೂಮಿ ಮತ್ತು ಚಂದ್ರನ ಜತೆ ಸೆಲ್ಫಿ ಕ್ಲಿಕ್ ಮಾಡಿ 'ಆದಿತ್ಯ ಎಲ್ 1' ಸರ್ಪ್ರೈಸ್ ಕೊಟ್ಟಿದೆ. ಹೀಗಾಗಿ 'ಆದಿತ್ಯ ಎಲ್ 1' ಕಳುಹಿಸಿದ ಫೋಟೋ ಶೇರ್ ಮಾಡಿಕೊಂಡಿರುವ ಇಸ್ರೋ, ಸಂತಸ ಹಂಚಿಕೊಂಡಿದೆ. ಈ ಮೂಲಕ ಇಷ್ಟುದಿನ ಅಮೆರಿಕದ ನಾಸಾ ಹಾಗೂ ಯುರೋಪ್ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಗಳು ಮಾಡುತ್ತಿದ್ದ ಸಾಧನೆಯನ್ನ ಭಾರತ ಕೂಡ ಮಾಡಿ ತೋರಿಸಿದೆ. ಬಾಹ್ಯಾಕಾಶ ಲೋಕದಲ್ಲಿ ತನ್ನ ಶಕ್ತಿ ಏನು ಎಂಬುದನ್ನ ತಿಳಿಸಿದೆ.
Aditya-L1 Mission:
— ISRO (@isro) September 7, 2023
👀Onlooker!
Aditya-L1,
destined for the Sun-Earth L1 point,
takes a selfie and
images of the Earth and the Moon.#AdityaL1 pic.twitter.com/54KxrfYSwy
ಇಸ್ರೋ ಶಕ್ತಿ ಎಂತಹದ್ದು ಗೊತ್ತಾ?
ಅತ್ಯಂತ ಕಡಿಮೆ ವೆಚ್ಚದಲ್ಲಿ ದೊಡ್ಡ ದೊಡ್ಡ ಯೋಜನೆಗಳನ್ನೂ ಸಾಧಿಸಿ ತೋರಿಸುತ್ತಿರುವ ಕೀರ್ತಿ ಇಸ್ರೋಗೆ ಸಲ್ಲುತ್ತದೆ. ಅದರಲ್ಲೂ 'ಆದಿತ್ಯ ಎಲ್ 1' ಅತ್ಯುತ್ತಮವಾಗಿ ತನ್ನ ಕೆಲಸ ನಿರ್ವಹಿಸುತ್ತಿದೆ. ಹೀಗೆ 'ಆದಿತ್ಯ ಎಲ್ 1' ತನ್ನ ಗುರಿ ಅಂದರೆ ನಿಗದಿತ ಕಕ್ಷೆ ಸೇರಿದ ನಂತರ ನಿತ್ಯ ಅಂದಾಜು 1,440 ಫೋಟೋಗಳನ್ನ ಗ್ರೌಂಡ್ ಸ್ಟೇಷನ್ ಕಡೆಗೆ ಕಳುಹಿಸುವ ನಿರೀಕ್ಷೆಯು ಇದೆ. ಹೀಗೆ ಬಂದು ಬೀಳುವ ರಾಶಿ ರಾಶಿ ಫೋಟೋಗಳನ್ನ ಇಸ್ರೋ ವಿಜ್ಞಾನಿ ಸಮೂಹವು ಅಧ್ಯಯನ ನಡೆಸಿ, ಭೂಮಿಗೆ ಆಸರೆಯಾಗಿ ನಿಲ್ಲಲಿದೆ.

ಮತ್ತೊಂದು ಸಕ್ಸಸ್ ಗ್ಯಾರಂಟಿ!
ಅಷ್ಟಕ್ಕೂ ಆಂಧ್ರಪ್ರದೇಶದ ಶ್ರೀಹರಿಕೋಟಾದಿಂದ ಸೆಪ್ಟೆಂಬರ್ 2ರಂದು ಆದಿತ್ಯ ಎಲ್ 1 ನೌಕೆ ಉಡಾಯಿಸಿತ್ತು ಇಸ್ರೋ. ಈಗಾಗಲೆ ಆದಿತ್ಯ ಎಲ್ 1 ವ್ಯೂಮ ನೌಕೆ ಕಕ್ಷೆ ಎತ್ತರಿಸುವ ಕಾರ್ಯ 2 ಬಾರಿ ಯಶಸ್ವಿಯಾಗಿ ನಡೆದಿದೆ. ಮುಂದಿನ ಕಕ್ಷೆ ಎತ್ತರಿಸುವ ಕಾರ್ಯ ಸೆಪ್ಟೆಂಬರ್ 10ರಂದು ಅಂದರೆ ಭಾನುವಾರ ನಸುಕಿನಲ್ಲಿ 2.30ಕ್ಕೆ ನಡೆಯಲಿದೆ. ಹೀಗಾಗಿ ಇಸ್ರೋ ಸಂಸ್ಥೆ ವಿಜ್ಞಾನಿ ಸಮೂಹ ಹಗಲು-ರಾತ್ರಿ ಲೆಕ್ಕಿಸದೆ ಸೂರ್ಯನ ಈ ನೌಕೆಯನ್ನು ಕಾಯುತ್ತಿದೆ. ಸೂರ್ಯನ ಬಗ್ಗೆ ಆಳ ಅಧ್ಯಯನ ನಡೆಸಲು ಇಸ್ರೋ 'ಆದಿತ್ಯ ಎಲ್ 1' ಉಡಾವಣೆ ಮಾಡಿತ್ತು.
ಬಿಸಿ ಬಿಸಿ ಸೂರ್ಯನ ಅಧ್ಯಯನ!
ಮನೆಗಳಲ್ಲಿ ಕುದಿವ ನೀರಿನ ಬಿಸಿ ಎಷ್ಟಿರುತ್ತೆ ಹೇಳಿ? ಅಬ್ಬಬ್ಬಾ ಅಂದರೆ 100 ಡಿಗ್ರಿ ಸೆಲ್ಸಿಯಸ್, ಬೇಡ ಬೇಡ ಅಂದ್ರೂ 100ರ ಗಡಿ ಆಸುಪಾಸು ಇರಬಹುದು. ಆದರೆ ಇದನ್ನೂ ಮೀರಿ ಹೋದರೆ ಅದರ ಕಥೆ ಬೇರೆ. ಯಾಕೆ ಈ ಉದಾಹರಣೆ ಅಂದರೆ 100 ಡಿಗ್ರಿ ಸೆಲ್ಸಿಯಸ್ ಇರುವ ಕುದಿಯುವ ನೀರನ್ನೇ ಬಿಸಿ ಅಂತಾ ಕರೆಯುತ್ತೇವೆ. ಆದರೆ ಸೂರ್ಯನ ಮೇಲೆ ಇದು ಎಷ್ಟಿರುತ್ತದೆ ಗೊತ್ತಾ.? ಸುಮಾರು 5,600 ಡಿಗ್ರಿ ಸೆಲ್ಸಿಯಸ್! ಹೌದು ಕಷ್ಟವಾದರೂ ಈ ವಿಚಾರ ನಂಬಬೇಕು. ಇಷ್ಟು ಬಿಸಿ ವಾತಾವರಣಕ್ಕೆ ಭೂಮಿ ಮೇಲಿನ ಯಾವುದೇ ವಸ್ತು ಹೋದರೂ ಧೂಳ್ ಧೂಳ್. ಇಷ್ಟು ತಾಪಮಾನ ಇದ್ದಾಗ ರಿಸ್ಕ್ ಕೂಡ ಇದ್ದೇ ಇರುತ್ತೆ.

ಇಸ್ರೋ ಉಪಗ್ರಹದ ಗುರಿ ಏನು?
ಸೂರ್ಯನ ಸುತ್ತಲೂ ಇಷ್ಟೊಂದು ತಾಪಮಾನ ಇದ್ರು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಸೂರ್ಯನ ಕಡೆಗೆ ನೌಕೆ ಕಳುಸಿದೆ. ಮನುಷ್ಯರ ಭವಿಷ್ಯಕ್ಕಾಗಿ ಸೂರ್ಯನ ಬಗ್ಗೆ ಹೆಚ್ಚಿನ ಅಧ್ಯಯನ ನಡೆಸುವುದು ಅತ್ಯಗತ್ಯ. ಹೀಗಾಗಿಯೇ ಭಾರತ ಸೂರ್ಯನ ಕಡೆ ನೌಕೆ ಕಳುಹಿಸಿದೆ. ಪ್ರಮುಖವಾಗಿ ಭೂಮಿಗೆ ಪದೇ ಪದೆ ತೊಂದರೆ ನೀಡುವ ಸೂರ್ಯನ ಜ್ವಾಲೆಗಳು, ಸೂರ್ಯನ ತಾಪಮಾನವು ಸೇರಿದಂತೆ ಇನ್ನೂ ಹಲವು ಅಧ್ಯಯನಕ್ಕೆ ಭಾರತ ಸಿದ್ಧರೆ ನಡೆಸಿದೆ.
ಅತ್ಯಾಧುನಿಕ ಉಪಕರಣ ಸಹಕಾರಿ
ಆದಿತ್ಯ-ಎಲ್1 ಉಪಗ್ರಹ 7 ಉಪಕರಣಗಳನ್ನು ಹೊತ್ತೊಯ್ದಿದೆ. ಪೇ ಲೋಡ್ ಉಪಗ್ರಹದಲ್ಲಿ ಸಾಕಷ್ಟು ಪ್ರಮುಖ ಸಂಶೋಧನೆ ಸಾಧ್ಯವಿದೆ. ವಿಸಿಬಲ್ ಎಮಿಷನ್ ಲೈನ್ ಕರೋನಾಗ್ರಾಫ್ (VELC). ಇದು ಸೂರ್ಯನ ಕರೋನಾ ಕಿರಣಗಳಲ್ಲಿನ ಬದಲಾವಣೆ ಅಧ್ಯಯನ ಮಾಡುತ್ತದೆ. ಸೌರ ಅಲ್ಟ್ರಾ-ವೈಲೆಟ್ ಇಮೇಜಿಂಗ್ ಟೆಲಿಸ್ಕೋಪ್ (SUIT) ಸೂರ್ಯನ ದ್ಯುತಿಗೋಳ ಹಾಗೂ ವರ್ಣಗೋಳದ ಚಿತ್ರಗಳನ್ನು ತೆಗೆದುಕೊಳ್ಳುತ್ತದೆ. ಈ ಮೂಲಕ ಸೂರ್ಯನ ಪ್ರತಿ ಕ್ಷಣದ ಅಧ್ಯಯನ ನಡೆಸಿ, ಫೋಟೋ ಕಳುಹಿಸಲಿದೆ.

ಸೋಲಾರ್ ಲೋ-ಎನರ್ಜಿ ಎಕ್ಸ್-ರೇ ಸ್ಪೆಕ್ಟ್ರೋಮೀಟರ್ (ಸೋಲೆಕ್ಸ್) ಹಾಗೂ ಹೈ-ಎನರ್ಜಿ ಎಲ್-1 ಆರ್ಬಿಟಿಂಗ್ ಸೂರ್ಯನ ಎಕ್ಸ್- ಕಿರಣ ಅಧ್ಯಯನ ಕೂಡ ಮಾಡಲಿದೆ. ಇದಲ್ಲದೆ ಮ್ಯಾಗ್ನೆಟೋಮೀಟರ್ (MAG) ಎಲ್-1 ಕಕ್ಷೆಯ ಸುತ್ತ ಇರುವ ಅಂತರಗ್ರಹ ಕಾಂತಕ್ಷೇತ್ರವನ್ನು ಅಳೆಯುತ್ತದೆ. ಉಷ್ಣತೆಯ ಸಮಸ್ಯೆಗಳು, ಪ್ರಭಾವಲಯದಿಂದ ಹೊರಹೊಮ್ಮುವ ಜ್ವಾಲೆಗಳ, ಜ್ವಾಲೆಗೂ ಮೊದಲಿನ ಸ್ಥಿತಿ, ಜ್ವಾಲೆ ಚಟುವಟಿಕೆಗಳು, ಜ್ವಾಲೆ ಗುಣಲಕ್ಷಣ, ಬಾಹ್ಯಾಕಾಶದ ಹವಾಮಾನ ಸೇರಿ ಇನ್ನೂ ಅನೇಕ ವಿಚಾರದ ಬಗ್ಗೆ ಇಸ್ರೋ ನೌಕೆ ಅಧ್ಯಯನ ನಡೆಸಲಿದೆ.
ಭಾರತಕ್ಕೆ ಏನೆಲ್ಲಾ ಉಪಯೋಗ?
ಜಾಗತಿಕವಾಗಿ ಮಾತ್ರವಲ್ಲ ಸ್ಥಳೀಯ ಹವಾಮಾನ ಪರಿಸ್ಥಿತಿ ಮೇಲೆ ಪರಿಣಾಮ ಬೀರುವ ವಿವಿಧ ವಿದ್ಯಮಾನ ಅರ್ಥಮಾಡಿಕೊಳ್ಳಲು ಇಸ್ರೋ ಸಂಸ್ಥೆಯ ಯೋಜನೆ ಸಹಾಯಕ. ಇದೀಗ ನಮ್ಮ ಯೋಜನೆ ದೇಶದ ಹವಾಮಾನ ಪರಿಸ್ಥಿತಿಯನ್ನು ಮೊದಲೇ ತಿಳಿಸುತ್ತೆ. ಹಾಗೇ ಸೌರ ಮೇಲ್ಮೈ ಅಧ್ಯಯನ ಮಾಡುವುದು ಭವಿಷ್ಯದಲ್ಲಿ ಹೊಸ ಆಯಾಮವನ್ನೇ ನೀಡುತ್ತೆ. ನಮ್ಮ ಅಕ್ಕಪಕ್ಕದ ಗ್ರಹಗಳ ಅಧ್ಯಯನಕ್ಕೆ ಸಹಾಯಕವಾಗಲಿದೆ. ಭಾರತ ಮತ್ತು ಭಾರತೀಯರಿಗೆ ಯೋಜನೆಯ ಉಪಯೋಗ ಸಾಕಷ್ಟು ಇದೆ.
ಇದೆಲ್ಲಕ್ಕಿಂತಲೂ ಹೆಚ್ಚು ಆಧುನಿಕ ಕಾಲಘಟ್ಟದಲ್ಲಿ ಮನುಷ್ಯರಿಗೆ ಹವಾಮಾನ ಬದಲಾವಣೆಯ ಕಂಟಕ ಕಾಡುತ್ತಿದೆ. ಹೀಗಾಗಿ ಹವಾಮಾನ ಬದಲಾವಣೆಯ ಅಧ್ಯಯನದಲ್ಲಿ ಸೌರ ವಿಕಿರಣದ ದೀರ್ಘಕಾಲೀನ ವ್ಯತ್ಯಾಸದ ಮೇಲಿನ ಸಂಶೋಧನೆಯೂ ಮುಖ್ಯ. ಆದಿತ್ಯ-ಎಲ್1 ಮೂಲಕ ಎಲ್ಲ ಅಂಶಗಳ ಮೂಲ ಜ್ಞಾನ ಪಡೆಯಬಹುದು. ಈ ಉಪಗ್ರಹ ಸೂರ್ಯನ ವಿದ್ಯಮಾನಗಳ ಬಗ್ಗೆ ನಿಖರ ಮಾಹಿತಿ ಸಂಗ್ರಹಿಸಲಿದೆ. ಹೀಗೆ ತನ್ನ ಗುರಿ ಕಡೆಗೆ ಪ್ರಯಾಣ ಬೆಳೆಸಿರುವ ನಮ್ಮ ನೌಕೆ, ಭೂಮಿ ಮತ್ತು ಚಂದ್ರನ ಜೊತೆ ಸೆಲ್ಫಿ ಕ್ಲಿಕ್ಕಿಸಿ ಸರ್ಪ್ರೈಸ್ ನೀಡಿದೆ.
-
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್ -
Rishab Shetty: ಪತ್ನಿ ಪ್ರಗತಿ ಶೆಟ್ಟಿ ಹೊರತುಪಡಿಸಿ ಎಲ್ಲರನ್ನೂ ಅನ್ಫಾಲೋ ಮಾಡಿದ ನಟ ರಿಷಬ್ ಶೆಟ್ಟಿ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
New Railway Line: ಗದಗ-ಹೊಟಗಿ ರೈಲು ಡಬ್ಲಿಂಗ್ ಪೂರ್ಣ, ಮಹಾರಾಷ್ಟ್ರವರೆಗೂ ಸಂಚಾರ ಸುಧಾರಣೆ












Click it and Unblock the Notifications