ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರತಿ ಮತವೂ ಮುಖ್ಯ, ಬೈಡನ್‌ಗೆ 1 ವೋಟ್ ಅಂತರದ ಗೆಲುವು

|
Google Oneindia Kannada News

ವಾಷಿಂಗ್ಟನ್, ನ.6: ಅಮೆರಿಕದ ಅಧ್ಯಕ್ಷರು ಯಾರಾಗಲಿದ್ದಾರೆ ಎಂಬ ಕುತೂಹಲ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ನಾಲ್ಕೈದು ರಾಜ್ಯಗಳ ಫಲಿತಾಂಶದ ಮೇಲೆ ಎಲ್ಲವೂ ನಿರ್ಧಾರವಾಗಲಿದೆ. ಅತಿ ಹೆಚ್ಚು ಕೊವಿಡ್ 19 ಸೋಂಕಿತರನ್ನು ಹೊಂದಿದ್ದರೂ ಈ ಬಾರಿ ಚುನಾವಣೆಯಲ್ಲಿ ದಾಖಲೆಯ ಮತದಾನ ಆಗಿದೆ.

120 ವರ್ಷಗಳಲ್ಲೇ ಮಾಡದ ಸಾಧನೆಯನ್ನು 2020 ರಲ್ಲಿ ಅಮೆರಿಕನ್​ ಮತದಾರರು ಮಾಡಿದ್ದಾರೆ ಎಂಬ ಸುದ್ದಿ ಈಗಾಗಲೇ ಒನ್ಇಂಡಿಯಾದಲ್ಲಿ ಓದಿರುತ್ತೀರಿ..

ಪ್ರತಿ ಮತವೂ ಪವಿತ್ರ, ತಾಳ್ಮೆಯಿಂದಿರಿ: ಬೈಡೆನ್ಪ್ರತಿ ಮತವೂ ಪವಿತ್ರ, ತಾಳ್ಮೆಯಿಂದಿರಿ: ಬೈಡೆನ್

ಪ್ರಮುಖ ರಾಜ್ಯಗಳಾದ ಜಾರ್ಜಿಯಾ, ನೆವಾಡ, ಪೆನ್ಸಿಲ್ವೇನಿಯಾ ಮತ್ತು ಅರಿಝೋನಾಗಳಿಂದ ಇನ್ನೂ ಅಂತಿಮ ಫಲಿತಾಂಶಗಳು ಹೊರಬರಬೇಕಿದೆ. ಈ ನಾಲ್ಕು ರಾಜ್ಯಗಳಲ್ಲಿನ ಫಲಿತಾಂಶ ಮುಂದಿನ ಅಧ್ಯಕ್ಷ ಸ್ಥಾನವನ್ನು ನಿರ್ಧರಿಸಲಿದೆ. ಈ ಪೈಕಿ ಪೆನ್ಸಿಲ್ವೇನಿಯಾ ಗೆದ್ದವರು ಶ್ವೇತಭವನಕ್ಕೆ ಹೋಗುವುದು ಖಚಿತ ಎನ್ನಬಹುದು.

Joe Biden Winning Two Massachusetts Towns With a Single Vote Each is Why Every Vote Counts

'ಅಮೆರಿಕದಲ್ಲಿ ಪ್ರತಿ ಮತಗಳೂ ಪವಿತ್ರ. ಇದು ಈ ದೇಶದ ಜನರು ತಮ್ಮ ಇಚ್ಛೆಯನ್ನು ಅಭಿವ್ಯಕ್ತಗೊಳಿಸುವ ರೀತಿ ಇದು. ಇದು ಮತದಾರರ ಇಚ್ಛೆ. ಬೇರೇನೂ ಅಲ್ಲ, ಅಮೆರಿಕದ ಅಧ್ಯಕ್ಷರನ್ನು ಅವರ ಮತಗಳು ಆಯ್ಕೆ ಮಾಡುತ್ತವೆ' ಎಂದು ಬೈಡೆನ್ ಹೇಳಿದ್ದರು. ಈ ಮಾತು ಅಕ್ಷರಶಃ ಅವರ ವಿಷಯದಲ್ಲೇ ನಿಜವಾಗಿದೆ.

1900ರಲ್ಲಿ ಶೇ 73.77 ಮತದಾನವಾಗಿತ್ತು ಇದಾದ ಬಳಿಕ ನವೆಂಬರ್ 03ರಂದು ಶೇ 66.9ರಷ್ಟು ಮತದಾನವಾಗಿದ್ದು, ನ್ಯೂ ಹ್ಯಾಂಪ್ ಶೈರ್ ಪ್ರಾಂತ್ಯದಲ್ಲಿ ಮಧ್ಯರಾತ್ರಿಯಿಂದಲೇ ಮತದಾನ ಆರಂಭವಾಗಿದ್ದನ್ನು ಇಲ್ಲಿ ಸ್ಮರಿಸಬಹುದು ಎಂದು ಫ್ಲೋರಿಡಾ ವಿವಿಯ ಸಹಾಯಕ ಪ್ರೊಫೆಸರ್ ಮೈಕಲ್ ಪಿ ಮೆಕ್ ಡೊನಾಲ್ಡ್ ಹೇಳಿದ್ದಾರೆ.

ಮೆಸಾಚುಸೆಟ್ಸ್ ನ ಎರಡು ಪಟ್ಟಣಗಳಲ್ಲಿ ಡೆಮಾಕ್ರೆಟಿಕ್ ಅಭ್ಯರ್ಥಿ ಜೋ ಬೈಡನ್ ಗೆಲುವು ಸಾಧಿಸಿದ್ದು ಎಲ್ಲರ ಗಮನ ಸೆಳೆದಿದೆ. ಒಂದು ಮತದ ಮಹತ್ವವನ್ನು ಸಾರಿವೆ. ಸಟಾನ್(sutton) ಹಾಗೂ ವೆಬ್ ಸ್ಟರ್(webster)ಪಟ್ಟಣಗಳಲ್ಲಿ ರಿಪಬ್ಲಿಕನ್ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ವಿರುದ್ಧ ಏಕೈಕ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ ಎಂದು ಸಿಬಿಎಸ್ ಬೋಸ್ಟನ್ ವರದಿ ಮಾಡಿದೆ .

ವೆಬ್ ಸ್ಟರ್ ನಗರದಲ್ಲಿ ಬೈಡನ್ ಪರ 4,003ಮತಗಳು ಬಂದಿದ್ದರೆ, ಟ್ರಂಪ್ ಪರ 4,002 ಮತಗಳು ಬಿದ್ದಿವೆ. 2016ರಲ್ಲಿ ಈ ನಗರದಲ್ಲಿ ಟ್ರಂಪ್ ಗೆಲುವು ಸಾಧಿಸಿದ್ದರು.

English summary
US Elections: Democratic candidate Joe Biden Winning Two Massachusetts Towns With a Single Vote Each is Why 'Every Vote Counts'.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X