ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೆರಿಕದ 46ನೇ ಅಧ್ಯಕ್ಷ ಜೋಸೆಫ್ ಬೈಡನ್ ವ್ಯಕ್ತಿಚಿತ್ರ

|
Google Oneindia Kannada News

ಜೋ ಬೈಡನ್ ಎಂದೇ ಕರೆಯಲ್ಪಡುವ ಜೋಸೆಫ್ ರಾಬಿನೆಟ್ ಬೈಡೆನ್ ಜ್ಯೂನಿಯರ್ ಅವರು ಅಮೆರಿಕದ 46ನೇ ಅಧ್ಯಕ್ಷರಾಗಿ ಜನವರಿ 20, 2021ರಂದು ಪ್ರತಿಜ್ಞಾವಿಧಿ ಸ್ವೀಕರಿಸಿದ್ದಾರೆ. ಮುಖ್ಯ ನ್ಯಾಯಮೂರ್ತಿ ಜಾನ್ ರಾಬರ್ಟ್ ಅವರು ಪ್ರತಿಜ್ಞಾ ವಿಧಿ ಬೋಧಿಸಿದರು.

ಗೆಲುವಿನ ಕನಸು ಕಾಣುತ್ತಿದ್ದ ಹಾಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ನಿರಾಶೆಯಾಗಿದೆ. ಭಾರಿ ಕುತೂಹಲ ಕೆರಳಿಸಿದ್ದ ಯುಎಸ್ ಅಧ್ಯಕ್ಷರ ಆಯ್ಕೆಯಲ್ಲಿ ಮಹತ್ವದ ಪಾತ್ರವಹಿಸಿದ್ದ ಪೆನ್ಸಿಲ್ವೇನಿಯಾವನ್ನು ಗೆಲ್ಲುವ ಮೂಲಕ ಭರ್ಜರಿ ಫಲಿತಾಂಶ ನೀಡಿದ್ದಾರೆ.

ಪೆನ್ಸಿಲ್ವೇಲಿಯಾದ ಫಲಿತಾಂಶ ಹೊರಬಂದಿದ್ದು, ಅಧ್ಯಕ್ಷರಾಗಲು ಅಗತ್ಯವಿದ್ದ ಎಲೆಕ್ಟೊರಲ್ ಮತಗಳ ಗಡಿ ದಾಟುವಲ್ಲಿ ಬೈಡೆನ್ ಅವರಿಗೆ ನೆರವಾಗಿದೆ. ಪೆನ್ಸಿಲ್ವೇನಿಯಾದ 20 ಮತಗಳೊಂದಿಗೆ ಬೈಡೆನ್ 273 ಎಲೆಕ್ಟೊರಲ್ ಮತಗಳನ್ನು ಪಡೆದಿದ್ದಾರೆ. ಇದಾದ ಬಳಿಕ ಸೆನೆಟ್ ನಲ್ಲೂ ಬೈಡನ್ ಪರ ಮತಗಳು ಬಂದಿದ್ದು, ಟ್ರಂಪ್ ಶ್ವೇತಭವನ ತೊರೆಯುವಂತೆ ಮಾಡಿದೆ.

ಅಮೆರಿಕದ 46ನೇ ಅಧ್ಯಕ್ಷರಾಗಿ ಬೈಡೆನ್ ಆಯ್ಕೆಅಮೆರಿಕದ 46ನೇ ಅಧ್ಯಕ್ಷರಾಗಿ ಬೈಡೆನ್ ಆಯ್ಕೆ

ಜನವರಿಯಲ್ಲಿ ಡೊನಾಲ್ಡ್ ಟ್ರಂಪ್ ಅವರ ಅಧಿಕಾರಾವಧಿ ಮುಗಿದಿದ್ದು, ಶ್ವೇತಭವನ ತೊರೆದಿದ್ದಾರೆ. ಪ್ರಮಾಣವಚನ ಸಮಾರಂಭಕ್ಕೆ ಹಾಜರಾಗದೆ ಫ್ಲೋರಿಡಾಕ್ಕೆ ತೆರಳಿದ್ದಾರೆ. ಬಳಿಕ ಬೈಡನ್ ಅಧಿಕಾರ ಸ್ವೀಕರಿಸಿದ್ಅರು. ನವೆಂಬರ್ 2020ರಲ್ಲಿ 78ನೇ ವರ್ಷಕ್ಕೆ ಕಾಲಿಡಲಿರುವ ಬೈಡನ್, ಅಮೆರಿಕದ ಅತ್ಯಂತ ಹಿರಿಯ ಅಧ್ಯಕ್ಷ ಎನಿಸಿಕೊಂಡಿದ್ದಾರೆ.

50ವರ್ಷಗಳ ಕನಸು ನನಸು

50ವರ್ಷಗಳ ಕನಸು ನನಸು

ಅಮೆರಿಕದ ಹಿರಿಯ ರಾಜಕಾರಣಿಯಾಗಿರುವ ಬೈಡನ್ ಅವರು 2009ರಿಂದ 2017ರ ಅವಧಿಯಲ್ಲಿ 47ನೇ ಉಪಾಧ್ಯಕ್ಷರಾಗಿ ಕರ್ತವ್ಯ ನಿರ್ವಹಿಸಿದ್ದಾರೆ. 1973 ರಿಂದ 2009ರ ಅವಧಿಯಲ್ಲಿ ಯುಎಸ್ ಸೆನೆಟ್ ನಲ್ಲಿ ಡೆಲಾವೇರ್ ಪ್ರಾಂತ್ಯವನ್ನು ಪ್ರತಿನಿಧಿಸಿದ ಡೆಮಾಕ್ರೆಟಿಕ್ ಸದಸ್ಯರಾಗಿದ್ದಾರೆ. 1988 ಹಾಗೂ 2008ರಲ್ಲಿ ಡೆಮಾಕ್ರೆಟಿಕ್ ನಾಮನಿರ್ದೇಶನದ ನಂತರ ಮೂರನೇ ಅಭ್ಯರ್ಥಿಯಾಗಿ ಕಣಕ್ಕಿಳಿದು ಜಯಭೇರಿ ಬಾರಿಸಿದ್ದಾರೆ.

ಕ್ಯಾಥೊಲಿಕ್ ಕುಟುಂಬದ ಜೋಸೆಫ್

ಕ್ಯಾಥೊಲಿಕ್ ಕುಟುಂಬದ ಜೋಸೆಫ್

ಕ್ಯಾಥೊಲಿಕ್ ಕುಟುಂಬದಲ್ಲಿ 1942ರ ನವೆಂಬರ್ 20ರಂದು ಜನಿಸಿದ ಜೋಸೆಫ್ ಅವರಿಗೆ ನಾಲ್ಕು ಒಡಹುಟ್ಟಿದವರರಿದ್ದು, ಜೋ ಮೊದಲನೆಯವರು. ಒಬ್ಬ ಸಹೋದರಿ ಮತ್ತು ಇಬ್ಬರು ಸಹೋದರರನ್ನು ಹೊಂದಿದ್ದಾರೆ. ಪೆನ್ಸಿಲ್ವೇನಿಯಾದ ಸ್ಕ್ರ್ಯಾಂಟನ್ ಡೆಲಾವೇರ್, ನ್ಯೂ ಕ್ಯಾಸಲ್ ಕೌಂಟಿಯಲ್ಲಿ ಬೆಳೆದರು. ತಾಯಿ ಜೀನ್ ಐರೀಷ್ ಮೂಲದವರಾಗಿದ್ದು, ಜೋಸೆಫ್ ಬೈಡನ್ ತೈಲ ಉದ್ಯಮಿಯಾಗಿದ್ದು ಮೇರಿಲ್ಯಾಂಡ್ ಬಾಲ್ಟಿಮೋರ್ ಮೂಲದವರು. ಇಂಗ್ಲೀಷ್, ಫ್ರೆಂಚ್, ಐರೀಷ್ ಬೇರುಗಳನ್ನು ಹೊಂದಿರುವ ಕುಟುಂಬ ಇವರದ್ದು.

ಅಧ್ಯಕ್ಷ ಹೋರಾಟದಲ್ಲಿ ಗೆದ್ದ ಬೈಡನ್ ಭಾವುಕ ಮಾತುಅಧ್ಯಕ್ಷ ಹೋರಾಟದಲ್ಲಿ ಗೆದ್ದ ಬೈಡನ್ ಭಾವುಕ ಮಾತು

ಆರ್ಥಿಕ ಸಂಕಷ್ಟದ ನಡುವೆ ವಿದ್ಯಾಭ್ಯಾಸ

ಆರ್ಥಿಕ ಸಂಕಷ್ಟದ ನಡುವೆ ವಿದ್ಯಾಭ್ಯಾಸ

ಆರ್ಥಿಕ ಸಂಕಷ್ಟ ಎದುರಾಗಿದ್ದ ಕಾಲದಲ್ಲಿ ಬೈಡನ್ ಅವರ ತಂದೆ ಕಾರ್ ಸೇಲ್ಸ್ ಮನ್ ಆಗಿ ಕಾರ್ಯ ನಿರ್ವಹಿಸಿದ್ದರು. ಬೈಡನ್ ಅವರು ಕ್ಲೇಮೊಂಟ್ ನ ಆರ್ಚ್ ಮೆರ್ ಅಕಾಡೆಮಿಯಲ್ಲಿ ವ್ಯಾಸಂಗ ಮಾಡಿದರು. ಶೈಕ್ಷಣಿಕವಾಗಿ ಹಿಂದುಳಿದರೂ ಬೇಸ್ ಬಾಲ್, ಫುಟ್ಬಾಲ್ ಆಟ, ನಾಯಕರಾಗಿ ಬಾಲ್ಯದಲ್ಲೇ ಗುರುತಿಸಿಕೊಂಡರು.

1965 ರಲ್ಲಿ ಡೆಲಾವೇರ್ ವಿಶ್ವವಿದ್ಯಾಲಯದಲ್ಲಿ ಬಿ.ಎ ರಾಜ್ಯಶಾಸ್ತ್ರವಿದ್ಯಾರ್ಥಿಯಾಗಿದ್ದರು. ಆಗಸ್ಟ್ 27, 1966 ರಂದು ನಿಲಿಯಾ ಹಂಟರ್ ಅವರನ್ನು ವಿವಾಹವಾದರು. ಅವರಿಗೆ ಮೂವರು ಮಕ್ಕಳಿದ್ದಾರೆ. ಈ ಪೈಕಿ ಜೋಸೆಫ್ ಬಿಯು ಬೈಡನ್ 3 ಮೃತರಾಗಿದ್ದಾರೆ. ನಿಲಿಯಾ ಕೂಡಾ ತೀರಿಕೊಂಡಿದ್ದಾರೆ.

ಕಿರಿಯ ಹಾಗೂ ಹಿರಿಯ ಸೆನೆಟರ್ ಎನಿಸಿಕೊಂಡರು

ಕಿರಿಯ ಹಾಗೂ ಹಿರಿಯ ಸೆನೆಟರ್ ಎನಿಸಿಕೊಂಡರು

ಸಿರಾಕ್ಯೂಸ್ ವಿಶ್ವವಿದ್ಯಾಲಯದಿಂದ ಕಾನೂನು ಪದವಿ ಪಡೆಯುವ ಮೊದಲು ಅವರು ಡೆಲಾವೇರ್ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಮಾಡಿದರು. 1969 ರಲ್ಲಿ ವಕೀಲರಾದರು ಮತ್ತು 1970 ರಲ್ಲಿ ನ್ಯೂಕ್ಯಾಸಲ್ ಕೌಂಟಿ ಕೌನ್ಸಿಲ್ ಗೆ ಆಯ್ಕೆಯಾದರು. 1972 ರಲ್ಲಿ ಡೆಲಾವೇರ್ ನಿಂದ ಯುನೈಟೆಡ್ ಸ್ಟೇಟ್ಸ್ ಸೆನೆಟ್ ಗೆ ಚುನಾಯಿತರಾದ ಅವರು ಅಮೆರಿಕಾದ ಇತಿಹಾಸದಲ್ಲಿ ಆರನೇ ಕಿರಿಯ ಸೆನೆಟರ್ ಎನಿಸಿಕೊಂಡರು. 30 ನೇ ವಯಸ್ಸಿನಲ್ಲಿ (ಅಧಿಕಾರ ಹಿಡಿಯಲು ಬೇಕಾದ ಕನಿಷ್ಠ ವಯಸ್ಸು), 31 ವರ್ಷದ ಮೊದಲು ಅಧಿಕಾರ ವಹಿಸಿಕೊಂಡ 18 ಜನರಲ್ಲಿ ಬಿಡೆನ್ ಅಮೆರಿಕದ ಇತಿಹಾಸದಲ್ಲಿ ಆರನೇ-ಕಿರಿಯ ಸೆನೆಟರ್ ಆದರು. ಬಿಡೆನ್ ಆರು ಬಾರಿ ಸೆನೆಟ್ ಗೆ ಆಯ್ಕೆಯಾದರು, 2009 ರಲ್ಲಿ ಉಪಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದಾಗ ಯುನೈಟೆಡ್ ಸ್ಟೇಟ್ಸ್ ನಲ್ಲಿ ನಾಲ್ಕನೇ ಹಿರಿಯ ಸೆನೆಟರ್ ಎನಿಸಿಕೊಂಡರು.

English summary
Joseph Robinette Biden Jr. (born November 20, 1942) is the 46th president of the United States. A member of the Democratic Party.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X