Sooryavanshi: 15 ವರ್ಷದ ವೈಭವ್ ಸೂರ್ಯವಂಶಿಗಾಗಿ 15-20 ಕೋಟಿವರೆಗೂ ಬಿಡ್ಡಿಂಗ್..

Vaibhav Sooryavanshi: ಐಪಿಎಲ್ ಕೇವಲ ಕ್ರಿಕೆಟ್ ಆಟ ಮಾತ್ರವಲ್ಲ, ಉದಯೋನ್ಮುಖ ಆಟಗಾರರ ಪಾಲಿಗೆ ಅದೃಷ್ಟದ ಬಾಗಿಲನ್ನು ತೆರೆಯುವ ಉತ್ತಮ ವೇದಿಕೆಯೂ ಹೌದು. ಐಪಿಎಲ್ 2026ರ ಆವೃತ್ತಿಯಲ್ಲಿ 15 ವರ್ಷದ ಯುವ ಆಟಗಾರ ವೈಭವ್ ಸೂರ್ಯವಂಶಿ ಅವರು ಆಕ್ರಮಣಕಾರಿ ಆಟದ ಮೂಲಕ ಇಡೀ ಜಗತ್ತೇ ತನ್ನತ್ತ ತಿರುಗಿ ನೋಡುವಂತೆ ಮಾಡಿದರು. ಬಿಹಾರ ಮೂಲದ ಈ ಬಾಲಕ ಕೇವಲ ಬ್ಯಾಟಿಂಗ್ ಅಬ್ಬರದಿಂದ ಮಾತ್ರವಲ್ಲದೆ, ಈ ಸೀಸನ್‌ನಲ್ಲಿ ಗಳಿಸಿದ ಒಟ್ಟು ಮೊತ್ತದಿಂದಲೂ ಎಲ್ಲರನ್ನೂ ಬೆರಗುಗೊಳಿಸಿದ್ದಾರೆ.

ಐಪಿಎಲ್ 2025ರ ಮೆಗಾ ಹರಾಜಿನಲ್ಲಿ ಕೇವಲ 13 ವರ್ಷ ವಯಸ್ಸಿನವರಾಗಿದ್ದಾಗ ವೈಭವ್ ಸೂರ್ಯವಂಶಿ ಅವರನ್ನು ರಾಜಸ್ಥಾನ ರಾಯಲ್ಸ್ ಫ್ರಾಂಚೈಸಿಯು 1.10 ಕೋಟಿ ರೂಪಾಯಿಗಳ ಮೂಲ ಬೆಲೆಗೆ ಖರೀದಿಸಿತ್ತು. ಐಪಿಎಲ್ ಇತಿಹಾಸದಲ್ಲೇ ಇಷ್ಟು ಚಿಕ್ಕ ವಯಸ್ಸಿಗೆ ಒಪ್ಪಂದ ಮಾಡಿಕೊಂಡ ಅತ್ಯಂತ ಕಿರಿಯ ಆಟಗಾರ ಎಂಬ ಹೆಗ್ಗಳಿಕೆಗೆ ಇವರು ಪಾತ್ರರಾಗಿದ್ದರು. ರಾಜಸ್ಥಾನ ರಾಯಲ್ಸ್ ಇವರ ಮೇಲೆ ಇಟ್ಟಿದ್ದ ನಂಬಿಕೆ ಸುಳ್ಳಾಗಲಿಲ್ಲ. ಐಪಿಎಲ್ 2026ರಲ್ಲಿ ಅವರು ತೋರಿದ ಅದ್ಭುತ ಪ್ರದರ್ಶನವು ತಂಡಕ್ಕೆ ಬಿಲಿಯನ್ ಡಾಲರ್ ಮೌಲ್ಯವನ್ನು ತಂದುಕೊಟ್ಟಿತು.

Vaibhav Sooryavanshi IPL 2026 Earnings 15-Year-Old RR Star Bags Over 2 5 Cr Set for 20 Cr Bid

ವೈಭವ್ ಸೂರ್ಯವಂಶಿ ಸಾಧನೆಗಳು

ಈ ಸೀಸನ್‌ನಲ್ಲಿ ರಾಜಸ್ಥಾನ ರಾಯಲ್ಸ್ ಪರ ಇನ್ನಿಂಗ್ಸ್‌ ಅರಂಭಿಸಿದ ವೈಭವ್ ಸೂರ್ಯವಂಶಿ ಅವರು ಎದುರಾಳಿ ಬೌಲರ್‌ಗಳ ಪಾಲಿಗೆ ಸಿಂಹಸ್ವಪ್ನವಾದರು. ಕ್ರಿಸ್ ಗೇಲ್ ಅವರ ಸಿಕ್ಸರ್‌ಗಳ ಐತಿಹಾಸಿಕ ದಾಖಲೆಯನ್ನು ಧೂಳೀಪಟ ಮಾಡಿದ ಅವರು, ಇಡೀ ಟೂರ್ನಿಯಲ್ಲಿ ಒಟ್ಟು 72 ಸಿಕ್ಸರ್‌ಗಳನ್ನು ಸಿಡಿಸಿದರು. ಅಲ್ಲದೆ ಇಡೀ ಟೂರ್ನಿಯಲ್ಲಿ ಅತಿ ಹೆಚ್ಚು ರನ್ (776 ರನ್) ಗಳಿಸುವ ಮೂಲಕ ಪ್ರತಿಷ್ಠಿತ 'ಆರೆಂಜ್ ಕ್ಯಾಪ್' ಅನ್ನು ತಮ್ಮದಾಗಿಸಿಕೊಂಡರು. ಸೆಮಿಫೈನಲ್ ಮತ್ತು ಎಲಿಮಿನೇಟರ್ ಪಂದ್ಯಗಳಲ್ಲಿ ಸ್ಫೋಟಕ ಇನ್ನಿಂಗ್ಸ್‌ ಆಟಿ ಇಡೀ ಕ್ರಿಕೆಟ್ ಲೋಕವೇ ತನ್ನತ್ತ ಮುಖಮಾಡುವಂತೆ ಮಾಡಿದರು.

ವೈಭವ್ ಗಳಿಸಿದ ಒಟ್ಟು ಮೊತ್ತದ ವಿವರ

1.10 ಕೋಟಿ ರೂಪಾಯಿಗಳ ಒಪ್ಪಂದ ಹೊಂದಿದ್ದ ಈ 15 ವರ್ಷದ ಬಾಲಕ ಟೂರ್ನಿಯ ಅಂತ್ಯದ ವೇಳೆಗೆ ವಿವಿಧ ಬಹುಮಾನಗಳು ಹಾಗೂ ಪಂದ್ಯದ ಶುಲ್ಕದ ರೂಪದಲ್ಲಿ ಬರೋಬ್ಬರಿ 2.50 ಕೋಟಿ ರೂಪಾಯಿಗೂ ಹೆಚ್ಚು ಹಣವನ್ನು ಸಂಪಾದಿಸಿದ್ದಾರೆ. ಹಾಗಾದ್ರೆ ಎಷ್ಟು ಎನ್ನುವ ಸಂಪೂರ್ಣ ಅಂಕಿಅಂಶಗಳನ್ನು ಇಲ್ಲಿ ನೀಡಲಾಗಿದೆ ಕಣ್ಣಾಡಿಸಿ.

ಯಾವುದರಲ್ಲಿ ಎಷ್ಟು ಹಣ?

* ರಾಜಸ್ಥಾನ ರಾಯಲ್ಸ್ ತಂಡದಿಂದ ವಾರ್ಷಿಕ ಒಪ್ಪಂದದ ಮೊತ್ತವಾಗಿ 1.10 ಕೋಟಿ ರೂಪಾಯಿ.

* ಪಂದ್ಯದ ಶುಲ್ಕ: ಬಿಸಿಸಿಐ ನಿಯಮದ ಪ್ರಕಾರ ಪ್ರತಿ ಪಂದ್ಯಕ್ಕೆ 7.5 ಲಕ್ಷ ರೂಪಾಯಿಗಳಂತೆ ರಾಜಸ್ಥಾನ ರಾಯಲ್ಸ್ ಆಡಿದ ಎಲ್ಲಾ 16 ಪಂದ್ಯಗಳಲ್ಲೂ ಭಾಗವಹಿಸಿದ್ದಕ್ಕಾಗಿ ಒಟ್ಟು 1.20 ಕೋಟಿ ರೂಪಾಯಿಗಳನ್ನು ನೀಡಿದೆ ಎಂದು ತಿಳಿದುಬಂದಿದೆ.

* ಆರೆಂಜ್ ಕ್ಯಾಪ್: ಟೂರ್ನಿಯಲ್ಲಿ ಗರಿಷ್ಠ ರನ್ ಗಳಿಸಿದ್ದಕ್ಕಾಗಿ 10 ಲಕ್ಷ ರೂಪಾಯಿ ನಗದು ಬಹುಮಾನ.

* ಮೋಸ್ಟ್ ವ್ಯಾಲ್ಯೂಯಬಲ್ ಪ್ಲೇಯರ್ (MVP): ಸರಣಿ ಶ್ರೇಷ್ಠ ಆಟಗಾರ ಪ್ರಶಸ್ತಿಯೊಂದಿಗೆ 15 ಲಕ್ಷ ರೂಪಾಯಿ.

* ಎಮರ್ಜಿಂಗ್ ಪ್ಲೇಯರ್ (Emerging Player): ಉದಯೋನ್ಮುಖ ಆಟಗಾರ ಪ್ರಶಸ್ತಿಯೊಂದಿಗೆ 10 ಲಕ್ಷ ರೂಪಾಯಿ.

* ಸೂಪರ್ ಸ್ಟ್ರೈಕರ್ ಮತ್ತು ಗರಿಷ್ಠ ಸಿಕ್ಸರ್: ಸೀಸನ್‌ನ ಸೂಪರ್ ಸ್ಟ್ರೈಕರ್ ಪ್ರಶಸ್ತಿಯಾಗಿ 10 ಲಕ್ಷ ರೂಪಾಯಿ ಮತ್ತು ಹೊಸ ಟಾಟಾ ಸಿಯೆರಾ ಕಾರು ಹಾಗೂ ಗರಿಷ್ಠ ಸಿಕ್ಸರ್ ಬಾರಿಸಿದ್ದಕ್ಕಾಗಿ ಮತ್ತೊಂದು 10 ಲಕ್ಷ ರೂಪಾಯಿ ನಗದು ಬಹುಮಾನ.

* ಪಂದ್ಯ ಶ್ರೇಷ್ಠ ಪ್ರಶಸ್ತಿಗಳು: ಇದರೊಂದಿಗೆ ವಿವಿಧ ಪಂದ್ಯಗಳಲ್ಲಿ 'ಪ್ಲೇಯರ್ ಆಫ್ ದಿ ಮ್ಯಾಚ್ ಸೇರಿದಂತೆ ಇತರೆ ಪ್ರಶಸ್ತಿಗಳ ಮೂಲಕ ಲಕ್ಷಾಂತರ ರೂಪಾಯಿಗಳನ್ನು ಹೆಚ್ಚುವರಿಯಾಗಿ ತಮ್ಮದಾಗಿಸಿಕೊಂಡಿದ್ದಾರೆ.

20 ಕೋಟಿ ರೂಪಾಯಿಗಳವರೆಗೂ ಬಿಡ್ಡಿಂಗ್ ಸಾಧ್ಯತೆ

ಆರ್ಥಿಕ ವಿಶ್ಲೇಷಕರ ಪ್ರಕಾರ, ರಾಜಸ್ಥಾನ ರಾಯಲ್ಸ್ ತಂಡವು ವೈಭವ್ ಸೂರ್ಯವಂಶಿ ಅವರ ಮೇಲೆ ಹೂಡಿಕೆ ಮಾಡಿದ ಪ್ರತಿಯೊಂದು ರೂಪಾಯಿಗೂ ಅವರು ಸುಮಾರು 31 ಪಟ್ಟು ಹೆಚ್ಚಿನ ಮೌಲ್ಯದ ಪ್ರದರ್ಶನವನ್ನು ಮೈದಾನದಲ್ಲಿ ನೀಡಿದ್ದಾರೆ. ಮುಂಬರುವ ಐಪಿಎಲ್ ಮೆಗಾ ಹರಾಜಿನಲ್ಲಿ ಈ 15 ವರ್ಷದ ಪ್ರತಿಭೆಗೆ ಕನಿಷ್ಠ 15 ರಿಂದ 20 ಕೋಟಿ ರೂಪಾಯಿಗಳ ಬಿಡ್ಡಿಂಗ್ ನಡೆಯಬಹುದು ಎಂದು ಅಂದಾಜಿಸಲಾಗಿದೆ. 15ರ ಹರೆಯದಲ್ಲೇ ಕೋಟಿ ಕೋಟಿ ಒಡೆಯನಾಗಿರುವ ವೈಭವ್ ಸೂರ್ಯವಂಶಿ ಅವರು ಭಾರತೀಯ ಕ್ರಿಕೆಟ್‌ನ ಭವಿಷ್ಟಯ ದೊಡ್ಡ ಸ್ಟಾರ್ ಆಗುವುದರಲ್ಲಿ ಯಾವುದೇ ಸಂಶಯವಿಲ್ಲ. ಈಗಾಗಲೇ ಇದೇ ಮಾತನ್ನ ಹಲವು ಕ್ರಿಕೆಟ್‌ ದಿಗ್ಗಜರು ಕೂಡ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+