Solar Storm: ಭಾರತದ ಇಸ್ರೋಗೆ ಎದುರಾಯ್ತು ಮೊದಲ ಸಮಸ್ಯೆ!
ಭಾರತದ ಇಸ್ರೋ ಸಂಸ್ಥೆ ಸೂರ್ಯನ ಅಧ್ಯಯನ ನಡೆಸಲು ಈಗಾಗಲೇ ನೌಕೆ ಉಡಾಯಿಸಿ ಉಪಗ್ರಹ ಕಳುಹಿಸಿದೆ. ಆದ್ರೆ ಈ ವೇಳೆ ಭಾರತದ ವಿಜ್ಞಾನಿಗಳಿಗೆ ಬಂಡೆಯಂತಹ ಸವಾಲು ಎದುರಾಗಿದೆ. ಹಾಗಾದರೆ ಏನದು ಸವಾಲು? ಭಾರತದ ಇಸ್ರೋ ಸಂಸ್ಥೆ ಸವಾಲನ್ನು ಹೇಗೆ ಸ್ವೀಕರಿಸಿದೆ? ಬನ್ನಿ ತಿಳಿಯೋಣ.
ಸುಡು ಸೂರ್ಯನ ಅಧ್ಯಯನ ನಡೆಸಿ, ಭೂಮಿ ಮೇಲೆ ಸೂರ್ಯನ ಪ್ರಭಾವದ ಕುರಿತು ತಿಳಿಯಲು ಭಾರತ 'ಆದಿತ್ಯ ಎಲ್ 1' ಉಡಾಯಿಸಿತ್ತು. ಆದರೆ ಹೀಗೆ ಭಾರತದ ನೌಕೆಯನ್ನ ಬಾಹ್ಯಾಕಾಶಕ್ಕೆ ಕಳುಹಿಸಿ ಕೇವಲ ಎರಡು ದಿನದಲ್ಲಿ ಡೇಂಜರ್ ಸಿಗ್ನಲ್ ಸಿಕ್ಕಿದೆ. ಸೂರ್ಯ ರೊಚ್ಚಿಗೆದ್ದು ಕೆಂಡ ಉಗುಳುತ್ತಿದ್ದು, ಸೌರ ಬಿರುಗಾಳಿಯ ಅಬ್ಬರಕ್ಕೆ ಭೂಮಿ ತತ್ತರಿಸಲಿದೆ ಎಂಬ ಮುನ್ಸೂಚನೆ ಸಿಕ್ಕಿದೆ. ಹಾಗಾದ್ರೆ ಇದರಿಂದ ಭಾರತದ ಇಸ್ರೋ ಉಪಗ್ರಹಕ್ಕೆ ಸಮಸ್ಯೆ ಎದುರಾಗುತ್ತಾ? ಮುಂದೆ ಓದಿ.

ಸೂರ್ಯನ ಮೇಲೂ ಚಂಡಮಾರುತ!
ಆಕಾಶದಲ್ಲಿ ಹೊಳೆಯುವ ನಕ್ಷತ್ರಗಳು ದೂರದಿಂದ ನೋಡಿದಷ್ಟು ಸುಂದರವಲ್ಲ. ನಕ್ಷತ್ರದ ಭೀಕರತೆ ತಿಳಿಯಲು ಹತ್ತಿರಕ್ಕೆ ಹೋಗಬೇಕು. ಹೀಗೆ ನಮ್ಮ ಸೂರ್ಯ ಕೂಡ ಕೊತ ಕೊತ ಕುದಿಯುತ್ತಿದ್ದಾನೆ. ಸುಡುವ ಸೂರ್ಯನ ಒಳಗೆ ಭಾರಿ ಪ್ರಮಾಣದ ಶಕ್ತಿ ಅಡಗಿರುತ್ತದೆ. ಈ ಪ್ರಕ್ರಿಯೆ ಪರಿಣಾಮ ಸೌರ ಸ್ಫೋಟವು ಸಂಭವಿಸಿದಾಗ ಬಿಡುಗಡೆಯಾಗುವ ಕರೋನಲ್ ಮಾಸ್ ಎಜೆಕ್ಷನ್ ಕಣಗಳಿಂದ ಸೌರ ಬಿರುಗಾಳಿ ಉಂಟಾಗುತ್ತೆ. ಈ ಸ್ಪೋಟವನ್ನು ಸೌರ ಜ್ವಾಲೆ ಅಂತಾ ಕೂಡ ಕರೆಯಲಾಗುತ್ತೆ. ಹಾಗಾದ್ರೆ ಸೌರ ಬಿರುಗಾಳಿಯು ಭೂಮಿ ಮೇಲೆ ಉಂಟುಮಾಡುವ ಅಪಾಯ ಎಂತಹದ್ದು?
A G1 Watch is in effect for the 3 Sep UTC-day. A CME erupted from the Sun on 30 Aug and it is likely an arrival at Earth will occur, with G1 storm levels probable as early as the evening of 2 Sep EDT (3 Sep UTC-day). Visit https://t.co/9n7phHbDdS for more info. pic.twitter.com/tukpWerSsJ
— NOAA Space Weather (@NWSSWPC) August 31, 2023
ಭೂಮಿಗೆ ಕಾದಿದೆ ಮಹಾ ಕಂಟಕ!
ಈಗ ಮನುಷ್ಯರಿಗೆ ಇರುವ ಮಹಾ ಸಮಸ್ಯೆ ಏನೆಂದರೆ, ಸೌರ ಚಂಡಮಾರುತ ಎದುರಾಗುವ ಮೊದಲು ಯಾವುದೇ ಮುನ್ಸೂಚನೆ ಸಿಗುತ್ತಿಲ್ಲ. ಹೀಗೆ ನಿಖರ ತಂತ್ರಜ್ಞಾನ ಇಲ್ಲದೆ ದೊಡ್ಡ ಸಮಸ್ಯೆ ಉಂಟಾಗುತ್ತಿದೆ. ಸೂರ್ಯನ ಕರೋನಲ್ ಮಾಸ್ ಎಜೆಕ್ಷನ್ ವೇಳೆ ಉರಿಯುತ್ತಿರುವ ದ್ರವ್ಯರಾಶಿ ಭೂಮಿಗೆ ಬಡಿದಾಗ, ಈ ಸೌರ ಬಿರುಗಾಳಿ ಎದುರಾಗುತ್ತದೆ. ಸೂರ್ಯನ ಮೇಲೆ ಕಾಂತೀಯ ಶಕ್ತಿ ಸಂಗ್ರಹ ದಿಢೀರ್ ಬಿಡುಗಡೆಯಾದಾಗ ಸೌರ ಚಂಡಮಾರುತ ಸಂಭವಿಸುತ್ತದೆ.
ಸೂರ್ಯನ
ಸೌರ ಚಂಡಮಾರುತ ಭೂಮಿಗೆ ಅಪ್ಪಳಿಸಿದರೆ ಭೂಮಿ ಮೇಲಿನ ಜಿಪಿಎಸ್ ವ್ಯವಸ್ಥೆ ಮೇಲೆ ಪ್ರಭಾವ ಬೀರುತ್ತದೆ. ಅಲ್ಲದೆ ಮೊಬೈಲ್ ನೆಟ್‌ವರ್ಕ್ ಮತ್ತು ಇಂಟರ್‌ನೆಟ್ ಕೂಡ ಸೂರ್ಯ ತೋರುವ ಉಗ್ರ ರೂಪಕ್ಕೆ ಅಲ್ಲಾಡಿ ಹೋಗುತ್ತದೆ. ಜ್ವಾಲೆ ಪವರ್ ಗ್ರಿಡ್‌ನ ಹಾಳು ಮಾಡುವ ಹಿನ್ನೆಲೆ ವಿದ್ಯುತ್ ಸಮಸ್ಯೆ ಕೂಡ ಎದುರಾಗುತ್ತದೆ. ಇದೇ ಕಾರಣಕ್ಕೆ ಸೌರ ಚಂಡಮಾರುತಕ್ಕೆ ಜನಸಾಮಾನ್ಯರಿಂದ ಹಿಡಿದು ದೊಡ್ಡ ದೊಡ್ಡ ಕಂಪನಿಗಳು ಕೂಡ ಭಯಪಡುತ್ತವೆ. ಅಲ್ಲದೆ ಪಾಶ್ಚಿಮಾತ್ಯ ರಾಷ್ಟ್ರಗಳೇ ಈ ರೀತಿ ಸೌರ ಜ್ವಾಲೆಯಿಂದ ಸಾಕಷ್ಟು ಸಮಸ್ಯೆ ಎದುರಿಸಿವೆ.

ಇತ್ತೀಚೆಗೆ ಅಂದರೆ 1859 & 1989ರಲ್ಲಿ ಭೀಕರ ಸೌರ ಬಿರುಗಾಳಿ ನೋಡಿದ್ದಾನೆ ಮನುಷ್ಯ. ಅದರಲ್ಲೂ ಕೆನಡಾದಲ್ಲಿ 1989 ರಲ್ಲಿ ಸೌರ ಚಂಡಮಾರುತದಿಂದ ನಾಶವಾದ ವಿದ್ಯುತ್ ಜಾಲ ಸರಿಪಡಿಸಲು ಪರದಾಡಿತ್ತು ಕೆಡನಾ ಸರ್ಕಾರ. 34 ವರ್ಷಗಳ ಹಿಂದೆ ಭೂಮಿ ಶತಮಾನದ ಅತ್ಯಂತ ಕೆಟ್ಟ ಸೌರ ಚಂಡಮಾರುತ ಅಪ್ಪಳಿಸಿತ್ತು. ಇದೀಗ ಆಗಸ್ಟ್ 30ರಂದು ಇದೇ ರೀತಿಯ ಸೌರ ಬಿರುಗಾಳಿ ಉಂಟಾಗಿದ್ದು ಇದು ಭೂಮಿಯನ್ನ ತಲುಪಲು ಒಂದೆರಡು ದಿನ ಅಗತ್ಯ. ಹೀಗಾಗಿ ನಿನ್ನೆಯಿಂದ ಸೌರ ಬಿರುಗಾಳಿ ಹಬ್ಬಿದ್ದು, ಅಮೆರಿಕ ಸೇರಿ ಹಲವು ದೇಶಗಳು ಈ ಸೌರ ಬಿರುಗಾಳಿ ಪ್ರಭಾವ ಅನುಭವಿಸಿವೆ. ಭಾರತದ 'ಆದಿತ್ಯ ಎಲ್ 1' ಅಲರ್ಟ್ ಆಗಿದೆ.
ಭಾರತದ ಮೊರೆ ಹೋದ ಜಗತ್ತು
ಇಷ್ಟುದಿನ ಬಾಹ್ಯಾಕಾಶದಲ್ಲಿ ಸಮಸ್ಯೆ ಎದುರಾದರೆ, ಇಡೀ ಜಗತ್ತು ನಾಸಾ ಬಳಿ ಸಹಾಯ ಕೇಳುತ್ತಿತ್ತು. ಆದರೆ ಈಗ ಭಾರತದ ಬಳಿ ಸಹಾಯ ಕೇಳುವ ಪರಿಸ್ಥಿತಿ ಬಂದಿದೆ. ಭಾರತದ ಸೌರ ಅಧ್ಯಯನ ಉಪಗ್ರಹ ಇನ್ನೂ ತನ್ನ ಗುರಿ ತಲುಪಿಲ್ಲ ಆದರೆ, ಇನ್ನು ಕೆಲವೇ ದಿನಗಳ ನಂತರ ಸೌರ ಬಿರುಗಾಳಿ ಪರಿಣಾಮ ಅಳೆಯಲು ಇಸ್ರೋ ನೆರವು ಬೇಕಿದೆ. 'ಆದಿತ್ಯ ಎಲ್ 1' ತನ್ನ ಗುರಿ ತಲುಪಲಿದ್ದು, ಆ ನಂತರ ಸೂರ್ಯನ ಇಂಚಿಂಚು ಮಾಹಿತಿ ತಿಳಿಯಲಿದೆ. ಅದಕ್ಕೂ ಮೊದಲು ಸೌರ ಬಿರುಗಾಳಿ ಎದುರು ಭಾರತದ 'ಆದಿತ್ಯ ಎಲ್ 1' ಉಪಗ್ರಹವನ್ನು ರಕ್ಷಿಸಿ, ತನ್ನ ಗುರಿ ತಲುಪಿಸಲು ವ್ಯವಸ್ಥೆ ರೂಪಿಸಲಾಗಿದೆ.
ಭೂಮಿಗೆ ಅಪ್ಪಳಿಸಿದ ಸೌರ ಜ್ವಾಲೆ..
— oneindiakannada (@OneindiaKannada) September 4, 2023
More Details:https://t.co/shQOTPKuii#news #india #solarstorm #earth #adityal1launch #isro pic.twitter.com/EIqWjqXKVJ
ಒಟ್ನಲ್ಲಿ ಭಾರತದ ಇಸ್ರೋ ಯೋಜನೆ ಉಡಾವಣೆ ಮಾಡಿದ ಎರಡು ದಿನಕ್ಕೆ ಸೂರ್ಯನಲ್ಲಿ ಮಹತ್ವದ ಬೆಳವಣಿಗೆ ನಡೆದಿದೆ. ಹೀಗಾಗಿ ಇಸ್ರೋ ವಿಜ್ಞಾನಿಗಳು ಅಲರ್ಟ್ ಆಗಿ, ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು 'ಆದಿತ್ಯ ಎಲ್ 1' ಉಪಗ್ರಹ ಕಾಯುತ್ತಿದ್ದಾರೆ. ಇನ್ನೇನು ಸೂರ್ಯನ ಅಧ್ಯಯನಕ್ಕೆ ಕಳುಹಿಸಿರುವ ಉಪಗ್ರಹ ಕೆಲವೇ ದಿನದಲ್ಲಿ ತನ್ನ ಗುರಿ ತಲುಪಿ ಭೂಮಿಯ ಮೇಲೆ ಮನುಷ್ಯರನ್ನ ಹಾಗೂ ಜೀವ ರಾಶಿಯನ್ನ ಕಾಯುವ ನಿರೀಕ್ಷೆ ಇದೆ.

ಭಾರತದ ವಿಜ್ಞಾನಿಗಳ ಗುರಿ ಏನು?
ಆದಿತ್ಯ-ಎಲ್1 ಉಪಗ್ರಹ 7 ಉಪಕರಣ ಹೊತ್ತೊಯ್ದಿದೆ. ಇಸ್ರೋ ಉಡಾಯಿಸಿರುವ ಈ ಪೇ ಲೋಡ್ ಉಪಗ್ರಹದಿಂದ ಸಾಕಷ್ಟು ಪ್ರಮುಖ ಸಂಶೋಧನೆ ಸಾಧ್ಯವಿದೆ. ವಿಸಿಬಲ್ ಎಮಿಷನ್ ಲೈನ್ ಕರೋನಾಗ್ರಾಫ್ (VELC). ಇದು ಸೂರ್ಯನ ಕರೋನಾ ಕಿರಣಗಳ ಬದಲಾವಣೆಗಳನ್ನ ಅಧ್ಯಯನ ಮಾಡುತ್ತೆ. ಜೊತೆಗೆ ಸೌರ ಅಲ್ಟ್ರಾ-ವೈಲೆಟ್ ಇಮೇಜಿಂಗ್ ಟೆಲಿಸ್ಕೋಪ್ (SUIT) ಸೂರ್ಯನ ದ್ಯುತಿಗೋಳ ಹಾಗೂ ವರ್ಣಗೋಳದ ಚಿತ್ರಗಳನ್ನು ತೆಗೆದುಕೊಳ್ಳುತ್ತದೆ.
ಏನೆಲ್ಲಾ ಉಪಕರಣ ಇದೆ?
ಹಾಗೇ ಸೋಲಾರ್ ಲೋ-ಎನರ್ಜಿ ಎಕ್ಸ್-ರೇ ಸ್ಪೆಕ್ಟ್ರೋಮೀಟರ್ (ಸೋಲೆಕ್ಸ್) ಸೇರಿದಂತೆ ಹೈ-ಎನರ್ಜಿ ಎಲ್-1 ಆರ್ಬಿಟಿಂಗ್ ಸೂರ್ಯನ ಎಕ್ಸ್- ಕಿರಣ ಅಧ್ಯಯನ ಮಾಡಲಿದೆ. ಇದಲ್ಲದೆ ಮ್ಯಾಗ್ನೆಟೋಮೀಟರ್ (MAG) ಎಲ್-1 ಕಕ್ಷೆಯ ಸುತ್ತ ಇರುವ ಅಂತರಗ್ರಹ ಕಾಂತಕ್ಷೇತ್ರವನ್ನು ಅಳೆಯುತ್ತದೆ. ಉಷ್ಣತೆ ಸಮಸ್ಯೆ, ಪ್ರಭಾವಲಯದಿಂದ ಹೊರಹೊಮ್ಮುವ ಜ್ವಾಲೆ, ಜ್ವಾಲೆಗೆ ಮೊದಲಿನ ಸ್ಥಿತಿ, ಜ್ವಾಲೆ ಚಟುವಟಿಕೆ, ಜ್ವಾಲೆ ಲಕ್ಷಣ, ಬಾಹ್ಯಾಕಾಶದ ಹವಾಮಾನ ಸೇರಿ ಇನ್ನೂ ಅನೇಕ ವಿಚಾರದ ಬಗ್ಗೆ ಇಸ್ರೋ ನೌಕೆ ಅಧ್ಯಯನ ನಡೆಸಲಿದೆ.

ಹೀಗೆ ಇನ್ನೇನು ಕೆಲವೇ ದಿನಗಳಲ್ಲಿ ಭಾರತ ಸೂರ್ಯನ ವರ್ತನೆ ಬಗ್ಗೆ ಸಂಪೂರ್ಣ ಹಿಡಿತ ಸಾಧಿಸಲಿದೆ. ಮುಂಬರುವ ವಿಪತ್ತುಗಳನ್ನು ಎದರಿಸಲಿದೆ. ಅದಕ್ಕಾಗಿ ಪೂರ್ವ ತಯಾರಿಯ ಜೊತೆ ದೊಡ್ಡ ಗುರಿಯನ್ನು ಭಾರತದ ವಿಜ್ಞಾನಿಗಳು ಇಟ್ಟುಕೊಂಡಿದ್ದಾರೆ. ಹೀಗಾಗಿ ನಾಸಾ ಸೇರಿದಂತೆ ಜಗತ್ತಿನ ದೊಡ್ಡ ದೊಡ್ಡ ಬಾಹ್ಯಾಕಾಶ ಸಂಸ್ಥೆಗಳು ಭಾರತದ ಇಸ್ರೋ ಮೇಲೆ ಕಣ್ಣಿಟ್ಟು ಕೂತಿವೆ. ಭಾರತದ ಸಾಧನೆ ಜಗತ್ತಿಗೆ ಮಾದರಿ ಆಗಲಿದೆ.
-
Prakash Raj: ‘ಅಪ್ಪನ ಮನೆ ಆಸ್ತಿ ಮಾರ್ತಿದೀರಾ?’: ಕೇಂದ್ರದ ಹೊಸ ನಿಯಮದ ವಿರುದ್ಧ ನಟ ಪ್ರಕಾಶ್ ರಾಜ್ ಟೀಕೆ -
Abhishek Sharma: ದಯವಿಟ್ಟು ಕ್ಷಮಿಸಿ ಎಂದು ಬೇಡಿಕೊಂಡ ಅಭಿಷೇಕ್ ಶರ್ಮಾ -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
Sapthami Gowda: ಅಸಭ್ಯವಾಗಿ ವಿಡಿಯೋ ಚಿತ್ರೀಕರಣ: ಫಿಲ್ಮ್ ಚೇಂಬರ್ ಮೆಟ್ಟಿಲೇರಿದ ಸಪ್ತಮಿ ಗೌಡ, ಸಭೆಯಲ್ಲಿ ಮಹತ್ವದ ತೀರ್ಮಾನ -
Namma Metro Phase 3 Project: ಮೆಟ್ರೋ 2 ಕಾರಿಡಾರ್ ನಿರ್ಮಾಣಕ್ಕೆ 2031ರ ಹೊಸ ಗಡುವು -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
Imd Weather Forecast: ಭಾರೀ ಬಿಸಿಲಿನ ನಡುವೆ ಈ ಭಾಗಗಳಲ್ಲಿ ಮಳೆ: ಐಎಂಡಿ ಮುನ್ಸೂಚನೆ ಇಲ್ಲಿದೆ -
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
Sanju Samson Father: ಅಂದು ಮಗನನ್ನು ಅಲೆದಾಡಿಸಿದವರು ಇಂದು ಕ್ಷಮೆ ಕೇಳುತ್ತಿದ್ದಾರೆ: ಸಂಜು ಸ್ಯಾಮ್ಸನ್ ತಂದೆಯ ಭಾವುಕ ನುಡಿ -
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ












Click it and Unblock the Notifications