US Election Results 2020 Live updates: ಅಮೆರಿಕ ಅಧ್ಯಕ್ಷರಾಗಿ ಬೈಡನ್ ಆಯ್ಕೆ
ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಸಾರ್ವತ್ರಿಕ ಮತದಾನ ನವೆಂಬರ್ 3ರಂದು ನಡೆಯಲಿದೆ. 45ನೇ ಅಧ್ಯಕ್ಷ (ಟ್ರಂಪ್) ಮತ್ತೊಂದು ಅವಧಿಗೆ ಆಯ್ಕೆಯಾಗುತ್ತಾರಾ? 46ನೇ ಅಧ್ಯಕ್ಷರಾಗಿ (ಬಿಡೆನ್) ಆಯ್ಕೆಯಾಗುತ್ತಾರಾ ಎಂಬುದು ಟ್ರಿಲಿಯನ್ ಡಾಲರ್ ಪ್ರಶ್ನೆಯಾಗಿದೆ.
ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಸಾರ್ವತ್ರಿಕ ಮತದಾನ ಭಾರತೀಯ ಕಾಲಮಾನದ ಪ್ರಕಾರ ಮಧ್ಯಾಹ್ನ 2.30ಕ್ಕೆ ಆರಂಭವಾಗಲಿದೆ. ಅಮೆರಿಕ ಭೂಪ್ರದೇಶ ಸಾಕಷ್ಟು ವಿಸ್ತಾರವಾಗಿದ್ದು ಒಂದೊಂದು ರಾಜ್ಯದಲ್ಲಿ ಒಂದೊಂದು ಸಮಯಕ್ಕೆ ಚುನಾವಣೆ ಆರಂಭವಾಗಲಿದೆ. ಈ ಪೈಕಿ ಮೊದಲಿಗೆ ವೆರ್ಮೊಂಟ್ ರಾಜ್ಯ ಮತದಾನ ಪ್ರಕ್ರಿಯೆಯನ್ನು ಮಧ್ಯಾಹ್ನ 2.30ಕ್ಕೆ ಆರಂಭಿಸಲಿದೆ. ಇದಾದ ಬಳಿಕ ಆಯಾ ರಾಜ್ಯಗಳ ಸಮಯಕ್ಕೆ ತಕ್ಕಂತೆ ಮತದಾನ ಆರಂಭವಾಗಲಿದೆ.

ಭಾರತದ ಚುನಾವಣೆಗಳಿಗೆ ಹೋಲಿಕೆ ಮಾಡುವುದಾದರೆ, ಅಮೆರಿಕದ ಬಹುಪಾಲು ರಾಜ್ಯಗಳಲ್ಲೂ ಬೆಳಗ್ಗೆ 6 ರಿಂದ 7 ಗಂಟೆ ಸುಮಾರಿಗೆ ಮತದಾನ ಆರಂಭವಾಗಲಿದೆ. ವೋಟಿಂಗ್ ಕೊನೆಗೊಳ್ಳುವ ಸಮಯ ಮಾತ್ರ ರಾತ್ರಿ ತಲುಪುತ್ತದೆ. ಅಂದರೆ ಅಮೆರಿಕದಲ್ಲಿ ಮತದಾನವನ್ನು ಕೊನೆಯದಾಗಿ ಮುಗಿಸುವ ರಾಜ್ಯ ನ್ಯೂಯಾರ್ಕ್ ಮತ್ತು ನಾರ್ಥ್ ಡಕೋಟ ಆಗಿರಲಿದ್ದು, ಇಲ್ಲಿ ಅಮೆರಿಕ ಕಾಲಮಾನದಂತೆ ರಾತ್ರಿ 9ಕ್ಕೆ ಮತದಾನ ಮುಗಿಯಲಿದೆ. ಅಷ್ಟೊತ್ತಿಗೆ ಭಾರತದಲ್ಲಿ ದಿನಾಂಕ ನವೆಂಬರ್ 4ನ್ನು ತಲುಪಿ, ಸಮಯ ಬೆಳಗ್ಗೆ 6.30ರ ಆಸುಪಾಸಿನಲ್ಲಿ ಇರಲಿದೆ. ಅಮೆರಿಕ ಅಧ್ಯಕ್ಷರನ್ನು ಪ್ರತಿ 4 ವರ್ಷಕ್ಕೊಮ್ಮೆ ಬದಲಾಯಿಸಲಾಗುತ್ತದೆ ಅಥವಾ ಮರು ಆಯ್ಕೆ ಮಾಡುತ್ತಾರೆ. 2020ರಲ್ಲಿ ನವೆಂಬರ್ 3ರಂದು ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ಮತದಾನ ನಡೆಯಲಿದೆ. 18 ವರ್ಷ ಮೇಲ್ಪಟ್ಟ ಅಮೆರಿಕನ್ನರು ಮತದಾನ ಮಾಡಲಿದ್ದಾರೆ. ಆದರೆ ಕೊರೊನಾ ಹಿನ್ನೆಲೆ ಈ ಬಾರಿ ಅಂಚೆ ಮತದಾನ ಪದ್ಧತಿಯ ಮೊರೆ ಹೋಗಲಾಗಿದೆ.
ಅಮೆರಿಕದ ಉಪಾಧ್ಯಕ್ಷೆಯಾಗಿ ಕಮಲಾ, ಹೊಸ ಇತಿಹಾಸ ನಿರ್ಮಾಣ
ಅಮೆರಿಕದ 46ನೇ ಅಧ್ಯಕ್ಷ ಜೋಸೆಫ್ ಬೈಡನ್ ವ್ಯಕ್ತಿಚಿತ್ರ
ಅಮೆರಿಕ ಅಧ್ಯಕ್ಷರಾಗಿ ಬೈಡನ್ ಆಯ್ಕೆ
The numbers tell us a clear and convincing story. We are going to win this race: US Democratic presidential nominee Joe Biden. #USElection2020 https://t.co/MXCvJIyeBp
— ANI (@ANI) November 7, 2020



















Click it and Unblock the Notifications