ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೆರಿಕ ಚುನಾವಣೆ: ಸಂಭಾವ್ಯ ಗಲಭೆ ನಿಯಂತ್ರಣಕ್ಕೆ ಭದ್ರತಾ ಪಡೆಗಳು ಸಜ್ಜು

|
Google Oneindia Kannada News

ವಾಷಿಂಗ್ಟನ್, ನವೆಂಬರ್ 3: ಮಂಗಳವಾರದ ಚುನಾವಣೆಗೂ ಮುನ್ನ ವಿವಿಧ ರಾಜ್ಯಗಳ ಗವರ್ನರ್‌ಗಳು ರಾಷ್ಟ್ರೀಯ ಕಾವಲು ಪಡೆಗಳನ್ನು ಸಿದ್ಧಪಡಿಸಿದೆ. ಅಮೆರಿಕದ ಇತಿಹಾಸದಲ್ಲಿ ಅತ್ಯಂತ ನಿರ್ಣಾಯಕ ಅಧ್ಯಕ್ಷೀಯ ಚುನಾವಣೆಯಲ್ಲಿ ಒಂದೆನಿಸಿರುವ ಚುನಾವಣಾ ದಿನದಂದು ಯಾವುದೇ ಕಾನೂನು ಸುವ್ಯವಸ್ಥೆಯ ಸಮಸ್ಯೆಗಳು ಬಾರದಂತೆ ಮುನ್ನೆಚ್ಚರಿಕೆಯಿಂದ ಈ ಕ್ರಮ ಕೈಗೊಳ್ಳಲಾಗಿದೆ.

ಅಗತ್ಯವಿದ್ದರೆ ಯಾವುದೇ ಸನ್ನಿವೇಶಕ್ಕೂ ಸಿದ್ಧರಾಗಿರುವಂತೆ ಮಸ್ಸಾಚುಸೆಟ್ಸ್ ಗವರ್ನರ್ ಚಾರ್ಲಿ ಬಕೇರ್ (ಆರ್) ರಾಜ್ಯ ಮತ್ತು ಸ್ಥಳೀಯ ಕಾನೂನು ಜಾರಿ ಸಂಸ್ಥೆಗಳ ನೆರವಿಗಾಗಿ 1,000 ಗಾರ್ಡ್ ಸದಸ್ಯರನ್ನು ಸಜ್ಜುಗೊಳಿಸಿದ್ದಾರೆ. ಬೃಹತ್ ಪ್ರಮಾಣದಲ್ಲಿ ಮತದಾನಕ್ಕೆ ಜನರು ಧಾವಿಸುವ ಸಾಧ್ಯತೆ ಇರುವುದರಿಂದ ಸಾರ್ವಜನಿಕ ಸುರಕ್ಷತೆ ಮತ್ತು ಭದ್ರತೆ ಕಾಪಾಡುವ ಸಲುವಾಗಿ ಈ ಆದೇಶ ಹೊರಡಿಸಲಾಗಿದೆ ಎಂದು ಬಕೇರ್ ಕಚೇರಿ ತಿಳಿಸಿದೆ.

ಸಮೀಕ್ಷೆಗಳು ನಿಜವಾದರೆ ಅಮೆರಿಕ ಅಧ್ಯಕ್ಷರಾಗಲಿದ್ದಾರೆ ಜೋ ಬೈಡನ್ ಸಮೀಕ್ಷೆಗಳು ನಿಜವಾದರೆ ಅಮೆರಿಕ ಅಧ್ಯಕ್ಷರಾಗಲಿದ್ದಾರೆ ಜೋ ಬೈಡನ್

ಮತಗಟ್ಟೆಯ ಸ್ಥಳಗಳಲ್ಲಿ ಯಾವುದೇ ಅಪಾಯದ ನಿರ್ದಿಷ್ಟ ಬೆದರಿಕೆಗಳೇನೂ ಇಲ್ಲ. ಆದರೂ ಮುನ್ನೆಚ್ಚರಿಕೆ ಕ್ರಮ ವಹಿಸಲಾಗಿದೆ ಎಂದು ಮಸ್ಸಾಚುಸೆಟ್ಸ್ ರಾಜ್ಯ ಪೊಲೀಸ್ ಕರ್ನಲ್ ಕ್ರಿಸ್ಟೋಫರ್ ಮಸಾನ್ ತಿಳಿಸಿದ್ದಾರೆ.

US Elections: States Have Readied National Gaurd Ahead Of Election Day

ಒರೆಗಾಂವ್‌ನಲ್ಲಿ ಗವರ್ನರ್ ಕೇಟ್ ಬ್ರೌನ್ (ಡಿ) ಅವರು ಪೋರ್ಟ್‌ಲ್ಯಾಂಡ್ ಪ್ರದೇಶದಲ್ಲಿ ಸೋಮವಾರದಿಂದ ಬುಧವಾರದವರೆಗೆ ತುರ್ತು ಪರಿಸ್ಥಿತಿ ಆದೇಶ ಮಾಡಿದ್ದಾರೆ. ಪೊಲೀಸರು, ಸೈನಿಕರು, ಅಗ್ನಿಶಾಮಕ ಸಿಬ್ಬಂದಿ, ವಾಯುಪಡೆ ಸೇರಿದಂತೆ ವಿವಿಧ ಪಡೆಗಳನ್ನು ನಿಯೋಜಿಸಲಾಗಿದೆ. ಗಲಭೆ ನಿಯಂತ್ರಣ, ಬಂಧನ ಸೇರಿದಂತೆ ಒರೆಗಾಂವ್ ರಾಜ್ಯ ಪೊಲೀಸರು ಹಾಗೂ ಇತರೆ ಕಾನೂನು ಸಂಸ್ಥೆಗಳ ಕಾರ್ಯಗಳಿಗೆ ವಾಯುಪಡೆ ನೆರವು ನೀಡಲಿದೆ ಎಂದು ಏರ್ ಫೋರ್ಸ್ ಜನರಲ್ ಮಿಖಾಯಲ್ ಇ ಸ್ಟೆನ್ಸೆಲ್ ತಿಳಿಸಿದ್ದಾರೆ.

ಕಮಲಾ ಹ್ಯಾರಿಸ್ ಗೆಲುವಿಗೆ ತಮಿಳುನಾಡಿನ ಪೂರ್ವಜರ ಗ್ರಾಮದಲ್ಲಿ ಪೂಜೆಕಮಲಾ ಹ್ಯಾರಿಸ್ ಗೆಲುವಿಗೆ ತಮಿಳುನಾಡಿನ ಪೂರ್ವಜರ ಗ್ರಾಮದಲ್ಲಿ ಪೂಜೆ

ಅಲಬಾಮಾ ಮತ್ತು ಅರಿಜೋನಾಗಳಲ್ಲಿ ನ್ಯಾಷನಲ್ ಗಾರ್ಡ್ ಬ್ಯೂರೋ 600 ಸೈನಿಕರ ತ್ವರಿತ ಸ್ಪಂದನಾ ಘಟಕವನ್ನು ಸ್ಥಾಪಿಸಿದೆ. ಇದಲ್ಲಡೆ ಅನೇಕ ಸೂಕ್ಷ್ಮ ಭಾಗಗಳಲ್ಲಿ ಹೆಚ್ಚುವರಿ ಪಡೆಗಳನ್ನು ನಿಯೋಜಿಸಲಾಗಿದೆ. ಮಂಗಳವಾರ ರಾತ್ರಿಯ ಫಲಿತಾಂಶವನ್ನು ತಾವು ಒಪ್ಪುವುದಿಲ್ಲ. ಇದರ ವಿರುದ್ಧ ಕಾನೂನು ಹೋರಾಟ ನಡೆಸುವುದಾಗಿ ಡೊನಾಲ್ಡ್ ಟ್ರಂಪ್ ಹೇಳಿಕೆ ನೀಡಿದ್ದರು. ಹೀಗಾಗಿ ಡೆಮಾಕ್ರಟಿಕ್ ಹಾಗೂ ರಿಪಬ್ಲಿಕನ್ ಪಕ್ಷಗಳ ನಡುವೆ ಸಂಘರ್ಷ ಏರ್ಪಡುವ ಸಾಧ್ಯತೆ ಇದೆ.

English summary
US Elections: States have readied National Gaurd members ahead of election day with the concerns that unrest may ignite.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X