ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಮೀಕ್ಷೆಗಳು ನಿಜವಾದರೆ ಅಮೆರಿಕ ಅಧ್ಯಕ್ಷರಾಗಲಿದ್ದಾರೆ ಜೋ ಬೈಡನ್

|
Google Oneindia Kannada News

ವಾಷಿಂಗ್ಟನ್, ನವೆಂಬರ್ 3: ನೋಂದಾಯಿತ ಮತದಾರರ ಆದ್ಯತೆಯನ್ನು ಗಮನಿಸಿ ಚುನಾವಣಾ ಪೂರ್ವ ಮತದಾನ ಸಮೀಕ್ಷೆಗಳ ಪ್ರಕಾರ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಹಾಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗಿಂತ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಜೋ ಬೈಡನ್ ಕೊಂಚ ಮುನ್ನಡೆ ಹೊಂದಿದ್ದಾರೆ.

ಸಿಎನ್ಎನ್ ನಡೆಸಿದ ಸಮೀಕ್ಷೆಗಳ ಸಮೀಕ್ಷೆಯಲ್ಲಿ ರಾಷ್ಟ್ರೀಯ ಮತದಾನದ ಸರಾಸರಿಯಲ್ಲಿ ಡೊನಾಲ್ಡ್ ಟ್ರಂಪ್ ಅವರಿಗಿಂತ ಜೋ ಬೈಡನ್ ಶೇ 10 ಅಂಕಗಳಷ್ಟು ಮುಂದಿದ್ದಾರೆ. ರಾಷ್ಟ್ರೀಯ ಮತದಾನದ ಸರಾಸರಿಯಲ್ಲಿ ಜೋ ಬೈಡನ್ ಶೇ 52ರಷ್ಟು ಮತಗಳನ್ನು ಪಡೆದಿದ್ದರೆ, ಡೊನಾಲ್ಡ್ ಟ್ರಂಪ್ ಶೇ 42 ಮತಗಳೊಂದಿಗೆ ಹಿನ್ನಡೆ ಹೊಂದಿದ್ದಾರೆ.

ಕಮಲಾ ಹ್ಯಾರಿಸ್ ಗೆಲುವಿಗೆ ತಮಿಳುನಾಡಿನ ಪೂರ್ವಜರ ಗ್ರಾಮದಲ್ಲಿ ಪೂಜೆಕಮಲಾ ಹ್ಯಾರಿಸ್ ಗೆಲುವಿಗೆ ತಮಿಳುನಾಡಿನ ಪೂರ್ವಜರ ಗ್ರಾಮದಲ್ಲಿ ಪೂಜೆ

ಸಿಎನ್ಎನ್ ತನ್ನ ಸಮೀಕ್ಷೆಗಳ ಸಮೀಕ್ಷೆಯಲ್ಲಿ ಕೆಲವೇ ಪ್ರತಿಷ್ಠಿತ ಸಮೀಕ್ಷಾ ಸಂಸ್ಥೆಗಳ ವರದಿಗಳನ್ನು ಹಾಗೂ ವಿಭಿನ್ನ ಸಮೀಕ್ಷಾ ಸಂಸ್ಥೆಗಳ ಇತ್ತೀಚಿನ ವರದಿಗಳನ್ನು ಮಾತ್ರವೇ ಪರಿಗಣಿಸಿದೆ. ಇದರಲ್ಲಿ ನವೆಂಬರ್ 3ರ ಚುನಾವಣೆಯ ವೇಳೆಗೆ ಟ್ರಂಪ್ ಅವರಿಗಿಂತ ಬೈಡನ್ ಸ್ಪಷ್ಟವಾಗಿ ಮುನ್ನಡೆ ಸಾಧಿಸಿದ್ದಾರೆ. ಮುಂದೆ ಓದಿ.

ಸಿಎನ್ಎನ್, ಎನ್‌ಬಿಸಿ ಸಮೀಕ್ಷೆ

ಸಿಎನ್ಎನ್, ಎನ್‌ಬಿಸಿ ಸಮೀಕ್ಷೆ

ಸಿಎನ್‌ಎನ್/ಎಸ್ಎಸ್ಆರ್‌ಎಸ್

ಜೋ ಬೈಡನ್ 54%

ಡೊನಾಲ್ಡ್ ಟ್ರಂಪ್ 42%

ಎನ್‌ಬಿಸಿ/ಡಬ್ಲ್ಯೂಎಸ್‌ಜೆ

ಜೋ ಬೈಡನ್ 52%

ಡೊನಾಲ್ಡ್ ಟ್ರಂಪ್ 42%

ಫಾಕ್ಸ್ ನ್ಯೂಸ್

ಜೋ ಬೈಡನ್ 52%

ಡೊನಾಲ್ಡ್ ಟ್ರಂಪ್ 44%

ರಾಯಿಟರ್ಸ್ ಮತ್ತು ನ್ಯೂಯಾರ್ಕ್ ಟೈಮ್ಸ್

ರಾಯಿಟರ್ಸ್ ಮತ್ತು ನ್ಯೂಯಾರ್ಕ್ ಟೈಮ್ಸ್

ಐಪಿಎಸ್ಒಎಸ್/ರಾಯಿಟರ್ಸ್

ಜೋ ಬೈಡನ್ 52%

ಡೊನಾಲ್ಡ್ ಟ್ರಂಪ್ 42%

ನ್ಯೂಯಾರ್ಕ್ ಟೈಮ್ಸ್/ಸಿಯೆನ್ನಾ ಕಾಲೇಜ್

ಜೋ ಬೈಡನ್ 50%

ಡೊನಾಲ್ಡ್ ಟ್ರಂಪ್ 41%

ಅಮೆರಿಕ ಚುನಾವಣೆ: ಯಾರಿಗೆ ಗೆಲುವು, ಟ್ರಂಪ್ ಮೇಲೆ ಗುರುತರ ಆರೋಪ: ಖ್ಯಾತ ಜ್ಯೋತಿಷಿಯ ಭವಿಷ್ಯಅಮೆರಿಕ ಚುನಾವಣೆ: ಯಾರಿಗೆ ಗೆಲುವು, ಟ್ರಂಪ್ ಮೇಲೆ ಗುರುತರ ಆರೋಪ: ಖ್ಯಾತ ಜ್ಯೋತಿಷಿಯ ಭವಿಷ್ಯ

ಫಾಕ್ಸ್ ನ್ಯೂಸ್ ಕೂಡ ಬೈಡನ್ ಕಡೆಗೆ

ಫಾಕ್ಸ್ ನ್ಯೂಸ್ ಕೂಡ ಬೈಡನ್ ಕಡೆಗೆ

ಅಮೆರಿಕದ ಪ್ರಮುಖ ಪತ್ರಿಕೆಗಳಾದ ಸಿಎನ್ಎನ್, ನ್ಯೂಯಾರ್ಕ್ ಟೈಮ್ಸ್ ಮತ್ತು ಫಾಕ್ಸ್ ನ್ಯೂಸ್‌ಗಳು ಜೋ ಬೈಡನ್ ಮುನ್ನಡೆ ಪಡೆದಿದ್ದಾರೆ ಎಂದು ವರದಿ ಮಾಡಿವೆ. ಟ್ರಂಪ್ ಯಾವಾಗಲೂ ಸಿಎನ್ಎನ್ ಮತ್ತು ನ್ಯೂಯಾರ್ಕ್ ಟೈಮ್ಸ್ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದರು. ಆದರೆ ಫಾಕ್ಸ್ ನ್ಯೂಸ್ ಡೊನಾಲ್ಡ್ ಟ್ರಂಪ್ ಅವರ ಪರ ಬೆಂಬಲ ಸೂಚಿಸುತ್ತಿತ್ತು. ರಿಪಬ್ಲಿಕನ್ ಪಕ್ಷದ ಮುಖವಾಣಿಯಂತಿದ್ದ ಫಾಕ್ಸ್ ನ್ಯೂಸ್ ಕೂಡ ಟ್ರಂಪ್ ಹಿನ್ನಡೆಯನ್ನು ಊಹಿಸಿದೆ.

2016ರ ಸಮೀಕ್ಷೆ ಹೇಗಿತ್ತು?

2016ರ ಸಮೀಕ್ಷೆ ಹೇಗಿತ್ತು?

2016ರ ಸಮೀಕ್ಷೆಗಳ ಸಮೀಕ್ಷೆಯಲ್ಲಿ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿಯಾಗಿದ್ದ ಹಿಲರಿ ಕ್ಲಿಂಟನ್ ಅವರು ಡೊನಾಲ್ಡ್ ಟ್ರಂಪ್ ಅವರಿಗಿಂತ ಮುನ್ನಡೆ ಹೊಂದಿದ್ದರು. 2016ರ ನವೆಂಬರ್ 8ರಂದು ಅಧ್ಯಕ್ಷೀಯ ಚುನಾವಣೆ ನಡೆದಿತ್ತು. ನವೆಂಬರ್ 7ರಂದು ಹಿಲರಿ ಕ್ಲಿಂಟನ್ ಶೇ 46ರಷ್ಟು ರಾಷ್ಟ್ರೀಯ ಸರಾಸರಿ ಮತಗಳನ್ನು ಪಡೆದಿದ್ದರೆ, ಟ್ರಂಪ್ ಶೇ 42ರಷ್ಟು ಮತಗಳನ್ನು ಪಡೆದಿದ್ದರು. ಎಲ್ಲ ಸಮೀಕ್ಷೆಗಳೂ ಅತಿ ಸಮೀಪದ ಅಂತರವನ್ನು ಹೇಳಿದ್ದವು. ಕೊನೆಯಲ್ಲಿ ಡೊನಾಲ್ಡ್ ಟ್ರಂಪ್ ವಿಜಯಿಯಾಗಿ ಹೊರಹೊಮ್ಮಿದ್ದರು.

ಟ್ರಂಪ್ ಗೆ ಟಾಟಾ, ಬಿಡೆನ್ ಆಡಿದ್ದೇ ಆಟ: ಅಮೆರಿಕಾ ಚುನಾವಣಾ ಭವಿಷ್ಯ!ಟ್ರಂಪ್ ಗೆ ಟಾಟಾ, ಬಿಡೆನ್ ಆಡಿದ್ದೇ ಆಟ: ಅಮೆರಿಕಾ ಚುನಾವಣಾ ಭವಿಷ್ಯ!

English summary
US Elections: Pre election surveys and polls of polls predicts Democratic nominee Joe Biden is 10% points ahead of Donald Trump.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X