ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

''ಚುನಾವಣೆ ಅಕ್ರಮ ಬಗ್ಗೆ ಡೊನಾಲ್ಡ್ ಟ್ರಂಪ್ ಹೇಳಿಕೆ ಶುದ್ಧ ಸುಳ್ಳು''

|
Google Oneindia Kannada News

ವಾಷಿಂಗ್ಟನ್, ಅ.7: ಒಂದು ಕಾಲದಲ್ಲಿ ಅಮೆರಿಕದ ಅಧ್ಯಕ್ಷ ಸ್ಥಾನಕ್ಕಾಗಿ ಸ್ಪರ್ಧಿಸಿದ್ದ ರಿಪಬ್ಲಿಕನ್ ಸೆನೆಟರ್ ಮಿಟ್ ರೊಮ್ನಿ ಅವರು ತಮ್ಮ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ, ಹಾಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧವೇ ತಿರುಗಿ ಬಿದ್ದಿದ್ದಾರೆ. ಚುನಾವಣೆ ಅಕ್ರಮ, ಅಂಚೆ ಮತ ಎಣಿಕೆ ವಿಳಂಬ, ಮತ ಎಣಿಕೆಯಲ್ಲಿ ವಂಚನೆ ನಡೆದಿದೆ ಎಂದು ಟ್ರಂಪ್ ಮಾಡಿರುವ ಆರೋಪಗಳೆಲ್ಲವೂ ಶುದ್ಧ ಸುಳ್ಳು ಎಂದು ಮಿಟ್ ರೊಮ್ನಿ ಹೇಳಿದ್ದಾರೆ.

ಜಾರ್ಜಿಯಾದಲ್ಲಿ ಬೈಡನ್‌ಗೆ ಅಲ್ಪ ಮುನ್ನಡೆ, ಮರು ಎಣಿಕೆ ಜಾರ್ಜಿಯಾದಲ್ಲಿ ಬೈಡನ್‌ಗೆ ಅಲ್ಪ ಮುನ್ನಡೆ, ಮರು ಎಣಿಕೆ

ಉಥಾ ಸೆನೆಟರ್ ರೊಮ್ನಿ ಅವರು ಟ್ವೀಟ್ ಮಾಡಿ ಚುನಾವಣೆಯನ್ನು ಹೈಜಾಕ್ ಮಾಡಲಾಗಿದೆ, ಭ್ರಷ್ಟಾಚಾರ ನಡೆದಿದೆ ಎಂದರೆ ನಂಬಲು ಸಾಧ್ಯವಿಲ್ಲ. ಚುನಾವಣಾಧಿಕಾರಿಗಳಿಗೆ ಬೆದರಿಕೆ ಕರೆಗಳನ್ನು ಯಾರು ಮಾಡುತ್ತಿದ್ದಾರೆ ಎಂಬುದು ಮೊದಲು ಬಹಿರಂಗವಾಗಲಿ ಎಂದಿದ್ದಾರೆ.

ಚುನಾವಣೆಯಲ್ಲಿ ಯಾವುದೇ ಅಕ್ರಮ ನಡೆದಿಲ್ಲ, ಟ್ರಂಪ್ ಹೇಳಿಕೆ ತಪ್ಪು ಎಂದು ರಿಪಬ್ಲಿಕನ್ ಪಕ್ಷದ ಉಥಾ ಸೆನೆಟರ್ ಮಿಟ್ ರೊಮ್ನಿ ಮಹತ್ವದ ಹೇಳಿಕೆ ನೀಡಿದ್ದಾರೆ. ಅಧ್ಯಕ್ಷ ಟ್ರಂಪ್ ಅವರ ನಡೆಯನ್ನು ಕಾಲಕಾಲಕ್ಕೆ ಖಂಡಿಸುತ್ತಾ ಬಂದಿರುವ ರೊಮ್ನಿ ಅವರು ಟ್ರಂಪ್ ವಿರುದ್ಧದ ವಾಗ್ದಂಡನೆ ಪ್ರಕರಣದಲ್ಲೂ ಪ್ರಮುಖ ಪಾತ್ರ ವಹಿಸಿದ್ದರು.

Mitt Romney slammed Trump for baseless allegations of voter fraud

ಅಧ್ಯಕ್ಷರಾಗಿ ನಿಯಮದ ಪ್ರಕಾರ, ಮರು ಎಣಿಕೆಗೆ ಮನವಿ ಸಲ್ಲಿಸಬಹುದು. ಅದು ಅವರ ಹಕ್ಕು, ಆದರೆ, ಮತ ಎಣಿಕೆಯಲ್ಲಿ ಲೋಪವಾಗಿದೆ, ಭ್ರಷ್ಟಾಚಾರವಾಗಿದೆ ಎಂದು ಸುಳ್ಳು ಆರೋಪ ಮಾಡುವುದು ಸರಿಯಲ್ಲ. ಇದು ಇಡೀ ವ್ಯವಸ್ಥೆಗೆ ಕಪ್ಪು ಚುಕ್ಕೆ ಇಟ್ಟಂತೆ ಆಗುತ್ತದೆ. ಚುನಾವಣಾ ವ್ಯವಸ್ಥೆಯ ಬಗ್ಗೆ ಅನುಮಾನದಿಂದ ನೋಡುವಂತೆ ಮಾಡುವುದು ಸರಿಯಲ್ಲ.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ಭಾರಿ ಮುಖಭಂಗ: ವಾಗ್ದಂಡನೆಗೆ ಒಪ್ಪಿಗೆಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ಭಾರಿ ಮುಖಭಂಗ: ವಾಗ್ದಂಡನೆಗೆ ಒಪ್ಪಿಗೆ

Mitt Romney slammed Trump for baseless allegations of voter fraud

ಒಂದು ವೇಳೆ ಚುನಾವಣಾ ಅಕ್ರಮ ನಡೆದಿದ್ದರೆ, ಮತ ಎಣಿಕೆಯಲ್ಲಿ ಲೋಪವಾಗಿದ್ದರೆ ಸೂಕ್ತ ಸಾಕ್ಷಿ ಒದಗಿಸಿ ಕಾನೂನು ಪ್ರಕಾರ ಕ್ರಮಕ್ಕಾಗಿ ಮನವಿ ಸಲ್ಲಿಸಲು ಟ್ರಂಪ್ ಅರ್ಹರಾಗಿದ್ದಾರೆ. ಅದು ಬಿಟ್ಟು ಸುಮ್ಮನೆ ಆರೋಪ ಮಾಡುವುದು ಸರಿಯಲ್ಲ ಎಂದಿದ್ದಾರೆ.

English summary
Utah Senator Mitt Romney has joined a number of Republicans criticising the president's comments on election fraud last night.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X