ಜಾರ್ಜಿಯಾದಲ್ಲಿ ಬೈಡನ್‌ಗೆ ಅಲ್ಪ ಮುನ್ನಡೆ, ಮರು ಎಣಿಕೆ

ವಾಷಿಂಗ್ಟನ್, ನ.6: ಅತಿ ಹೆಚ್ಚು ಕೊವಿಡ್ 19 ಸೋಂಕಿತರನ್ನು ಹೊಂದಿದ್ದರೂ ಈ ಬಾರಿ ಚುನಾವಣೆಯಲ್ಲಿ ದಾಖಲೆಯ ಮತದಾನ ಆಗಿದೆ. ಪ್ರತಿ ಮತಗಳ ಎಣಿಕೆ ಬಲು ಎಚ್ಚರಿಕೆಯಿಂದ ಮಾಡಲಾಗುತ್ತಿದೆ.

ಪ್ರಮುಖ ರಾಜ್ಯಗಳಾದ ಜಾರ್ಜಿಯಾ, ನೆವಾಡ, ಪೆನ್ಸಿಲ್ವೇನಿಯಾ ಮತ್ತು ಅರಿಝೋನಾಗಳಿಂದ ಇನ್ನೂ ಅಂತಿಮ ಫಲಿತಾಂಶಗಳು ಹೊರಬರಬೇಕಿದೆ. ಈ ನಾಲ್ಕು ರಾಜ್ಯಗಳಲ್ಲಿನ ಫಲಿತಾಂಶ ಮುಂದಿನ ಅಧ್ಯಕ್ಷ ಸ್ಥಾನವನ್ನು ನಿರ್ಧರಿಸಲಿದೆ. ಈ ಪೈಕಿ ಪೆನ್ಸಿಲ್ವೇನಿಯಾ ಗೆದ್ದವರು ಶ್ವೇತಭವನಕ್ಕೆ ಹೋಗುವುದು ಖಚಿತ ಎನ್ನಬಹುದು.

ಜಾರ್ಜಿಯಾದಲ್ಲಿ ಬೈಡನ್ ಅಲ್ಪ ಮುನ್ನಡೆ ಪಡೆದುಕೊಂಡಿದ್ದರೂ ಫಲಿತಾಂಶ ಪ್ರಕಟಿಸಿಲ್ಲ. ಮರು ಎಣಿಕೆ ನಂತರವೇ ಫಲಿತಾಂಶ ಹೊರಬರಲಿದೆ ಎಂದು ಜಾರ್ಜಿಯಾ ರಾಜ್ಯದ ಕಾರ್ಯದರ್ಶಿ ಬ್ರಾಡ್ ರಫೆನ್ ಸ್ಪೆರ್ಜರ್ ಅವರು ತಿಳಿಸಿದ್ದಾರೆ

Georgia heading to recount, Biden has taken a narrow lead

ಜಾರ್ಜಿಯಾ: 16 ಎಲೆಕ್ಟೋರಲ್ ಮತಗಳು
ಬೈಡನ್: 49.4%, 1579 ಮುನ್ನಡೆ 2,450,193 ಮತಗಳು
ಟ್ರಂಪ್: 49.37%, 2,448,635 ಮತಗಳು

ಒಟ್ಟು ಗಳಿಕೆ ಈ ಸಮಯಕ್ಕೆ
ಬೈಡನ್: 264, 73,729,830 (50.5%)
ಟ್ರಂಪ್: 214, 69,788,396 (47.8%)

ಅಧ್ಯಕ್ಷೀಯ ಅಭ್ಯರ್ಥಿ 0.5% ಮತಗಳಿಗಿಂತ ಅಥವಾ ಕಡಿಮೆ ಪ್ರಮಾಣದಲ್ಲಿ ಸೋಲು ಕಂಡರೆ ಮತಗಳ ಮರು ಎಣಿಕೆಗೆ ಮನವಿ ಮಾಡಬಹುದು. ಈಗ ಟ್ರಂಪ್ ಹಾಗೂ ಬೈಡನ್ ನಡುವಿನ ಅಂತರ ಕಡಿಮೆಯಿದೆ. ಮನವಿ ಬಂದ ಬಳಿಕ ಸ್ಥಳೀಯ ಚುನಾವಣಾಧಿಕಾರಿ ಆ ಪ್ರಾಂತ್ಯದ ಕೌಂಟಿಗಳಲ್ಲಿನ ಮತಗಳ ಎಣಿಕೆ ಆರಂಭಿಸಲು ಸೂಚಿಸಬಹುದು. 2016 ರಲ್ಲಿ ಟ್ರಂಪ್ ಅವರು ಹಿಲರಿ ಕ್ಲಿಂಟನ್ ವಿರುದ್ಧ 5% ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. 1992ರಲ್ಲಿ ಬಿಲ್ ಕ್ಲಿಂಟನ್ ಸಾಧಿಸಿದ್ದನ್ನು ಮತ್ತೆ ಸಾಧಿಸಲು ಬೈಡನ್ ಮುಂದಾಗಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+