Infographics: ಶ್ರೀಮಂತ ರಾಷ್ಟ್ರದಲ್ಲಿ ಅತ್ಯಂತ ದುಬಾರಿ ವೆಚ್ಚದ ಚುನಾವಣೆ..!
2020ರ ಯುಎಸ್ ಅಧ್ಯಕ್ಷೀಯ ಚುನಾವಣೆಗೆ ಅಂತ್ಯ ಹಾಡಲು ಅಮೆರಿಕ ಸಜ್ಜಾಗಿದ್ದು, ಇಂದು ಸಾರ್ವತ್ರಿಕ ಮತದಾನದ ಮೂಲಕ ಎಲೆಕ್ಷನ್ ಎಂಡ್ ಆಗಲಿದೆ. ಆದರೆ ಈ ಹೊತ್ತಲ್ಲೇ ಅಮೆರಿಕ ಚುನಾವಣೆಯ ಖರ್ಚು ವೆಚ್ಚ ಚರ್ಚೆಗೆ ಗ್ರಾಸವಾಗಿದೆ. ಏಕೆಂದರೆ ಅಮೆರಿಕ ಚುನಾವಣೆ ಇಡೀ ಜಗತ್ತಿನಲ್ಲೇ ಅತ್ಯಂತ ದುಬಾರಿ ವೆಚ್ಚದ್ದು. ಸುಮಾರು 14 ಬಿಲಿಯನ್ ಡಾಲರ್, ಭಾರತ ಲೆಕ್ಕದಲ್ಲಿ ಹೇಳುವುದಾದರೆ ಸುಮಾರು 1 ಲಕ್ಷ ಕೋಟಿ ವೆಚ್ಚದ ಚುನಾವಣೆ ಇದು.
ಮೊದಲೇ ಶ್ರೀಮಂತ ರಾಷ್ಟ್ರ, ಅಲ್ಲಿ ಪ್ರತಿಯೊಂದು ಖರ್ಚು ಕೂಡ ದುಬಾರಿ. ಹೀಗಾಗಿಯೇ ಚುನಾವಣೆ ಕೂಡ ಅತ್ಯಂತ ದುಬಾರಿ ವೆಚ್ಚದಲ್ಲೇ ನಡೆಯುತ್ತದೆ. ಅದ್ರಲ್ಲೂ ಅಭ್ಯರ್ಥಿಗಳು ಕ್ಯಾಂಪೇನ್‌ಗೆ ಸುರಿಯುವ ಹಣ ಬಡ ರಾಷ್ಟ್ರಗಳ ಪಾಲಿಗೆ ಒಂದಿಡೀ ವರ್ಷದ ಅನ್ನ ಗಿಟ್ಟಿಸುತ್ತದೆ. ಈ ಮೊದಲು ಅಮೆರಿಕದಲ್ಲಿ ಅಭ್ಯರ್ಥಿಗಳು ಈ ಮಟ್ಟಕ್ಕೆ ಹಣ ಖರ್ಚು ಮಾಡುತ್ತಿರಲಿಲ್ಲ. ಆದರೆ 2010ರ ನಂತರ ಚುನಾವಣಾ ವೆಚ್ಚ ಭಾರಿ ಪ್ರಮಾಣದಲ್ಲಿ ಏರಿಕೆ ಕಾಣುತ್ತಾ ಬಂದಿದ್ದು, 2020ರಲ್ಲಿ ಅದರ ಗಾತ್ರ ಬರೋಬ್ಬರಿ 1 ಲಕ್ಷ ಕೋಟಿ ರೂಪಾಯಿಗೆ ತಲುಪಿದೆ.
2010ರಲ್ಲಿ ಸುಪ್ರೀಂಕೋರ್ಟ್ ಅನುಮತಿ..!
ಭಾರತದಲ್ಲಿ ಚುನಾವಣಾ ವೆಚ್ಚಕ್ಕೆ ಕಡಿವಾಣ ಹಾಕುವಂತೆ ಅಮೆರಿಕದಲ್ಲೂ ಅಭ್ಯರ್ಥಿಗಳ ಚುನಾವಣಾ ವೆಚ್ಚಕ್ಕೆ ಭಾರಿ ಕಡಿವಾಣ ಹಾಕಲಾಗುತ್ತಿತ್ತು. ಆದರೆ 2010ರಲ್ಲಿ ಅಮೆರಿಕದ ಸುಪ್ರೀಂಕೋರ್ಟ್ ನೀಡಿದ್ದ ಮಹತ್ವದ ತೀರ್ಪು ಚುನಾವಣೆಗಳ ಗತಿಯನ್ನೇ ಬದಲಿಸಿತ್ತು. ಅಲ್ಲಿಯವರೆಗೂ ಚುನಾವಣೆ ಖರ್ಚುಗಳಿಗೆ ದಾನ ನೀಡಲು ಇದ್ದ ಕಾನೂನನ್ನು ಮನ್ನಾ ಮಾಡಿತ್ತು. ಸಂಘಟನೆಗಳು, ಕಂಪನಿಗಳು ಅಥವಾ ವೈಯಕ್ತಿಕವಾಗಿ ಯಾರು ಎಷ್ಟು ಬೇಕಾದರು ಹಣವನ್ನು ಅಭ್ಯರ್ಥಿಗಳಿಗೆ ದಾನವಾಗಿ ನೀಡಬಹುದು ಎಂದಿತ್ತು. ಅಮೆರಿಕನ್ ಸುಪ್ರೀಂಕೋರ್ಟ್ 2010ರಲ್ಲಿ ನೀಡಿದ ತೀರ್ಪು ಇಂದು ಅಮೆರಿಕ ಚುನಾವಣೆಯನ್ನು ಅತ್ಯಂತ ದುಬಾರಿ ವೆಚ್ಚದ್ದಾಗಿ ಪರಿವರ್ತಿಸಿದೆ.

ಗ್ರಾಫಿಕ್ಸ್ ಡೇಟಾ: (ಬಿಲಿಯನ್ ಡಾಲರ್ ಲೆಕ್ಕದಲ್ಲಿ ಚುನಾವಣಾ ವೆಚ್ಚ)
ಅಧ್ಯಕ್ಷೀಯ ಅಭ್ಯರ್ಥಿಗಳು
ವರ್ಷ ಖರ್ಚು
2000 1.41
2004 1.91
2008 2.80
2012 2.62
2016 2.39
2020 6.63
ಕಾಂಗ್ರೆಸ್ ಸ್ಥಾನದ ಆಕಾಂಕ್ಷಿಗಳು
ವರ್ಷ ಖರ್ಚು
2000 1.67
2004 2.24
2008 2.49
2012 3.66
2016 4.12
2020 7.25
ಎರಡೂ ಖರ್ಚು ಸೇರಿ ಒಟ್ಟು ಮೊತ್ತ (ಬಿಲಿಯನ್ ಡಾಲರ್ ಲೆಕ್ಕದಲ್ಲಿ ಚುನಾವಣಾ ವೆಚ್ಚ)
ವರ್ಷ ಖರ್ಚು
2000 3.08
2004 4.15
2008 5.29
2012 6.28
2016 6.51
2020 13.88












Click it and Unblock the Notifications