Chandrayaan-3: ಚಂದ್ರನ ಬಗ್ಗೆ ಉತ್ತರ ನೀಡಿ 1 ಲಕ್ಷ ರೂಪಾಯಿ ಗೆಲ್ಲಿರಿ!

ಭಾರತ 'ಚಂದ್ರಯಾನ-3' ಯೋಜನೆ ಮೂಲಕ ಇಡೀ ಜಗತ್ತಿನ ಗಮನ ಸೆಳೆದಿತ್ತು. ಇದೀಗ ಚಂದ್ರನ ದಕ್ಷಿಣ ಧ್ರುವದ ಮೇಲೆ ಅಧ್ಯಯನ ಆರಂಭಿಸಿ, ಚಂದ್ರನ ಮೇಲೆ ಆಕ್ಸಿಜನ್ ಇದೆ ಎಂಬುದನ್ನ ಪತ್ತೆ ಹಚ್ಚಿದೆ ನಮ್ಮ ಇಸ್ರೋ ಸಂಸ್ಥೆ. ಹೀಗೆ ಜಗತ್ತಿನಾದ್ಯಂತ ಮನೆ ಮಾತಾಗಿ ಕೋಟ್ಯಂತರ ಜನರ ಗಮನ ಸೆಳೆದ ಇಸ್ರೋ ಸಂಸ್ಥೆ ಸಾಧನೆಗೆ ಮೆರಗು ಸಿಕ್ಕಿದೆ. ಬರೋಬ್ಬರಿ 1 ಲಕ್ಷ ರೂಪಾಯಿ ಗೆಲ್ಲುವ ಅವಕಾಶವನ್ನು ಇಸ್ರೋ ಭಾರತೀಯರಿಗೆ ಕಲ್ಪಿಸಿದೆ.

ಹೌದು, ಐತಿಹಾಸಿಕ ಚಂದ್ರಯಾನ ಸಾಫ್ಟ್‌ ಲ್ಯಾಂಡಿಂಗ್‌ ಸಾಹಸ ಮಾಡಿರುವ ಇಸ್ರೋ, ದೇಶದ ಜನರಿಗಾಗಿ ಚಂದ್ರಯಾನ ಬಗ್ಗೆ ಇನ್ನಷ್ಟು ಅರಿವು ಮೂಡಿಸುವ ನಿಟ್ಟಿನಲ್ಲಿ, 'ಚಂದ್ರಯಾನ-3' ಮಹಾ ಕ್ವಿಜ್ ಆಯೋಜನೆ ಮಾಡಿದೆ. ಭಾರತೀಯರು ಇಸ್ರೋ ಚಂದ್ರಯಾನ-3 ಕ್ವಿಜ್‌ನಲ್ಲಿ ಭಾಗವಹಿಸಬಹುದು. ಹಾಗೇ ಈ ಕ್ವಿಜ್ ಸ್ಪರ್ಧೆಯಲ್ಲಿ ಗೆಲ್ಲುವವರಿಗೆ ಬರೋಬ್ಬರಿ 1 ಲಕ್ಷ ಗರಿಷ್ಠ ಬಹುಮಾನ ಸಿಗಲಿದೆ. ಹಾಗಾದ್ರೆ ಕ್ವಿಜ್‌ನಲ್ಲಿ ಹೇಗೆ ಭಾಗವಹಿಸಬಹುದು? ಈ ಕ್ವಿಜ್‌ಗೆ ಇರುವ ನಿಯಮ ಏನು? ಸಂಪೂರ್ಣ ಮಾಹಿತಿ ಇಲ್ಲಿದೆ ಮುಂದೆ ಓದಿ.

chandrayaan-3-quiz-by-isro

ಕ್ವಿಜ್ ವೆಬ್‌ಸೈಟ್ ವಿವರ ಇಲ್ಲಿದೆ

ಅಷ್ಟಕ್ಕೂ ಪ್ರಧಾನಿ ಮೋದಿ ಅವರ ಆಶಯದಂತೆ ಜನರಿಗೆ ಚಂದ್ರಯಾನ-3 ಬಗ್ಗೆ ಇನ್ನಷ್ಟು ಮಾಹಿತಿ ತಿಳಿಸಲು ಇಸ್ರೋ ಮಹತ್ವದ ಹೆಜ್ಜೆ ಇಟ್ಟಿದೆ. ಕ್ವಿಜ್ ಆಯೋಜನೆ ಮಾಡೋದಕ್ಕೆ ಅಂತಾನೆ ವಿಶೇಷ ವ್ಯವಸ್ಥೆ ಮಾಡಲಾಗಿದೆ (https://isroquiz.mygov.in/) ಮೂಲಕ ಕ್ವಿಜ್‌ನಲ್ಲಿ ಭಾಗವಹಿಸಬಹುದು. ಈ ಕುರಿತು ಟ್ವೀಟ್ ಅಂದರೆ ಈಗಿನ ಎಕ್ಸ್ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿದೆ ಇಸ್ರೋ. ಹಾಗೆ ಕ್ವಿಜ್ ಬಗ್ಗೆ ಸಂಪೂರ್ಣ ಮಾಹಿತಿಯನ್ನ ಕೂಡ ಶೇರ್ ಮಾಡಿದೆ. ಹಾಗಾದ್ರೆ ಕ್ವಿಜ್‌ನಲ್ಲಿ ಎಷ್ಟೆಲ್ಲಾ ಬಹುಮಾನ ಇದೆ? ಮುಂದೆ ಓದಿ.

ಸ್ಪರ್ಧಿಗಳಿಗೆ ಸಿಗಲಿದೆ ಭಾರಿ ಬಹುಮಾನ

ವೆಬ್‌ಸೈಟ್‌ನ ಮಾಹಿತಿಯಂತೆ ಅತ್ಯುತ್ತಮ ಪ್ರದರ್ಶನ ನೀಡಿದವರಿಗೆ 1 ಲಕ್ಷ ರೂ. ಬಹುಮಾನ ನೀಡಲಾಗುತ್ತದೆ. 2ನೇ ಅತ್ಯುತ್ತಮ ಸ್ಪರ್ಧಿಗೆ 75,000 ರೂಪಾಯಿ 3ನೇ ಅತ್ಯುತ್ತಮ ಸ್ಪರ್ಧಿಗೆ 50,000 ರೂಪಾಯಿ ನಗದು ಬಹುಮಾನ ಸಿಗಲಿದೆ. ಇದಿಷ್ಟೇ ಅಲ್ಲದೆ ಇದರ ಮುಂದಿನ 100 ಉತ್ತಮ ಸಾಧಕರಿಗೆ ತಲಾ 2000 ರೂಪಾಯಿ ಸಮಾಧಾನಕರ ಬಹುಮಾನ ಸಿಗುತ್ತೆ. ಮುಂದಿನ 200 ಉತ್ತಮ ಸಾಧಕರಿಗೆ ತಲಾ 1,000 ರೂಪಾಯಿ ಸಮಾಧಾನಕರ ಬಹುಮಾನ ನೀಡೋದಕ್ಕೆ ನಿರ್ಧರಿಸಲಾಗಿದೆ. ಹಾಗಾದರೆ ಕಿಜ್‌ನಲ್ಲಿ ಭಾಗವಹಿಸಲು ಏನೆಲ್ಲಾ ನಿಯಮ ಇರುತ್ತೆ? ಬನ್ನಿ ಆ ಕುರಿತು ಮಾಹಿತಿ ತಿಳಿಯೋಣ.

chandrayaan-3-quiz-by-isro

ಚಂದ್ರಯಾನ-3 ಕ್ವಿಜ್ ರೂಲ್ಸ್

1) ಒಟ್ಟು 300 ಸೆಕೆಂಡ್‌ನಲ್ಲಿ 10 ಪ್ರಶ್ನೆಗೆ ಉತ್ತರಿಸುವ ಕ್ವಿಜ್‌ ಕಾಂಪಿಟೇಷನ್ ಇದಾಗಿದೆ. ಆದರೆ ತಪ್ಪು ಉತ್ತರ ಕೊಟ್ಟರೆ ಮಾರ್ಕ್ಸ್ ಕಟ್ ಆಗಲ್ಲ.

2) ಹಾಗೇ 'ಚಂದ್ರಯಾನ-3' ರಸಪ್ರಶ್ನೆ ಸ್ಪರ್ಧೆ ಎಲ್ಲಾ ಭಾರತೀಯ ನಾಗರಿಕರಿಗೆ ಮುಕ್ತವಾಗಿದೆ. ಈ ಮೂಲಕ ಪ್ರತಿಯೊಬ್ಬರ ಭಾರತೀಯರನ್ನು ಮಹಾಕ್ವಿಜ್‌ಗೆ ಆಹ್ವಾನಿಸಲಾಗಿದೆ.

3) ಕ್ವಿಜ್‌ನಲ್ಲಿ ಭಾಗವಹಿಸುವ ಸ್ಪರ್ಧಿಗಳ ಮೊಬೈಲ್ ಸಂಖ್ಯೆ ಪರಿಶೀಲನೆ ನಡೆಯಲಿದ್ದು, ಈ ಪರಿಶೀಲನೆ ವೇಳೆ ಒನ್ ಟೈಮ್ ಪಾಸ್‌ವರ್ಡ್ (OTP) ಕಳುಹಿಸಲಾಗುತ್ತದೆ. ಅಂತಾರಾಷ್ಟ್ರೀಯ ಬಳಕೆದಾರರು ಮಾನ್ಯವಾದ ಇಮೇಲ್ ಐಡಿ ಮೂಲಕ ಒನ್ ಟೈಮ್ ಪಾಸ್‌ವರ್ಡ್ (OTP)ನ ಸಬ್‌ಮಿಟ್ ಮಾಡಬಹುದು.

4) ಕ್ವಿಜ್‌ನಲ್ಲಿ ಭಾಗವಹಿಸುವ ಸ್ಪರ್ಧಿಗಳು ಪ್ರೊಫೈಲ್ ಪುಟದಲ್ಲಿ ಎಲ್ಲಾ ಮಾನ್ಯ ಮತ್ತು ಸರಿಯಾದ ವಿವರ ನೀಡಬೇಕು. ಇದೇ ಮಾಹಿತಿಯನ್ನ ಮುಂದೆ ಕ್ವಿಜ್ ಸ್ಪರ್ಧಿಗಳ ಜೊತೆ ಸಂವಹನಕ್ಕಾಗಿ ಬಳಸಲಾಗುತ್ತದೆ. ಅಪೂರ್ಣ ಮಾಹಿತಿ ಇದ್ದರೆ ವಿಜೇತರಾಗಲು ಅರ್ಹತೆ ಇರುವುದಿಲ್ಲ.

5) ಹಾಗೇ ಸ್ಪರ್ಧೆಯ ಹಕ್ಕನ್ನು ಕಾಯ್ದಿರಿಸಲಾಗಿದ್ದು, ಮಾಹಿತಿ ಅಸ್ಪಷ್ಟ, ಅಪೂರ್ಣ, ಸುಳ್ಳು ಅಥವಾ ಮಾಹಿತಿ ತಪ್ಪಾಗಿದ್ದರೆ ಭಾಗವಹಿಸುವಿಕೆ ಅನೂರ್ಜಿತವಾಗಲಿದೆ ಎಂದು ಸ್ಪಷ್ಟವಾಗಿ ತಿಳಿಸಿದೆ.

ಇಸ್ರೋ ಆಗಸ್ಟ್ 23 ಸಂಜೆ 6 ಗಂಟೆ 4 ನಿಮಿಷಕ್ಕೆ 'ವಿಕ್ರಮ್' ಲ್ಯಾಂಡರ್‌ನ ಚಂದ್ರನ ದಕ್ಷಿಣ ಧ್ರುವದ ಮೇಲೆ ಯಶಸ್ವಿಯಾಗಿ ಇಳಿಸಿತ್ತು. ಹೀಗೆ ಇಸ್ರೋ ಸಾಧನೆಯು ಇತಿಹಾಸದ ಪುಟದಲ್ಲಿ ಎಂದೂ ಮಾಸದೆ ಉಳಿಯಲಿದೆ. ಇಂತಹ ಖುಷಿ ವಿಚಾರವನ್ನು ಕ್ವಿಜ್ ಮೂಲಕ ಸಂಭ್ರಮಿಸಿ ಭಾರತೀಯರಲ್ಲಿ ಈ ಬಗ್ಗೆ ಮಾಹಿತಿ ನೀಡಲು ಮಹತ್ವದ ಕ್ವಿಜ್ ಕೂಡ ಆಯೋಜಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+