• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಪ್ರೇಮಕುಮಾರಿ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲವಂತೆ, ನಿಜಾನಾ?

By ಯಶಸ್ವಿನಿ ಎಂ.ಕೆ
|

ಮೈಸೂರು, ಮಾರ್ಚ್ 20 : ರಾಮ್ ದಾಸ್ - ಪ್ರೇಮಕುಮಾರಿ ಪ್ರೇಮ ಪ್ರಕರಣ ಜಗಜ್ಜಾಹೀವಾಗಿತ್ತು. ಇವರ ಗಲಾಟೆ - ಗದ್ದಲ ಕೋರ್ಟ್ ಮೆಟ್ಟಿಲೇರಿತ್ತು.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ

ಇದಕ್ಕೆ ಸೆಡ್ಡು ಹೊಡೆಯಲು ಕೆಲವು ದಿನಗಳ ಕೆಳಗಷ್ಟೇ ಪ್ರೇಮಕುಮಾರಿಯವರು, ಚುನಾವಣೆಗೆ ಸ್ಪರ್ಧಿಸುವುದಾಗಿ ಹೊಸ ಪಕ್ಷ ಇಂಡಿಯನ್ ನ್ಯೂ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದರು.

2018ರ ಚುನಾವಣೆಗೆ ಸ್ಪರ್ಧೆ : ಪ್ರೇಮಕುಮಾರಿ ಸಂದರ್ಶನ

ರಾಮ್ ದಾಸ್ ಸ್ಪರ್ಧಿಸುವ ಕೆ. ಆರ್ ಕ್ಷೇತ್ರದಲ್ಲೇ ಸ್ಪರ್ಧಿಸುವ ಮನದಿಂದ ಪತ್ರಿಕಾಗೋಷ್ಠಿ ನಡೆಸಿ ಹೇಳಿಕೆ ನೀಡಿದ್ದ ಇವರು, ಕೆಲವು ದಿನಗಳಿಂದ ಕಾಣೆಯಾಗಿದ್ದಾರೆ. ಇದರೊಟ್ಟಿಗೆ ಪ್ರೇಮಕುಮಾರಿಯವರು ಈ ಬಾರಿ ಸ್ಪರ್ಧಿಸುವುದಿಲ್ಲ ಎಂಬ ಮಾತುಗಳು ಕೇಳಿಬರತೊಡಗಿದೆ.

ಇಂಡಿಯನ್ ನ್ಯೂ ಕಾಂಗ್ರೆಸ್ ಪಕ್ಷ ಸೇರಿದ ಪ್ರೇಮಕುಮಾರಿ

ಹಾಗಾದರೆ ಪ್ರೇಮಕುಮಾರಿ ಸುಳ್ಳು ಹೇಳಿ ಜನರ ಭಾವನೆಯೊಂದಿಗೆ ಆಟವಾಡಿದ್ದಾರಾ ? ಖುದ್ದು ಅವರೇ ಒನ್ ಇಂಡಿಯಾ ನಡೆದ ಸಂದರ್ಶನದಲ್ಲಿ ಉತ್ತರಿಸಿದ್ದಾರೆ. ಇಲ್ಲಿದೆ ಅದರ ಸಾರಾಂಶ...

ಈ ಬಾರಿ ಸ್ಪರ್ಧಿಸೋಲ್ಲ ಎಂಬುದು ನಿಜವೇ?

ಈ ಬಾರಿ ಸ್ಪರ್ಧಿಸೋಲ್ಲ ಎಂಬುದು ನಿಜವೇ?

ಪ್ರಶ್ನೆ: ಇಂಡಿಯನ್ ನ್ಯೂ ಕಾಂಗ್ರೆಸ್ ಕಾರ್ಯಕರ್ತೆಯಾಗಿ ಸೇರ್ಪಡೆಯಾಗಿದ್ದ ನೀವು, ಪಕ್ಷದಿಂದ ಈ ಬಾರಿ ಸ್ಪರ್ಧಿಸುವುದಿಲ್ಲ ಎಂಬ ಮಾತುಗಳು ಕೇಳಿ ಬರುತ್ತಿದೆ. ಇದು ನಿಜವೇ ?

ಉತ್ತರ: ಸ್ಪರ್ಧಿಸುವುದಿಲ್ಲ ಎಂದು ಹೇಳಿಲ್ಲ. ಆದರೆ ಸ್ಫರ್ಧಿಸಲು ಮನಸ್ಸಿಲ್ಲ. ಎಂದಿದ್ದೇನೆ. ಕಾರಣ ನಮ್ಮ ಪ್ರಕರಣ ಸುಖಾಂತ್ಯ ಕಾಣಬೇಕೆಂಬ ಹಂಬಲವಷ್ಟೆ. ನನ್ನ ಸ್ಪರ್ಧೆ ಕುರಿತು ನನ್ನ ನಿರ್ಧಾರಕ್ಕಿಂತ ಕುಟುಂಬದ ನಿರ್ಧಾರ ಮುಖ್ಯ. ನಾನು ಸ್ಪರ್ಧೆ ವಿಚಾರ ಯಾರಿಗೂ ಇಷ್ಟವಿಲ್ಲ. ಹಾಗಾಗಿ ಸ್ಪರ್ಧಿಸುವುದು ಅನುಮಾನ. ಈ ಕುರಿತಾಗಿ ನಾನು ಏನನ್ನು ಹೇಳಲಾರೆ.

ಪ್ರ. ನಿಮ್ಮ ನಿರ್ಧಾರದಿಂದ ಜನರ ಭಾವನೆಗಳೊಂದಿಗೆ ನೀವು ಆಟವಾಡುತ್ತಿದ್ದೀರೀ ಎಂದೆನೆಸುತ್ತಿಲ್ಲವೇ ?

ಉ. ನನ್ನ ಹಾಗೂ ರಾಮ್ ದಾಸ್ ನಡುವಿನ ವ್ಯಾಜ್ಯ ಮೊದಲು ಬಗೆಹರಿಯಲಿ ಎಂದು ಹೇಳುತ್ತಿರುವ ಜನರೇ, ನನ್ನ ನಿರ್ಧಾರ ಹಿಂತೆಗೆದುಕೊಂಡರೆ ಏನು ಬೇಸರಗೊಳ್ಳುವುದಿಲ್ಲ. ನನ್ನ ನಿರ್ಧಾರ ಜನರ ಒಳಿತಿಗೆಯೇ. ಮುಂದೊಂದು ದಿನ ರಾಜಕೀಯ ಪ್ರವೇಶ ನಿಶ್ಚಿತ.

ನಿರ್ಧಾರದ ಹಿಂದೆ ಯಾರ ಪ್ರಭಾವ?

ನಿರ್ಧಾರದ ಹಿಂದೆ ಯಾರ ಪ್ರಭಾವ?

ಪ್ರ. ನಿಮ್ಮ ನಿರ್ಧಾರದ ಹಿಂದೆ ಯಾರ ಕೈವಾಡವಿದೆ ?

ಉ. ನಿರ್ಧಾರ ನನ್ನ ಸ್ವಂತದ್ದು, ಯಾರ ಕೈವಾಡವಿಲ್ಲ. ಯಾವ ರಾಜಕೀಯ ನಾಯಕರು ನನ್ನೊಂದಿಗೆ ಮಾತನಾಡಿಲ್ಲ. ಯಾರ ಮಾತು ಕೇಳಿಯೂ ನಾನು ಈ ನಿರ್ಧಾರ ತೆಗೆದುಕೊಂಡಿಲ್ಲ. ಇದು ನನ್ನ ಸ್ವ ಇಚ್ಛೆ.

ಪ್ರ. ಕೆ. ಆರ್ ಕ್ಷೇತ್ರದಿಂದ ನಿಲ್ಲುತ್ತೇನೆ ಎಂದಿದ್ದಿರಿ ? ರಾಮ್ ದಾಸ್ ವಿರುದ್ಧ ಹಿಗ್ಗಾ - ಮುಗ್ಗಾ ಬ್ಯಾಟಿಂಗ್ ಮಾಡಿದ್ರಿ. ಏಕೆ ಈ ಉಲ್ಟಾ ದಿಢೀರ್ ನಿರ್ಧಾರ ?

ಉ. ಸ್ಪರ್ಧೆ ಕುರಿತು ನಾನು ಮುಂದೆ ಹೇಳುತ್ತೇನೆ ಅಂದಿದ್ದೆ ಅಷ್ಟೇ. ಈ ಬಾರಿ ಇಲ್ಲವಾದರೇನೋ ಮುಂದಿನ ಚುನಾವಣೆಗಳಲ್ಲಿ ನಿಲ್ಲುತ್ತೇನೆ. ರಾಜಕಾರಣ ನನ್ನ ಕನಸು. ಸ್ಪರ್ಧೆಗಿಂತ ಈಗ ಕುಟುಂಬ ಮುಖ್ಯವಲ್ಲವೇ. ಮೊದಲು ನನ್ನ, ರಾಮ್ ದಾಸ್ ನಡುವಿನ ವ್ಯಾಜ್ಯ ಬಗೆಹರಿಯಲಿ. ಆಮೇಲೆ ಮುಂದಿನ ಯೋಜನೆ - ಯೋಚನೆ.

ಮುಳ್ಳಾಯಿತೆ ರಾಮ್ ದಾಸ್ ಜೊತೆಗಿನ ಬಾಂಧವ್ಯ

ಮುಳ್ಳಾಯಿತೆ ರಾಮ್ ದಾಸ್ ಜೊತೆಗಿನ ಬಾಂಧವ್ಯ

ಪ್ರ. ರಾಮ್ ದಾಸ್ ಹಾಗೂ ನಿಮ್ಮ ನಡುವಿನ ಬಾಂಧವ್ಯ ನಿಮ್ಮ ಏಳಿಗೆಗೆ ಮುಳುವಾಯಿತೇ ?

ಉ.ಖಂಡಿತಾ ಇಲ್ಲ. ನನ್ನ ಮನಸ್ಸಿನಲ್ಲಿ ಅವರ ಮೇಲಿನ ಪ್ರೀತಿ, ವಾತ್ಸಲ್ಯ ಹಾಗೇ ಇದೆ. ಹಾಗೆಯೇ ಇರುತ್ತದೆ ಕೂಡ. ಅವರು ಯಾವುದೋ ಒತ್ತಡಕ್ಕೆ ಒಳಗಾಗಿ ಈ ನಿರ್ಧಾರಕ್ಕೆ ಬಂದಿರಬಹುದು. ಆದರೆ ನಾನು ಹಾಗಲ್ಲ. ಮುಂದಿನ ದಿನಗಳಲ್ಲಿ ಇವೆಲ್ಲವೂ ಸರಿ ಹೋಗಲಿದೆ. ಅವರು ನನ್ನವರಾಗಲಿದ್ದಾರೆ ಎಂಬ ವಿಶ್ವಾಸವಿದೆ. ನನಗೆ ಅವರ ಮೇಲೆ ಖಂಡಿತಾ ದ್ವೇಷವಿಲ್ಲ.

ರಾಮ್ ದಾಸ್ ಪರ ಪ್ರಚಾರ ಮಾಡುತ್ತೀರಾ..?!

ರಾಮ್ ದಾಸ್ ಪರ ಪ್ರಚಾರ ಮಾಡುತ್ತೀರಾ..?!

ಪ್ರ. ಕೋರ್ಟ್ ವ್ಯಾಜ್ಯ ಯಾವ ಹಂತ ತಲುಪಿದೆ ?

ಉ.ವಿಚಾರಣೆ ಹಂತದಲ್ಲಿದೆ. ನ್ಯಾಯಾಲಯದಲ್ಲಿ ಮಾತುಕತೆ ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ನನ್ನ ಪರವಾಗಿಯೇ ತೀರ್ಪು ಬರಲಿದೆ ಎಂಬ ವಿಶ್ವಾಸ ನನ್ನದು.

ಪ್ರ. ಚುನಾವಣೆಯಲ್ಲಿ ರಾಮ್ ದಾಸ್ ಸ್ಪರ್ಧಿಸಿದರೇ ನೀವು ಪ್ರಚಾರಕ್ಕಿಳಿಯುತ್ತೀರಾ ?

ಉ. ಹೌದು, ನನ್ನ ವ್ಯಾಜ್ಯ ಬಗೆಹರಿಸಲಿ. ನಾನು ಅವರ ಪರವಾಗಿ ಪ್ರಚಾರ ಮಾಡುತ್ತೇನೆ. ಇಲ್ಲವಾದರೆ ಬಿಜೆಪಿ ನಾಯಕರು ನನ್ನೊಂದಿಗೆ ಮಾತನಾಡಲಿ. ನಾನು ಪ್ರಚಾರಕ್ಕಿಳಿಯುವುದು ಮಾತ್ರ ನಿಕ್ಕಿ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
"I will not contest in Karnataka assebly elections 2018" Prema Kumari who was in news for having relationship with BJP leader Ramdas said in Mysuru in an interview with Oneindia. She joined Indian new Congress recently.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more