ಆರ್‌ಸಿಬಿ ಜೆರ್ಸಿ ಥೀಮ್ ಬ್ಲೌಸ್ ಧರಿಸಿ ಹೊಸ ಟ್ರೆಂಡ್‌ ಸೃಷ್ಟಿಸಿದ ಬೆಂಗಳೂರು ಮಹಿಳೆ, ಭಾರಿ ವೈರಲ್‌

Bengaluru Women RCB Fan: ಭಾರತದಲ್ಲಿ ಕ್ರಿಕೆಟ್ ಎನ್ನುವುದು ಕೇವಲ ಒಂದು ಕ್ರೀಡೆಯಾಗಿ ಉಳಿದಿಲ್ಲ, ಬದಲಿ ಅದೊಂದು ದೊಡ್ಡ ಹಬ್ಬವಾಗಿ ಮಾರ್ಪಡಾಗಿದೆ. ಇನ್ನು ಐಪಿಎಲ್ ಆರಂಭವಾಯಿತೆಂದರೆ ಸಾಕು ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟುತ್ತದೆ. ಅದರಲ್ಲೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಫ್ಯಾನ್ಸ್‌ ಕ್ರೇಜ್ ಬಗ್ಗೆ ಎಷ್ಟು ಹೇಳಿದರೂ ಸಾಲದು. ಹಾಗೆಯೇ ಇದೀಗ ಬೆಂಗಳೂರಿನ ಮಹಿಳೆಯೊಬ್ಬರು ಆರ್‌ಸಿಬಿ ಥೀಮ್ ಬ್ಲೌಸ್ ಧರಿಸಿ ಗಮನ ಸೆಳೆದಿದ್ದಾರೆ. ಸದ್ಯ ಈ ಫೋಟೋಗಳು, ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಸದ್ದು ಮಾಡುತ್ತಿದೆ.

ಐಪಿಎಲ್ ಇತಿಹಾಸದಲ್ಲೇ ಅತಿ ದೊಡ್ಡ ಅಭಿಮಾನಿ ಬಳಗವನ್ನು ಹೊಂದಿರುವ ತಂಡದ ಅಂದ್ರೆ ಅದು ಆರ್‌ಸಿಬಿ. 2026ರ ಸೀಸನ್‌ನಲ್ಲಿ ಬೆಂಗಳೂರು ತಂಡವು ಫೈನಲ್‌ನಲ್ಲಿ ಗೆಲುವು ಸಾಧಿಸಿ ಟ್ರೋಫಿ ಗೆದ್ದಿರುವುದಂತೂ ಅಭಿಮಾನಿಗಳಲ್ಲಿ ಈ ಸಂಭ್ರಮ ದುಪ್ಪಟ್ಟಾಗಿದೆ. ಈ ಐತಿಹಾಸಿಕ ಕ್ಷಣವನ್ನು ಸಂಭ್ರಮಿಸಲು ಬೆಂಗಳೂರಿನ ಮಹಿಳೆಯೊಬ್ಬರು ಸಖತ್ ಸ್ಟೈಲಿಷ್ ಆದ ಆರ್‌ಸಿಬಿ ಥೀಮ್ ಬ್ಲೌಸ್ ಧರಿಸಿ ನೆಟ್ಟಿಗರ ಗಮನ ಸೆಳೆದಿದ್ದಾರೆ. ಈ ವಿಡಿಯೋ, ಫೋಟೋವನ್ನು surprise.ladies.blouse ಎಂಬ ಹೆಸರಿನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

RCB-Themed Blouse Goes Viral After IPL 2026 Triumph Bengaluru Woman Unique Fan Tribute Wins Hearts

ಬ್ಲೌಸ್‌ನಲ್ಲಿ ಮೂಡಿದ ಆರ್‌ಸಿಬಿ ಘೋಷವಾಕ್ಯ

ಬೆಂಗಳೂರಿನ ಮಾಡೆಲ್ ಹಾಗೂ ಫ್ಯಾಶನ್ ಡಿಸೈನರ್ ಒಬ್ಬರು ಆರ್‌ಸಿಬಿ ತಂಡದ ಮೇಲಿನ ತಮ್ಮ ಅಪ್ಪಟ ಅಭಿಮಾನವನ್ನು ವಿಭಿನ್ನವಾಗಿ ಪ್ರದರ್ಶಿಸಿದ್ದಾರೆ. ಮಾಹಿತಿ ಪ್ರಕಾರ, ಸಿನಿಮಾ ತಾರೆಯರಿಗೆ ಉಡುಪುಗಳನ್ನು ಸಿದ್ಧಪಡಿಸಿಕೊಡುವ ಇವರು ಈ ಬಾರಿ ಆರ್‌ಸಿಬಿ ಫೈನಲ್ ತಲುಪಿದ ಖುಷಿಯಲ್ಲಿ ವಿಶೇಷವಾದ ಸೀರೆ ಮತ್ತು ಬ್ಲೌಸ್ ಅನ್ನು ವಿನ್ಯಾಸಗೊಳಿಸಿದ್ದಾರೆ. ಈ ಬ್ಲೌಸ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಜೆರ್ಸಿಯ ಅಧಿಕೃತ ಬಣ್ಣಗಳಾದ ನೀಲಿ, ಕೆಂಪು ಮತ್ತು ಗೋಲ್ಡ್‌ ಬಣ್ಣಗಳಿಂದ ಕೂಡಿದೆ.

ಈ ಬ್ಲೌಸ್‌ನ ಅತ್ಯಂತ ಆಕರ್ಷಕ ಭಾಗವೆಂದರೆ ಇದರ ಹಿಂಭಾಗದಲ್ಲಿ ಆರ್‌ಸಿಬಿ ಅಭಿಮಾನಿಗಳ ಎಮೋಷನ್ ಆಗಿರುವ 'ಈ ಸಲ ಕಪ್ ನಮ್ದೆ' ಎಂಬ ಘೋಷವಾಕ್ಯವನ್ನು ಅತ್ಯಂತ ಆಕರ್ಷಕವಾಗಿ ಬರೆಯಲಾಗಿದೆ. ತಂಡದ ಲೋಗೋ ಹಾಗೂ ಬಣ್ಣಗಳ ಮಿಶ್ರಣ ಈ ಸಾಂಪ್ರದಾಯಿಕ ಉಡುಪಿಗೆ ಮಾಡರ್ನ್ ಲುಕ್ ನೀಡಿದಂತಿದೆ.

ವೈರಲ್ ಆದ ಆರ್‌ಸಿಬಿ ಸೀರೆ ಲುಕ್

ಇವರು ಈ ವಿಶೇಷ ಆರ್‌ಸಿಬಿ ಥೀಮ್ ಉಡುಪನ್ನು ಧರಿಸಿ ಫೋಟೋಶೂಟ್ ನಡೆಸಿದ್ದು, ಈ ಫೋಟೋಗಳು ಮತ್ತು ವೀಡಿಯೊಗಳು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಸದ್ದು ಮಾಡುತ್ತಿವೆ. ಆರ್‌ಸಿಬಿ ಟ್ರೋಫಿ ಗೆಲ್ಲಲಿ ಎಂದು ಪ್ರಾರ್ಥಿಸುತ್ತಾ ಅಭಿಮಾನದ ಪರಾಕಾಷ್ಠೆ ಮೆರೆದ ಇವರ ಕ್ರಿಯೇಟಿವಿಟಿಗೆ ನೆಟ್ಟಿಗರು ಹಾಗೂ ಕ್ರಿಕೆಟ್ ಪ್ರೇಮಿಗಳು ಫಿದಾ ಆಗಿದ್ದಾರೆ. ಕೇವಲ ಜೆರ್ಸಿ ಧರಿಸಿ ಪಂದ್ಯ ನೋಡುವುದಕ್ಕಿಂತ, ಇಂತಹ ಸಾಂಪ್ರದಾಯಿಕ ಉಡುಪಿನಲ್ಲಿ ತಂಡವನ್ನು ಬೆಂಬಲಿಸುವುದು ನಿಜಕ್ಕೂ ಅದ್ಭುತ ಕಲ್ಪನೆ ಎಂದು ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ.

ಮಹಿಳಾ ಅಭಿಮಾನಿಗಳಿಂದ ಭಾರಿ ಡಿಮ್ಯಾಂಡ್

ಸಾಮಾಜಿಕ ಜಾಲತಾಣಗಳಲ್ಲಿ ಇದು ಸೂಪರ್ ಹಿಟ್ ಆಗುತ್ತಿದ್ದಂತೆ ಆರ್‌ಸಿಬಿ ತಂಡದ ಮಹಿಳಾ ಅಭಿಮಾನಿಗಳಿಂದ ಈ ಬ್ಲೌಸ್‌ಗೆ ಭಾರಿ ಬೇಡಿಕೆ ಬಂದಿದೆ. ಮುಂಬರುವ ಫೈನಲ್ ಪಂದ್ಯದ ದಿನದಂದು ಅಥವಾ ಆರ್‌ಸಿಬಿ ಪಂದ್ಯಗಳ ವೇಳೆ ಧರಿಸಲು ತಮಗೂ ಇಂತಹುದೇ ಬ್ಲೌಸ್ ತಯಾರಿಸಿ ಕೊಡುವಂತೆ ಮಹಿಳೆಯರು ಈ ಡಿಸೈನರ್ ಅನ್ನು ಸಂಪರ್ಕಿಸುತ್ತಿದ್ದಾರೆ. ಒಟ್ಟಿನಲ್ಲಿ ಈ ಫ್ಯಾಶನ್ ಇದೀಗ ಹೊಸ ಟ್ರೆಂಡ್ ಸೃಷ್ಟಿಸಿರುವುದಂತೂ ಸುಳ್ಳಲ್ಲ. ಅಭಿಮಾನಿಗಳಿಗೆ ಕಿವಿ ಮಾತು ಏನೆಂದರೆ ಸಂಭ್ರಮಿಸಿ, ಆದರೆ ಬೇರೆಯರ ಮನಸಿಗೆ ನೋವಾಗದಂತೆ ನಡೆದುಕೊಂಡು ಕ್ರೀಡಾ ಸ್ಪೂರ್ತಿ ಮೆರೆಯಿರಿ. ಐಪಿಎಲ್‌ ಅನ್ನ ಕೇವಲ ಕ್ರೀಡೆಯಾಗಿ ನೋಡಿ ಎಂಜಾಯ್ ಮಾಡಿ.. ದ್ವೇಷ ಬೇಡ ಎನ್ನುವುದೇ ನಮ್ಮ ಆಶಯವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+