ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಏನಿದು ಅಪೊಲೊ 11 ಮೂನ್‌ ಲ್ಯಾಂಡಿಂಗ್, ಚಂದ್ರನ ಮೇಲೆ ಹೆಜ್ಜೆ ಯಾವಾಗ?

|
Google Oneindia Kannada News

ಸರಿ ಸುಮಾರು 50 ವರ್ಷಗಳ ಹಿಂದೆ ನಾಶಾ ಸಂಸ್ಥೆಯ ಹೂಸ್ಟ್‌ನ್‌ ಜಾನ್ಸ್‌ನ್‌ ಬಾಹ್ಯಾಕಾಶ ಕೇಂದ್ರದ 11 ಮೂನ್‌ ಮಿಷನ್‌ ಎಂಬ ತಂಡವು ಚಂದ್ರನ ಮೇಲೆ ಕಾಲಿಟ್ಟಿರುವ ಕ್ಷಣಗಳನ್ನು ಇಡೀ ಜಗತ್ತು ನೋಡಿ ಬೆರಗುಗೊಂಡಿತ್ತು, ಈ ಸಾಧನೆಯು ಜಗತ್ತಿಗೂ ಅಚ್ಚರಿಯು ತಂದಿತ್ತು. ಜೊತಗೆ ಇಡೀ ಭೂ ಮಂಡಲದಲ್ಲಿ ಹಾಗೂ ಈ ನಿಗೂಢ ಜಗತ್ತಿನ ಮೂಲಕ ಚಂದ್ರನ ಮೇಲೆ ಮಾನವರು ಮೊದಲ ಹೆಜ್ಜೆಯನ್ನು ಇಟ್ಟಿರುವ ಅದ್ಭುತ ಕ್ಷಣಗಳು ಮೋಡಿ ಮಾಡಿದ್ದವು. ಈ ಮಿಷನ್ ಮನುಷ್ಯನಿಗೆ ಒಂದು ಸಣ್ಣ ಹೆಜ್ಜೆ ಆದರೆ, ಮನುಕುಲಕ್ಕೆ ಒಂದು ದೈತ್ಯ ಕಥೆಯ ಹಾಗೆ ರೋಚಕತೆಯನ್ನು ಪಡೆದುಕೊಂಡಿದೆ.

ಮಾನವ ಚಂದ್ರನ ಮೇಲ್ಮೈಯಲ್ಲಿ ಮೊದಲ ಬಾರಿಗೆ ಇಳಿದಿರುವ ಘಳಿಗೆಯ ವಾರ್ಷಿಕೋತ್ಸವದ ಅಂಗವಾಗಿ ಜುಲೈ 20ರಂದು ವಿಶ್ವಾದ್ಯಂತ ಅಂತರರಾಷ್ಟ್ರೀಯ ಚಂದ್ರ ದಿನವನ್ನು ಆಚರಿಸಲಾಗುತ್ತಿದೆ.

 ಚಂದ್ರನ ಮೇಲೆ ಮನುಷ್ಯನ ಮೊದಲ ಪಾದ ಸ್ಪರ್ಶ, ಐತಿಹಾಸಿಕ ಘಳಿಗೆ ಚಂದ್ರನ ಮೇಲೆ ಮನುಷ್ಯನ ಮೊದಲ ಪಾದ ಸ್ಪರ್ಶ, ಐತಿಹಾಸಿಕ ಘಳಿಗೆ

ಸೆಪ್ಟೆಂಬರ್ 12, 1962ರಂದು ರೈಸ್ ವಿಶ್ವವಿದ್ಯಾನಿಲಯದಲ್ಲಿ ಮಾಡಿದ ಭಾಷಣದಲ್ಲಿ ಆಗಿನ ಅಮೆರಿಕ ಅಧ್ಯಕ್ಷ ಜಾನ್ ಎಫ್. ಕೆನಡಿ 1970ರ ಮೊದಲು ಚಂದ್ರನ ಮೇಲೆ ಮನುಷ್ಯನನ್ನು ಇಳಿಸುವ ತಮ್ಮ ಗುರಿಯ ಬಗ್ಗೆ ಸಾರ್ವಜನಿಕರಿಗೆ ತಿಳಿಸಿದ್ದರು. "ನಾವು ಚಂದ್ರನ ಬಳಿ ಹೋಗಲು ಆಯ್ಕೆ ಮಾಡುತ್ತೇವೆ" ಎಂದು ಅವರು ಹೇಳಿದರು. ಒಂದು ದಶಕಕ್ಕೂ ಕಡಿಮೆ ಅವಧಿಯಲ್ಲಿ, ಅಪೊಲೋ 11 ಮಿಷನ್‌ನ್ನು ಪ್ರಾರಂಭಿಸಲಾಯಿತು, ಈ ಯೋಜನೆಯು ಮಾನವರನ್ನು ಚಂದ್ರನತ್ತ ಕಳುಹಿಸಿತು.

 ಬಜ್ ಆಲ್ಡ್ರಿನ್, ಆರ್ಮ್‌ಸ್ಟ್ರಾಂಗ್ ಈ ಇತಿಹಾಸ ಹೇಗೆ ನಿರ್ಮಿಸಿದರು

ಬಜ್ ಆಲ್ಡ್ರಿನ್, ಆರ್ಮ್‌ಸ್ಟ್ರಾಂಗ್ ಈ ಇತಿಹಾಸ ಹೇಗೆ ನಿರ್ಮಿಸಿದರು

20 ಜುಲೈ 1969 ರಂದು ನಾಸಾ ಗಗನಯಾತ್ರಿಗಳಾದ ನೀಲ್ ಆರ್ಮ್‌ಸ್ಟ್ರಾಂಗ್ ಮತ್ತು ಬಜ್ ಆಲ್ಡ್ರಿನ್ ಚಂದ್ರನ ಮೇಲೆ ಇಳಿದ ಮೊದಲ ಮಾನವರಾದರು. ಪ್ರತಿ ವರ್ಷ ಜಗತ್ತು ಈ ಐತಿಹಾಸಿಕ ಕ್ಷಣ ಮತ್ತು ಅಪೊಲೊ 11ರ ಯಶಸ್ಸನ್ನು ಅಂತರರಾಷ್ಟ್ರೀಯ ಚಂದ್ರನ ದಿನವೆಂದು ಆಚರಿಸುತ್ತೆದೆ ಇಲ್ಲಿಯವರೆಗೆ ಒಟ್ಟು 12 ಮಾನವರು ಚಂದ್ರನ ಮೇಲೆ ಕಾಲಿಟ್ಟಿದ್ದಾರೆ. ಅಪೊಲೊ 11, ಅಪೊಲೊ 12, ಅಪೊಲೊ 14, ಅಪೊಲೊ 15, ಅಪೊಲೊ 16 ಮತ್ತು ಅಪೊಲೊ 17 ಮಿಷನ್‌ಗಳು ಚಂದ್ರನ ಮೇಲ್ಮೈಗೆ ಮಾನವರನ್ನು ಹೊತ್ತೊಯ್ದ ಕಾರ್ಯಾಚರಣೆಗಳು ನಡೆದಿವೆ. ಮಾನವರು ಕೊನೆಯ ಬಾರಿಗೆ ಚಂದ್ರನತ್ತ ಪ್ರಯಾಣಿಸಿದ್ದು 1972ರಲ್ಲಿ ಎಂದು ವರದಿಯಲ್ಲಿದೆ. ನಾಸಾದ ಆರ್ಟೆಮಿಸ್ ಪ್ರಾಜೆಕ್ಟ್, 1972ರಿಂದ ಚಂದ್ರನ ಮೊದಲ ಮಾನವ ಮಿಷನ್ ಇದು ಮುಂಬರುವ 2024ರ ವೇಳೆಗೆ ಚಂದ್ರನ ಮೇಲ್ಮೈಗೆ ಮೊದಲ ಮಹಿಳೆ ಮತ್ತು ಮೊದಲ ಬಣ್ಣದ ವ್ಯಕ್ತಿಯನ್ನು ಚಂದ್ರನತ್ತ ಸಾಗಿಸುವ ಗುರಿಯನ್ನು ಹೊಂದಿದೆ.

 ಚಂದ್ರನ ಜಗತ್ತು ನೋಡಲು ಕಾತರ

ಚಂದ್ರನ ಜಗತ್ತು ನೋಡಲು ಕಾತರ

ಅಪೊಲೊ 11 ಮಿಷನ್ ಚಂದ್ರನ ಮೇಲೆ ಮೊದಲ ಸಿಬ್ಬಂದಿ ಚಂದ್ರನ ಮೇಲೆ ಇಳದಿದ್ದರು ಮೂರು ಗಗನಯಾತ್ರಿಗಳನ್ನು ಸ್ಯಾಟರ್ನ್ ವಿ ರಾಕೆಟ್ ಮೂಲಕ ಚಂದ್ರನ ಕಡೆಗೆ ಉಡಾವಣೆ ಮಾಡಲಾಯಿತು. ಆರ್ಮ್‌ಸ್ಟ್ರಾಂಗ್, ಆಲ್ಡ್ರಿನ್ ಮತ್ತು ಕಾಲಿನ್ಸ್ ಚಂದ್ರನ ಮೇಲೆ ಉಪಕರಣಗಳನ್ನು ನಿಯೋಜಿಸಿದರು, ಛಾಯಾಚಿತ್ರಗಳನ್ನು ಸೆರೆ ಹಿಡಿದರು ಮತ್ತು ಮಾದರಿಗಳನ್ನು ಸಂಗ್ರಹಿಸಿದರು ಈ ಕ್ಷಣವು ಅವರು ಹೊಸ ಲೋಕವನ್ನು ನೋಡಿದ್ದರು. ಈ ಚಿತ್ರಗಳನ್ನು ಜಗತ್ತು ನೋಡಲು ಕಾತರವಾಗಿತ್ತು.

 ನಾಸಾ ಎಲ್ಲಾ ಬಾಹ್ಯಾಕಾಶ ಹಾರಾಟದ ಚಟುವಟಿಕೆ ನಿರ್ವಹಿಸುತ್ತದೆ

ನಾಸಾ ಎಲ್ಲಾ ಬಾಹ್ಯಾಕಾಶ ಹಾರಾಟದ ಚಟುವಟಿಕೆ ನಿರ್ವಹಿಸುತ್ತದೆ

ಅಪೊಲೊ 11 ಕಮಾಂಡರ್ ನೀಲ್ ಆರ್ಮ್‌ಸ್ಟ್ರಾಂಗ್ ಅವರು ಹೇಳಿದ ಮೊದಲ ಮಾತುಗಳು, ಅವರು ಮತ್ತು ಸಹವರ್ತಿ ಗಗನಯಾತ್ರಿ ಎಡ್ವಿನ್ 'ಬಜ್' ಆಲ್ಡ್ರಿನ್ ತಮ್ಮ ಬಾಹ್ಯಾಕಾಶ ನೌಕೆಯನ್ನು ಸುರಕ್ಷಿತವಾಗಿ ಮತ್ತು ಯಶಸ್ವಿಯಾಗಿ ಮತ್ತೊಂದು ಪ್ರಪಂಚದ ಮೇಲ್ಮೈಯಲ್ಲಿ ಇಳಿಸಿದ್ದಾರೆ ಎಂದು ಸಂದೇಶವನ್ನು ನಾಸಾಗೆ ಪ್ರಸಾರ ಮಾಡಿದರು.
ಈ ಸಂದೇಶವನ್ನು ಟೆಕ್ಸಾಸ್‌ನ ಹೂಸ್ಟನ್‌ನ ಹೊರಗಿನ ಜಾನ್ಸನ್ ಬಾಹ್ಯಾಕಾಶ ಕೇಂದ್ರದಲ್ಲಿರುವ ನಾಸಾದ ಮಿಷನ್ ನಿಯಂತ್ರಣಕ್ಕೆ ರವಾನಿಸಲಾಗಿದೆ.

ಮಿಷನ್ ನಿಯಂತ್ರಣವು ನಾಸಾದ ಎಲ್ಲಾ ಬಾಹ್ಯಾಕಾಶ ಹಾರಾಟದ ಚಟುವಟಿಕೆಯನ್ನು ನಿರ್ವಹಿಸುತ್ತದೆ ಮತ್ತು ಅಪೊಲೊ ಕಾರ್ಯಾಚರಣೆಗಳ ಮೂಲಕ ಮತ್ತು ಬಾಹ್ಯಾಕಾಶ ನೌಕೆಯ ಯುಗದ ಭಾಗವಾಗಿ ಗಗನಯಾತ್ರಿಗಳಿಗೆ ಸಂವಹನದ ಕೇಂದ್ರವಾಗಿ ಕಾರ್ಯನಿರ್ವಹಿಸುತ್ತದೆ. ವರ್ಷಗಳು ಕಳೆದು ತಂತ್ರಜ್ಞಾನವು ಹಳೆಯದಾಯಿತು ಮತ್ತು ಕಟ್ಟಡದಲ್ಲಿ ಬೇರೆಡೆ ಹೊಸ ಮಿಷನ್ ನಿಯಂತ್ರಣವನ್ನು ನಿರ್ಮಿಸಬೇಕಾಗಿತ್ತು, ನಾಸಾದ ಇತಿಹಾಸದಲ್ಲಿ ಈ ಪ್ರಮುಖ ಸ್ಥಳವು ದುರಸ್ತಿಗೆ ಸೇರಿವೆ

 50ನೇ ವಾರ್ಷಿಕೋತ್ಸವ ಆಚರಿಸಲಾಗಿದೆ

50ನೇ ವಾರ್ಷಿಕೋತ್ಸವ ಆಚರಿಸಲಾಗಿದೆ

2015ರಲ್ಲಿ ನಾಸಾ ಅಧಿಕಾರಿಗಳು ರಾಷ್ಟ್ರೀಯ ಉದ್ಯಾನವನ ಸೇವೆಯೊಂದಿಗೆ ಐತಿಹಾಸಿಕ ಪೀಠೋಪಕರಣಗಳ ವರದಿ ಮತ್ತು ಸಂದರ್ಶಕರ ಅನುಭವ ಯೋಜನೆಯನ್ನು ಅಭಿವೃದ್ಧಿಪಡಿಸಲು ಕೆಲಸ ಮಾಡಿದರು, ಇದು ಪುನಃ ಸ್ಥಾಪನೆಗೆ ಪ್ರಮುಖ ಯೋಜನಾ ದಾಖಲೆಯಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಸ್ಪೇಸ್ ಸೆಂಟರ್ ಹೂಸ್ಟನ್ ತಮ್ಮ ವೆಬ್‌ಸೈಟ್‌ನಲ್ಲಿ ವಿವರಿಸಿದೆ. ಈ ಯೋಜನೆಯು ಇತ್ತೀಚೆಗಷ್ಟೇ ಪೂರ್ಣಗೊಂಡಿತು ಮತ್ತು ಜೂನ್ 28, 2019ರಂದು ಸಾರ್ವಜನಿಕರಿಗೆ ಮುಕ್ತವಾಗಿದೆ, ಮೊದಲ ಚಂದ್ರನ ಇಳಿಯುವಿಕೆಯ 50ನೇ ವಾರ್ಷಿಕೋತ್ಸವು ಒಂದು ತಿಂಗಳ ಮೊದಲು ಆಚರಿಸಲಾಗಿದೆ.

English summary
50 years after Neil Armstrong walked on Moon : Nasa has released footage showing the tracks left behind by Neil Armstrong and Buzz Aldrin as they walked on the Moon.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X