ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತೀಯರ ವಿರುದ್ಧ ಮತ್ತೆ ರೊಚ್ಚಿಗೆದ್ದ ಟ್ರಂಪ್ ಮಗ ಜ್ಯೂ. ಟ್ರಂಪ್

|
Google Oneindia Kannada News

ಟ್ರಂಪ್ ಹಾಗೂ ಟ್ರಂಪ್ ಬೆಂಬಲಿಗರಿಗೆ ಸೋಲು ಖಚಿತವಾಗುತ್ತಿದ್ದಂತೆ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಸುಖಾಸುಮ್ಮನೆ ಆರೋಪ ಮಾಡುವುದು ಹೆಚ್ಚಾಗುತ್ತಿದೆ. ಕೆಲದಿನಗಳ ಹಿಂದಷ್ಟೇ ಭಾರತೀಯರ ವಿರುದ್ಧ ಒಮ್ಮೆ ಮಾತನಾಡಿ ಅವಮಾನಕ್ಕೆ ಒಳಗಾಗಿರುವ ಟ್ರಂಪ್ ಮಗ ಜೂನಿಯರ್ ಟ್ರಂಪ್‌ಗೆ ಇನ್ನೂ ಸಿಟ್ಟು ಕಡಿಮೆ ಆಗಿಲ್ಲ. ಈಗ ಮತ್ತೊಮ್ಮೆ ಭಾರತೀಯರ ವಿರುದ್ಧ ಕೋಪ ತೀರಿಸಿಕೊಳ್ಳುತ್ತಿದ್ದಾರೆ. ಆದರೆ ಜೂನಿಯರ್ ಟ್ರಂಪ್ ಕೋಪ ಈಗ ಭಾರತ ಮೂಲದ ರಾಜಕಾರಣಿ ಮೇಲೆ ತಿರುಗಿದೆ.

ಭಾರತ ಮೂಲದ ರಾಜಕಾರಣಿ, ವಿಶ್ವಸಂಸ್ಥೆಗೆ ಅಮೆರಿಕದ ರಾಯಭಾರಿಯಾಗಿದ್ದ ನಿಕ್ಕಿ ಹ್ಯಾಲೆ ಅವರ ವಿರುದ್ಧ ಜೂನಿಯರ್ ಟ್ರಂಪ್ ರೊಚ್ಚಿಗೆದ್ದು ವಾಗ್ದಾಳಿ ನಡೆಸಿದ್ದಾರೆ. ಅಮೆರಿಕ ಅಧ್ಯಕ್ಷೀಯ ಚುನಾವಣೆ ಫಲಿತಾಂಶ ಟ್ರಂಪ್‌ಗೆ ಉಲ್ಟಾ ಹೊಡೆಯುತ್ತಿದ್ದಂತೆ ಹಾಲಿ ಅಧ್ಯಕ್ಷರ ಬೆಂಬಲಿಗರು ಮತ್ತು ಅವರ ಪುತ್ರನಿಗೆ ಸಹಿಸಲಾಗದಷ್ಟು ಕೋಪ ಬಂದಿದೆ. ಹೀಗಾಗಿ ಬೇಕಾಬಿಟ್ಟಿ ಆರೋಪಗಳನ್ನು ಮಾಡುತ್ತಿದ್ದಾರೆ.

 ಗೆಲುವಿನ ಸನಿಹದಲ್ಲಿ ಜೋ ಬೈಡನ್, ಟ್ರಂಪ್ ಮತ್ತೆ ಗರಂ ಗೆಲುವಿನ ಸನಿಹದಲ್ಲಿ ಜೋ ಬೈಡನ್, ಟ್ರಂಪ್ ಮತ್ತೆ ಗರಂ

ಮತದಾನದಲ್ಲಿ ಅನ್ಯಾಯವಾಗಿದೆ, ಮತ ಎಣಿಕೆಯಲ್ಲೂ ಮೋಸವಾಗುತ್ತಿದೆ ಎಂದು ಆಧಾರ ರಹಿತ ಆರೋಪ ಮಾಡುತ್ತಿದ್ದಾರೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್. ಈಗಾಗಲೇ ಮಿಚಿಗನ್ ಹಾಗೂ ಜಾರ್ಜಿಯಾ ಕೋರ್ಟ್‌ಗಳಲ್ಲಿ ಟ್ರಂಪ್‌ಗೆ ಮುಖಭಂಗವಾಗಿದೆ. ಈ ಸಂದರ್ಭದಲ್ಲೇ ಟ್ರಂಪ್ ಮಗ ಭಾರತೀಯ ಮೂಲದ ಪ್ರಜೆಗಳನ್ನ ಕೆಣಕುವ ಕೆಲಸ ಮಾಡುತ್ತಿದ್ದಾರೆ. ಟ್ರಂಪ್ ಮತ್ತು ಅವರ ಫ್ಯಾಮಿಲಿ ವಿರುದ್ಧ ರಿಪಬ್ಲಿಕನ್ಸ್ ನಾಯಕರು ತಿರುಗಿಬಿದ್ದಿದ್ದಾರೆ. ಹೀಗೆ ತಮ್ಮದೇ ಪಕ್ಷದ ನಾಯಕರು ತಮ್ಮ ಬೆಂಬಲಕ್ಕೆ ನಿಂತಿಲ್ಲ ಎಂಬುದು ಸದ್ಯ ಟ್ರಂಪ್‌ ಪಡೆಗೆ ನುಂಗಲಾರದ ತುತ್ತಾಗಿದೆ. ಆದರೆ ಈ ಕೋಪ ತೀರಿಸಿಕೊಳ್ಳಲು ಟ್ರಂಪ್ ಪುತ್ರ ಪದೇ ಪದೆ ಭಾರತದ ಹೆಸರು ತರುತ್ತಿದ್ದಾರೆ.

ಕೋಪಕ್ಕೆ ಕಾರಣ ಏನು..?

ಕೋಪಕ್ಕೆ ಕಾರಣ ಏನು..?

ಅಮೆರಿಕದಲ್ಲಿ ಮತ ಎಣೆಕೆ ಆರಂಭವಾದಾಗ ಟ್ರಂಪ್ ಗೆಲ್ಲಬಹುದು ಎಂಬುದು ಖಾತ್ರಿಯಾಗಿತ್ತು. ಆದರೆ ಆಗಿನ್ನೂ ಮತಗಳ ಎಣಿಕೆ ಪೂರ್ಣವಾಗಿರಲಿಲ್ಲ. ಆದರೆ ಟ್ರಂಪ್ ಏನೇನೋ ಊಹೆ ಮಾಡಿಕೊಂಡು, ತಾನು ಗೆದ್ದುಬಿಟ್ಟೆ ಎಂದಿದ್ದರು. ಆದರೆ ಮತ ಎಣಿಕೆ ಮುಂದುವರಿದಾಗ ಬಂಡವಾಳ ಬಯಲಾಗಿದೆ. ಅಮೆರಿಕ ಮತದಾರರು ಸದ್ಯ ಟ್ರಂಪ್ ವಿರುದ್ಧ ರೊಚ್ಚಿಗೆದ್ದಿರುವುದು ಸ್ಪಷ್ಟವಾಗುತ್ತಿದೆ. ಹೀಗಾಗಿ ಟ್ರಂಪ್ 2 ದಿನಗಳ ಹಿಂದೆ ಮುನ್ನಡೆಯಲ್ಲಿದ್ದ ರಾಜ್ಯಗಳಲ್ಲಿ ಹಿನ್ನಡೆ ಕಾಣುತ್ತಿದ್ದಾರೆ. ಎಷ್ಟರಮಟ್ಟಿಗೆ ಎಂದರೆ, ಟ್ರಂಪ್ ನಿರ್ಣಾಯಕ ರಾಜ್ಯಗಳಲ್ಲೂ ಸೋತು ಸುಣ್ಣವಾಗುವುದು ಖಚಿತವಾಗುತ್ತಿದೆ. ಹೀಗಾಗಿ ಪದೇ ಪದೆ ಸುದ್ದಿಗೋಷ್ಠಿ ಕರೆದು ಬಾಯಿಗೆ ಬಂದಂತೆ ಹೇಳಿಕೆ ನೀಡುತ್ತಿದ್ದಾರೆ. ಆಧಾರ ರಹಿತ ಆರೋಪ ಮಾಡುತ್ತಿದ್ದಾರೆ ಟ್ರಂಪ್. ಇದು ಬೇರೆಯರಿಗೆ ಬಿಡಿ ಸ್ವತಃ ಟ್ರಂಪ್ ಪಕ್ಷದವರೇ ಆದ ರಿಪಬ್ಲಿಕನ್‌ ನಾಯಕರಿಗೂ ಇಷ್ಟವಾಗುತ್ತಿಲ್ಲ. ಹೀಗಾಗಿ ಟ್ರಂಪ್ ಬೆಂಬಲಕ್ಕೆ ಬಹುಪಾಲು ರಿಪಬ್ಲಿಕನ್‌ ನಾಯಕರು ನಿಲ್ಲುತ್ತಿಲ್ಲ. ಇದು ಟ್ರಂಪ್ ಹಾಗೂ ಟ್ರಂಪ್ ಕುಟುಂಬದ ಪಿತ್ತ ನೆತ್ತಿಗೇರುವಂತೆ ಮಾಡಿದೆ.

ಡೊನಾಲ್ಡ್ ಟ್ರಂಪ್ ಸೋತರೆ ಮರು ಆಯ್ಕೆಯಾಗದ ಅಧ್ಯಕ್ಷರ ಸಾಲಿಗೆ ಸೇರ್ಪಡೆಡೊನಾಲ್ಡ್ ಟ್ರಂಪ್ ಸೋತರೆ ಮರು ಆಯ್ಕೆಯಾಗದ ಅಧ್ಯಕ್ಷರ ಸಾಲಿಗೆ ಸೇರ್ಪಡೆ

ಭಾರತೀಯರಿಗೆ ಪದೇ ಪದೆ ಅವಮಾನ..?

ಭಾರತೀಯರಿಗೆ ಪದೇ ಪದೆ ಅವಮಾನ..?

ಮೊನ್ನೆ ಮೊನ್ನೆ ತಾನೆ ಭಾರತದ ನಕ್ಷೆ ಹಾಕಿ ಟ್ರಂಪ್ ಮಗ ಬಾಯಿಗೆ ಬಂದಂತೆ ಟ್ವೀಟ್ ಮಾಡಿದ್ದರು. ಭಾರತಕ್ಕೆ ಟ್ರಂಪ್ ಗೆಲ್ಲುವುದು ಬೇಡ ಎಂದಿದ್ದರು. ಆದರೆ ಭಾರತೀಯರು ಟ್ರಂಪ್ ಗೆಲ್ಲಬೇಕು ಎಂದು ಪೂಜೆ ಮಾಡಿದ್ದೂ ಇದೆ. ಆದರೆ ಟ್ರಂಪ್ ಮಗನ ಉದ್ಧಟತನ ಇಂತಹ ಟ್ವೀಟ್‌ಗೆ ಕಾರಣವಾಗಿತ್ತು. ಹೀಗೆ ತಾನು ಟ್ವೀಟ್ ಮಾಡಿದ ಸಂದರ್ಭದಲ್ಲಿ ಟ್ರಂಪ್ ಮಗ ಜ್ಯೂನಿಯರ್ ಟ್ರಂಪ್ ಭಾರತದ ವಿವಾದಾತ್ಮಕ ನಕ್ಷೆ ಪೋಸ್ಟ್ ಮಾಡಿದ್ದರು. ಈ ಮ್ಯಾಪ್‌ನಲ್ಲಿ ಭಾರತದ ಅವಿಭಾಜ್ಯ ಅಂಗ ಜಮ್ಮು ಮತ್ತು ಕಾಶ್ಮೀರ ಪ್ರದೇಶ ಇರಲೇ ಇಲ್ಲ. ಟ್ರಂಪ್ ಮಗನ ಮ್ಯಾಪ್‌ನಲ್ಲಿ ಭಾರತವನ್ನು ಪಾಕಿಸ್ತಾನ ಹಾಗೂ ಚೀನಾಗೆ ಸೇರಿಸಲಾಗಿತ್ತು. ಟ್ರಂಪ್ ಮಗನ ಕೆಲಸ ಕೋಟ್ಯಂತರ ಭಾರತೀಯರ ತಾಳ್ಮೆ ಕೆಡಿಸಿದೆ. ಇಂತಹ ಸಂದರ್ಭದಲ್ಳೇ ಭಾರತದ ಹೆಮ್ಮೆಯ ಪುತ್ರಿ, ನಿಕ್ಕಿ ಹ್ಯಾಲೆ ಕುರಿತು ಬಾಯಿಗೆ ಬಂದಂತೆ ಮಾತನಾಡಿರುವುದು ಟ್ರಂಪ್ ಮಗನ ವಿರುದ್ಧ ಆಕ್ರೋಶ ಮತ್ತಷ್ಟು ಹೆಚ್ಚುವಂತೆ ಮಾಡಿದೆ.

ಮುಂದಿನ ಅಧ್ಯಕ್ಷೆ ಭಾರತೀಯ ಮಹಿಳೆ..?

ಮುಂದಿನ ಅಧ್ಯಕ್ಷೆ ಭಾರತೀಯ ಮಹಿಳೆ..?

ಹೌದು, ಭಾರತ ಮೂಲದ ನಿಕ್ಕಿ ಹ್ಯಾಲೆ 2024ರ ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ರಿಪಬ್ಲಿಕನ್ ಅಭ್ಯರ್ಥಿ ಎನ್ನಲಾಗುತ್ತಿದೆ. 48 ವರ್ಷದ ನಿಕ್ಕಿ ಹ್ಯಾಲೆ ಅಮೆರಿಕದ ಮಾಜಿ ರಾಯಭಾರಿ. ಇವರೇ ಮುಂದಿನ ಬಾರಿ ಸಮರ್ಥ ಅಭ್ಯರ್ಥಿ ಎಂಬ ವಾದವಿದೆ. ಈಗಾಗಲೇ ರಿಪಬ್ಲಿಕನ್ ಪಕ್ಷದ ನಾಯಕರು ಮುಂದಿನ ಚುನಾವಣೆಗೆ ನಿಕ್ಕಿ ಹ್ಯಾಲೆ ಹೆಸರನ್ನು ಬಹುತೇಕ ಅಂತಿಮಗೊಳಿಸಿದ್ದಾರೆ. ಆದರೆ ಇದ್ಯಾವುದನ್ನೂ ಗಮನಿಸದವರಂತೆ ಜ್ಯೂನಿಯರ್ ಟ್ರಂಪ್ ನಿಕ್ಕಿ ಹ್ಯಾಲೆ ವಿರುದ್ಧ ಹರಿಹಾಯ್ದಿದ್ದಾರೆ. ಇದು ಸೋಲಿನ ಸುಳಿಯಲ್ಲಿ ಸಿಲುಕಿರುವ ಟ್ರಂಪ್ ಪರಿವಾರದ ಪರಿಸ್ಥಿತಿ ಬಿಂಬಿಸುತ್ತದೆ ಎಂದು ವಿಪಕ್ಷ ನಾಯಕರು ವಾಗ್ದಾಳಿ ನಡೆಸಿದ್ದಾರೆ.

ಟ್ರಂಪ್ ಗೆಲ್ಲಬೇಕು, ಆದರೆ ನ್ಯಾಯಯುತವಾಗಿ..!

ಟ್ರಂಪ್ ಗೆಲ್ಲಬೇಕು, ಆದರೆ ನ್ಯಾಯಯುತವಾಗಿ..!

ಇನ್ನು ಟ್ರಂಪ್ ಮಗನ ಈ ರಾದ್ಧಾಂತ ಕಂಡು ಸರಿಯಾಗೇ ತಿರುಗೇಟು ನೀಡಿರುವ ನಿಕ್ಕಿ ಹ್ಯಾಲೆ ಅವರು, ಟ್ರಂಪ್ ಅವರ ನಿಜವಾದ ಗೆಲುವನ್ನು ನಾವು ಬಯಸುತ್ತೇವೆ ಎಂದಿದ್ದಾರೆ. ಟ್ವಿಟ್ಟರ್‌ನಲ್ಲಿ ಟ್ರಂಪ್ ಮಗನಿಗೆ ಸರಿಯಾಗೇ ತಿರುಗೇಟು ನೀಡಿರುವ ಭಾರತ ಮೂಲದ ನಿಕ್ಕಿ ಹ್ಯಾಲೆ, ಟ್ರಂಪ್ ಗೆಲುವಿನಲ್ಲಿ ನ್ಯಾಯ ಇರಬೇಕು, ಕಾನೂನನ್ನು ಅನುಸರಿಸಬೇಕು. ಸತ್ಯ ಗೆಲ್ಲುತ್ತದೆ ಎಂಬ ನಿರೀಕ್ಷೆಯಲ್ಲಿ ನಾವಿದ್ದೇವೆ ಎಂದು ತಿರುಗೇಟು ನೀಡಿದ್ದಾರೆ. ನಿಕ್ಕಿ ಹ್ಯಾಲೆ ರಿಪಬ್ಲಿಕನ್ ಪಕ್ಷದವರಾದರೂ ಪ್ರಬುದ್ಧ ರಾಜಕಾರಣ ಎಂಬ ಹೆಸರು ಪಡೆದಿದ್ದಾರೆ. ಆದರೆ ಟ್ರಂಪ್ ಪುತ್ರ ಮತ್ತೆ ಭಾರತ ಮೂಲದವರ ವಿರುದ್ಧ ಗಂಭೀರ ಆರೋಪ ಮಾಡಿರುವುದು, ಭಾರತ ಮೂಲದ ಅಮೆರಿಕನ್ನರಿಗೆ ಕೋಪ ತರಿಸಿದೆ. ಟ್ರಂಪ್ ಕುಟುಂಬದವರು ಮುಂದೆ ಭಾರತವನ್ನು ಹೊಗಳಿ, ಹಿಂದೆ ತೆಗಳುತ್ತಾರೆ ಎಂದು ವಿಪಕ್ಷ ನಾಯಕರು ಟ್ರಂಪ್ ಹಾಗೂ ಟ್ರಂಪ್ ಮಗನ ವಿರುದ್ಧ ಗಂಭೀರ ಆರೋಪ ಮಾಡುತ್ತಿದ್ದಾರೆ.

ಏನಿದು ಡೊನಾಲ್ಡ್ ಟ್ರಂಪ್ ಜ್ಯೂನಿಯರ್ ಟ್ವೀಟ್ ರಗಳೆಏನಿದು ಡೊನಾಲ್ಡ್ ಟ್ರಂಪ್ ಜ್ಯೂನಿಯರ್ ಟ್ವೀಟ್ ರಗಳೆ

English summary
Trump's eldest Son Don Jr accused the party of being weak. He targets the Republican leaders for not supporting the trump.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X